ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮುಜಾಹೀದ್'ರವರು ◌ؓ ವಿವರಿಸುವುದು ಈ ರೀತಿಯಾಗಿದೆ. ಖುರೈಷಿಗಳು ಬಿಲಾಲರ ◌ؓ ಕತ್ತಿಗೆ ಹಗ್ಗ ಹಾಕಿ, ಪರ್ವತಗಳ ನಡುವಿನಿಂದ ಎಳೆದುಕೊಂಡು ಹೋಗಲು ಚಿಕ್ಕ ಮಕ್ಕಳಲ್ಲಿ ಹೇಳಿದರು. ಅವರು ಅದೇ ರೀತಿ ಎಳೆಯುತ್ತಿರುವಾಗಲೂ, ಬಿಲಾಲ್ ◌ؓ ಮಾತ್ರ ಅಹದ್, ಅಹದ್ ಅಂತ ಹೇಳುತ್ತಲೇ ಇದ್ದರು. ಈ ಘಟನೆಯ ಕುರಿತಾಗಿ, ಸ್ವತಃ ಬಿಲಾಲರೇ ◌ؓ ನಂತರದ ಕಾಲದಲ್ಲಿ ಹೇಳುತ್ತಿದ್ದರು. ನನ್ನನ್ನು ಅವರು ಒಂದು ದಿನ, ರಾತ್ರಿ ಸಂಪೂರ್ಣವಾಗಿ ಕಟ್ಟಿ ಎಳೆದಿದ್ದರು. ನನ್ನ ಗಂಟಲು ಒಣಗಿ, ಒಂದೇ ಒಂದು ಅಕ್ಷರವೂ ಕೂಡ ಮಾತಾಡಲು ಆಗುತ್ತಿರಲಿಲ್ಲ.
ಬಿಲಾಲ್'ಗೆ ◌ؓ ಚಿತ್ರಹಿಂಸೆ ನೀಡುತ್ತಿದ್ದ ದೃಶ್ಯವನ್ನು ಕಂಡ ವರಖತ್ ಬಿನ್ ನೌಫಲ್ ಹತ್ತಿರ ಬಂದು, ಬಿಲಾಲರೆ ಸತ್ಯವಾಗಿದೆ ನೀವು ಹೇಳುತ್ತಿರುವುದು. ಅಹದ್, ಅಹದ್, ಅಲ್ಲಾಹು ಸತ್ಯ ಎಂದು. ನಂತರ ಉಮೈಯತ್ತಿನ ಬಳಿ ಬಂದು, ನೀವೇನು ಅವರನ್ನು ಕೊಂದು ಹಾಕುತ್ತೀರೆ.? ಒಂದು ವೇಳೆ ಹಾಗೆ ಏನಾದರೂ ಆದರೆ, ನಾನು ಅವರ ಅಂತ್ಯಕ್ರಿಯೆ ಬಹಳ ಗೌರವದಿಂದ, ಕರುಣೆಯಿಂದ ಮಾಡುವೆನು ಎಂದು ಹೇಳಿದರು.
ಕೊನೆಗೆ ಆ ದಾರಿಯಲ್ಲಿ ನಡೆದು ಬಂದ ಅಬೂಬಕ್ಕರ್'ರವರು ◌ؓ ಉಮೈಯತ್ತಿನಲ್ಲಿ, ನಿನಗೆ ಈ ಬಡ ಮನುಷ್ಯನನ್ನು ಈ ರೀತಿ ಹಿಂಸೆ ನೀಡಿದ್ದಕ್ಕಾಗಿ ಸೃಷ್ಟಿಕರ್ತನ ಭಯವಿಲ್ಲವೇ.? ನೀನು ಈ ಬಡ ವ್ಯಕ್ತಿಯನ್ನು ಎಲ್ಲಿಯವರೆಗೆ ಹಿಂಸೆ ನೀಡುತ್ತೀಯ.? ಎಂದು ಕೇಳಿದಾಗ. ಉಮೈಯತ್, ನೀವೆ ಇವನನ್ನು ನಾಶಮಾಡಿದ್ದು, ಈಗ ನೀವೆ ಇವನಿಗೆ ರಕ್ಷಣೆ ನೀಡಿ ಎಂದು ಹೇಳಿದನು. ಅದಕ್ಕೆ ಅಬೂಬಕ್ಕರ್'ರವರು ◌ؓ, ಹಾಗಾದರೆ ನನ್ನ ಒಳ್ಳೆಯ ಆರೋಗ್ಯವಂತನಾದ, ನಿನ್ನದೆ ಧರ್ಮದ ವಿಶ್ವಾಸಿಯಾದ ಒಬ್ಬ ಸೇವಕನಿದ್ದಾನೆ, ಅವನನ್ನು ನಾನು ನಿನಗೆ ನೀಡುತ್ತೇನೆ. ಬದಲಾಗಿ ಬಿಲಾಲರಿಗೆ ◌ؓ ಮೋಚನೆ ನೀಡು ಎಂದು ಹೇಳಿದಾಗ, ಉಮೈಯತ್ ಸಮ್ಮತಿಸಿದನು. ಅಬೂಬಕ್ಕರ್'ರವರು ◌ؓ ಬಿಲಾಲ್'ರನ್ನು ಸೇವಕರಿಂದ ವಿಮೋಚನೆ ನೀಡಿದರು. ಹೀಗೆ ಬಿಲಾಲ್ ◌ؓ ಸೇವಕನ ಜೀವನದಿಂದ, ಸ್ವಾತಂತ್ರ್ಯದ ಜೀವನಕ್ಕೆ ಕಾಲಿಟ್ಟರು.
