Abu Hisham Saquafi

Official Website Of Hafiz Ilyas Saquafi Padaladka

Friday, July 22, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -37 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಪ್ರವಾದಿಯವರು ﷺ ಎಲ್ಲರ ನಡುವೆ ಬಹಳ ಉನ್ನತ ಸ್ಥಾನಕ್ಕೆ ತಲುಪುತ್ತಿದ್ದರು. ಅದೇ ಸಮಯದಲ್ಲಿ ಪ್ರಪಂಚದ ಇತರ ಭಾಗಗಳಿಂದಲೂ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಕುರಿತು ಚರ್ಚೆಗಳು ಅಧಿಕಗೊಳ್ಳುತ್ತಿದ್ದವು. ಇಡೀ ಜಗತ್ತೇ ಒಳಿತನ್ನು ಬೋಧಿಸುವ ಪ್ರವಾದಿಯವರಿಗಾಗಿ ﷺ ಕಾಯುತ್ತಿದ್ದವು. ಕತ್ತಲು ತುಂಬಿದ ವಾತಾವರಣದಿಂದ ಬೆಳಕಿನೆಡೆಗೆ ತೆರಳಲು ಕಾಲವು ಯಾಚಿಸುತ್ತಿದ್ದವು. 
       ಇದೆಲ್ಲವೂ ಜೊತೆ ಸೇರುವಾಗ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರನ್ನು ಮುಹಮ್ಮದರಿಂದ ﷺ ಗುರುತಿಸುವ ಕೆಲವೊಂದು ಘಟನೆಗಳನ್ನು ತಿಳಿಯೋಣ. 

    ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತಿರುವ ಚರ್ಚೆಗಳು, ವೇದ ಜ್ಞಾನಿಗಳ ನಡುವೆ ಬಹಳಷ್ಟು ನಡೆಯತೊಡಗಿತು. ಜೊತೆಯಲ್ಲಿ ಜ್ಯೋತಿಷ್ಯರು, ಪಂಡಿತರು ಕೂಡ ಹೇಳ ತೊಡಗಿದ್ದರು. ಅಂದು ಮಕ್ಕಾದಲ್ಲಿ ಜೀವಿಸಿದ್ದ ತತ್ವಜ್ಞಾನಿಗಳು ಅನ್ವೇಷಣೆ ನಡೆಸಿದ್ದರು. ಹೀಗಿರುವಾಗ ಮಕ್ಕಾದಲ್ಲಿ ಒಂದು ಉತ್ಸವಕಾಲ ಆರಂಭವಾಯಿತು. ಎಲ್ಲಾ ವರ್ಷವು ಆಚರಿಸಿಕೊಂಡು ಬರುತ್ತಿರುವ 'ಬುವಾನ' ಎಂಬ ಮೂರ್ತಿಯ ಉತ್ಸವವಾಗಿತ್ತದು. ಮಕ್ಕಾ ನಿವಾಸಿಗಳೆಲ್ಲರೂ ಸೇರಿ, ಬಲಿ ಕೊಟ್ಟು, ಅರ್ಚನೆಗಳು ನಡೆಸಿ, ಉತ್ಸವ ಆಚರಿಸುತ್ತಿದ್ದರು. ಇದರೆಡೆಯಲ್ಲಿ ನಾಲ್ಕು ಜನರು ಬಹಳ ಗಂಭೀರವಾಗಿ ಚರ್ಚೆ ಮಾಡಲು ಆರಂಭಿಸಿದರು. ಅವರು ನಡೆಸಿದ ಚರ್ಚೆ ಹಾಗೂ ತೀರ್ಮಾನಗಳು ಬಹಳ ರಹಸ್ಯವಾಗಿರಬೇಕೆಂದು ಅಂದುಕೊಂಡರು. ನಮ್ಮ ಜನರು ಈಗ ಮಾಡುತ್ತಿರುವ ಆದರ್ಶ ಹಾಗೂ ಆಚರಣೆಗಳನ್ನು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ಪೂರ್ವಿಕರೂ, ಪ್ರವಾದಿಯೂ ಆಗಿದ್ದ ಇಬ್ರಾಹಿಂ'ರು (ಅ) ತೋರಿಸಿದ ಆದರ್ಶಕ್ಕಿಂತ ವಿಭಿನ್ನವಾಗಿಯಾಗಿದೆ ಜನರು ಸಂಚರಿಸುತ್ತಿರುವುದು. ಯಾವುದೇ ಉಪಕಾರವಾಗಲಿ, ತೊಂದರೆಯಾಗಲಿ ಮಾಡದ ಮೂರ್ತಿಗಳನ್ನಾಗಿದೆ ಅವರು ಆರಾಧಿಸುತ್ತಿರುವುದು. ಪ್ರದಕ್ಷಿಣೆ ಹಾಕುವುದು. ಇದು ಯಾವತ್ತೂ ಸರಿಯಲ್ಲ. ಎಂಬುದಾಗಿತ್ತು ಅವರು ಮಾಡಿದ ಚರ್ಚೆ, ಜನ ಸಾಮಾನ್ಯರ ಈ ತಪ್ಪು ತಿಳುವಳಿಕೆಯಿಂದ ಸತ್ಯವನ್ನು ಹುಡುಕಲು ಪ್ರತಿಜ್ಞೆ ಮಾಡಿದರು. ವರಕತ್ ಬಿನ್ ನೌಫಲ್, ಉಬೈದುಲ್ಲಾಹ್ ಬಿನ್ ಜಹ್'ಷ್, ಉಸ್ಮಾನ್ ಬಿನ್ ಹುವೈರಿಸ್, ಝೈದ್ ಬಿನ್ ಅಂರ್ ಬಿನ್ ನುಫೈಲ್ ಎನ್ನುವವರಾಗಿದ್ದರು ಆ ಚರ್ಚೆ ಮಾಡಿದ ವ್ಯಕ್ತಿಗಳು. 

     ವರಕತ್ ಬಿನ್ ನೌಫಲ್ ವೇದವನ್ನು ಕಲಿತು, ಇತರ ಪ್ರದೇಶದ ಪಂಡಿತರನ್ನು ಸಂಪರ್ಕಿಸಿ, ಮೂಸ, ಈಸ (ಅ) ಪ್ರವಾದಿಯವರ ಆದರ್ಶದಲ್ಲಿ ಸಂಚರಿಸಿದ್ದರು. ಅದೇ ಆದರ್ಶಲ್ಲೇ ಜೀವಿಸಿದರು. ಮಾಕ್ಕಾ ಪಟ್ಟಣದಲ್ಲೇ ಜಗತ್ ಪ್ರಸಿದ್ಧ ವೇದ ಜ್ಞಾನಿಯಾದರು. ಪ್ರವಾದಿತ್ವದ ಘೋಷಣೆಯ ಸಂದರ್ಭದಲ್ಲಿ ಪ್ರವಾದಿಯವರೊಂದಿಗೆ ಸಂಭಾಷಣೆ ನಡೆಸಿ, ಪ್ರವಾದಿಯವರನ್ನು ಅಂಗೀಕರಿಸಿದ್ದರು. ಅದೇ ರೀತಿ ಪ್ರೋತ್ಸಾಹವೂ ನೀಡಿದ್ದರು.
     ಉಬೈದುಲ್ಲಾಹ್ ಬಿನ್ ಜಹ್'ಷ್ ನಿರ್ದಿಷ್ಟವಾದ ಧರ್ಮವನ್ನು ಅಂಗೀಕರಿಸದೆ ಸತ್ಯಾನ್ವೇಷಣೆ ನಡೆಸಿದ್ದರು. ಅದೇ ಸಂದರ್ಭದಲ್ಲಾಗಿತ್ತು ಪ್ರವಾದಿಯವರ ﷺ ನಿಯೋಗವೂ ಉಂಟಾದದ್ದು. ಉಬೈದರ ಪತ್ನಿ ಉಮ್ಮು ಹಬೀಬ ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಖುರೈಶಿಗಳ ನಾಯಕರಾಗಿದ್ದ ಅಬೂ ಸೂಫಿಯಾನರ ಮಗಳಾಗಿದ್ದರು ಅವರು. ಪತ್ನಿಯ ನಂತರ ಉಬೈದ್ ಕೂಡ ಇಸ್ಲಾಮ್ ಸ್ವೀಕರಿಸಿದರು. ಮಕ್ಕಾದಲ್ಲಿ ಬಹಳಷ್ಟು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬಂದಿತು, ತನ್ನ ಪತ್ನಿಯ ಜೊತೆಯಲ್ಲಿ  ಎಥಿಯೋಪಿಯಾಗೆ ತೆರಳಿದರು. ಆದರೆ ಕೆಲವು ಕ್ರೈಸ್ತ ಪಾದ್ರಿಗಳ ಬಲೆಗೆ ಬಿದ್ದು ಕ್ರೈಸ್ತ ಧರ್ಮ ಸ್ವೀಕರಿಸಿದರು. ನಂತರದ ದಿನಗಳಲ್ಲಿ ಕ್ರೈಸ್ತವರಾಗಿಯೇ ಜೀವಿಸಿ ಕ್ರೈಸ್ತನಾಗಿಯೇ ಮರಣ ಹೊಂದಿದರು. ನೈಜ ವಿಶ್ವಾಸಿನಿಯಾಗಿದ್ದ ಉಮ್ಮು ಹಬೀಬ ಇಸ್ಲಾಮಿನಲ್ಲೇ ಜೀವಿಸಿದರು. ನಂತರದ ದಿನಗಳಲ್ಲಿ ಉಮ್ಮು ಹಬೀಬ (ರ) ಪ್ರವಾದಿಯವರ ﷺ ಪತ್ನಿಯ ಸ್ಥಾನವನ್ನು ಪಡೆದುಕೊಂಡು ಸತ್ಯ ವಿಶ್ವಾಸಿಗಳ ತಾಯಿಯಾದರು. 

    ಮೂರನೇ ವ್ಯಕ್ತಿ ಉಸ್ಮಾನ್ ಬಿನ್ ಅಲ್ ಹುವೈರಿಸ್ ಬಹಳ ಹಿಂದಿನಿಂದಲೇ ಸತ್ಯಾನ್ವೇಷಣೆ ಆರಂಭಿಸಿದ್ದರು. ಆ ಘಟನೆ ಈ ರೀತಿಯಾಗಿತ್ತು. ಒಂದು ಉತ್ಸವದಲ್ಲಿ ಮೇಲೆ ತಿಳಿಸಿದ ಮೂರು ಜನರೊಂದಿಗೆ ಉಸ್ಮಾನ್ ಕೂಡ ಜೊತೆಗಿದ್ದರು. ಅಲ್ಲಿ ನೆರೆದಿದ್ದ ಜನರೆಲ್ಲರೂ ಒಂದು ಮೂರ್ತಿಯನ್ನು ಪೂಜಿಸುತ್ತಿದ್ದರು. ಮದ್ಯ ಸೇವಿಸಿ ನಶೆಯಲ್ಲಿ ಮುಳುಗಿದ್ದರು. ಆದರೆ ಮೂರ್ತಿ ನಿಲ್ಲುತ್ತಿರಲಿಲ್ಲ ತಲೆ ಕೆಳಗಾಗಿ ಬೀಳುತ್ತಲೇ ಇತ್ತು. ಬಹಳಷ್ಟು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಇದರಲ್ಲೇನೋ ರಹಸ್ಯ ಅಡಗಿದೆ ಎಂದು ಉಸ್ಮಾನ್ ಆಲೋಚಿಸಿದ್ದರು. ಅದು ಪ್ರವಾದಿಯವರ ﷺ ಜನನದ ಸಂದರ್ಭವಾಗಿತ್ತೆಂದು ನಂತರದ ದಿನಗಳಲ್ಲಿ ಅವರಿಗೆ ತಿಳಿಯಿತು. 
      ಬಹಳಷ್ಟು ಬಾರಿ ಮೂರ್ತಿಯಲ್ಲಿ  ನಿಲ್ಲಿಸಿದರೂ ಸರಿಯಾಗಿ ನಿಲ್ಲುತ್ತಿರಲಿಲ್ಲ. ಬಹು ದೈವದ ಮೂರ್ತಿ ಯಾವುದೇ ಪ್ರಯೋಜನವಿಲ್ಲದ್ದೆಂದು ಅವರಿಗೆ ಆಗ ಅರ್ಥವಾಯಿತು. ಅದರ ಭಾಗವಾಗಿ ಅವರೊಂದು ಕವಿತೆ ಹೇಳಿದಾಗ ಅವರಿಗೆ ಉತ್ತರವಾಗಿ ಒಂದು ಅಶರೀರವಾಣಿ ಕೇಳಿಸಿತು. ಮೂರ್ತಿಗಳು ತಲೆ ಕೇಳಗಾಗಿ ಬೀಳುದಕ್ಕಿದ ಕಾರಣ ಆ ಕವಿತಯಲ್ಲಿತ್ತು. ನಾಲ್ಕು ಜನರ ವಿಭಿನ್ನವಾದ ಚಿಂತನೆಗಳಿಗೆ ಆರಂಭವಾಗಿತ್ತು ಇದು. 
(ಮುಂದುವರೆಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: