Abu Hisham Saquafi

Official Website Of Hafiz Ilyas Saquafi Padaladka

Friday, September 23, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -100 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಪ್ರವಾದಿಯವರ ﷺ ಬಳಿಯಿಂದ ಅವರು ಎದ್ದು ನಿಂತರು. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ, ದೂರದಲ್ಲೇ ದೃಶ್ಯವನ್ನು ನೋಡುತ್ತಿದ್ದಾ, ಅಬೂಜಹಲ್ ಹಾಗೂ ಅವನ ಸಂಗಡಿಗರು ಅವರ ಕಡೆ ತಿರುಗಿ ನಿಂತು, ಅಲ್ಲಾಹು ನಿಮ್ಮನ್ನು ಪರಾಜಯ ಗೊಳಿಸಲಿ, ನಿಮ್ಮ ಅನುಯಾಯಿಗಳು ನಿಮ್ಮನ್ನು ಇವರ ಬಗ್ಗೆ ತಿಳಿಯಲು ಅಲ್ವಾ ಇಲ್ಲಿಗೆ ಕಳುಹಿಸಿದ್ದು.? ಆದರೆ ನೀವು ಇವರನ್ನು ಭೇಟಿಯಾದ ತಕ್ಷಣವೇ ನಿಮ್ಮ ಧರ್ಮವನ್ನು ತ್ಯಜಿಸಿ, ಅವರ ಧರ್ಮವನ್ನು ಸ್ವೀಕರಿಸಿದಿರಿ ಅಲ್ವಾ.? ನೀವೆಷ್ಟು ದಡ್ಡರು ಎಂದು ಇದರಲ್ಲೇ ಅರ್ಥ ಆಗುತ್ತೆ.! ಎಂದು ಕೂಗಿ ಹೇಳಿದರು. ಅದಕ್ಕೆ ಅವರು, ನಿಮಗೆ ನಿಮ್ಮ ಆದರ್ಶ ನಮಗೆ ನಮ್ಮ ಲೋಕ ಎಂದು  ತಿರುಗಿ ಹೇಳಿದರು.
     ಪ್ರವಾದಿಯವರನ್ನು ﷺ ಭೇಟಿಯಾಗಿದ್ದ ಆ ಗುಂಪು, ನಜ್'ರಾನ್ ಪ್ರದೇಶ ಕ್ರೈಸ್ತ ಪ್ರತಿನಿಧಿಗಳಾಗಿದ್ದರು. ಎಂದಾಗಿದೆ ಇದರ ಬಗ್ಗೆ ಪ್ರಬಲವಾದ ಅಭಿಪ್ರಾಯ. ಈ ಗುಂಪಿನ ಬರುವಿಕೆ, ಹಾಗೂ ಅವರು ಮಾಡಿದ ಭೇಟಿಯ ಕುರಿತು, ಪವಿತ್ರ ಖುರ್'ಆನಿನ ಅಲ್ ಖಸ್ವಸ್ವ್ ಅಧ್ಯಾಯದ ಐವತ್ತೇರಡರಿಂದ, ಐವತ್ತಾರರವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ.

    "ಪೂರ್ವ ಕಾಲದ ವೇಧ ಪಡೆದವರು ಕೂಡ ಕುರ್'ಆನನ್ನು ಅಂಗೀಕರಿಸಿದರು. ಅವರಿಗೆ ಖುರ್'ಆನನ್ನು ಓದಿ ಕೇಳಿಸಿದಾಗ, ನಿಶ್ಚಯವಾಗಿಯೂ ಇದು ನಮ್ಮ ಪ್ರಭುವಿನಿಂದ ಬಂದ ಸತ್ಯವಾಗಿದೆ, ಹಾಗಾಗಿ ನಾವು ಅವುಗಳ ಮೇಲೆ ಈಗಾಗಲೇ ವಿಶ್ವಾಸವಿರಿಸಿ, ಇದನ್ನು ಸಂಪೂರ್ಣವಾಗಿ ಅನುಸರಿಸಿದ್ದೇವೆ ಎಂದು ಹೇಳುವರು. ಅಂತವರಿಗೆ ಅವರ ಸಹಿಷ್ಣುತೆಯ ಕಾರಣದಿಂದ ಅವರಿಗೆ ಉತ್ತಮ ಪ್ರತಿಫಲ ಸಿಗಲಿದೆ. ನಾವರಿಗೆ ನೀಡಿದ್ದರಿಂದ ಒಳಿತಿಗಾಗಿ ಖರ್ಚು ಮಾಡುವವರು, ಹಾಗೂ ಕೆಡುಕಿನಿಂದ ದೂರವಿರುವರು ಆಗಿರುತ್ತಾರೆ. ಅರ್ಥವಿಲ್ಲದ ಮಾತುಗಳನ್ನು ಕೇಳಿದರೆ ಅವರು ಅವುಗಳಿಂದ ದೂರ ಸರಿದು, ನಾವು ಅವಿವೇಕಿಗಳನ್ನು ಅನುಸರಿಸಲು ತಯಾರಿಲ್ಲ, ನಿಮಗೆ ನಿಮ್ಮ ವಿಷಯ, ನಮ್ಮಗೆ ನಮ್ಮ ವಿಷಯ, ನಿಮಗೆ ಹೋಗಬಹುದು ಎಂದು ಹೇಳುವರು" ಎಂದಾಗಿತ್ತು ಅದರ ಸಾರಾಂಶ. 

     ಈ ಸೂಕ್ತಗಳು ನಜ್ಜಾಶಿ ರಾಜನ ಅನುಯಾಯಿಗಳ ಕುರಿತಾಗಿತ್ತು ಅವತರಿಸಿದ್ದು, ಎಂದು ಇಮಾಮ್ ಝುಹ್'ರಿ ಉಲ್ಲೇಖಿಸಿದ್ದಾರೆ. ಅದರ ಜೊತೆಯಲ್ಲಿ ಈ ಘಟನೆಗೆ ಸಾಮೀಪ್ಯವಿರುವ ಮತ್ತೊಂದು ಸೂಕ್ತವಾಗಿದೆ, ಖುರ್'ಆನಿನ ಅಲ್ ಮಾಇದ ಅಧ್ಯಾಯದ (ಐದನೇ ಅಧ್ಯಾಯ) ಎಂಬೆತ್ತೆರಡನೇ ಹಾಗೂ ಎಂಬತ್ತಮೂರನೇ ಸೂಕ್ತ. 
       ಒಂದೆಡೆ ಖುರ್'ಆನ್ ಪ್ರತಿಯೊಂದನ್ನು ಪ್ರವಾದಿಯವರ ﷺ ಮೂಲಕ ಗುರುತಿಸುತ್ತಿದ್ದರೆ. ಮತ್ತೊಂದೆಡೆ ಖುರೈಷಿಗಳು, ಅವರಿಗೆ ಸಿಗುತ್ತಿದ್ದ ಪ್ರತಿಯೊಂದು ಅವಕಾಶಗಳನ್ನು ಹೇಗೆ ಮುಸ್ಲಿಮರ ವಿರುದ್ಧ ಬಳಸಬಹುದು ಎಂದು ಹೊಂಚು ಹಾಕುತ್ತಲೇ ಇದ್ದರು. ಇದರ ನಡುವೆ ಪೇರ್ಶ್ಯ ರೋಮನ್ನು ವಶಪಡಿಸಿಕೊಂಡಿತು. ಅದು ಮಕ್ಕಾದ ಖುರೈಷಿಗಳಿಗೆ ಬಹಳ ಸಂತಸ ತಂದಿತ್ತು. ಅವರು ಮುಸ್ಲಿಮರಲ್ಲಿ, ಅಗ್ನಿ ಆರಾಧಕರಾದ ಪೇರ್ಶ್ಯ ರೋಮನ್ನು ಸೋಲಿಸಿದೆ. ಸ್ವಲ್ಪ ದಿನ ಕಳೆಯಲಿ ಅದೇ ನೀವುಗಳನ್ನೂ ಕೂಡ ನಾವು ಖಂಡಿತ ಸೋಲಿಸುತ್ತೇವೆ ಎಂದು ಹೇಳಿದರು. ಈ ವಿಷಯವು ಪ್ರವಾದಿಯವರ ﷺ ಬಳಿ ತಲುಪಿತು. ಅವರು ಪವಿತ್ರ ಖುರ್'ಆನಿನ ಮೂವತ್ತನೇ ಅಧ್ಯಾಯದ (ಅರ್ರೂಮ್) ಒಂದರಿಂದ ಆರರವರೆಗಿನ ಸೂಕ್ತವನ್ನು ಓದಿ ತಿಳಿಸಿದರು. ಅದರ ಸಾರಾಂಶವು ಈ ರೀತಿಯಾಗಿದೆ. 

    "ಅಲಿಫ್ ಲಾಂ ಮೀಮ್, ಪಕ್ಕದ ಪ್ರದೇಶವಾದ ರೂಮ್ ಸೋಲ್ಲನ್ನು ಅನುಭವಿಸಿದೆ. ಈ ಸೋಲಿನ ನಂತರ ಅವರು ಪುನಃ ಗೆಲುವು ಸಾಧಿಸಿಕೊಳ್ಳುವರು. ಅಂದು ಸಂತೋಷ ಪಡುವ ಸರದಿ ವಿಶ್ವಾಸಿಗಳಿಗಾಗಿರುತ್ತದೆ. ಎಲ್ಲಾ ಅಧಿಕಾರವು ಅಲ್ಲಾಹನಿಂದ ಮಾತ್ರ, ಈ ಹಿಂದೆ ನಡೆದದ್ದು, ಇನ್ನುಮುಂದೆ ನಡೆಯಲಿರುವುದು ಎಲ್ಲವನ್ನು ತಿಳಿದವನು ಅವನು ಮಾತ್ರ. ಅವನಿಗೆ ಇಷ್ಟವಿದ್ದವರಿಗೆ ಅವನು ಸಹಾಯ ಮಾಡುವನು. ಅವನು ಕರುಣಾಮಯಿಯೂ ಅತೀ ಶಕ್ತಿಶಾಲಿಯೂ ಆಗಿರುವನು. ಅಲ್ಲಾಹನು ನೀಡಿದ ಭರವಸೆಯಾಗಿದೆ ಇದು, ಅವನು ನೀಡಿದ ಭರವಸೆಯನ್ನು ಅವನು ಯಾವತ್ತೂ ಕಡೆಗಣಿಸುವುದಿಲ್ಲ. ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದೇ ಇಲ್ಲ." ಎಂಬುದಾಗಿತ್ತು ಅದರ ಸಾರಾಂಶ. 

   ರೋಮ್'ನ ಗೆಲುವಿನ ಕುರಿತು ಕೇಳಿದ ಅವರಿಗೆ ಅದನ್ನು ಊಹಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕೆಲವೇ ಕೆಲವು ವರ್ಷಗಳಲ್ಲಿ ಎನ್ನುವುದಕ್ಕೆ ಅವರು ಏನೇನೋ ಊಹೆಗಳನ್ನು ಮಾಡಿಕೊಂಡಿದ್ದರು. ಉಬಯ್ಯ್ ಬಿನ್ ಖಲಫ್, ಅಬೂಬಕ್ಕರವರಲ್ಲಿ ◌ؓ ಎಲ್ಲಿಯಾದ್ರು ಮೂರು ವರ್ಷದ ಒಳಗೆ ರೋಮ್ ಗೆದ್ದರೆ ನಾನು ನಿಮಗೆ ದುಬಾರಿ ಬೆಲೆಯ ಹತ್ತು ಒಂಟೆಯನ್ನು ನೀಡುತ್ತೇನೆ, ಅದು ಆಗದಿದ್ದರೆ ನೀವು ನನಗೆ ನೀಡಬೇಕು ಎಂದು ಸವಾಲು ಹಾಕಿದರು. ಅಬೂಬಕ್ಕರ್ ◌ؓ ತಕ್ಷಣವೇ ಈ ವಿಷಯವನ್ನು ಪ್ರವಾದಿಯವರ ﷺ ಬಳಿ ತಿಳಿಸಿದರು. ಅದಕ್ಕೆ ಪ್ರವಾದಿಯವರು ﷺ ಕೆಲವು ವರ್ಷಗಳು ಎನ್ನುವುದಕ್ಕೆ ಖುರ್'ಆನ್ ಬಳಸಿದ ಪದ "ಬಿಳ್ಅ ಸಿನೀನ್" ಎಂದಾಗಿದೆ. ಅಂದರೆ ಹತ್ತಕ್ಕಿಂತ ಕಮ್ಮಿಯಿರುವ ವರ್ಷ ಎಂದು, ಹಾಗಾಗಿ ಸವಾಲನ್ನು ಹತ್ತು ವರ್ಷದ ಒಳಗೆ ಎಂದು ಮಾಡಿರಿ, ಹಾಗೂ ಬಹುಮಾನ ನೂರು ಒಂಟೆಗಳನ್ನು ಮಾಡಿರಿ ಎಂದು ಹೇಳಿದಾಗ, ಅಬೂಬಕ್ಕರ್ ◌ؓ ಅದೇ ರೀತಿ ಉಬಯ್ಯ್'ನ ಬಳಿ ಹೋಗಿ ಸವಾಲಿನ ಸಮಯಾವಕಾಶವನ್ನು ಅಧಿಕಗೊಳಿಸಿ ಬಂದರು. ಅವರ ಈ ಆತ್ಮವಿಶ್ವಾಸವನ್ನು ಕಂಡು ಖುರೈಷಿಗಳು ದಂಗಾಗಿದ್ದರು. 

     (ಮುಂದುವರಿಯುವುದು...) 

 اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: