ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ನಂತರದ ದಿನಗಳಲ್ಲಿ ಶಾಂತಿ ಒಪ್ಪಂದದ ಕುರಿತು ಬಹಳ ಆವೇಶದಿಂದ ಪ್ರವಾದಿವರ್ಯರು ﷺ ಹೇಳುತ್ತಿದ್ದರು. ನಾನು ಯುವಕನಾಗಿದ್ದಾಗ ನನ್ನ ಚಿಕ್ಕಪ್ಪರೊಂದಿಗೆ ನಾನು ಕೂಡ ಆ ಮೈತ್ರಿಯಲ್ಲಿ ಭಾಗವಹಿಸಿದ್ದೆ. ಕೆಂಪು ಒಂಟೆಗಳ ಹಿಂಡುಗಳನ್ನು ನೀಡುದಕ್ಕಿಂತಲೂ ಹೆಚ್ಚು ನನಗೆ ಅದು ಸಂತೋಷವಾಗಿತ್ತು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು ಅಬ್ದುಲ್ಲಾಹಿ ಬಿನ್ ಜುದ್ ಅವರ ಮನೆಯಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಲು ನಾನು ಕೂಡ ಜೊತೆ ಸೇರಿದ್ದೆ ಅಂತಹ ಒಪ್ಪಂದಕ್ಕೆ ಇಸ್ಲಾಮನ್ನು ಆಹ್ವಾನಿಸಿದರೂ ನಾನು ಒಪ್ಪಿಗೆ ಕೊಡುತ್ತೇನೆ ಎಂದು.
ಈ ಒಪ್ಪಂದದ ಕಾರಣ ಮಕ್ಕಾ ಪಟ್ಟಣದಲ್ಲಿ ಬಹಳಷ್ಟು ಒಳಿತುಗಳು ನಡೆಯಿತು ಹಲವಾರು ಹಿಂಸಾಚಾರ ತಡೆಯಲ್ಪಟ್ಟಿತು. ಅವುಗಳಲ್ಲಿ ಒಂದು ಘಟನೆಯನ್ನು ಈ ರೀತಿ ವಿವರಿಸಬಹುದು ಖಸ್ಅಂ ಜನಾಂಗದ ಒಬ್ಬ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಮಕ್ಕಾ ಪಟ್ಟಣಕ್ಕೆ ಬಂದಿದ್ದರು ತೀರ್ಥಯಾತ್ರೆಗೆ ಆಗಿತ್ತು ಬಂದದ್ದು. ಅವರ ಅಲ್ ಖತೂಲ್ ಎನ್ನುವ ಸುಂದರಿ ಮಗಳನ್ನು ನಬೀಹ್ ಎನ್ನುವ ದುಷ್ಟ ಅಪಹರಿಸಿ ಕೊಂಡೋದನು. ಯಾತ್ರಿಕರು ಸಂಪೂರ್ಣವಾಗಿ ಭಯಭೀತರಾಗಿದ್ದರು ಯಾರಲ್ಲಿ ದೂರು ಕೊಡುವುದು ಎಂದು ತಿಳಿಯದೆ ಗೊಂದಲಕ್ಕೊಳಗಾದರು. ತಕ್ಷಣವೇ ಫುಳೂಲ್ ಒಪ್ಪಂದಕ್ಕೆ ಸಹಿ ಹಾಕಿದ ವ್ಯಕ್ತಿಗಳಲ್ಲಿ ದೂರ ನೀಡೋಣ ಎಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ತಿಳಿಸಿದರು. ಅದೇ ರೀತಿ ಕಅಬಾದ ಸಮೀಪ ಬಂದು ಒಪ್ಪಂದಕ್ಕೆ ಸಹಿ ಹಾಕಿದವರನ್ನು ಕೂಗಿ ಕರೆದರು. ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವರೇ.! ಬನ್ನಿರಿ.! ನಮಗೆ ಸಹಾಯ ಮಾಡಿರಿ ಎಂದು ಹೇಳಿದಾಗ ಒಪ್ಪಂದದಲ್ಲಿ ಭಾಗವಹಿಸಿದವರು ಹತ್ತಿರ ಓಡಿ ಬಂದರು. ಅವರು ದೂರು ನೀಡಿದ ವ್ಯಕ್ತಿಗೆ ಸಹಾಯದ ಭರವಸೆ ಕೊಟ್ಟು ಗುಂಪಿನೊಂದಿಗೆ ಆಯುಧವನ್ನು ತೆಗೆದುಕೊಂಡು ನಬೀಹ್'ನ ಮನೆಗೆ ತೆರಳಿ ಅವರ ಜನಾಂಗದ ಸಹಾಯದೊಂದಿಗೆ ಆ ಹೆಣ್ಣು ಮಗಳನ್ನು ಬಿಟ್ಟು ಬಿಡಲು ಆಗ್ರಹಿಸಿದರು. ಫುಳೂಲ್ ಒಪ್ಪಂದದ ಕುರಿತು ನೆನಪಿಸಿದಾಗ ವಿಧಿ ಇಲ್ಲದೆ ನಬೀಹ್ ನಾನು ಆ ಹುಡುಗಿಯನ್ನು ಬಿಟ್ಟು ಬಿಡುತ್ತೇನೆ ಆದರೆ ಈ ಒಂದು ರಾತ್ರಿ ಅವಳನ್ನು ನನಗೆ ಬಿಟ್ಟು ಕೊಡಿ ಎಂದು ಹೇಳಿದಾಗ ನಾಯಕರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಒಂದು ಒಂಟೆಗೆ ಹಾಲುಣಿಸುವಷ್ಟು ಸಮಯವು ಕೂಡ ಅನುಮತಿಸುವುದಿಲ್ಲ ಎಂದು ನಾಯಕರು ಹೇಳಿದಾಗ ಬೇರೆ ದಾರಿಯಿಲ್ಲದೆ ಅವನು ಆ ಹೆಣ್ಣು ಮಗಳನ್ನು ಬಿಟ್ಟು ಕೊಟ್ಟನು.
ಅರೇಬಿಯಾದ ಸಾಂಸ್ಕೃತಿಕ ಭೂಮಿಯಲ್ಲಿ ನ್ಯಾಯದ ಪ್ರಕಾಶವನ್ನು ನೀಡಲು ಪುಣ್ಯ ಪ್ರವಾದಿವರ್ಯರಿಗೆ ﷺ ಸಣ್ಣ ವಯಸ್ಸಿನಲ್ಲೇ ಅವಕಾಶ ಲಭಿಸಿತ್ತು.
ಒಂದೊಂದು ದಿವಸದ ಒಂದೊಂದು ಘಟನೆಗಳು ಕೂಡ ಪುಣ್ಯ ಪ್ರವಾದಿಯವರನ್ನು ﷺ ಮಕ್ಕಾದಲ್ಲಿ ಉನ್ನತ ವ್ಯಕ್ತಿತ್ವವಾಗಿ ತೋರಿಸುತ್ತಲೇ ಇತ್ತು. ಮಕ್ಕಾ ಪಟ್ಟಣದ ಹಲವಾರು ಜನರಿಗೆ ಪ್ರವಾದಿವರ್ಯರನ್ನು ﷺ ಕಾಣದ ದಿವಸ ನಿರಾಸೆಯ ದಿನಗಳಾಗಿತ್ತು. ಪ್ರವಾದಿವರ್ಯರು ﷺ ಭಾಗವಹಿಸಿದ ಕಾರ್ಯಕ್ರಮದಲ್ಲಿ ಕಳೆಯೇ ಇರುತ್ತಿರಲಿಲ್ಲ.
ಸ್ವಂತ ಜೀವನದ ಖರ್ಚುಗಳಿಗೆ ಯಾರನ್ನೂ ಅವಲಂಬಿಸದ ಜೀವನ ಶೈಲಿಯಾಗಿತ್ತಲ್ಲವೇ ಪುಣ್ಯ ಪ್ರವಾದಿಯವರ ﷺ ಜೀವನ ಶೈಲಿ. ಪಶುಪಾಲನೆಯ ಕಸುಬಿಗೆ ಸೇರಿದ್ದು ಕೂಡ ಅದೇ ಕಾರಣಕ್ಕಲ್ಲವೇ.? ಈಗ ಪ್ರವಾದಿವರ್ಯರ ﷺ ವಯಸ್ಸು 24 ದಾಟಿತು. ಅಬೂತ್ವಾಲಿಬರು ಪ್ರವಾದಿಯವರನ್ನು ﷺ ವ್ಯಾಪಾರಕ್ಕೆ ಆಹ್ವಾನಿಸಿದರು. ಪ್ರಮುಖ ವ್ಯಾಪಾರಿಯಾಗಿದ್ದ ಖದೀಜರವರ (ರ) ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರವಾದಿಯವರಿಗೆ ﷺ ಲಭಿಸಿತು. ಪಶುಪಾಲನೆಯ ಕಣಿವೆಗಳಿಂದ ಜನನಿಬಿಡ ಮಾರುಕಟ್ಟೆಗೆಯಾಗಿತ್ತು ಪ್ರವಾದಿವರ್ಯರ ﷺ ಯಾತ್ರೆ. ಭವಿಷ್ಯದಲ್ಲಿ ನಿಭಾಯಿಸಬೇಕಾದ ಜವಾಬ್ದಾರಿಗಳಿಗೆ ಸೃಷ್ಟಿಕರ್ತನು ಸಿದ್ಧಪಡಿಸಿದ ತರಬೇತಿ ಕೂಡ ಆಗಿತ್ತು ಅದು.
ಪುಣ್ಯ ಪ್ರವಾದಿಯವರ ﷺ ವ್ಯಾಪಾರ ಯಾತ್ರೆಗೆ ಕೆಲವು ಹಿನ್ನೆಲೆಗಳೂ ಕೂಡ ಇತ್ತು. ಖದೀಜರವರ (ರ) ಸೇವಕಿ ನಫೀಸ ಬಿಂತ್ ಮುನ್'ಯಅತ್ ಈ ರೀತಿ ವಿವರಿಸುತ್ತಾರೆ. ದುಲ್ ಹಜ್ಜ್ 14 ರ ಒಂದು ದಿನ ಅಂದು ಪ್ರವಾದಿವರ್ಯರು ﷺ 25 ರ ಹರೆಯದ ಯುವಕ. ಅಲ್ ಅಮೀನ್ ಎನ್ನುವ ಹೆಸರಿನಿಂದಾಗಿತ್ತು ಮಕ್ಕಾ ನಿವಾಸಿಗಳು ಪ್ರವಾದಿವರ್ಯರನ್ನು ﷺ ಕರೆಯುತ್ತಿದ್ದದ್ದು ಅಬೂತ್ವಾಲಿಬರು ಪ್ರವಾದಿಯವರನ್ನು ﷺ ಕರೆದು ಮಗನೇ ನಮ್ಮ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ ತಾನೇ.? ಅರ್ಥಿಕವಾಗಿ ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ವ್ಯಾಪಾರ ಹಾಗೂ ಇತರ ಕಸುಬುಗಳು ಕೂಡ ಸಂಕಷ್ಟದಲ್ಲಿದೆ. ಈಗ ಶಾಮ್ ನಗರಕ್ಕೆ ಜನರು ವ್ಯಾಪಾರಕ್ಕೆಂದು ತೆರಳುತ್ತಿದ್ದಾರೆ. ಖುವೈಲಿದ ಮಗಳು ಖದೀಜರವರು (ರ) ನಮ್ಮ ಕುಟುಂಬದ ಬಹಳಷ್ಟು ಜನರಿಗೆ ಅವರ ವ್ಯಾಪಾರ ಸಾಮಾಗ್ರಿಗಳನ್ನು ಕೊಟ್ಟು ವ್ಯಾಪಾರಕ್ಕೆ ಕಳುಹಿಸುತ್ತಿದ್ದಾರೆ ಮಗನು ಒಮ್ಮೆ ಅವರನ್ನು ಭೇಟಿಯಾದರೆ ಒಳ್ಳೆದಿತ್ತು. ಅವರು ಮಗನ ಕೋರಿಕೆಯನ್ನು ತಿರಸ್ಕರಿಸಲಾರರು, ಮಕ್ಕಾದಲ್ಲಿ ಮಗನಿಗೆ ಇರುವ ಅಂಗೀಕಾರದ ಕುರಿತು ಅವರಿಗೆ ಖಂಡಿತ ತಿಳಿದಿರುತ್ತದೆ. ನಿಜ ಹೇಳಬೇಕೆಂದರೆ ಮಗನನ್ನು ಶಾಮಿಗೆ ಕಳುಹಿಸಲು ನನಗೆ ಭಯವಿದೆ, ಯಹೂದಿಗಳು ಯಾರಾದರೂ ಗುರುತು ಹಿಡಿದರೆ.? ಅಥವಾ ಏನಾದರೂ ಆಪತ್ತು ಸಂಭವಿಸಿದರೆ.? ಎನ್ನುವ ಚಿಂತೆ ಇದ್ದರೂ ಕೂಡ ಏನು ಮಾಡುವುದು ನಮಗೆ ಬೇರೆ ದಾರಿಯೂ ಇಲ್ಲ ಅಲ್ವಾ.?
ಖುವೈಲಿದ್'ರ ಮಗಳು ಮಕ್ಕಾದಲ್ಲಿ ಹೆಸರುವಾಸಿಯಾದ ಪ್ರಮುಖ ವ್ಯಾಪಾರಿಯಾಗಿದ್ದರು. ಮಕ್ಕದಿಂದ ಹೊರಡುವ ವ್ಯಾಪಾರ ಸಂಘದ ಒಂಟೆಗಳಲ್ಲಿ ಬಹು ದೊಡ್ಡಪಾಲು ಅವರದಾಗಿತ್ತು. ಅವರು ಪ್ರತಿನಿಧಿಗಳನ್ನು ನಿಯೋಗಿಸಿ ವ್ಯಾಪಾರ ಸಾಮಗ್ರಿಗಳನ್ನು ಶಾಮ್'ಗೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ವೇತನ ನಿಗದಿ ಪಡಿಸಿ ಕಳುಹಿಸಿದರೆ ಇನ್ನು ಕೆಲವೊಮ್ಮೆ ಲಾಭಾಂಶ ನೀಡುತ್ತೇನೆ ಎಂದು ಹೇಳಿ ಕಳುಹಿಸುತ್ತಿದ್ದರು.
ಪ್ರವಾದಿವರ್ಯರು ﷺ ದೊಡ್ಡಪ್ಪರ ಆ ಸಲಹೆಯನ್ನು ತಿರಸ್ಕರಿಸಿ ಖದೀಜರವರಿಗೆ ನನ್ನ ಅವಶ್ಯಕತೆ ಇದ್ದರೆ ನನ್ನನ್ನು ಕರೆಸಿಕೊಳ್ಳಲಿ ನಾನು ಅವರ ಪ್ರತಿನಿಧಿಯಾಗಿ ಹೋಗುತ್ತೇನೆ ಎಂದು ಹೇಳಿದಾಗ, ಮಗನೇ ಅವರು ಬೇರೆ ಯಾರನ್ನಾದರೂ ಒಪ್ಪಿಕೊಂಡರೆ ಏನು ಮಾಡುವುದು. ನಮ್ಮ ನೀರೀಕ್ಷೆಗಳೆಲ್ಲವೂ ಕೈತಪ್ಪಿ ಹೋಗುತ್ತದೆ ಎಂದು ಅಬೂತ್ವಾಲಿಬರು ಮುಹಮ್ಮದ್ ﷺ ಮಗನಲ್ಲಿ ಹೇಳಿದರು. ಈ ವಿಷಯ ಹೇಗೋ ಏನೋ ಖದೀಜರವರ ಕಿವಿಗೆ ಬಿತ್ತು ಮುಹಮ್ಮದ್ ﷺ ರವರು ನನ್ನ ವ್ಯಾಪಾರವನ್ನು ನಿಭಾಯಿಸುವರೆಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿ ಒಬ್ಬರನ್ನು ಕಳುಹಿಸಿ ಅವರ ನಿವಾಸಕ್ಕೆ ಕರೆಸಿಕೊಂಡರು.
ನಿಮ್ಮ ನಿಷ್ಠೆ ಹಾಗೂ ವ್ಯಕ್ತಿತ್ವದ ಕುರಿತು ನನಗೆ ಚೆನ್ನಾಗಿ ತಿಳಿದಿದೆ, ನೀವು ನನ್ನ ವ್ಯಾಪಾರ ಸಂಘವನ್ನು ಮುನ್ನಡೆಸಲು ಒಪ್ಪಿಕೊಳ್ಳುದಾದರೆ ಇತರರಿಗೆ ನೀಡದಕ್ಕಿಂತ ದುಪ್ಪಟ್ಟು ವೇತನವನ್ನು ನಿಮಗೆ ನೀಡುತ್ತೇನೆ ಎಂದು ಖದೀಜರವರು ಹೇಳಿದಾಗ ಪ್ರವಾದಿವರ್ಯರು ﷺ ಅದಕ್ಕೆ ಒಪ್ಪಿಗೆ ನೀಡಿದರು. ನಂತರ ಅಬೂತ್ವಲಿಬಾರಿಗೆ ವಿಷಯವನ್ನು ತಿಳಿಸಿದಾಗ ಅವರಿಗೆ ಬಹಳಷ್ಟು ಸಂತೋಷವಾಯಿತು. ಮಗನೇ ಅಲ್ಲಾಹನು ನೀಡಿದ ಉತ್ತಮ ಅವಕಾಶವಾಗಿದೆ ಇದು, ಅವನು ಅನುಗ್ರಹಿಸಿದ ಜೀವನೋಪಾಯವಾಗಿದೆ ಇದು ಎಂದು ಹೇಳಿದರು. ಪ್ರವಾದಿವರ್ಯರು ﷺ ಖದೀಜರವರ (ರ) ವ್ಯಾಪಾರ ಸಾಮಗ್ರಿಗಳೊಂದಿಗೆ ಸಿರಿಯಾ ನಗರಕ್ಕೆ ತೆರಳಲು ತೀರ್ಮಾನಿಸಿದರು....
(ಮುಂದುವರಿಯುವುದು)
https://m.facebook.com/story.php?story_fbid=pfbid0ob3qczEFxFU3v5RENa2PwibneqEpe6KWept17AKM2mssEvq5FKAiLvSuMM1n1AQ7l&id=100024538882825

No comments:
Post a Comment