ಮುಹಮ್ಮದ್ ಬಿನ್ ಸೀರೀನಿಯವರ ಮತ್ತೊಂದು ಉಲ್ಲೇಖವನ್ನು ತಿಳಿಯೋಣ. ಬಿಲಾಲ್ ◌ؓ ಇಸ್ಲಾಂ ಸ್ವೀಕರಿಸಿದಾಗ, ಶತ್ರುಗಳು ಅವರನ್ನು ಮರುಭೂಮಿಯಲ್ಲಿ ಮಲಗಿಸಿ, ಚಿತ್ರಹಿಂಸೆ ನೀಡುತ್ತಾ, ನಿನ್ನ ದೇವರು ಲಾತ, ಉಝ್ಝ ಎಂದು ಹೇಳು ಎಂದು ಬಹಳಷ್ಟು ಒತ್ತಾಯ ಮಾಡುತಿದ್ದರು. ಆದರೆ ಬಿಲಾಲ್ ◌ؓ ಅಹದ್, ಅಹದ್ ನನ್ನ ದೇವನು ಏಕನಾದ ಅಲ್ಲಾಹನಾಗಿದ್ದಾನೆ. ಎಂದು ಹೇಳಿದರು. ತಕ್ಷಣವೇ ಅದೇ ದಾರಿಯಲ್ಲಿ ಅಬೂಬಕ್ಕರ್'ರವರು ◌ؓ ನಡೆದು ಬರುತ್ತಿದ್ದರು. ಅವರು ಬಿಲಾಲರ ◌ؓ ಬಳಿ ಬಂದು, ನೀವು ಯಾಕೆ ಈ ಬಡಪಾಯಿಯನ್ನು ಹಿಂಸೆ ನೀಡುತ್ತಿದ್ದೀರ.? ಎಂದು ಹೇಳಿ, ಏಳು ಊಖಿಯ ಬೆಲೆ ನೀಡಿ ಬಿಲಾಲನ್ನು ◌ؓ ಅವರಿಂದ ಖರೀದಿಸಿ, ಮೋಚನೆ ನೀಡಿದರು. ಪ್ರವಾದಿಯವರಿಗೆ ﷺ ಮಾಹಿತಿ ತಿಳಿಸಿದರು. ಅದಕ್ಕೆ ಪ್ರವಾದಿಯವರು ﷺ ನಾನು ಕೂಡ ಅದರಲ್ಲಿ ಜೊತೆ ಸೇರುತ್ತೇನೆ ಅಂದಾಗ, ಈಗಾಗಲೇ ಅವರಿಗೆ ಮೋಚನೆ ನೀಡಿಯಾಯಿತು ಎಂದು ಹೇಳಿದರು. ಐದು ಉಖಿಯ ಆಗಿತ್ತು ನೀಡಿದ್ದು ಎನ್ನುವ ಅಭಿಪ್ರಾಯ ಕೂಡ ಇದೆ.
ಒಂದು ಕಡೆ ವಿಶ್ವಾಸಿಗಳು ಹಿಂಸೆಗಳನ್ನು ಎದುರಿಸುತ್ತಾ, ದಿನಗಳು ಕಳೆಯುತ್ತಿರುವಾಗ, ಮತ್ತೊಂದು ಕಡೆ ನಂಬಿಕೆ, ಆತ್ಮ ಧೈರ್ಯಗಳಿಂದ ಕೂಡದ ಘೋಷಣೆಗಳಾಗಿತ್ತು.
ವಿಶ್ವಾಸ ಸಂರಕ್ಷಣೆಗಾಗಿ, ಪ್ರಾಣ ತ್ಯಾಗ ಮಾಡಿದ ಖಬ್ಬಾಬ್ ಬಿನ್ ಅಲ್ ಅರತ್ತಿಯವರ ◌ؓ ಕುರಿತು ತಿಳಿಯೋಣ. ಸಿಬಾವು ಬಿನ್ ಅಬ್ದುಲ್ ಉಝ್ಝ ಹಾಗೂ ಅವನ ಗೆಳೆಯರು ಸೇರಿ, ಖಬ್ಬಾಬ್'ರವರ ◌ؓ ಬಳಿ ಬಂದು, ನೀನು ದಾರಿ ತಪ್ಪಿದ್ದೀಯ ಎಂದೂ, ಹಾಷಿಂ ವಂಶದ ಆ ನೂತನವಾದದೊಂದಿಗೆ ಬಂದ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೀಯ, ಎಂದು ಕೇಳಲು ಸಾಧ್ಯವಾಯಿತು. ಅದು ನಿಜವಾ.? ಎಂದು ಕೇಳಿದರು. ಆಲಯದಲ್ಲಿ ಆಯುಧಗಳ ಕೆಲಸ ಮಾಡುತ್ತಿದ್ದ, ಖಬ್ಬಾಬ್ ◌ؓ "ನಾನು ಯಾವ ದಾರಿಯೂ ತಪ್ಪಲಿಲ್ಲ. ನೀವು ಆರಾಧಿಸುವ ದೇವರನ್ನು ಬಿಟ್ಟು, ಏಕನಾದ ಅಲ್ಲಾಹನನ್ನು ಆರಾಧಿಸುತ್ತಿದ್ದೇನೆ. ಅಷ್ಟೇ" ಎಂದು ಹೇಳಿದರು. ಸೇವಕನಾಗಿದ್ದ, ಲೋಹಕಾರನಾದ ಖಬ್ಬಾಬ್'ನ ◌ؓ ಈ ಮಾತು ಸಿಬಾವುಗೆ ಹಿಡಿಸಲಿಲ್ಲ, ಅವನು ಹೊಡೆಯಲು ಮುಂದಾದನು. ಆತನು ಆಲಯದಲ್ಲಿದ್ದ ಆಯುಧಗಳನ್ನು ತೆಗೆದು ಹೊಡೆಯಲು ಆರಂಭಿಸಿದನು. ಖಬ್ಬಾಬ್'ನ ◌ؓ ಶರೀರವು ಸಂಪೂರ್ಣವಾಗಿ ರಕ್ತದಿಂದ ತೊಯ್ದುಬಿಟ್ಟಿತು. ವಿಷಯವು ಇಡೀ ಮಕ್ಕಾ ನಗರಕ್ಕೆ ಕಾಲ್ಗಿಚ್ಚಿನಂತೆ ತಲುಪಿತು. ಒಬ್ಬ ಸೇವಕನಾಗಿದ್ದ ಖಬ್ಬಾಬ್ ◌ؓ ತಾನು ಇಸ್ಲಾಮ್ ಸ್ವೀಕರಿಸಿದ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಿದ್ದು, ಅವರಿಗೆ ಸಹಿಸಲು ಆಗಲಿಲ್ಲ. ವಿಷಯ ತಿಳಿದ ಖುರೈಷಿ ಗಣ್ಯರಾದ ಅಬೂಜಹಲ್, ಅಬೂಸೂಫಿಯಾನ್, ವಲೀದ್ ಎಲ್ಲರೂ ಸೇರಿ ದಾರುನ್ನದುವದಲ್ಲಿ ಸಭೆ ಸೇರಿ, ಹಿಂಸೆಯನ್ನು ಇನ್ನೂ ಕ್ರೂರವಾಗಿ ನೀಡಲು ತೀರ್ಮಾನಿಸಿದರು. ಖಬ್ಬಾಬ್'ನ್ನು ಕೆಳಗೆ ನಿಲ್ಲಿಸಲು, ಅವರ ಒಡತಿ ಉಮ್ಮು ಅನ್'ಮಾರಿನ ಸಹೋದರನಾದ ಸಿಬಾಯಿಯನ್ನು ಕರೆದು, ಖಬ್ಬಾಬನ್ನು ◌ؓ ಉರಿಯುವ ಬಿಸಿಲಿನಲ್ಲಿ, ಸುಡುವ ಮರಳಿನ ಮೇಲೆ ನಗ್ನವಾಗಿ ಮಲಗಿಸಿ, ಭಾರವಿರುವ ಕಲ್ಲನ್ನು ಅವರ ಎದೆಯ ಮೇಲಿಟ್ಟು, ಈಗ ನೀನು ಮುಹಮ್ಮದ್'ರ ಕುರಿತು ಏನು ಹೇಳುವೆ ಎಂದು ಕೇಳಿದರು. ಅದಕ್ಕೆ ಖಬ್ಬಾಬ್, "ಅಲ್ಲಾಹುವಿನ ಸಂದೇಶ ವಾಹಕರು, ನನ್ನ ಪ್ರವಾದಿಯವರು ﷺ" ಎಂದು ಹೇಳಿದರು. ಖಬ್ಬಾಬ್'ರ ◌ؓ ಶರೀರದ ಮೇಲೆ ಕಬ್ಬಿಣ ಕವಚವನ್ನು ಧರಿಸಿ, ಲಾತ ಉಝ್ಝನ ಕುರಿತು ನೀನು ಏನು ಹೇಳುವೆ ಎಂದು ಕೇಳಿದರು.. ಅದಕ್ಕೆ ಖಬ್ಬಾಬ್ ◌ؓ ಏನು ಹೇಳುವುದು.? ಅದೊಂದು ಕಲ್ಲು ಮಾತ್ರ ಎಂದು ಹೇಳಿದರು. ಅದರೊಂದಿಗೆ ಅವರಿಗೆ ನೀಡುತ್ತಿದ್ದಾ ಚಿತ್ರಹಿಂಸೆಯೂ ಕೂಡ ಕಠಿಣವಾಯಿತು...
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment