ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವೇದ ಪಂಡಿತ ಬಹೀರರನ್ನು ಭೇಟಿಯಾದ ಘಟನೆಯು ಬಹಳ ಪ್ರಸಿದ್ಧವಾಗಿದೆ ಪ್ರವಾದಿಯವರ ﷺ ಚರಿತ್ರೆಯನ್ನು ಉಲ್ಲೇಖಿಸಿದ ಎಲ್ಲಾ ಚರಿತ್ರೆಕಾರರು ಕೂಡ ಬಹೀರರನ್ನು ಭೇಟಿಯಾದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಪ್ರಸ್ತುತ ಘಟನೆಯು ಬಹಳ ಮುಖ್ಯವಾದ ಕೆಲವೊಂದು ವಿವರಣೆಗಳು ನೀಡುತ್ತದೆ ಅದು ಯಾವುದೆಂದರೆ. ಒಂದು, ಒಬ್ಬರು ಪ್ರವಾದಿಯವರ ಆಗಮನಕ್ಕಾಗಿ ಇಡೀ ಜಗತ್ತೇ ಕಾಯುತ್ತಿತ್ತು ಎಂದು, ಇನ್ನೊಂದು ಭವಿಷ್ಯದಲ್ಲಿ ನಿಯೋಗಿಸಲ್ಪಡುವ ಪ್ರವಾದಿಯವರ ಕುರಿತು ವೇದಗಳಲ್ಲಿಯೂ ಉಲ್ಲೇಖಿಸಲಾಗಿತ್ತು ಎಂದು, ಮತ್ತೊಂದು ಅದರ ಕುರಿತು ಸ್ಪಷ್ಟವಾದ ಜ್ಞಾನವಿರುವ ವೇದ ಪಂಡಿತರು ಆ ಕಾಲದಲ್ಲಿ ಬದುಕಿದ್ದರು ಎಂದು, ಮಗದೊಂದು ವೇದಗಳಲ್ಲಿ ಉಲ್ಲೇಖಿಸಲಾದ ವಿಶೇಷತೆಗಳು ಮುಹಮ್ಮದ್ ﷺ ಮಗನಲ್ಲಿ ಕಾಣಲು ಸಾಧ್ಯವಾಗಿತ್ತು ಹಾಗೂ ಅದನ್ನು ಅರಿತು ಮುಹಮ್ಮದ್ ﷺ ಮಗನನ್ನು ಬಹಳಷ್ಟು ಗೌರವಿಸಿದರು ಎಂದು.
ನಂತರದ ಕಾಲಘಟ್ಟದಲ್ಲಿ ವೇದಗಳಲ್ಲಿ ನಡೆದ ಕೆಲವೊಂದು ಪರಿವರ್ತನೆಗಳಿಂದ ಇವುಗಳಲ್ಲಿ ಕೆಲವೊಂದು ಘಟನೆಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ ಮುಹಮ್ಮದ್ ﷺ ಮಗನಿಗೆ ಸಂಬಂಧಿಸಿದ ಬಹಳಷ್ಟು ವಿಶೇಷತೆಗಳು ಇವತ್ತಿಗೂ ಬೈಬಲ್'ನಲ್ಲೂ ಇತರ ಗ್ರಂಥಗಳಲ್ಲೂ ಕಾಣಲು ಸಾಧ್ಯವಿದೆ. ಅವುಗಳ ಬಗ್ಗೆ ನಡೆಸಿದ ಅಧ್ಯಯನಗಳೂ ಕೂಡ ಲಭ್ಯವಿದೆ. ಪವಿತ್ರ ಖುರ್'ಆನ್ ವೇದ ಪಂಡಿತರ ಕುರಿತು ಈ ರೀತಿ ವಿವರಿಸುತ್ತದೆ ಅವರ ಬಳಿಯಿರುವ ವೇದ ಗ್ರಂಥಗಳನ್ನು ದೃಢೀಕರಿಸುವ ಮೂಲಕ ಅಲ್ಲಾಹನಿಂದ ಒಂದು ಗ್ರಂಥವನ್ನು (ಖುರ್'ಆನ್) ಅವತರಿಸಲಾಯಿತು, (ಅವರು ಅಂಗೀಕರಿಸಲಿಲ್ಲ) ಈ ಹಿಂದೆ ಅವರು ಸತ್ಯನಿಷೇದಿಗಳ ವಿರುದ್ಧ (ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರನ್ನು ಸಾಕ್ಷಿಯಾಗಿಸಿ) ಸಹಾಯ ಕೋರಿದ್ದರು ಆದರೆ ಅವರಿಗೆ ಸ್ಪಷ್ಟವಾಗಿ ತಿಳಿದಿದ್ದ ಗ್ರಂಥ ಬಂದಾಗ ಅವರು ಅದನ್ನು ನಿಷೇದಿಸಿದರು (2:89) ಎಂದು.
ಅಂತ್ಯ ಪ್ರವಾದಿಯವರ ﷺ ಕುರಿತು ಇರುವ ಚರ್ಚೆಗಳು ಯಹೂದಿ ಹಾಗೂ ಕ್ರೈಸ್ತರ ನಡುವೆ ಬಹಳ ಸ್ಪಷ್ಟವಾಗಿಯೆ ನಡೆದಿತ್ತು. ಅದರ ಕುರಿತು ಖುರ್'ಆನ್ ಈ ರೀತಿ ಹೇಳುತ್ತದೆ ಅವರಿಗೆ ಅವರ ಸ್ವಂತ ಮಕ್ಕಳ ಕುರಿತು ಅರಿವಿರುವ ಹಾಗೆ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತೂ ಅರಿವಿತ್ತು. ಬಹು ದೈವರಾಧಕರು ಅದರ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭಗಳಲ್ಲಿ ಅವರೇ ಅದನ್ನು ಖುದ್ದಾಗಿ ಹೇಳಿದ್ದರು. ಅಂತ್ಯ ಪ್ರವಾದಿಯವರು ﷺ ಬರುವರು ಆ ಪ್ರವಾದಿಯವರೊಂದಿಗೆ ﷺ ನಾವು ಖಂಡಿತ ಸೇರುತ್ತೇವೆ ಆ ಮೂಲಕ ನಾವು ವಿಜಯಶಾಲಿ ಆಗಲಿದ್ದೇವೆ ಎಂದು. ನಿರಂತರವಾಗಿ ವೇದಗ್ರಂಥಸ್ಥರು ಬಹಳಷ್ಟು ಭರವಸೆಯಿಂದ ನಿರೀಕ್ಷಿಸುತ್ತಿದ್ದ ವಾಸ್ತವವಾಗಿತ್ತು ಅದು. ಆದರೆ ಅರಬಿಗಳ ಮಧ್ಯದಿಂದ ಪ್ರವಾದಿಯವರು ಜನಿಸಿದ್ದಾರೆ ಎನ್ನುವ ಸತ್ಯವು ಅವರಿಗೆ ತಿಳಿದಾಗ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೆಲವೊಂದು ಸ್ವಾರ್ಥ ಮನೋಭಾವವಾಗಿತ್ತು ಅವರನ್ನು ತಡೆದದ್ದು. ಭೌತಿಕ ನಷ್ಟದ ಆಧಾರದ ಮೇಲೆಯಾಗಿತ್ತು ಅವರು ಪುಣ್ಯ ಪ್ರವಾದಿಯವರನ್ನು ﷺ ತಿರಸ್ಕರಿಸಿದ್ದು.
ಅಬೂತ್ವಾಲಿಬರೊಂದಿಗೆ ಸಿರಿಯಾ ಪಟ್ಟಣಕ್ಕೆ ತೆರಳುತ್ತಿದ್ದ ಯಾತ್ರೆಯ ಕುರಿತಾಗಿತ್ತಲ್ಲವೇ ಹೇಳುತ್ತಿದ್ದದ್ದು. ಪ್ರವಾದಿವರ್ಯರ ﷺ 20 ನೇ ವಯಸ್ಸಿನಲ್ಲಿ ಅಬೂಬಕ್ಕರ್'ರವರ (ರ) ಜೊತೆಯಲ್ಲಿ ನಡೆಸಿದ್ದ ಶಾಮ್ ಯಾತ್ರೆಯ ಕುರಿತು ಕೆಲವೊಂದು ಚರಿತ್ರೆಕಾರರು ಈ ರೀತಿ ಬರೆದಿದ್ದಾರೆ. ಅದೇನೆಂದರೆ ಅಬೂಬಕ್ಕರ್'ರವರು (ರ) ತಮ್ಮ 18 ನೇ ವಯಸ್ಸಿನಲ್ಲಿ ಮುಹಮ್ಮದ್ ﷺ ರೊಂದಿಗೆ ಶಾಮ್ ಪಟ್ಟಣಕ್ಕೆ ತೆರಳಿದರು. ವ್ಯಾಪಾರ ಸಾಮಾಗ್ರಿಗಳೊಂದಿಗಿರುವ ಯಾತ್ರೆಯಾಗಿತ್ತು ಅದು. ಯಾತ್ರಾ ಸಂಘವೂ ಸಿರಿಯ ಪಟ್ಟಣದ ಒಂದು ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಪಕ್ಕದಲ್ಲೇ ಇರುವ ಆಶ್ರಮದ ಪಂಡಿತಾರಗಿದ್ದ ಬಹೀರರನ್ನು ಅಬೂಬಕ್ಕರ್'ರವರು (ರ) ಸಂದರ್ಶಿಸಿದರು. ಅವರ ಕೆಲವೊಂದು ವೈಯಕ್ತಿಕ ವಿಷಯಗಳ ಬಗ್ಗೆ ತಿಳಿಯುವ ಉದ್ದೇಶದಿಂದಾಗಿತ್ತು ತೆರಳಿದ್ದು. ತಕ್ಷಣವೇ ಆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ಯಾರು? ಎಂದು ಬಹೀರ ಕೇಳಿದರು. ಅದು ಅಬ್ದುಲ್ ಮುತ್ತಲಿಬರ ಮಗನಾದ ಅಬ್ದುಲ್ಲಾಹ್'ರವರ (ರ) ಮಗ ಮುಹಮ್ಮದ್ ﷺ ಎಂದು ಅಬೂಬಕ್ಕರ್'ರವರು ಉತ್ತರಿಸಿದರು. ಅದಕ್ಕೆ ಈ ಸಮೂಹಕ್ಕಿರುವ ಸತ್ಯ ಸಂದೇಶ ವಾಹಕರಾಗಿರುವರು ಅವರು, ಪ್ರವಾದಿ ಈಸರವರ (ಅ) ನಂತರ ಈ ಮರದಡಿಯಲ್ಲಿ ಯಾರೂ ಕೂಡ ವಿಶ್ರಾಂತಿ ಪಡೆದಿರಲಿಲ್ಲ ಎಂದು ಬಹೀರ ಹೇಳಿದರು. ಈ ಘಟನೆಯನ್ನು ಇಬ್'ನು ಅಬ್ಬಾಸ್'ರವರು (ರ) ಉಲ್ಲೇಖಿಸಿದ್ದಾರೆ. ಈ ಯಾತ್ರೆಯ ಕುರಿತು ಪ್ರಮುಖ ಚರಿತ್ರೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿಲ್ಲ ಆದರೆ ಇದನ್ನು ಚರಿತ್ರೆಯ ಭಾಗವಾಗಿ ತಳ್ಳಿಹಾಕಬಾರದು ಎಂಬ ಅಭಿಪ್ರಾಯವನ್ನು ಬಹಳಷ್ಟು ಪ್ರಮುಖ ಪಂಡಿತರು ಹಾಗೂ ಆಧುನಿಕ ವಿದ್ವಾಂಸರು ಕೂಡ ತಿಳಿಸಿದ್ದಾರೆ.
ಅಬೂಬಕ್ಕರ್'ರವರ (ರ) ಯಾತ್ರೆಯಲ್ಲಿ ಒಬ್ಬ ವೇದ ಪಂಡಿತರನ್ನು ಭೇಟಿಯಾಗಿದ್ದರು ಅವರು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಕುರಿತು ತಿಳಿಸಿದ್ದರು ಎನ್ನುವ ಅಭಿಪ್ರಾಯಗಳು ಕೂಡ ಬೇರೆ ಚರಿತ್ರೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ತಂದೆಯ ಸಹೋದರನಾಗಿದ್ದ ಝುಬೈರ್'ರೊಂದಿಗೆ ಪ್ರವಾದಿವರ್ಯರು ﷺ ಯಮನಿಗೆ ಯಾತ್ರೆ ನಡೆಸಿದ ಘಟನೆಯನ್ನು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಆದರೆ ಅದನ್ನು ಉಲ್ಲೇಖಿಸಿದ ಪರಂಪರೆಯು ಅಷ್ಟೊಂದು ಪ್ರಬಲವಾಗಿಲ್ಲ.
ಪುಣ್ಯ ಪ್ರವಾದಿಯವರ ﷺ ಬಾಲ್ಯ, ಯೌವನ ಬಹಳಷ್ಟು ಮಾದರಿ ಯೋಗ್ಯವಾಗಿತ್ತು. ಸುತ್ತಮುತ್ತಲಿನಲ್ಲಿ ಸಂಪೂರ್ಣವಾಗಿ ಕಲುಷಿತ ವಾತಾವರಣವಿದ್ದರೂ ಕೂಡ ಯಾವುದೇ ಸಣ್ಣ ಮಲಿನತೆಯು ಇಲ್ಲದ ಹಾಗೆ ಜೀವಿಸಿದರು. ಕಷ್ಟ ಪಟ್ಟು ದುಡಿಯಬೇಕಾದ ಸಂದರ್ಭದಲ್ಲಿ ಬಹಳ ಕಷ್ಟದಿಂದಲೇ ದುಡಿದು ಜೀವನ ಸಾಗಿಸಿದರು. ಪುಣ್ಯ ಪ್ರವಾದಿಯವರ ﷺ ದುಡಿಮೆಯ ಜೀವನವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುತ್ತದೆ...)
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
No comments:
Post a Comment