ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಒಮ್ಮೆ ಖಬ್ಬಾಬ್'ರವರಿಗೆ ಚಿತ್ರಹಿಂಸೆ ನೀಡುತ್ತಿರುವ ದೃಶ್ಯವು ಪ್ರವಾದಿಯವರ ﷺ ಕಣ್ಣಿಗೆ ಬಿದ್ದಿತ್ತು. ಅದನ್ನು ಕಂಡ ಪ್ರವಾದಿಯವರ ﷺ ಕಣ್ಣಿಂದ ಕಂಬನಿ ಜಾರತೊಡಗಿತು. ಪ್ರವಾದಿಯವರು ﷺ ಅಲ್ಲಾಹನಲ್ಲಿ, "ನೀನು ಖಬ್ಬಾಬಿಗೆ ◌ؓ ರಕ್ಷೆ ನೀಡು ಅಲ್ಲಾಹ್" ಎಂದು ಮನ ನೊಂದು ಪ್ರಾರ್ಥನೆ ಮಾಡಿದರು.
ತಮೀಮ್ ಜನಾಂಗದ ಅರತ್ತಿಯವರ ಮಗನಾಗಿದ್ದರು ಖಬ್ಬಾಬ್. ◌ؓ ಅವರು ಜನಿಸಿದ್ದು ನಜ್'ದ್ ಎನ್ನುವ ಸ್ಥಳದಲ್ಲಾಗಿತ್ತು. ದರೋಡೆ ಕೋರರ ವಂಚನೆಗೆ ಬಲಿಯಾಗಿ, ಮಕ್ಕಾ ನಗರದ ಮಾರುಕಟ್ಟೆಗೆ ತಲುಪಿದರು. ಖುಸಾಅ ಜನಾಂಗದ ಶ್ರೀಮಂತಳಾದ ಉಮ್ಮು ಅನ್'ಮಾರ್ ಎನ್ನುವ ಯುವತಿಯು, ಖಬ್ಬಾಬನ್ನು ◌ؓ ಖರೀದಿಸಿದರು. ಆಯುಧ ನಿರ್ಮಾಣದಲ್ಲಿ ನಿಪುಣನಾಗಿದ್ದ ಸೇವಕನನ್ನು ಲೋಹಕಾರನಾಗಿ ಬದಲಾಯಿಸಿದರು. ಹೀಗೆ ಖಬ್ಬಾಬ್ ◌ؓ ಮಕ್ಕದಲ್ಲೇ ಸುಪ್ರಸಿದ್ಧ ಲೋಹಕಾರನಾಗಿ ಪರಿಚಿತಗೊಂಡರು. ಆ ಕಾರಣದಿಂದ ಉಮ್ಮು ಅನ್'ಮಾರ್ ಇನ್ನಷ್ಟು ಶ್ರೀಮಂತರಾದರು. ಮೂರ್ತಿ ಪೂಜೆಯಲ್ಲಿ ಹಿಂದಿನಿಂದಲೂ ಆಸಕ್ತಿ ಇಲ್ಲದ ವ್ಯಕ್ತಿಯಾಗಿದ್ದ ಖಬ್ಬಾಬ್, ಮೋಕ್ಷದ ದಾರಿಯನ್ನು ಕಾಯುತ್ತಿದ್ದ ಸಂದರ್ಭದಲ್ಲಾಗಿತ್ತು ಪ್ರವಾದಿತ್ವದ ಘೋಷಣೆಯಾಗುವುದು. ಅದರಲ್ಲಿ ಆಕರ್ಷಿತನಾದ ಖಬ್ಬಾಬ್ ◌ؓ ಇಸ್ಲಾಮ್ ಸ್ವೀಕರಿಸಿದರು. ಆದರೆ ಅದು ಉಮ್ಮು ಅನ್'ಮಾರಿಗೆ ಇಷ್ಟವಾಗಲಿಲ್ಲ, ಅವರು ಖಬ್ಬಾಬ್'ಗೆ ◌ؓ ಬಹಳಷ್ಟು ಥಳಿಸಿದರು. ಆದರೆ ವಿಧಿಯ ಆಟವೇ ಬೇರೆಯಿತ್ತು, ಉಮ್ಮು ಅನ್'ಮಾರ್ ರೋಗ ಪೀಡಿತರಾದರು. ಅವರ ಚಿಕಿತ್ಸೆಗಾಗಿ ಕಬ್ಬಿಣದ ದಂಡನ್ನು ಬಿಸಿ ಮಾಡಿ ತಲೆಗೆ ಇಡಬೇಕೆಂದು ವೈದ್ಯರು ನಿರ್ದೇಶಿಸಿ, ಅದರ ಜವಾಬ್ದಾರಿಯನ್ನು ಖಬ್ಬಾಬಿಗೆ ◌ؓ ವಹಿಸಲಾಯಿತು. ನೋವಿನಿಂದ, ಕಬ್ಬಿಣ ಬಿಸಿಯನ್ನು ಸಹಿಸಲಾಗದೆ ಅತ್ತಿತ್ತ ಓಡಾಡುವ ದೃಶ್ಯವನ್ನಾಗಿತ್ತು ಖಬ್ಬಾಬ್ ◌ؓ ನೋಡುತಿದ್ದದ್ದು. ವಿಧಿಯ ಕುತೂಹಲಕಾರಿ ಪ್ರತೀಕಾರವಾಗಿತ್ತು ಅದು .
ಚಿತ್ರಹಿಂಸೆಗಳಿಂದ ಕಾಲ ಕಳೆಯುತ್ತಿದ್ದ ಘಟನೆಯನ್ನು ನೆನಪಿಸುವ, ಇಮಾಮ್ ಬುಖಾರಿಯವರ ◌ؓ ಉಲ್ಲೇಖವು ಈ ರೀತಿಯಾಗಿದೆ. ಖಬ್ಬಾಬ್ ಹೇಳುವುದು, ಕಾಣಬಹುದು. "ಮಕ್ಕಾದಲ್ಲಿ ನಾವು ಬಹಳಷ್ಟು ಚಿತ್ರಹಿಂಸೆ ಅನುಭವಿಸುತ್ತ ಸಂದರ್ಭವಾಗಿತ್ತು ಅದು. ನಾನು ಪ್ರವಾದಿಯವರನ್ನು ﷺ ಭೇಟಿಯಾಗಲು ಬಂದೆನು. ಪ್ರವಾದಿಯವರು ﷺ ಕಅಬಾಲಯದ ನೆರಳಿನಲ್ಲಿ, ಮಲಗಿದ್ದರು. ನಾನು ಅವರ ಹತ್ತಿರ ಬಂದು, ಓ ಪ್ರವಾದಿಯವರೇ ﷺ ನೀವು ನಮಗಾಗಿ ಪ್ರಾರ್ಥನೆ ಮಾಡುವುದಿಲ್ಲವೇ.? ಎಂದು ಕೇಳಿದಾಗ, ಪ್ರವಾದಿಯವರು ﷺ ಎದ್ದು ಕುಳಿತುಕೊಂಡರು. ಅವರ ಮುಖ ಭಾವವು ಸಂಪೂರ್ಣವಾಗಿ ಬದಲಾಗಿತ್ತು. ನಂತರ ಪ್ರವಾದಿಯವರು ﷺ, ನಿಮ್ಮ ಪೂರ್ವಿಕರು ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ್ದಾರೆ ಗೊತ್ತೇ.?, ಅವರಲ್ಲಿ ಕೆಲವರನ್ನು ಕಬ್ಬಿಣದ ಬಾಚಣಿಗೆಯಿಂದ ಅವರ ಶರೀರವನ್ನು ಬಾಚಿದಾಗ, ಎಲುಬುಗಳಿಂದ ಮಾಂಸಗಳು ಬೇರೆ ಬೇರೆಯಾಗಿ ಬರುತಿತ್ತು. ಕೆಲವರನ್ನು ತಲೆಯಿಂದ ನೇರವಾಗಿ ಮರವನ್ನು ತುಂಡರಿಸುವ ಹಾಗೆ ತುಂಡರಿಸಲಾಗಿತ್ತು. ಆಗಲೂ ಅವರು ತಮ್ಮ ಆದರ್ಶದಿಂದ ಹಿಂದೆ ಸರಿದಿರಲಿಲ್ಲ. ಈ ಚಳುವಳಿಯು ಖಂಡಿತವಾಗಿಯೂ ಬೆಳೆಯಲಿದೆ. ಅಂದು ಸನ್'ಆದಿಂದ ಹಲರ್'ಮೌತ್ ವರೆಗೆ ಒಬ್ಬ ವ್ಯಕ್ತಿಯೂ ಯಾತ್ರೆ ಮಾಡುವಾಗ, ಕೇವಲ ಅಲ್ಲಾಹನನ್ನು ಹಾಗೂ ತನ್ನ ಜೊತೆಯಲ್ಲಿರುವ ಮೇಕೆಯನ್ನು ನರಿ ಹಿಡಿಯಬಹುದೇ.? ಎಂದು ಮಾತ್ರ ಭಯಗೊಂಡರೆ ಸಾಕು ಎಂದು ಹೇಳಿದರು.
ಪೂರ್ವಿಕರು ಅನುಭವಿಸಿದ್ದ ಚಿತ್ರಹಿಂಸೆಗಳ ಬಗ್ಗೆ ಹೇಳಿ, ಪ್ರವಾದಿಯವರು ﷺ ತಮ್ಮ ಅನುಯಾಯಿಗಳಿಗೆ ಸಮಾಧಾನ ನೀಡುತ್ತಾ, ಭವಿಷ್ಯದಲ್ಲಿ ಬರಲಿರುವ ಬೆಟ್ಟದಂತ ಸಮಸ್ಯೆಗಳಿಗಾಗಿ ಮಾನಸಿಕವಾಗಿ ಇನ್ನಷ್ಟು ಸಿದ್ಧಗೊಳಿಸುತ್ತಿದ್ದರು. ಅನಿವಾರ್ಯವಾಗಿ ಮಾಡಲೇಬೇಕಾದ ತ್ಯಾಗಗಳ ಕುರಿತು ಆಳವಾಗಿ ತಿಳಿಸಿದರು.
ಹೀಗೆ ಖಬ್ಬಾಬ್ ◌ؓ ಖುರ್'ಆನ್ ಚೆನ್ನಾಗಿ ಕಲಿತು, ಇತರರಿಗೂ ಕಲಿಸಿ ಕೊಡುವ ಗುರುವಾಗಿ ಬದಲಾದರು.
ಮಕ್ಕಾದಲ್ಲಿ ಹಿಂಸೆಗಳು ಮುಂದುವರಿಯುತ್ತಲೇ ಇತ್ತು. ಬಡವರಾದ ವಿಶ್ವಾಸಿಗಳನ್ನು ನಿರಂತರವಾಗಿ ಖುರೈಷಿಗಳು ತಮ್ಮ ವಿಕೃತ ಆಟಕ್ಕೆ ಗುರಿಯಾಗಿಸುತ್ತಲೇ ಇದ್ದರು. ಅದರಲ್ಲಿ ಸುಹೈಬ್ ಬಿನ್ ಸಿನಾನ್ ಅರ್'ರೂಮಿ, ಆಮಿರ್ ಬಿನ್ ಫುಹೈರ, ಅಬೂ ಫುಕೈಹ, ಎನ್ನುವವರು ಪ್ರಮುಖರಾಗಿದ್ದರು.
ಇಸ್ಲಾಮ್ ಸ್ವೀಕರಿಸಿದ ಕಾರಣದಿಂದ ಅತೀ ಕ್ರೂರವಾದ ಹಿಂಸೆಯನ್ನು ಎದುರಿಸಿದ್ದು, ಅಮ್ಮಾರ್'ರವರ ◌ؓ ಕುಟುಂಬವಾಗಿತ್ತು. ಅವರ ತಂದೆ ಯಾಸಿರ್, ತಾಯಿ ಸುಮಯ್ಯ, ಸಹೋದರ ಅಬ್ದುಲ್ಲಾಹ್ ಎಲ್ಲರೂ ಕೂಡ ಚಿತ್ರಹಿಂಸೆಯನ್ನು ಅನುಭವಿಸಬೇಕಾಗಿ ಬಂದಿತು.
ಒಂದು ದಿನ ಅಮ್ಮಾರ್'ರವರ ◌ؓ ಮೇಲೆ ಖುರೈಷಿಗಳು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದರು. ಅವರ ಶರೀರಕ್ಕೆ ಬಹಳಷ್ಟು ಗಾಯಗಳಾದವು. ಆ ಗಾಯದೊಂದಿಗೆ ಸುಡುವ ಮರುಭೂಮಿಯ ಮೇಲೆ ಮಲಗಿಸಿ, ಸ್ವಲ್ಪ ಕಳೆದು ನೀರಿಗೆ ಮುಳುಗಿಸಿದರು. ಪ್ರಜ್ಞೆ ತಪ್ಪಿ ಬಹಳ ಹೊತ್ತು ಮಲಗಿದ್ದರು. ಪ್ರಜ್ಞೆ ಬಂದ ನಂತರ, ಅವರ ದೇವರುಗಳನ್ನು ಹೋಗಳುತ್ತಾ ಅದೇ ರೀತಿ ಹೇಳಲು ಹೇಳಿದಾಗ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅಮ್ಮಾರ್ ◌ؓ ಅದಕ್ಕೆ ಸಮ್ಮತಿಸಿದ್ದರು. ಆದರೆ ಸಂಪೂರ್ಣವಾಗಿ ಪ್ರಜ್ಞೆ ಬಂದಾಗಾಗಿತ್ತು ತನ್ನ ತಪ್ಪಿನ ಅರಿವಾದದ್ದು, ಅವರು ಅದನ್ನು ನೆನೆಯುತ್ತಾ ಬಹಳಷ್ಟು ದುಃಖಿತನಾಗಿ, ನಿರಂತರವಾಗಿ ಪಶ್ಚತಾಪ ಭಾವನೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment