ಭಾಗ - 09
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಬಹಳಷ್ಟು ಜನರು ತಬ್ಬಲಿತನವನ್ನು ಒಂದು ದುರಾದೃಷ್ಟವಾಗಿ ಕಾಣುವರು, ಬಹಳಷ್ಟು ಬಾರಿ ಅನಾಥರಿಗೆ ಕೆಲವೊಂದು ಅವಶ್ಯಕ ವಸ್ತುಗಳು ಲಭಿಸದೆ ಹೋಗುತ್ತದೆ ಪ್ರತ್ಯೇಕವಾಗಿ ಸರಿಯಾದ ಶಿಕ್ಷಣವೂ ಕೂಡ ಲಭಿಸಬೇಕೆಂದಿಲ್ಲ. ಆದರೆ ಇದು ಯಾವುದೂ ಕೂಡ ಪುಣ್ಯ ಪ್ರವಾದಿಯವರಿಗೆ ﷺ ಅನ್ವಯವಾಗಲಿಲ್ಲ ಅಷ್ಟೇ ಅಲ್ಲ ಪುಣ್ಯ ಪ್ರವಾದಿಯವರ ﷺ ತಬ್ಬಲಿತನವು ಕೆಲವು ರಹಸ್ಯಗಳೊನ್ನಳಗೊಂಡಿತ್ತು. ಈ ವಿಷಯದಲ್ಲಿ ಆಳವಾಗಿ ಅಧ್ಯಯನ ನಡೆಸಿದವರು ಅದರ ಕುರಿತು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಪ್ರವಾದಿ ಕುಟುಂಬ ಪರಂಪರೆಯಲ್ಲಿ ಬರುವ ಅತ್ಯುತ್ತಮ ಇಮಾಮಾರಾಗಿದ್ದ ಜಅ್'ಫರ್ ಸ್ವಾದಿಕ್'ರವರು (ರ) ಈ ರೀತಿಯಾಗಿ ವಿವರಿಸುತ್ತಾರೆ ಪ್ರವಾದಿವರ್ಯರು ﷺ ತಬ್ಬಲಿಯಾಗಿ ಬೆಳೆಯಲಿರುವ ಕಾರಣ ಯಾರೊಂದಿಗೂ ಯಾವುದೇ ಬಾಧ್ಯತೆಯಿಲ್ಲದ ರೀತಿಯಲ್ಲಿ ಬೆಳೆಯುವ ಉದ್ದೇಶದಿಂದಾಗಿತ್ತು. ಯಾಕೆಂದರೆ ತಂದೆ ತಾಯಿಯರೊಂದಿಗಿನ ಬಾಧ್ಯತೆಗಳನ್ನು ಯಾವುದೇ ಪ್ರತ್ಯುಪಕಾರದಿಂದ ಮುಗಿಸಲು ಸಾಧ್ಯವಿಲ್ಲ ಅಲ್ಲವೇ.?
ಮತ್ತೊಂದು ವಿವರಣೆಯ ಪ್ರಕಾರ ಪ್ರವಾದಿವರ್ಯರ ﷺ ಸಂಪೂರ್ಣ ಮಹತ್ವವು ನೇರವಾಗಿ ಅಲ್ಲಾಹನಿಂದಲೇ ಲಭಿಸಿದ್ದಾಗಿದೆ ಎಂದು ತಿಳಿಸಬೇಕಿತ್ತು. ಅಲ್ಲಾಹನಾಗಿರುವನು ಪ್ರವಾದಿಯವರಿಗೆ ಶಿಕ್ಷಣ ನೀಡಿದ್ದು, ಅದು ಅತ್ಯುತ್ತಮ ಶಿಕ್ಷಣವಾಗಿತ್ತೆಂದು ಪುಣ್ಯ ಪ್ರವಾದಿಯವರೇ ತಿಳಿಸಿದ್ದೂ ಗ್ರಂಥಗಳಲ್ಲಿ ಕಾಣಬಹುದು.
ಅಲ್ಲಾಹನು ಒಬ್ಬರಿಗೆ ಮಹತ್ವ ನೀಡಿದರೆ ಯಾರೂ ಬೇಕಾದರೂ ಉನ್ನತ ಸ್ಥಾನಕ್ಕೆ ತಲುಪುವರು, ಅದಕ್ಕೆ ತಬ್ಬಲಿತನವು ಅಡಚಣೆಯೇ ಅಲ್ಲ. ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿದ ವ್ಯಕ್ತಿಗೆ ಬಡವರ ನೋವನ್ನು ಅತೀ ವೇಗವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಭವಿಷ್ಯದಲ್ಲಿ ಬರುವ ಎಲ್ಲಾ ಅನಾಥರಿಗೂ ನನ್ನ ಪ್ರವಾದಿ ﷺ ಶ್ರೇಷ್ಠರು ಅನಾಥರಾಗಿದ್ದರಲ್ಲವೇ ಎನ್ನುವ ಮಾತು ಸಮಾಧಾನ ಪಡಿಸಲು ಕಾರಣವಾಗುತ್ತದೆ. ಪ್ರವಾದಿವರ್ಯರ ﷺ ಎಲ್ಲಾ ಸಾಮರ್ಥ್ಯವೂ ಸೃಷ್ಟಿಕರ್ತನಿಂದ ಲಭಿಸಿದ್ದಾಗಿದೆ ಅಲ್ಲದೆ ಯಾರಿಂದಲೂ ಸಿಕ್ಕಿದ್ದಲ್ಲ ಹೀಗೆ ಹಲವಾರು ರಹಸ್ಯಗಳು ಆ ತಬ್ಬಲಿತನದಲ್ಲಿ ಅಡಗಿರುತ್ತದೆ. ಜಗದೊಡೆಯನು ಎಲ್ಲಾ ರೀತಿಯಲ್ಲೂ ಅವನ ಮುತ್ತು ಹಬೀಬರನ್ನು ﷺ ಖುದ್ದಾಗಿ ಅವನ ನಿರೀಕ್ಷಣೆಯಲ್ಲಿಯೇ ಬೆಳೆಸಲು ತೀರ್ಮಾನಿಸಿದನು. ಅದೊಂದು ಪದವಿ, ಭಾಗ್ಯ ಆಗಿತ್ತೋ ವಿನಃ ಪರಿಮಿತಿಯೋ, ಕಾಳಜಿಯೋ ಆಗಿರಲಿಲ್ಲ. ಈ ವಿಚಾರವು ಖುರ್'ಆನಿನ ತೊಂಬತ್ತಮೂರನೆಯ ಅಧ್ಯಾಯದಲ್ಲಿ ಕಾಣಬಹುದು.
ಪುಣ್ಯ ಪ್ರವಾದಿಯವರು ﷺ ಅಬೂತ್ವಾಲಿಬರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿರುವಾಗ ಪ್ರವಾದಿವರ್ಯರ ﷺ ಲವಲವಿಕೆಯು ಬಹಳಷ್ಟು ಗಮನಾರ್ಹವಾಗಿತ್ತು. ಆ ಕಾಲದ ಜೀವನ ಅನುಭವಗಳಲ್ಲಿ ಈ ರೀತಿಯ ಒಂದು ಉಲ್ಲೇಖವಿತ್ತು. ಅದೇನೆಂದರೆ ಮುಂಜಾನೆ ಗಾಢ ನಿದ್ರೆಯಿಂದ ಎದ್ದೇಳುವಾಗ ಆಲಸ್ಯ, ಉದಾಸೀನತೆಯಿಂದಾಗಿತ್ತು ಎದ್ದೇಳುತ್ತಿದ್ದದ್ದು ಆದರೆ ಪ್ರವಾದಿಯವರಲ್ಲಿ ಅಂತಹ ಒಂದು ಆಲಸ್ಯವೋ, ಉದಾಸೀನತೆಯೋ ಕಾಣುತ್ತಿರಲಿಲ್ಲ. ಎಲ್ಲಾ ಸಮಯದಲ್ಲೂ ಅವರಲ್ಲಿ ಶುಚಿತ್ವವು ಹಾಗೇ ಇರುತ್ತಿತ್ತು ತಲೆ ಕೂದಲು ಯಾವಾಗಲೂ ಎಣ್ಣೆ ಸವರಿದ ರೀತಿಯಲ್ಲಿ ಬಹಳ ಅಚ್ಚುಕಟ್ಟಾಗಿ ಕಾಣುತಿತ್ತು. ನಿದ್ರೆಯಲ್ಲೂ, ಎಚ್ಚರದಲ್ಲೂ ಜೊತೆಯಲ್ಲಿಯೇ ಇರುತ್ತಿದ್ದ ಅಬೂತ್ವಾಲಿಬರು ತಮಗಾದ ಅನುಭವವನ್ನು ಈ ರೀತಿಯಾಗಿ ವಿವರಿಸುತ್ತಾರೆ. ಬಾಲ್ಯದಲ್ಲಿ ಮುಹಮ್ಮದ್ ﷺ ಮಗನು ನಮ್ಮ ಜೊತೆ ಬೆಳೆಯುತ್ತಿದ್ದ ಸಂದರ್ಭದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿಯೇ ಇರುತ್ತಿದ್ದರು. ಒಂದು ದಿನ ರಾತ್ರಿ ನಿದ್ರೆ ಮಾಡಲು ಹೋಗುತ್ತಿರುವಾಗ ಮುದ್ದು ಮಗನೇ ಕತ್ತಲಿರುವ ರಾತ್ರಿಯಲ್ಲವೇ ಹಾಗಾಗಿ ವಸ್ತ್ರ ತೆಗೆದಿಟ್ಟು ನಿದ್ರೆ ಮಾಡಬಹುದಲ್ಲವೇ.? ಎಂದು ಹೇಳಿದೆನು (ಜನರು ವಿವಸ್ತ್ರವಾಗಿ ಕಅಬಾದ ಪ್ರದಕ್ಷಿಣೆ ಹಾಕುತ್ತಿದ್ದ ಕಾಲವಾಗಿತ್ತು ಅದು) ಆ ಸಮಯದಲ್ಲಿ ಮಗನ ಮುಖದಲ್ಲಿ ಸಂಕೋಚದ ಭಾವನೆ ಎದ್ದು ಕಾಣುತ್ತಿತ್ತು. ಯಾಕೆಂದರೆ ನನ್ನನ್ನು ಅನುಸರಿಸಲೂ ಬೇಕು ಅದೇ ರೀತಿ ಅದನ್ನು ನಿರಾಕರಿಸಲು ಆಗುದಿಲ್ಲ ಅಲ್ಲವೇ ಹಾಗಾಗಿ ನನ್ನಲ್ಲಿ ಈ ರೀತಿ ಹೇಳಿದರು, ನೀವು ನನ್ನ ಕಡೆ ನೋಡದೆ ಬೇರೆ ಕಡೆ ನೋಡಿರಿ ಯಾಕೆಂದರೆ ನನ್ನ ನಗ್ನತೆ ಯಾರೂ ನೋಡುವುದು ನನಗೆ ಇಷ್ಟವಿಲ್ಲ ನಾನು ತಿರುಗಿದ ನಂತರ ಬಟ್ಟೆ ಬದಲಾಯಿಸಿ ಹಾಸಿಗೆಯಲ್ಲಿ ಬಂದು ಮಲಗಿದರು. ನನಗೆ ಅರ್ಧ ರಾತ್ರಿ ನಿದ್ರೆಯಿಂದ ಎಚ್ಚರವಾಗಿ ಮಗನನ್ನು ಒಮ್ಮೆ ನೋಡಿದಾಗ ಒಮ್ಮೆಲೇ ಆಶ್ಚರ್ಯವಾಯಿತು ಈ ಹಿಂದೆ ಯಾವತ್ತೂ ಕಾಣದ ಉನ್ನತವಾದ ವಸ್ತ್ರಗಳನ್ನು ಧರಿಸಿದ ರೀತಿಯಲ್ಲಾಗಿತ್ತು ಮಗನು ನಿದ್ರಿಸುತ್ತಿದ್ದದ್ದು. ಅತ್ಯುತ್ತಮವಾದ ಕಸ್ತೂರಿಯ ಪರಿಮಳವೂ ಕೋಣೆಯಲ್ಲಿ ತುಂಬಿ ತುಳುಕುತ್ತಿತ್ತು.
ಅಷ್ಟೇ ಅಲ್ಲ ಹಲವಾರು ರಾತ್ರಿಗಳಲ್ಲಿ ಇದೆ ರೀತಿ ಅರ್ಧ ರಾತ್ರಿಯಲ್ಲಿ ಎಚ್ಚರವಾಗಿ ಮಗನನ್ನು ನೋಡುವಾಗ ಕೋಣೆಯಲ್ಲಿ ಮಗನನ್ನು ಕಾಣುತ್ತಿರಲಿಲ್ಲ ನಾನು ಬಹಳಷ್ಟು ಚಿಂತೆಯಿಂದ ಮಗನೇ ಎಂದು ಕೂಗುವಾಗ ತಕ್ಷಣ ಪ್ರತ್ಯಕ್ಷವಾಗಿ ನಾನು ಇಲ್ಲಿಯೇ ಇದ್ದೇನೆ ಎಂದು ಉತ್ತರಿಸುತಿದ್ದರು, ಕೆಲವು ರಾತ್ರಿಗಳಲ್ಲಿ ನನಗೆ ಪರಿಚಯವೇ ಇಲ್ಲದ ಭಾಷೆಗಳಲ್ಲಿ ಸಂಭಾಷಣೆ ಕೇಳಿಸುತ್ತಿತ್ತು, ಆಹಾರ ಸೇವಿಸುವ ಮುಂಚೆ "ಬಿಸ್ಮಿಲ್ಲಾಹ್" ಎಂದು ಹೇಳುತಿದ್ದರು ಸೇವಿಸಿದ ನಂತರ "ಅಲ್ ಹಂದುಲಿಲ್ಲಾಹ್" ಎಂದು ಹೇಳುತಿದ್ದರು ಹೀಗೆ ನಮಗೆ ಪರಿಚಯವೇ ಇಲ್ಲದ ಒಂದು ಅಭ್ಯಾಸವೂ ರೂಢಿಗೊಳಿಸಿದ್ದರು.
ಬಾಲ್ಯದಲ್ಲೇ ಮುಹಮ್ಮದ್ ಮಗನಲ್ಲಿ ಕಂಡ ಅದ್ಭುತ ವಿಸ್ಮಯಗಳನ್ನು ಅಬೂತ್ವಾಲಿಬರು ಗುರುತಿಸ ತೊಡಗಿದರು. ಅವರಿಗೆ ಇದೊಂದು ಅಸಾಧಾರಣ ವ್ಯೆಕ್ತಿಯಾಗಿರುವರೆಂಬ ಅರಿವಿತ್ತು.
ಕೆಲವು ಬಿಕ್ಕಟ್ಟಿನ ಸಂದರ್ಭದಲ್ಲಿ ಮುಹಮ್ಮದ್ ﷺ ಮಗನ ಕಾರಣದಿಂದ ಪರಿಹಾರ ಲಭಿಸಿದ್ದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುತ್ತದೆ..)
No comments:
Post a Comment