Abu Hisham Saquafi

Official Website Of Hafiz Ilyas Saquafi Padaladka

Saturday, March 30, 2019

ರಝ್ಝಾನತ್ ಕನ್ನಡ ಪರಿಭಾಷೆ ಭಾಗ 03

إِنَّ الْأَمِيرَ وَإِنْ مِنْ ظَالِمِينَ فَلَا
                            تُخَالِفَنْهُ عَسَی يَوْمًا بِهِ ظَفْرُ
لَا النَّارُ تُجْفَی وَإِنْ دَارٌ بِهَا احْتَرَقَتْ
                            فَالضُّرُّ فِي نَفْعِهَا فِي عَيْشِنَا يُسْرٌ

ಆಡಳಿತಾಧಿಕಾರಿ ಎಷ್ಟೇ ದುಷ್ಟನಾದರೂ ಆತನಿಗೆ ನೀ ಎದುರಾಗ ಬೇಡ.ಕಾರಣ ನಿನ್ನ ಯಾವುದಾದರೂ ಸಮಸ್ಯೆ ಪರಿಹಾರಕ್ಕಾಗಿ ಆತನನ್ನು ನೀನು ಸಮೀಪಿಸಬೇಕಾದ ಅವಸ್ಥೆ ಬಂದೀತು.ಅಗ್ನಿಯು ಮನೆಯನ್ನು ಆಹುತಿ ತೆಗೆಯುವುದಾದರೂ ಅಗ್ನಿಯೊಂದಿಗೆ ಕೋಪಿಸಲಾದೀತೆ.
ಮನುಷ್ಯನ ಜೀವನದಲ್ಲಿ ಅಗ್ನಿಯು ಉಂಟುಮಾಡುವ ಉಪಕಾರವು ಉಪದ್ರವಕ್ಕಿಂತ ಬಲು ದೊಡ್ಡದು. (ಹಾನಿಯು ಅದರ ಉಪಕಾರಕ್ಕೆ ಅಪೇಕ್ಷಿಸಿದರೆ ನಗಣ್ಯ.)

قَصِيرُ عِلْمٍ بِمَا فِي الشَّرَعِ نُصْحَتُهُ
                           لِمَنْ لَهُ طُولُ بَاعِ الْعِلْمِ وَالْحَذَقُ
إِهْدَاءُ عِدْلَيْ ظِلَالٍ فَوْقَ زَامِلَةٍ
                          لِرَوْضَةٍ ظِلُّهَا قَدْ صَبَّهُ الْوَرَقُ
ಶರೀಅತ್ತಿನ ಕುರಿತು ಅಲ್ಪಜ್ಞಾನವಿರುವವನು ಅಗಾಧ ಪಾಂಡಿತ್ಯವಿರುವವನನ್ನು ಉಪದೇಶಿಸುವುದು.ವೃಕ್ಷಗಳ ಎಲೆಗಳಿಂದ ಧಾರಾಳವಾಗಿ ನೆರಳು ಲಭಿಸುವ ತೋಟಕ್ಕೆ ( ತೋಟದ ಮಾಲೀಕನಿಗೆ) ಎರಡು ಗೋಣಿ ಚೀಲ ನೆರಳು ದಾನವಾಗಿ ನೀಡುವುದಕ್ಕೆ ಸಮ.

وَ نَاقِصُ الْعِلْمِ نُطْقًا كَانَ يُكْثِرُهُ
                          وَعَنْهُ يَسْكُتُ مَنْ فِي عِلْمِهِ كَمُلَا
وَالصَّوْتُ لِلصُّفْرِ لَا لِلتِّبْرِ إِذْ نُقِرَا
                          فَالصُّفْرُ بِالصَّوْتِ لَا يَعْلُوهُ إِذْ خَمُلَا

ಅಲ್ಪಜ್ಞಾನಿ ಮಾತಿನ ಮಲ್ಲನೂ
ಪೂರ್ಣಜ್ಞಾನಿ ಅತ್ಯಾವಶ್ಯಕ್ಕೆ  ಮಾತ್ರ ಮಾತನಾಡುವವನೂ ಆಗಿರುವನು .( ತುಂಬಿದ ಕೊಡ ತುಳುಕುವುದಿಲ್ಲ)  ತಾಮ್ರ ಕ್ಕೆ ಬಡಿದರೆ ದೊಡ್ಡ ಪ್ರಮಾಣದಲ್ಲಿ ಶಬ್ದವು ಹೊರಬರುವುದು. ಆದರೆ ಅಪರಂಜಿಗೆ (ಶುದ್ಧ ಚಿನ್ನ)ಬಡಿದರೆ ನಿಶ್ಶಬ್ದವಾಗಿರುವುದು. ತಾಮ್ರಕ್ಕೆ ಶಬ್ದವಿದೆ ಎಂದ ಮಾತ್ರಕ್ಕೆ ಅದು ಅಪರಂಜಿಗಿಂತ ಅಮೂಲ್ಯವಾಗದು

وَالْبَغْيُ مِنْ عَالِمٍ هَدْمُ الشَّرِيعَةِ هَلْ
                                لِمَنْ تَنَاوَمَ إِيقَاظٌ وَإِرْشَادٌ
وَالْمِلْحُ يَمْنَعُ مِنْ شَيْءٍ تَدَوُّدَهُ
                             فَكَيْفَ أَيْضًا إِذَا مَا مَسَّهُ الدُّودُ

ಇಸ್ಲಾಮೀ ನಿಯಮಕ್ಕೆ ಅನುಗುಣವಾಗಿ ನಡೆಯಬೇಕಾದ ಒಬ್ಬ ಪಂಡಿತ ಅದಕ್ಕೆ ವಿರುದ್ಧವಾಗಿ ನಡೆಯುವುದು ಇಸ್ಲಾಮೀ ಶರೀಅತ್ತನ್ನೇ ಧ್ವಂಸಗೈಯ್ಯುವುದಾಗಿದೆ.
ನಿದ್ದೆ ನಟಿಸುವವನನ್ನು ನಿದ್ದೆಯಿಂದ ಎಬ್ಬಿಸಲು( ನಿರ್ದೇಶಿಸಲು) ಸಾಧ್ಯವೇ...?
ಒಂದು ವಸ್ತು ಹುಳವಾಗದಿರಲು ಉಪ್ಪು ಉಪಯೋಗಿಸುವೆವು ಉಪ್ಪೇ ಹುಳವಾದರೆ ಹೇಗೆ....?
وَمَنْ عَلَی سُوءِ خُلُقٍ كَانَ شِيمَتُهُ
                               فلَمْ دَوَاءُ طَبِيبٍ دَاءَهُ يُفِدِ
وَ حَنْظَلُ الْبَرِّ لَا يَحْلُو وَلَوْ لَبَنٌ
                         فِي أَصْلِهِ صُبَّ بِالْمِيزَابِ مِنْ شُهْدِ

ಪ್ರಕೃತಿಯಾ ದುಸ್ವಭಾವವೆಂಬ ರೋಗವಿರುವ ರೋಗಿಯನ್ನು ಯಾವ ವೈದ್ಯನಿಂದಲೂ ಗುಣಪಡಿಸಲಾಗದು.ಕಹಿ ಸೇಬು ( ಒಂದು ಬಗೆಯ ಅತೀ ಕಹಿಯಾದ ಸೇಬು) ಬಳ್ಳಿಯ ಬುಡಕ್ಕೆ ಜೇನು ಮತ್ತು ಹಾಲನ್ನು ಧಾರೆ ಎರೆದರೆ  ಅದರಿಂದ   ಸಿಹಿಯಾದ ಹಣ್ಣು ಲಭಿಸೀತೆ...!

مَنْ كَانَ عَادَتُهُمْ فَحْشَاءَ نُصْحَتُهُمْ
                                   قِطْرٌ يُصَبُّ مُذَابًا فِي صِمَاخِهِمِ
إِنَّ الْخَنَافِيسَ إِذْ مَا مَسَّهَا عِطْرٌ
                                  مَاتَتْ لِخَيْشُومِهَا ذَا الطِّيبُ لَمْ يَقُمِ

ಕೆಟ್ಟ ನಡವಳಿಕೆಯಿರುವ ಒಬ್ಬ ವ್ಯಕ್ತಿಯನ್ನು ಉಪದೇಶಿಸುವುದು ಕರಗಿಸಲ್ಪಟ್ಟ ಹಿತ್ತಾಳೆಯನ್ನು ಕಿವಿಯೊಳಗೆ ಸುರಿಯಲ್ಪಟ್ಟ ವ್ಯಕ್ತಿಯನ್ನು ಉಪದೇಶಿಸುವುದಕ್ಕೆ ಸಮ (ಫಲ ಶೂನ್ಯ) ಕಪ್ಪು ಜೀರುಂಡೆಗಳ(ಸೆಗಣಿಯಲ್ಲಿ ರುವ ಜಿರಲೆ) ಮೇಲೆ ಸುಗಂಧ ದ್ರವ್ಯವನ್ನು ಸುರಿದರೆ ಅದು ಸತ್ತು ಹೋಗುವುದು. ಅದಕ್ಕೆ ಸುಗಂಧವನ್ನು ಆಸ್ವಾದಿಸಲು ಸಾಧ್ಯವಿರುವ ಮೂಗಿಲ್ಲ.
                        
لَا النُّصْحُ يَنْفَعُ شِنظِيرًا لشِقْوَتِهِ
                            بَلْ كَانَ يَخْرُجُ اَ نْ يُؤْذِي ذَوِي الْعِبَرِ
يُمَزِّقُ الْقِرَدُ وَكْرًا لِلصُّفَارِيَةِ
                            إِذَا لَهُ نَصَحَتْ فِي وَابِلِ الْمَطَرِ

ದುಸ್ವಭಾವಿಗೆ ಹಿತವಚನ ಫಲ ನೀಡದು. ಆತನು ಉಪದೇಶಿಸುವವನನ್ನು ಉಪದ್ರವಿಸುವನು. ಧಾರಾಕಾರವಾಗಿ ಮಳೆ ಸುರಿಯುವಾಗ ನೀನು ಒಂದು ಗೂಡು ಕಟ್ಟು ಎಂದು ಗುಬ್ಬಚ್ಚಿಯು ಕೋತಿಯೊಡನೆ ಹಿತೋಪದೇಶ ನೀಡಿದರೆ ಅದು ಗೂಡುಕಟ್ಟದೆ ಗುಬ್ಬಚ್ಚಿಯ ಗೂಡನ್ನೇ ಚಿಂದಿ ಚಿಂದಿ ಮಾಡುವುದು.

وَأَحْسِنِ الظَّنَّ مِطْوَاعًا بِرَبِّكَ إِذْ
                           مَا مَرَّ مُرُّ الْقَضَا عَلَيْكَ وَالْقَدَرُ
 وَقَدْ أَظَلَّ عَلَی مَنْ كَانَ يَقْطَعُهُ
                          حَتَّی يَخِرَّ عَلَی أَعْنَاقِهِ الشَّجَرُ

ಅಲ್ಲಾಹನ ವಿಧಿ ಪ್ರಕಾರ ನಿನಗೆ ಕ್ಲಿಷ್ಟಕರವಾದ ಸಂಭವ ಉಂಟಾಗುವಾಗ ಅಲ್ಲಾಹನ ಕುರಿತು ನೀನು ಒಳಿತನ್ನೇ ಭಾವಿಸು...
ವೃಕ್ಷವು ಧರೆಗೆ ಉರುಳುವ ತನಕ ತನ್ನನ್ನು ಕಡಿಯುವವನಿಗೂ ನೆರಳು ನೀಡುತ್ತದೆ....!

بُغْضُ الْقَضَاءِ بِشَرٍّ حِينَ جَاءَ بِهِ
                       فِي الْمَالِ وَالْوُلْدِ أَوْ فِي نَفْسِكَ الْقَدَرُ
كَضَرْبِ عَاشِقَةٍ بُغْضًا عَلَی الْقَمَرِ
                       خِيَالَهُ فِي ظُرُوفِ الْمَاءِ يَنْحَدِرُ

ಶರೀರ,ಸಂತಾನ,ಸಂಪತ್ತು ಇತ್ಯಾದಿಗಳಿಗೆ ಯಾವುದಾದರೂ ಆಪತ್ತು ಎದುರಾಗುವಾಗ ಅಲ್ಲಾಹನ ವಿಧಿಯನ್ನು ದ್ವೇಷಿಸುವುದೆಂದರೆ ಬೆಳದಿಂಗಳ ರಾತ್ರಿಯಲ್ಲಿ ವೇಶ್ಯೆ ಸ್ತ್ರೀ ಅವಳ ಕೆಲಸಕ್ಕೆ  ಬೆಳಕು ಅಡ್ಡಿಯಾಯಿತು ಎಂಬ ಕೋಪದಿಂದ ಪೌರ್ಣಮಿಯ (ನೀರಿನಲ್ಲಿ ಕಾಣುವ)
ಪ್ರತಿಬಿಂಬಕ್ಕೆ ಹೊಡೆಯುವುದಕ್ಕೆ ಸಮ.
                        
وَبِالْجَوَادِ يُعِينُ النَّاسَ رَبُّهُمُ
                              كَأَنَّهُ مُثْمِرٌ حَفَّتْهُ أَطْيَارُ
 وَيَسْتَقِي الْمُسْتَقِي زَرْعًا لَهُ وَبِهِ
                           يَخْضَرُّ مِنْ حَوْلِهِ عُشْبٌ وَأَشْجَارٌ

ಧನಿಕನ ಮುಖಾಂತರ ಅಲ್ಲಾಹನು ಜನರಿಗೆ ಸಹಾಯ ಮಾಡುವನು. ಆತನು ಪಕ್ಷಿಗಳು ಸುತ್ತುವರಿಯುವ ಹಣ್ಣು ಹಂಪಲುಗಳಿಂದ ಸಮೃದ್ಧವಾದ ವೃಕ್ಷಕ್ಕೆ ಸಮ. ಕೃಷಿಕನು ತನ್ನ ಕೃಷಿಗೆ ನೀರುಣಿಸುವ ಕಾರಣದಿಂದ ಅದರ ಸುತ್ತಲೂ ವೃಕ್ಷಗಳು ಮತ್ತು ಸಸ್ಯಗಳು ಹಚ್ಚ ಹಸಿರಾಗಿ ಬೆಳೆಯುವುದು.

ಇಶಾಅತುಸ್ಸುನ್ನಃ ದರ್ಸ್

Ph:- +919535627170
        +918105381393

No comments: