Abu Hisham Saquafi

Official Website Of Hafiz Ilyas Saquafi Padaladka

Friday, July 1, 2016

ರಮಳಾನ್ ಉಪದೇಶ 26

           ┏══✿ರಮಳಾನ್ರ#26✿══┓
               ■══✿ <﷽✿══■  
       📆 1-7-2016 ಶುಕ್ರವಾರ 📆
وَعَنْ أَبِي هُرَيْرَةَ رَضِيَ اللهُ عَنْهُ سَمِعْتُ رَسُولَ اللهِ ﷺ يَقُولُ : أَوَّلُ النَّاسِ يُقْضَى لَهُمْ يَوْمَ الْقِيَامَةِ ثَلَاثَةٌ : رَجُلٌ اسْتُشْهِدَ، فَأُتِيَ بِهِ، فَعَرَّفَهُ نِعَمَهُ فَعَرَفَهَا، قَالَ : فَمَا عَمِلْتَ فِيهَا ؟ قَالَ : قَاتَلْتُ فِيكَ حَتَّى اسْتُشْهِدْتُ. قَالَ : كَذَبْتَ، وَلَكِنَّكَ قَاتَلْتَ لِيُقَالَ : فُلَانٌ جَرِيءٌ. فَقَدْ قِيلَ. ثُمَّ أُمِرَ بِهِ فَسُحِبَ عَلَى وَجْهِهِ حَتَّى أُلْقِيَ فِي النَّارِ، وَرَجُلٌ تَعَلَّمَ الْعِلْمَ وَعَلَّمَهُ، وَقَرَأَ الْقُرْآنَ، فَأُتِيَ بِهِ فَعَرَّفَهُ نِعَمَهُ فَعَرَفَهَا، قَالَ : فَمَا عَمِلْتَ فِيهَا ؟ قَالَ : تَعَلَّمْتُ الْعِلْمَ وَعَلَّمْتُهُ،وَقَرَأْتُ فِيكَ الْقُرْآنَ. قَالَ : كَذَبْتَ، وَلَكِنَّكَ تَعَلَّمْتَ الْعِلْمَ لِيُقَالَ : عَالِمٌ. وَقَرَأْتَ الْقُرْآنَ لِيُقَالَ : قَارِئٌ. فَقَدْ قِيلَ. ثُمَّ أُمِرَ بِهِ فَسُحِبَ عَلَى وَجْهِهِ حَتَّى أُلْقِيَ فِي النَّارِ، وَرَجُلٌ وَسَّعَ اللهُ عَلَيْهِ، وَأَعْطَاهُ مِنْ أَصْنَافِ الْمَالِ كُلِّهِ، فَأُتِيَ بِهِ، فَعَرَّفَهُ نِعَمَهُ فَعَرَفَهَا، فَقَالَ : مَا عَمِلْتَ فِيهَا ؟ قَالَ : مَا تَرَكْتُ مِنْ سَبِيلٍ تُحِبُّ - قَالَ أَبُو عَبْدِ الرَّحْمَنِ : وَلَمْ أَفْهَمْ : تُحِبُّ، كَمَا أَرَدْتُ - أَنْ يُنْفَقَ فِيهَا إِلَّا أَنْفَقْتُ فِيهَا لَكَ. قَالَ : كَذَبْتَ، وَلَكِنْ لِيُقَالَ : إِنَّهُ جَوَادٌ. فَقَدْ قِيلَ، ثُمَّ أُمِرَ بِهِ فَسُحِبَ عَلَى وَجْهِهِ، فَأُلْقِيَ فِي النَّارِ(رواه مسلم)
✿═══════════════✿
ಅಬೂ ಹುರೈರ (ರ ) ರವರಿಂದ ವರದಿ. ಅವರು ಹೇಳಿದರು. ಪ್ರವಾದಿ ﷺ ರವರು ಈ‌ ರೀತಿ ಹೇಳುತಿದ್ದರು. ಅಂತ್ಯ ದಿನದಂದು ಮನುಷ್ಯರಲ್ಲಿ ಮೊದಲು ರಕ್ತ ಸಾಕ್ಷಿಯನ್ನು  ವಿಚಾರಣೆಗೈಯ್ಯಲ್ಪಡುವುದು. ಅವನನ್ನು ಕರೆದು ಅಲ್ಲಾಹನು ಅವನಿಗೆ ನೀಡಿದ ಸರ್ವ ಅನುಗ್ರಹಗಳನ್ನು ತೋರಿಸುತ್ತಾನೆ. ಅದು ಅವನಿಗೆ ಗೊತ್ತಾಗುವುದು. ನಂತರ ಅವನಲ್ಲಿ ಅಲ್ಲಾಹನು ಕೇಳುತ್ತಾನೆ. ಈ ಅನುಗ್ರಹಗಳಿಂದ ನೀನೇನು ಮಾಡಿರುವಿ? ಆಗ ಅವನು ಹೇಳುತ್ತಾನೆ. ನಾನು ನಿನಗೆ ಬೇಕಾಗಿ ಯುದ್ದ ರಣಭೂಮಿಯಲ್ಲಿ ಹೋರಾಡಿ ವೀರ ಮರಣವನ್ನಪ್ಪಿದೆ.ಆಗ ಅಲ್ಲಾಹನು ಹೇಳುತ್ತಾನೆ. ನೀನು ಸುಳ್ಳನ್ನು ಹೇಳುತ್ತಿದ್ದೀಯ. ಜನರು ನೀನೊಬ್ಬ ವೀರ ಯೋಧ ಎಂದು ಹೇಳಲೋಸ್ಕರ ನೀನು ಹೋರಾಡಿದ್ದಿ.ಹಾಗೆ ಅವನನ್ನು ನರಕಕ್ಕೆ ಹಾಕಲಾಗುವುದು. ಎರಡನೆಯದಾಗಿ ಖುರ್ ಆನ್ ಪಾರಾನಗೈದ,ದೀನಿ ಇಲ್ಮ್ ಕಲಿತು ಅದನ್ನು ಇನ್ನಿತರರಿಗೆ ಕಲಿಸಿದ ಒಬ್ಬ ವ್ಯಕ್ತಿಯನ್ನು ಕರೆಯಲಾಗುವುದು. ಅವನಿಗೂ ಅಲ್ಲಾಹನು ಅವನಿಗೆ ನೀಡಿದ ಅನುಗ್ರಹಗಳನ್ನು ತೋರಿಸುತ್ತಾನೆ. ಅದು ಅವನಿಗೆ ಗೊತ್ತಾಗುವುದು. ಅವರಲ್ಲಿ ಅಲ್ಲಾಹನು ಕೇಳುತ್ತಾನೆ.ಈ ಅನುಗ್ರಹಗಳಿಂದ ನೀನೇನು ಮಾಡಿರುವಿ?. ಆಗ ಅವನು ಹೇಳುತ್ತಾನೆ. ನಾನು ನಿನಗೆ ಬೇಕಾಗಿ ಖುರ್ ಆನ್ ಪಾರಾಯಣಗೈದು ದೀನಿ ವಿದ್ಯಾಭ್ಯಾಸ ಅಭ್ಯಸಿಸಿ ಅದನ್ನು ಇತರರಿಗೆ ಕಲಿಸಿಕೊಟ್ಟೆ. ಆಗ ಅಲ್ಲಾಹನು ನೀನು ಸುಳ್ಳನ್ನು ಹೇಳುತ್ತಿದ್ದೀಯ. ನೀನು ಖುರ್ ಆನ್ ಪಾರಾಯಣಗೈದು ದೀನಿ ವಿದ್ಯಾಭ್ಯಾಸ ಅಭ್ಯಸಿಸಿ ಅದನ್ನು ಇತರರಿಗೆ ಕಲಿಸಿಕೊಟ್ಟದ್ದು ನೀನು ಒಬ್ಬ ದೊಡ್ಡ ಆಲಿಂ ಎಂದು ಜನರು ಹೇಳಲೋಸ್ಕರ ಎಂದು ಹೇಳಿ ಅವನನ್ನು ನರಕಕ್ಕೆ ಹಾಕಲಾಗುವುದು. ಮೂರನೆಯದಾಗಿ ವ್ಯತ್ಯಸ್ತ ರೀತಿಯಲ್ಲಿ ಸಂಪತ್ತನ್ನು ನೀಡಿದ ಧನಿಕನನ್ನು ಕರೆಯಲಾಗುವುದು. ಅವನಿಗೂ ಅಲ್ಲಾಹನು ಅವನಿಗೆ ನೀಡಿದ ಅನುಗ್ರಹಗಳನ್ನು ತೋರಿಸುತ್ತಾನೆ. ಅದು ಅವನಿಗೆ ಗೊತ್ತಾಗುವುದು. ಅವನಲ್ಲಿ ಅಲ್ಲಾಹನು ಕೇಳುತ್ತಾನೆ.ಈ ಅನುಗ್ರಹಗಳಿಂದ ನೀನೇನು ಮಾಡಿರುವಿ?. ಆಗ ಅವನು ಹೇಳುತ್ತಾನೆ. ನಿನಗೆ ಇಷ್ಟವಿಲ್ಲದ ದಾರಿಯಲ್ಲಿ ನಾನು ಸಂಪತ್ತನ್ನು ವ್ಯಯಿಸಲಿಲ್ಲ. ಆಗ ಅಲ್ಲಾಹನು ಹೇಳುತ್ತಾನೆ ನೀನು ಸುಳ್ಳನ್ನು ಹೇಳುತ್ತಿದ್ದೀಯ. ಜನರು ನಿನ್ನನ್ನು ದೊಡ್ಡ ದಾನಿ ಎಂದು ಕರೆಯಲೋಸ್ಕರ ನೀನು ಅದನ್ನು ಮಾಡಿರುವಿ ಎಂದು ಹೇಳಿ ಅವನನ್ನು ನರಕಕ್ಕೆ ಹಾಕಲಾಗುವುದು (ಮುಸ್ಲಿಂ)
✿═══════════════✿
ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
✿═══════════════✿
                 ಭೇಟಿ ನೀಡಿ:                             

Please subscribe my You tube channel

No comments: