ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವವಾಗಿತ್ತು ಪುಣ್ಯ ಪ್ರವಾದಿಯವರದ್ದು ﷺ ಮಕ್ಕಾ ಪಟ್ಟಣದಲ್ಲಿಯೂ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಬಹಳಷ್ಟು ವರ್ಷಗಳಿಂದ ಜನಾಂಗೀಯ ಗಲಭೆಗಳು ನಡೆಯುತ್ತಲೇ ಇತ್ತು. ಹರ್'ಬುಲ್ ಫಿಜಾರ್ ಅಥವಾ ಪುಂಡರ ಯುದ್ಧ ಎಂದಾಗಿತ್ತು ಚರಿತ್ರೆಗಳಲ್ಲಿ ಅದನ್ನು ಕರೆಯಲ್ಪಟ್ಟದ್ದು. ಅಂದು ಪ್ರವಾದಿವಾರ್ಯರಿಗೆ ﷺ 15 ವರ್ಷ ಪ್ರಾಯವಾಗಿತ್ತು. ಒಂದು ಭಾಗದಲ್ಲಿ ಖುರೈಷಿಗಳು ಹಾಗೂ ಕಿನಾನ ಜನಾಂಗವಾದರೆ ಮತ್ತೊಂದು ಭಾಗದಲ್ಲಿ ಹವಾಸಿಲ್ ಪ್ರದೇಶದ ಖೈಸ್ - ಅಯಲಾನ್ ಜನಾಂಗ ಒಂದನೇ ಗುಂಪಿನ ನಾಯಕ ಹರ್'ಬ್ ಬಿನ್ ಉಮಯ್ಯ ಎನ್ನುವವರಾಗಿದ್ದರು. ಮಕ್ಕಾದ ಸುಪ್ರಸಿದ್ಧ ಉಕ್ಕಾಲ್ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಆಶ್ರಯ ನೀಡಿದ್ದಾಗಿತ್ತು ಯುದ್ದಕ್ಕೆ ಕಾರಣವಾದದ್ದು. ನಾಲ್ಕು ಯುದ್ಧಗಳು ನಡೆದಿತ್ತು, ನಾಲ್ಕನೇ ಯುದ್ದಕ್ಕೆ ಪ್ರವಾದಿವರ್ಯರು ﷺ ತಮ್ಮ ಚಿಕ್ಕಪ್ಪರೊಂದಿಗೆ ಯುದ್ದಕ್ಕೆ ತೆರಳಿದ್ದರು. ಆದರೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಚದುರಿದ ಬಾಣಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತಿದ್ದರು ಅದರ ನಡುವೆ ಕೆಲವೊಂದು ಬಿಲ್ಲುಗಾರಿಕೆ ನಡೆಸಬೇಕಾಗಿಯು ಬಂದಿತ್ತು. ಆದರೆ ಅದೂ ಕೂಡ ಬೇಕಾಗಿರಲಿಲ್ಲ ಎನ್ನುವ ಅಭಿಪ್ರಾಯವನ್ನು ನಂತರದ ದಿನಗಳಲ್ಲಿ ಪ್ರವಾದಿವರ್ಯರು ﷺ ಹೇಳುತ್ತಿದ್ದರು.
ಯುದ್ಧದ ಪ್ರಾರಂಭದಲ್ಲಿ ಮದ್ಯಾಹ್ನದ ಮೊದಲು ಹವಾಸಿಲ್ ಜನಾಂಗಕ್ಕಾಗಿತ್ತು ಜಯ ಸಿಕ್ಕಿದ್ದು, ಆದರೆ ಮಧ್ಯಾಹ್ನದ ನಂತರ ಖುರೈಷಿಗಳು ಜಯ ಸಾಧಿಸಿದರು. ನ್ಯಾಯ ಖುರೈಷಿಗಳ ಭಾಗದಲ್ಲಿದ್ದರೂ ಕೂಡ ಅವರೇ ಆಗಿತ್ತು ಸಂಧಾನಕ್ಕೆ ಪ್ರಯತ್ನ ಪಟ್ಟದ್ದು. ಶಾಶ್ವತವಾಗಿ ಈ ರಕ್ತಪಾತಕೊಂದು ಪೂರ್ಣವಿರಾಮ ಹಾಕಬೇಕೆಂದು ಅವರು ಆಗ್ರಹಿಸಿದರು. ಸೇನಾಧಿಪತಿ ಉತ್'ಬತ್ ಬಿನ್ ರಬೀಅ ನೇರವಾಗಿ ಕಣಕ್ಕಿಳಿದು ಎರಡು ಬಣಗಳ ನಡುವೆ ಕೆಲವು ದೃಢನಿಶ್ಚಯಗಳನ್ನು ಮಾಡಿಕೊಂಡರು. ಸಮಸ್ಯೆಗಳು ಸಂಪೂರ್ಣವಾಗಿ ಶಾಂತವಾಯಿತು ಅಷ್ಟೊತ್ತಿಗೆ ಪ್ರವಾದಿಯವರು ವಯಸ್ಸು 20 ದಾಟಿತ್ತು.
ಕೆಲವೊಂದು ಸಾಮಾಜಿಕ ವಾಸ್ತವಗಳನ್ನು ನೇರವಾಗಿ ಅನುಭವಿಸಲು ಪ್ರವಾದಿವರ್ಯರಿಗೆ ﷺ ಅವಕಾಶ ಲಭಿಸಿತ್ತು. ಅವರ ಧೈರ್ಯ ಹಾಗೂ ಸಾಮರ್ಥ್ಯದ ಕುರಿತು ಜೊತೆಯಲ್ಲಿದ್ದವರಿಗೆ ಮನವರಿಕೆಯಾಯಿತು. ನಂತರದ ದಿನಗಳಲ್ಲಿ ಪ್ರವಾದಿವರ್ಯರು ﷺ ಅವರ ಕಾರ್ಯಾಚರಣೆಗಳ ಕುರಿತು ನೆನಪಿಸುಕೊಳ್ಳುತ್ತಾ, ಅದರ ಕುರಿತು ತಮ್ಮ ಅನುಯಾಯಿಗಳಿಗೆ ತಿಳಿಸುತ್ತಿದ್ದರು.
ನಂತರದ ದಿನಗಳಲ್ಲಿ ಮಕ್ಕಾ ಪಟ್ಟಣದಲ್ಲಿ ಒಂದು ಒಪ್ಪಂದವನ್ನು ಮಾಡಲಾಯಿತು. "ಹಿಲ್'ಫುಲ್ ಫುಳೂಲ್" ಎಂದಾಗಿತ್ತು ಆ ಒಪ್ಪಂದದ ಹೆಸರು. ಶಾಂತಿಯನ್ನು ಬಯಸುವ ಒಂದು ಜನಕೂಟವಾಗಿತ್ತು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟದ್ದು. ಭವಿಷ್ಯದಲ್ಲಿ ಯಾವುದೇ ರೀತಿಯ ಯುದ್ಧ ಅಥವಾ ಇತರ ಅಕ್ರಮಗಳು ನಡೆಯದ ಹಾಗೆ ತಡೆಯುದಾಗಿತ್ತು ಇದರ ಬಹಳ ಪ್ರಮುಖ ಉದ್ದೇಶ. ಇದಕ್ಕಿದ್ದ ಮುಖ್ಯ ಕಾರಣವೇನೆಂದರೆ ಝುಬೈದ್ ಜನಾಂಗಕ್ಕೆ ಸೇರಿದ ಒಬ್ಬ ವ್ಯಕ್ತಿ ತನ್ನ ವ್ಯಾಪಾರ ಸಾಮಗ್ರಿಗಳೊಂದಿಗೆ ಮಕ್ಕಾ ಪಟ್ಟಣಕ್ಕೆ ತಲುಪಿದಾಗ ಮಕ್ಕಾದ ನಾಯಕನಾಗಿದ್ದ ಅಸ್ವ್ ಬಿನ್ ವಾಯಿಲ್ ಆ ಸರಕುಗಳಿಗೆ ಒಂದು ಬೆಲೆಯನ್ನು ನಿಶ್ಚಯಿಸಿದರು ಆದರೆ ಮೋಸಗಾರನಾದ ವಾಯಿಲ್ ಸರಕುಗಳನ್ನು ಪಡೆದುಕೊಂಡು ಅದಕ್ಕೆ ಕ್ರಯ ನೀಡದೆ ತನ್ನ ಅಹಂಕಾರವನ್ನು ತೋರಿಸಿದರು. ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿ ಮಕ್ಕದ ಇತರ ಪ್ರಮುಖರೊಂದಿಗೆ ತನ್ನ ಸಮಸ್ಯೆಯನ್ನು ತೋರಿಕೊಂಡರೂ ಯಾರೂ ಕೂಡ ವಾಯಿಲ್ ಅವರಿಂದ ಹಣ ಕೇಳುವ ಪ್ರಯತ್ನಕ್ಕೆ ಹೋಗಲಿಲ್ಲ. ಅವರು ಮಕ್ಕಾದಲ್ಲಿದ್ದ ಬಂಡವಾಳಶಾಹಿಗಳ ಶೋಷಣೆಗೆ ಸಂಕೇತವಾಗಿದ್ದರು.
ನೊಂದ ವ್ಯಾಪಾರಿ ಒಂದು ಉಪಾಯವನ್ನು ಪ್ರಯೋಗಿಸಿದರು. ಮರು ದಿವಸ ಮುಂಜಾನೆ ಕಅಬಲಾಯದ ಸಮೀಪದಲ್ಲಿದ್ದ ಅಬೂಖುಬೈಸ್ ಬೆಟ್ಟದ ಮೇಲೆ ಹತ್ತಿ ಮಕ್ಕಾದಲ್ಲಿ ತನಗಾದ ಅನ್ಯಾಯವನ್ನು ಒಂದು ಕವಿತೆಯ ರೂಪದಲ್ಲಿ ಹಾಡಿದರು. ಒಬ್ಬ ಮಕ್ಕಾ ನಿವಾಸಿಯಿಂದ ತನಗಾದ ಅನ್ಯಾಯವನ್ನು ತಿಳಿಸುವ ಸಾಲುಗಳಾಗಿತ್ತು ಅದು. ಮಕ್ಕಾದ ಗಣ್ಯರೆಲ್ಲರೂ ಕಅಬಾಲಯದ ಪಕ್ಕದಲ್ಲಿ ಕುಳಿತು ಮಾತುಕತೆ ನಡೆಸುವ ಸಮಯವಾಗಿದ್ದ ಕಾರಣ ಅವರೆಲ್ಲರೂ ಆ ಸಾಲುಗಳನ್ನು ಕೇಳಿದರು. ಮಕ್ಕಾ ನಿವಾಸಿಯಾದ ವ್ಯಕ್ತಿ, ಪರ ಊರಿನ ವ್ಯಾಪಾರಿಯನ್ನು ವಂಚಿಸಿದ ವಿಷಯ ತಿಳಿದು ಎಲ್ಲರಿಗೂ ಬಹಳಷ್ಟು ಬೇಸರವಾಯಿತು. ಸ್ವಾಭಿಮಾನಿಯಾಗಿದ್ದ ಪ್ರವಾದಿವರ್ಯರ ﷺ ಚಿಕ್ಕಪ್ಪ ಝುಬೈರ್'ರವರು ತಕ್ಷಣ ಎದ್ದು ನಿಂತು "ಇನ್ನು ಆತನನ್ನು ಹಾಗೆ ಬಿಟ್ಟು ಬಿಡಬಾರದು" ಎಂದು ಹೇಳಿ ಇತರರನ್ನು ಒಗ್ಗೂಡಿಸಿದರು, ಮಕ್ಕಾದ ಪ್ರಮುಖ ಗಣ್ಯರೆಲ್ಲರೂ ಬಂದು ಸೇರಿದರು. ಅಬ್ದುಲ್ಲಾಹ್ ಬಿನ್ ಜುದ್ಆನ್'ರವರ ಮನೆಯಲ್ಲಿ ಇದರ ಕುರಿತು ಒಂದು ಸಭೆ ನಡೆಸಲಾಯಿತು.
"ಸಂತ್ರಸ್ತರು ಯಾರೇ ಆಗಿರಲಿ ಅವರಿಗೆ ಮಕ್ಕಾದಲ್ಲಿಯೇ ನ್ಯಾಯ ಸಿಗಬೇಕು, ನ್ಯಾಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು, ನಮ್ಮೆಡೆಯಲ್ಲಿ ಇದರ ಕುರಿತು ಒಂದು ದೃಢ ನಿಶ್ಚಯ ಮಾಡಿಕೊಳ್ಳಬೇಕು, ಸಮುದ್ರದಲ್ಲಿ ಒಂದು ಬಿಂದು ನೀರು ಬಾಕಿಯಾಗುವವರೆಗೂ ಈ ಪ್ರತಿಜ್ಞೆ ಬಾಕಿಯಾಗಿರಬೇಕು, ಹಿರಾ, ಸಬೀರ್ ಬೆಟ್ಟಗಳು ಚಲಿಸುವವರೆಗೂ ಈ ಒಪ್ಪಂದ ಉಳಿಯಬೇಕು." ಎಂದು ವಿಷಯಗಳ ಕುರಿತು ಝುಬೈರ್ ಭಾಷಣ ಮಾಡಿದರು. ಎಲ್ಲಾ ಜನಾಂಗದ ನಾಯಕರೂ ಇದಕ್ಕೆ ಒಪ್ಪಿಗೆ ನೀಡಿದರು. ಆಹಾರ ಸೇವನೆಯ ನಂತರ ಒಪ್ಪಂದಕ್ಕೆ ಸಹಿ ಹಾಕಿದರು. ಒಬ್ಬೊಬ್ಬರಾಗಿ ಅಸ್ವ್ ಬಿನ್ ವಾಯಿಲ್'ನ ಮನೆಗೆ ತೆರಳಿ ವ್ಯಾಪಾರಿಯ ಎಲ್ಲಾ ಸರಕುಗಳನ್ನು ಹಿಂತಿರುಗಿಸಿದರು. ಅದರೊಂದಿಗೆ, 'ಹಿಲ್‌ಫುಲ್ ಫುಳೂಲ್' ಶಾಂತಿ ಮೈತ್ರಿ ಒಪ್ಪಂದವು ಜಾರಿಗೆ ಬಂದಿತು.
ಈ ಒಪ್ಪಂದದಲ್ಲಿ ತಮ್ಮ ಚಿಕ್ಕಪ್ಪರೊಂದಿಗೆ ಪ್ರಧಾನ ಪಾತ್ರ ವಹಿಸಿದ್ದೆ ಪುಣ್ಯ ಪ್ರವಾದಿವರ್ಯರಾಗಿದ್ದರು ﷺ ಪ್ರಪಂಚದಾದ್ಯಂತ ನ್ಯಾಯವನ್ನು ಸ್ಥಾಪಿಸಬೇಕಾದ ಮಹಾನ್ ವ್ಯಕ್ತಿ ತಮ್ಮ ಯೌವನದಲ್ಲಿಯೇ ಶಾಂತಿಸ್ಥಾಪಕನಾಗಿದ್ದರು.
(ಮುಂದುವರೆಯುವುದು...)

No comments:
Post a Comment