ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬೂತ್ವಾಲಿಬರ ಮರಣವು ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರ ಉಂಟುಮಾಡಿತು. ಆ ಬೇಸರದಿಂದ ಚೇತರಿಸಿಕೊಳ್ಳುವ ಮೊದಲೇ ಪ್ರೀತಿಯ ಪತ್ನಿ ಖದೀಜರು ◌ؓ ಕೂಡ ರೋಗ ಪೀಡಿತರಾದರು. ರೋಗ ಉಲ್ಭಣಗೊಂಡು ಅವರು ಕೂಡ ಮರಣ ಹೊಂದಿದರು. ಇಮಾಮ್ ಹಾಕಿಮಿಯವರ ಉಲ್ಲೇಖದ ಪ್ರಕಾರ, ಅಬೂತ್ವಾಲಿಬ್'ರ ಮರಣದ ಮೂರು ದಿನದ ನಂತರವಾಗಿತ್ತು ಖದೀಜರು ◌ؓ ಕೂಡ ಮರಣ ಹೊಂದಿದ್ದು.
ಖದೀಜ ◌ؓ ಬೀವಿಯವರು, ಪ್ರವಾದಿಯವರಿಗೆ ﷺ ಕೇವಲ ಪತ್ನಿ ಮಾತ್ರವಾಗಿರಲ್ಲ. ಕೆಲವೊಮ್ಮೆ ತಾಯಿಯ ಸ್ಥಾನವನ್ನು ತುಂಬಿದ್ದರೆ, ಇನ್ನೂ ಕೆಲವೊಮ್ಮೆ ಗೆಳತಿಯಾಗುತ್ತಿದ್ದರು. ಎಲ್ಲಾ ತೊಂದರೆಗಳನ್ನು ಎದುರಿಸುವಾಗಲೂ ಖದೀಜ ಜೊತೆಯಲ್ಲೇ ಇರುತ್ತಿದ್ದರು, ಬೀವಿಯವರ ಗಂಭೀರವಾದ, ಪಕ್ವತೆಯಿಂದ ಇರುತ್ತಿದ್ದ ಅವರ ಆಶ್ವಾಸನೆಗಳು, ಪ್ರವಾದಿಯವರಿಗೆ ﷺ ಬಹಳಷ್ಟು ಧೈರ್ಯ ಕೊಡುತ್ತಿತ್ತು. ಪ್ರೀತಿಯಿಂದ ಕೂಡಿದ ಅವರ ಜೊತೆಯಲ್ಲಿ ಕಳೆದ ಜೀವನವು ಬಹಳಷ್ಟು ಸುಂದರವಾಗಿತ್ತು. ತನ್ನ ಪತ್ನಿಯ ವಿರಹದಿಂದ ಬಹಳಷ್ಟು ಕುಗ್ಗಿ ಹೋಗುತ್ತಿರುವ, ತಮ್ಮ ಪ್ರೀತಿಯ ಮುದ್ದಾದ ಹೆಣ್ಣು ಮಕ್ಕಳಿಗೆ ಸಮಾಧಾನ ಹೇಳುವುದು ಪ್ರವಾದಿಯವರಿಗೆ ﷺ ಇದ್ದ ಮತ್ತೊಂದು ಜವಾಬ್ದಾರಿಯಾಗಿತ್ತು. ಜಿಬ್'ರೀಲ್'ರು (ಅ) ಬಂದು ಖದೀಜರಿಗೆ ಅಭಿನಂದನೆಗಳನ್ನು ಹೇಳಿ ಹೋಗಿದ್ದ ವಿಷಯನ್ನು, ಪ್ರವಾದಿಯವರು ﷺ ತಮ್ಮ ಮಕ್ಕಳಲ್ಲಿ ತಿಳಿಸಿದಾಗ, ಅವರಿಗೆ ಅದರಿಂದ ಸ್ವಲ್ಪ ಸಮಾಧಾನ ಆಯಿತು.
ಬೀವಿಯವರ ಪಾರ್ಥಿವ ಶರೀರವನ್ನು ಭಾರವಾದ ಮನಸ್ಸಿನಿಂದ, ಪ್ರವಾದಿಯವರು ﷺ ಹಜೂನಿನ ಖಬರ್'ಸ್ಥಾನದ ಬಳಿ (ಜನ್ನತುಲ್ ಮುಅಲ್ಲದಲ್ಲಿ) ಅಂತ್ಯ ಸಂಸ್ಕಾರ ಮಾಡಲಾಯಿತು. ಅಬೂತ್ವಾಲಿಬರನ್ನು ಅಂತ್ಯ ಸಂಸ್ಕಾರ ಕೂಡ ಇಲ್ಲೇ ಆಗಿತ್ತು. ಮಯ್ಯತ್ ನಮಾಝ್ ಅಂದು ನಿಯಮ ಆಗಿರದ ಕಾರಣ, ಮನೆಯಿಂದ ನೇರವಾಗಿ ಖಬರ್'ಸ್ಥಾನಕ್ಕಾಗಿತ್ತು ಕೊಂಡು ಹೋದದ್ದು. ಸ್ವತಃ ಪ್ರವಾದಿಯವರೇ ﷺ ಖಬರಿನ ಒಳಗೆ ಇಳಿದು, ಒಡೆದ ಮನಸ್ಸಿನಿಂದ, ಸುರಿಸುವ ಕಣ್ಣಿರುನೊಂದಿಗೆ, ಬಹಳ ಗೌರವದಿಂದಲೇ ಅವರ ಪಾರ್ಥಿವ ಶರೀರವನ್ನು ಇಟ್ಟು, ಅಂತಿಮ ವಿಧಾಯ ಹೇಳಿದರು. ಮುಂದಿನ ಹದಿಮೂರು ವರ್ಷದ ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಪ್ರವಾದಿಯವರಿಗೆ ﷺ, ಅವರ ನೆನಪು ಕಾಡುತ್ತಲೇ ಇತ್ತು. ಕೆಲವೊಮ್ಮೆ ಬೀವಿಯವರ ನೆನಪು ಅಧಿಕವಾದಾಗ, ಅವರ ಬಂಧುಗಳಿಗೆ ಉಡುಗೊರೆಗಳನ್ನು ಕೊಟ್ಟು ಕಳುಹಿಸುತ್ತಿದ್ದರು. ಮೇಕೆಯನ್ನು ಝಬಅ್ ಮಾಡಿ, ಅದರ ಮಾಂಸವನ್ನು ದಾನ ಮಾಡುತಿದ್ದರು. ಸ್ವರ್ಗದಲ್ಲಿ ಸುಂದರವಾದ ಅರಮನೆಯನ್ನು ತನ್ನದಾಗಿಸಿಕೊಂಡ ಭಾಗ್ಯವತಿ ಎನ್ನುವ ಪಟ್ಟವನ್ನು ಬೀವಿಯು ತಮ್ಮದಾಗಿಸಿಕೊಂಡಿದ್ದರು.
ಪ್ರವಾದಿಯವರ ﷺ ಎಲ್ಲಾ ಸಂಧಿಗ್ದ ಪರಿಸ್ಥಿತಿಯಲ್ಲೂ, ನೆರಳಿನ ಹಾಗೆ ನಿಂತಿದ್ದ ಎರಡು ಮಹಾ ಮನುಷಿಗಳ ವಿಯೋಗವು, ಪ್ರವಾದಿತ್ವದ ಘೋಷಣೆಯಾಗಿ ಹತ್ತು ವರ್ಷದ ಬಳಿಕವಾಗಿತ್ತು. ಇತಿಹಾಸದ ಪುಟಗಳಲ್ಲಿ ಆ ವರ್ಷವು "ಆಮುಲ್'ಹುಸೂಲ್" (ದುಃಖದ ವರ್ಷ) ಎನ್ನುವ ಹೆಸರಿನಲ್ಲಿ ದಾಖಲಾಯಿತು.
ಅಬೂತ್ವಾಲಿಬರ ವಿಯೋಗವು ಶತ್ರುಗಳಿಗೆ ಪ್ರವಾದಿಯವರಿಗೆ ﷺ ತೊಂದರೆ ನೀಡಲು ಅವಕಾಶ ಮಾಡಿಕೊಟ್ಟಿತು. ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಅದನ್ನು ವಿರೋಧಿಸುತ್ತಿದ್ದ ವ್ಯಕ್ತಿ ಇಲ್ಲವಾದಾಗ, ಅವರ ಕ್ರೌರ್ಯ ಅಧಿಕವಾಯಿತು. ಒಮ್ಮೆ ಬಹಳ ಬೇಸರದಿಂದ ಪ್ರವಾದಿಯವರು ﷺ, ತಮ್ಮ ದೊಡ್ಡಪ್ಪನನ್ನು ನೆನೆದು, "ದೊಡ್ಡಪ್ಪ ಎಷ್ಟು ಬೇಗ ತಮ್ಮ ವಿಯೋಗ ನನ್ನನ್ನು ಬಾಧಿಸಿತು." ಎಂದು ಹೇಳಿದ್ದರು. ಮತ್ತೊಮ್ಮೆ ಪ್ರವಾದಿಯವರು ﷺ ದಾರಿಯಲ್ಲಿ ನಡೆದು ಬರುತ್ತಿದ್ದ ಸಂದರ್ಭದಲ್ಲಿ, ಒಬ್ಬ ದುಷ್ಟ ಪ್ರವಾದಿಯವರ ﷺ ತಲೆಯ ಮೇಲೆ ಮಣ್ಣೆಸೆದನು. ಪ್ರವಾದಿಯವರು ﷺ ಅಲ್ಲಿಂದ ತಕ್ಷಣವೇ ಮನೆ ಕಡೆ ನಡೆದರು. ಮನೆಗೆ ತಲುಪಿದಾಗ, ದೃಶ್ಯವನ್ನು ಕಂಡು, ಮಗಳು ಫಾತಿಮ ◌ؓ ಅಳುತ್ತಲೇ ತಂದೆಯ, ತಲೆಯಿಂದ ಎಲ್ಲಾ ಮಣ್ಣನ್ನೂ ತೆಗೆದು ಶುಚಿಗೊಳಿಸಿದರು. ಮಗಳ ಬೇಸರವನ್ನು ಕಂಡು, ಪ್ರವಾದಿಯವರು ﷺ, ಅಳ ಬೇಡ ಮಗಳೇ, ಖಂಡಿತ ಅಲ್ಲಾಹನು ರಕ್ಷಿಸುವನು. ಅದಕ್ಕೆ ಮಗಳು, ಹೌದು ಆದರೆ ಅಬೂತ್ವಾಲಿಬರ ಮರಣದ ವರೆಗೂ ಇಂತಹ ಯಾವುದೇ ದುಷ್'ಕೃತ್ಯ ನಡೆದಿರಲಿಲ್ಲ ಅಲ್ವಾ.? ಎಂದು ಹೇಳಿದರು.
ಅಲ್ಲಿಂದ ಕೆಲವು ದಿನಗಳ ಕಾಲ ಮನೆಯಲ್ಲೇ ಉಳಿದುಕೊಂಡರು. ಮಡದಿ ಇಲ್ಲದ ಮನೆಯಲ್ಲಿ, ತನ್ನ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬುತ್ತಾ, ಮುಂಬರುವ ದಿನಗಳ ಕುರಿತು ಅಲೋಚಿಸುತ್ತಾ ಕಾಲ ಕಳೆದರು.
ಅದರ ನಡುವೆ ಒಂದು ಕುತೂಹಲಕಾರಿಯಾದ ಘಟನೆ ನಡೆಯಿತು. ಅಬೂತ್ವಾಲಿಬರ ವಿಯೋಗದಿಂದ ಪ್ರವಾದಿಯವರು ﷺ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಅಬೂಲಹಬಿಗೆ ವಿಷಯ ತಿಳಿಯಿತು. ತನ್ನ ಸಹೋದರ ಮಗನ ಬೇಸರವನ್ನು ಕಂಡು, ಅವರು ಪ್ರವಾದಿಯವರ ﷺ ಬಳಿ ಬಂದು, ಮುಹಮ್ಮದ್'ರೆ ﷺ, ಅಬೂತ್ವಾಲಿಬ್ ಜೀವಿಸಿದ್ದಾಗ ನೀವು ಮಾಡುತಿದ್ದ ಎಲ್ಲಾ ಕಾರ್ಯಗಳನ್ನು ನೀವು ಮುಂದುವರಿಸಿ, ನನ್ನ ಮರಣದವರೆಗೂ, ನಿಮಗೆ ಯಾರೂ ಕೂಡ ತೊಂದರೆ ನೀಡಲಾರರು. ಇದು ಲಾತ ಉಝ್ಝದ ಮೇಲಾಣೆ ಎಂದು ಹೇಳಿದರು. ಇದರ ನಡುವೆ ಅಬೂಗೈತ್ವಲ ಎಂಬ ವ್ಯಕ್ತಿಯೂ, ಪ್ರವಾದಿಯವರನ್ನು ﷺ ಅವಾಚ್ಯವಾಗಿ ನಿಂದಿಸಿದ್ದರು, ಇದರ ಬಗ್ಗೆ ಅಬೂಲಹಬರಿಗೆ ವಿಷಯ ತಿಳಿದಾಗ, ಅವರು ನೇರವಾಗಿ ಆ ವ್ಯಕ್ತಿಯ ಬಳಿ ಹೋಗಿ ಅವನನ್ನು ಗದರಿಸಿದರು. ಅದನ್ನು ಕಂಡ ಆ ವ್ಯಕ್ತಿಯು ಅಲ್ಲಿಂದ ಸ್ವಲ್ಲ ಹಿಂದೆ ಸರಿದು, ಓ ಖುರೈಷಿಗಳೇ ಅಬೂಉತ್'ಬ (ಅಬೂಲಹಬ್) ನಮ್ಮ ಧರ್ಮ ಬಿಟ್ಟು ಹೋಗಿದ್ದಾರೆ, ಅವರು ಸಾಬಿಈ ಆಗಿದ್ದಾರೆ ಎಂದು ಜೋರಾಗಿ ಹೇಳಲು ಆರಂಭಿಸಿದನು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment