ಫಾರೂಕ್ ನಈಮಿ ಉಸ್ತಾದರ *ಮಹಬ್ಬ ಕ್ಯಾಮ್ಪೈನ್ ಸ್ನೇಹ ಕಾಲಂ* ಎನ್ನುವ ಶೀರ್ಷಿಕೆಯಲ್ಲಿ ವಿಶ್ವ ಪ್ರವಾದಿ ﷺ ತಂಙಳವರ ಕುರಿತು ಮಲಯಾಳಂ ಭಾಷೆಯಲ್ಲಿ ಬರೆಯುವ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನವಾಗಿದೆ ಇದು.
ಮಕ್ಕದಲ್ಲಿ (ಸೌದಿಯಾ ಅರೇಬಿಯಾ) ಉನ್ನತವಾದ ಕುಟುಂಬವಾಗಿದೆ ಖುರೈಶ್ ಕುಟುಂಬ. ಖುರೈಶ್'ಗಳ ನಾಯಕರಾಗಿದ್ದಾರೆ ಅಬ್ದುಲ್ ಮುತ್ತಲಿಬ್. ಅವರ ಹದಿಮೂರು ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದಾರೆ ಅಬ್ದುಲ್ಲಾಹ್. ಒಳ್ಳೆಯ ವ್ಯಕ್ತಿತ್ವವನ್ನು, ಉತ್ತಮ ಗುಣನಡತೆಯನ್ನು ಹೊಂದಿರುವ ಸುಂದರನಾದ ಯುವಕನಾಗಿದ್ದಾರೆ ಅವರು. ಯಾವಾಗಲೂ ತಮ್ಮ ತಂದೆಯ ಜೊತೆಯಲ್ಲಿಯೇ ಇರುವರು. ತಮ್ಮ ಸ್ವಂತ ಕುಟುಂಬದ ಸದಸ್ಯರ ಹಾಗೆ ಮಕ್ಕದಲ್ಲಿ ಎಲ್ಲರಿಗೂ ಪ್ರಿಯವಾಗಿದ್ದ ವ್ಯಕ್ತಿಯಾಗಿದ್ದರು ಅವರು. ಅನಾವಶ್ಯಕ ಕಾರ್ಯಗಳಲ್ಲಿ ಅಧಿಕವಾಗಿದ್ದ ಮೈಮರೆಯುತ್ತಿದ್ದ ಸಮೂಹದಲ್ಲಿ ಇದೆಲ್ಲದರಿಂದ ಪ್ರತ್ಯೇಕವಾಗಿ ನಿಂತರು. ಮೂಡ ನಂಬಿಕೆಗಳು ಅಧಿಕವಾಗಿ ಜಲಾಡುತಿದ್ದ ಕಾಲ ಆದರೆ ಇವರಿಗೆ ಅದು ಇಷ್ಟವಿಲ್ಲದ ಕಾರ್ಯವಾಗಿತ್ತು. ಪ್ರಾಮಾಣಿಕವಾಗಿ ಮಕ್ಕದ ಸುಂದರಿಯರಾದ ತರುಣಿಗಳು ಅವರನ್ನು ಇಷ್ಟ ಪಟ್ಟಿದ್ದರು. ಕೆಲವರು ತಮ್ಮ ಮನದ ಆಗ್ರಹಗಳನ್ನು ತಿಳಿಸಿದರು ಇನ್ನು ಕೆಲವರು ನೇರವಾಗಿಯೆ ಬಂದು ತಿಳಿಸಿದರು ಆದರೆ ಅಬ್ದುಲ್ಲಾ ಅದ್ಯಾವುದನ್ನು ಪರಿಗಣಿಸಿರಲಿಲ್ಲ. ಕೆಲವೊಂದು ಆಮೀಷಗಳನ್ನು ಮುಂದೆ ಇಟ್ಟು ಕೆಲವು ಉನ್ನತ ಕುಟುಂಬದ ಶ್ರೀಮಂತ ಮನೆತನದ ಸುಂದರಿ ತರುಣಿಗಳು ತಮ್ಮ ಅಭಿಲಾಷೆಯನ್ನು ವ್ಯಕ್ತ ಪಡಿಸಿದ್ದರು ಆದರೆ ಅದ್ಯಾವುದು ಪ್ರಯೋಜನವಾಗಲಿಲ್ಲ.
ಊರಿನ ಪದ್ದತಿ ಪ್ರಕಾರ ಅಬ್ದುಲ್ಲಾಹ್'ರಿಗೆ ವಿವಾಹ ಪ್ರಾಯ ಹತ್ತಿರವಾದಾಗ ಕುಟುಂಬಸ್ಥರು ಕೂಡ ವಿವಾಹ ಅನ್ವೇಷಣೆ ನಡೆಸಿದರು. ಅದೋ ಒಳ್ಳೆಯ ಅನ್ವೇಷಣೆ ಸುಂದರಿಯಾದ ಉನ್ನತ ಮನೆತನದ ವಹಾಬಿನ ಮಗಳು ಆಮೀನ. ಕುಟುಂಬಸ್ಥರಿಗೆ ಬಹಳ ಇಷ್ಟವಾಯಿತು, ಯಾವ ರೀತಿಯಲ್ಲಿಯೂ ಅಬ್ದುಲ್ಲಾಹ್'ರಿಗೆ ಹೇಳಿ ಮಾಡಿಸಿದ ಜೋಡಿ ಎನ್ನುವಂತಿತ್ತು. ಮೊದಲ ನೋಟದಲ್ಲಿಯೇ ಪರಸ್ಪರ ಇಬ್ಬರಿಗೂ ಇಷ್ಟವಾಯಿತು.
ಗಮನಾರ್ಹ ವಿವಾಹವಾಗಿತ್ತು ಅದು, ಅತ್ಯುತ್ತಮ ರೀತಿಯಲ್ಲಿ ವಿಭಿನ್ನವಾಗಿ ಸಜ್ಜೀಕರಿಸಲಾಗಿತ್ತು. ವಾದ್ಯೋಪಕರಣಳು ಇನ್ನಿತರ ವಸ್ತುಗಳು ಯಾವುದು ಕೂಡ ಇರಲಿಲ್ಲ, ವಧುವರರ ಕುಟುಂಬಗಳಿಂದ ಪ್ರಮಖರು ಒಟ್ಟು ಸೇರಿದರು. ಪರಸ್ಪರ ಬಹಳ ಗೌರವ ಆದರದಿಂದಲೇ ವಿವಾಹ ಕಾರ್ಯಗಳು ಪೂರ್ತಿಯಾಯಿತು.
ಅಬ್ದುಲ್ಲಾಹ್ ಹಾಗೂ ಆಮೀನರ ದಾಂಪತ್ಯ ಜೀವನವು ಮಕ್ಕ ಜನತೆಗೆ ಬಹಳ ಕುತೂಹಲ ಮೂಡಿಸಿತ್ತು. ಈ ಜೋಡಿ ಗುಬ್ಬಚ್ಚಿಗಳ ಏಕತೆಯೂ ಯಾರಿಗೂ ಹೊಟ್ಟೆಕಿಚ್ಚು ತರಿಸುವಂತಾಗಿತ್ತು. ದಂಪತಿಗಳ ಜೀವನವು ಬಹಳ ಉತ್ತಮ ರೀತಿಯಲ್ಲಿ ಮುಂದೆ ಸಾಗಿತು ಹೀಗಿರುವಾಗ ಆಮೀನ ಗರ್ಭವತಿಯಾದರು.
ಅಷ್ಟೊತ್ತಿಗೆ ಮಕ್ಕದಿಂದ ವ್ಯಾಪಾರ ಸಂಘವು ವ್ಯಾಪಾರಕ್ಕೆ ತೆರಳುವ ಸಮಯವಾಗಿತ್ತು. ಪತ್ನಿಯನ್ನು ಬಿಟ್ಟು ಅಬ್ದುಲ್ಲಾಹ್ ವ್ಯಾಪಾರ ಸಂಘದೊಂದಿಗೆ ತೆರಳಿದರು.
ವಿಧಿಗೆ ಕೆಲವು ನಿರ್ಣಯಗಳಿವೆ ಅದನ್ನು ವಿಧಿಸುವವನು (ಸೃಷ್ಟಿಕರ್ತನು) ಅದರಲ್ಲಿ ಸಾರ್ವಭೌಮತ್ವ ಹಾಗೂ ಗುರಿಗಳನ್ನು ಹೊಂದಿರುವನು ಅದನ್ನು ಬದಲಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಹಿಂತಿರುಗಿ ಬರುವಾಗ ಮದೀನದಲ್ಲಿ (ಅವತ್ತಿನ ಯಸ್'ರಿಬ್) ಅಬ್ದುಲ್ಲಾಹ್ ರೋಗ ಪೀಡಿತರಾದರು. ರೋಗ ಉಲ್ಬಣಗೊಂಡು ಅವರು ಇಹಲೋಕ ತ್ಯಜಿಸಿದರು. ಮರಣ ವಿವರವು ತಿಳಿದ ಪತ್ನಿ ದುಃಖವನ್ನು ಅದುಮಿಟ್ಟುಕೊಂಡು ವಿಧಿಯನ್ನು ಕ್ಷಮಿಸಿದರು. ಅದರೊಂದಿಗೆ ತನ್ನ ಪ್ರಿಯತಮನು ಸಮ್ಮಾನಿಸಿದ ಗರ್ಭವನ್ನು ಬಹಳ ಸೂಕ್ಷ್ಮವಾಗಿ ಕಾಳಜಿವಹಿಸಿದರು.
ಕ್ರಿ. ಶ 571 ಏಪ್ರಿಲ್ 20 ಸೋಮವಾರ (ರಬಿವುಲ್ ಅವ್ವಲ್ 12) ಮುಂಜಾನೆ ಆಮೀನ ಒಂದು ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದರು. ಅವರಾಗಿದ್ದಾರೆ ಲೋಕದ ಪ್ರವಾದಿ ಮುತ್ತು ಮುಹಮ್ಮದ್ ಸಲ್ಲಲಾಹು ಅಲೈಹಿವಸಲ್ಲಮ್..
ಇತಿಹಾಸದ ಕಣ್ಣ ಮುಂದೆ ಹಾದು ಬಂದ ಪುಣ್ಯ ಜನ್ಮ....
(ಮುಂದುವರಿಯುವುದು)

No comments:
Post a Comment