Abu Hisham Saquafi

Official Website Of Hafiz Ilyas Saquafi Padaladka

Sunday, July 24, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -40 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಎಲ್ಲಾ ಅನುಕೂಲಗಳನ್ನು ನಿರಾಕರಿಸಿ ನಾನಿಲ್ಲಿ ಬಂದು ಜೀವಿಸುವ ಉದ್ದೇಶವೇನೆಂದು ಗೊತ್ತೆ.? ಎಂದು ಇಬ್'ನು ಹಯ್ಯಿಬಾನ್ ಕೇಳಿದಾಗ, ಅಲ್ಲಿದ್ದವರು ನಮಗೆ ಗೊತ್ತಿಲ್ಲ ನೀವೇ ಹೇಳಿರಿ ಎಂದು ಎತ್ತರಿಸಿದರು. ನಾನಿಲ್ಲಿ ಬಂದು ನೆಲೆಸಲು ಒಂದು ಕಾರಣವಿದೆ. ಜಗತ್ತಿಗೆ ಪ್ರವಾದಿಯಾಗಿ ﷺ ನಿಯೋಗಿಸಬೇಕಾದ ಪ್ರವಾದಿತ್ವದ ಸಮಯದ ಹತ್ತಿರವಾಗಿದೆ. ಆ ಪ್ರವಾದಿಯವರು ﷺ ಆಗಮಿಸಲಿರುವ ಪವಿತ್ರ ಸ್ಥಳವಾಗಿದೆ ಇದು. ಪಲಾಯನ (ಹಿಜ್'ರ) ಮಾಡಿ ಬರಲಿರುವ ಪುಣ್ಯ ಸ್ಥಳವಾಗಿದೆ ಇದು. ಅವರು ಇಲ್ಲಿಗೆ ತಲುಪಿದಾಗ ಅವರ ಜೊತೆ ಸೇರುವ ಉದ್ದೇಶದಿಂದಾಗಿದೆ ಇಲ್ಲಿ ಬಂದು ನೆಲೆಸಿದ್ದು. ಓ ಯಹೂದಿಗಳೇ ಆ ಪ್ರವಾದಿಯವರ ﷺ ಆಗಮನವಾದರೇ ತಕ್ಷಣವೇ ನೀವು ಅವರನ್ನು ಅನುಸರಿಸಿರಿ, ನೀವು ಅವರ ಅನುಯಾಯಿಗಳಾಗಿರಿ. ಸತ್ಯ ಸಂದೇಶ ವಾಹಕರ ಆಗಮನವಾಗುವಾಗ ಸ್ವಾಭಾವಿಕವಾಗಿ ಕೆಲವೊಮ್ಮೆ ಹೋರಾಟಗಳೂ, ರಕ್ತಪಾತವೂ ನಡೆಯಬಹುದು ಅದರಲ್ಲಿ ನೀವು ತಪ್ಪು ತಿಳಿಯಬೇಡಿರಿ, ಅವರು ಖಂಡಿತ ಸಂದೇಶವಾಹಕರೇ ಆಗಿರುತ್ತಾರೆ. ನಿಶ್ಚಯವಾಗಿ ಅವರು ಅಂತ್ಯ ಪ್ರವಾದಿಯಾಗಿರುತ್ತಾರೆ. 

   ಅಷ್ಟು ಹೇಳಿ ಸ್ವಲ್ಪ ಸಮಯವು ಕಳೆದ ನಂತರ ಅಂತ್ಯ ಪ್ರವಾದಿಯವರ ﷺ ಆಗಮನಕ್ಕಾಗಿ ಕಾದು ಕುಳಿತಿದ್ದ ಇಬ್'ನುಲ್ ಹಯ್ಯಿಬಾನ್ ಇಹಲೋಕ ತ್ಯಜಿಸಿದರು. ಆದರೆ ಕೊನೆದಾಗಿ ಅವರಾಡಿದ ಮಾತುಗಳು ಮಾತ್ರ ಬಹಳಷ್ಟು ಜನರ ಮನಸ್ಸಿನಲ್ಲಿ ಬಾಕಿಯಾಗಿತ್ತು. ಹುದೈಲ್ ಜನಾಂಗದ ಉಸೈದ್ ಬಿನ್ ಸಅದ್, ಅವರ ಸಹೋದರ ಸಅಲಬ, ಹಾಗೂ ಮಿತ್ರನಾಗಿದ್ದ ಉಸೈದ್ ಬಿನ್ ಹುಳೈರ್ ಎಂಬವರು ನಂತರದ ದಿನಗಳಲ್ಲಿ ಪ್ರವಾದಿಯವರನ್ನು ﷺ ಅನುಸರಿಸಿದ್ದು ಇಬ್'ನು ಹಯ್ಯಿಬಾನರ ಕೊನೆಯ ಮಾತಿನ ಕಾರಣದಿಂದಾಗಿತ್ತು. 

    ನಂತರದ ದಿನಗಳಲ್ಲಿ ಪ್ರವಾದಿಯವರು ﷺ ಮದೀನಕ್ಕೆ ಪಲಾಯನ ಮಾಡಿ ತಲುಪಿದಾಗ, ಆರಂಭದಲ್ಲಿ ಯಹೂದಿಗಳು ಪ್ರವಾದಿಯವರನ್ನು ﷺ ಶತ್ರುತ್ವದೊಂದಿಗೆ ಕಾಣುತ್ತಿದ್ದರು. ಆದರೆ ಬನೂ ಖುರೈಳ ಯುದ್ಧದ ನಂತರ ಅವರ ಮನಸ್ಥಿತಿಯು ಬದಲಾಯಿತು. ಅಂದು ಕೆಲವರು ಇವರು 'ನಮ್ಮ ಪುಣ್ಯ ಪುರುಷ ಇಬ್'ನುಲ್ ಹಯ್ಯಿಬಾನ್ ಮುನ್ಸೂಚನೆ ನೀಡಿದ ಸತ್ಯ ಪ್ರವಾದಿಯರೇ ಆಗಿರುತ್ತಾರೆ ಅದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಹೇಳತೊಡಗಿದರು. ಹೀಗೆ ಬಹಳಷ್ಟು ಜನರು ಪ್ರವಾದಿಯವರನ್ನು ﷺ ನೇರವಾಗಿ ಭೇಟಿಯಾಗಿ ಇಸ್ಲಾಂ ಸ್ವೀಕರಿಸಿದರು. 

     ಪ್ರವಾದಿಯವರ ﷺ ಪ್ರವಾದಿತ್ವದ ನಿಯೋಗವು ತಕ್ಷಣ ಉಂಟಾದ ವಿದ್ಯಮಾನವಲ್ಲ, ಬದಲಾಗಿ ಬಹಳಷ್ಟು ಸಮಯದಿಂದ ಕಾಲವು ನವೋತ್ತಾನ ನಾಯಕನಿಗಾಗಿ ಕಾಯುತ್ತಿತ್ತು. ಅಂತ್ಯ ಪ್ರವಾದಿಯಾಗಿ ಒಬ್ಬರು ಮಹಾಪುರುಷನನ್ನು ನಿಯೋಗಿಸಲಿದೆ ಎನ್ನುವ ಮುನ್ಸೂಚನೆಯನ್ನು ವೇದಗಳು, ಜ್ಞಾನಿಗಳು ಕೂಡ ಸೂಚನೆ ನೀಡಿದ್ದರು. ಆ ಪುಣ್ಯ ಪುರುಷ ಅಬ್ದುಲ್ಲಾಹ್'ರ (ರ) ಮಗನಾದ ಮುಹಮ್ಮದ್ ﷺ ಆಗಿದ್ದಾರೆಂದು ತಿಳಿಯಿತು. ಮುಹಮ್ಮದರು ﷺ ಕೂಡ ತಾನು ಸ್ವತಃಹ ಜವಾಬ್ದಾರಿಯನ್ನು ವಹಿಸಬೇಕಾದ ವ್ಯಕ್ತಿಯಾಗಿರುವೆನೆಂಬ ಪ್ರಜ್ಞೆಯೊಂದಿಗೆ ಜೀವಿಸುತ್ತಿದ್ದರು. ಎಲ್ಲಾ ಮುನ್ಸೂಚನೆಗಳು ಒಟ್ಟು ಸೇರಿದ ಮುಹೂರ್ತದಲ್ಲಾಗಿತ್ತು ಪ್ರವಾದಿತ್ವದ ಘೋಷಣೆಯುಂಟಾದದ್ದು. 
     ಪ್ರವಾದಿಯವರಿಗೆ ﷺ ಕಾಣುತ್ತಿದ್ದ ಕನಸುಗಳು ಅವರ ಪ್ರವಾದಿತ್ವದ ನಿಯೋಗಕ್ಕಿರುವ ಮುನ್ನುಡಿಯಾಗಿತ್ತು. ಆಯಿಶ (ರ) ಬೀವಿಯವರು ಈ ಘಟನೆಯ ಕುರಿತಾಗಿ ಈ ರೀತಿ ವಿವರಿಸುತ್ತಾರೆ, ಆರಂಭದಲ್ಲಿ ಪ್ರವಾದಿಯವರಿಗೆ ﷺ ದಿವ್ಯ ಉಪದೇಶದ (ವಹಿಯ್) ಭಾಗವಾಗಿ ಒಳ್ಳೆಯ ಕನಸುಗಳು ಬೀಳುತ್ತಿತ್ತು, ಅವರ ಕನಸುಗಳೆಲ್ಲವೂ ಸಂಪೂರ್ಣವಾಗಿ ನನಸಾಗುತ್ತಿತ್ತು. 

     ಗಂಭೀರವಾಗಿ ಚಿಂತಿಸಬೇಕಾದ ಬಹಳಷ್ಟು ಕನಸುಗಳು ಆ ಸಂದರ್ಭದಲ್ಲಿ ಪ್ರವಾದಿಯವರಿಗೆ ﷺ ಬೀಳುತ್ತಿತ್ತು. ಪ್ರವಾದಿತ್ವದ ಘೋಷಣೆಗೂ ಮುಂಚೆ ಆರು ತಿಂಗಳವರೆಗೆ ಸತತವಾಗಿ ಕನಸುಗಳು ಬೀಳುತ್ತಿದ್ದವು. ಅಂತಹ ಒಂದು ಕನಸಿನಲ್ಲಿ, ಒಬ್ಬರು ಪ್ರವಾದಿಯವರ ﷺ ಬಳಿ ಬಂದರು. ಅವರ ಹಿಂದೆ ಇಬ್ಬರು ಬೇರೆ ವ್ಯಕ್ತಿಗಳಿದ್ದರು. ಅವರು ಪ್ರವಾದಿಯವರನ್ನು ﷺ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬರಲ್ಲಿ ನಾವು ಉದ್ದೇಶಿಸಿದ ವ್ಯಕ್ತಿ ಇವರೇ ಅಲ್ಲವೇ.? ಎಂದು ಕೇಳಿದ್ದರು. ಈ ದೃಶ್ಯವನ್ನು ಕಂಡ ಪ್ರವಾದಿಯವರು ﷺ ಗಾಬರಿಯಾಗಿ ಮರುದಿವಸ ಚಿಕ್ಕಪ್ಪ ಅಬೂತ್ವಾಲಿಬರೊಂದಿಗೆ ವಿಷಯ ತಿಳಿಸಿದಾಗ ಅದೊಂದು ಕೇವಲ ಕನಸು ಮಾತ್ರ ಅಲ್ಲವೇ.? ಎಂದು ಪ್ರವಾದಿಯವರನ್ನು ﷺ ಸಮಾಧಾನ ಪಡಿಸಿದರು. ಕನಸು ಅದೇ ರೀತಿ ಪುನರಾವರ್ತನೆಯಾದಾಗ ಅಬೂತ್ವಾಲಿಬರೊಂದಿಗೆ ವಿಷಯ ತಿಳಿಸಿದರು. ಅಬೂತ್ವಾಲಿಬ್ ಮುಹಮ್ಮದರನ್ನು ﷺ ಒಬ್ಬರು ಸುಪ್ರಸಿದ್ಧ ವೈದ್ಯರ ಬಳಿ ಕರೆದುಕೊಂಡು ಹೋದರು. ಅವರು ಪ್ರವಾದಿಯವರನ್ನು ﷺ ತಲೆಯಿಂದ ಕಾಲಿನವರೆಗೆ ಪರೀಕ್ಷಿಸಿ ಅಬೂತ್ವಾಲಿಬರೊಂದಿಗೆ ಈ ರೀತಿ ಹೇಳಿದರು. ಓ ಅಬೂತ್ವಾಲಿಬರೆ ನೀವು ಭಯ ಪಡಬೇಡಿರಿ, ನಿಮ್ಮ ಸಹೋದರನ ಮಗನಿಗೆ ಏನು ಆಗಲಿಲ್ಲ, ಅತ್ಯುತ್ತಮ ವ್ಯಕ್ತಿಯಾಗಿರುತ್ತಾರೆ ಅವರು. ಭವಿಷ್ಯದಲ್ಲಿ ಬಹಳಷ್ಟು ಒಳಿತು ಈ ಮಹಾ ಪುರುಷನಿಂದ ಬರಲಿದೆ. ಒಮ್ಮೆಯೂ ಕೂಡ ಪಿಶಾಚಿಯ ತೊಂದರೆ ಇವರಿಗೆ ಉಂಟಾಗಲು ಸಾಧ್ಯವೇ ಇಲ್ಲ. ಇವರ ಬಳಿ ನಾಮೂಸ್ (ಜಿಬ್'ರೀಲ್) ಬರುವ ಸಮಯ ಹತ್ತಿರವಾಯಿತು. ಅದರ ಲಕ್ಷಣವಾಗಿದೆ ಇದು. 

(ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: