Abu Hisham Saquafi

Official Website Of Hafiz Ilyas Saquafi Padaladka

Tuesday, September 6, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -83 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಸುಮಯ್ಯರ ◌ؓ ಇಸ್ಲಾಮ್ ಸ್ವೀಕರಿಸಿದ ಕಾರಣ, ಅವರ ರೀತಿಯಲ್ಲೇ ಚಿತ್ರಹಿಂಸೆ ಎದುರಿಸಬೇಕಾಗಿ ಬಂದ ಮತ್ತೊಂದು ಯುವತಿಯಾಗಿದ್ದರು ಲಬೀಬಃ ◌ؓ.  ಅವರು ಬನುಲ್ ಮುಅಮ್ಮಲ್ ಜನಾಂಗದ ಸೇವಕಿಯಾಗಿದ್ದರು. ಖುರೈಷಿಗಳು ನೀಡಿದ್ದ ಚಿತ್ರಹಿಂಸೆಗೆ, ಅವರ ಪ್ರಾಣ ಹೋಗುವ ಪರಿಸ್ಥಿತಿಗೆ ಬಂದು ತಲುಪಿತ್ತು, ಅಷ್ಟರಲೇ ಅಬೂಬಕ್ಕರ್ ◌ؓ ಬಂದು, ಅವರನ್ನು ಖರೀದಿಸಿ, ರಕ್ಷಿಸಿದರು. 
     ಅವರ ಅದೇ ಸಾಲಿನಲ್ಲಿ ಬರುವ, ಸಿನೀರ ಅಥವಾ ಸನ್'ಬರ ಎಂಬ ಹೆಸರಿನ ರೋಮನ್ ವಂಶದ ಒಬ್ಬರು ಧೀರ ಯುವತಿಯನ್ನು ಕೂಡ ಇಲ್ಲಿ ತಿಳಿಯಬೇಕಿದೆ. ಖುರೈಷಿಗಳು ಅವರಿಗೂ ಕೂಡ ಸಾಕಷ್ಟು ಚಿತ್ರಹಿಂಸೆ ನೀಡಿದಾಗ ಅವರು ಕಣ್ಣಿನ ದೃಷ್ಟಿ ಕಳೆದುಕೊಂಡರು, ಅದನ್ನು ಕಂಡು ಇದು ಲಾತ, ಉಝ್ಝ ಎಂಬ ದೇವರು ಕೋಪ ಮಾಡಿರುವುದರ ಪರಿಣಾಮವಾಗಿದೆ ಎಂದು ಹೇಳಿದರು. ಅದಕ್ಕೆ ಯುವತಿಯು ತಕ್ಷಣ ಅಲ್ಲಾಹನ ಮಹಿಮೆಯನ್ನು ಎತ್ತಿ ಹೇಳಿದರು. ಮರುದಿನ ಅವರಿಗೆ ದೃಷ್ಟಿಯು ವಾಪಸ್ಸು ಸಿಕ್ಕಿತು, ಅದನ್ನು ಕಂಡ ಶತ್ರುಗಳು ಇದು ವಾಮಾಚಾರ ಎಂದು ಆರೋಪಿಸಿದರು. ಕೊನೆಗೆ ಅವರನ್ನೂ ಕೂಡ ಅಬೂಬಕ್ಕರ್'ರವರೇ ◌ؓ ಖರೀದಿಸಿ ಸ್ವಾತಂತ್ರ್ಯಗೊಳಿಸಿದರು. 

   ಅವರ ಜೊತೆಯಲ್ಲಿ ಉಮ್ಮು ಉನೈಸ್, ನಹ್'ದಿಯ, ನಹ್'ದಿಯರ ಮಗಳು, ಉಮ್ಮು ಬಿಲಾಲ್, ಹಮಾಮ, ಎನ್ನುವ ಇತರ ಯುವತಿಗಳನ್ನೂ ಅಬೂಬಕ್ಕರ್'ರವರೇ ◌ؓ ವಿಮೋಚಿಸಿದರು. ಇವರಲ್ಲಿ ಬಹಳಷ್ಟು ಜನರು ಚಿತ್ರಹಿಂಸೆ ಅನುಭವಿಸುವುದು ಅಬೂಬಕ್ಕರ್'ರವರ ◌ؓ ಕಣ್ಣಿಗೆ ಕಂಡಾಗ, ಅವರನ್ನು ಖರೀದಿಸಿ ಸ್ವತಂತ್ರ್ಯ ನೀಡಿದಾಗಿತ್ತು. ದುರ್ಬಲರಾದ ಬಡ ಸೇವಕರನ್ನು ಖರೀದಿಸಿ ಸ್ವತಂತ್ರ್ಯ ನೀಡುವುದನ್ನು ಕಂಡ ಅಬೂಬಕ್ಕರ್'ರವರ ತಂದೆಯಾದ ಅಬೂಖುಹಾಫರು ಮಗನನ್ನು ಕರೆದು, ಈ ರೀತಿ ದುರ್ಬಲರಾದ ವ್ಯಕ್ತಿಗಳನ್ನು ಹೀಗೆ ಸ್ವತಂತ್ರ್ಯ ನೀಡಿ ಏನು ಲಾಭ.? ಸ್ವಲ್ಪವಾದ್ರೂ ಶಕ್ತಿಶಾಲಿ ವ್ಯಕ್ತಿಗಳನ್ನು ಮೋಚನೆ ನೀಡುವುದರಿಂದ ನಿನಗೆ ಸ್ವಲ್ಪ ಉಪಯೋಗಕ್ಕಾದ್ರು ಬರುತಿದ್ರು ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್'ರವರು ◌ؓ ನಾನು ಈ ಬಡವರಿಗೆ ವಿಮೋಚನೆ ನೀಡುತ್ತಿರುವುದು ನನ್ನ ವೆಯ್ಯುಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ಅಲ್ಲಾಹನ ತೃಪ್ತಿಗಾಗಿ ಮಾತ್ರವಾಗಿದೆ ಎಂದು ಹೇಳಿದರು. ಈ ಒಳ್ಳೆಯ ಕಾರ್ಯವನ್ನು ಅಭಿನಂದಿಸುವ ಸಲುವಾಗಿ ಆಗಿತ್ತು, ಖುರ್'ಆನಿನ ಅಲ್ ಲೈಲ್ ಅಧ್ಯಾಯದ ಐದರ ನಂತರದ ಸೂಕ್ತವು ಅವತರಿಸಿದ್ದು. 

   ಮಕ್ಕಾದಲ್ಲಿ ವಿಶ್ವಾಸಿಗಳ ಪರಿಸ್ಥಿತಿಯು ಬಹಳ ಹೀನಾಯವಾಗಿತ್ತು. ಎಲ್ಲೇ ಹೋದರು ಚಿತ್ರಹಿಂಸೆಗಳ ಸರಮಾಲೆಯಾಗಿತ್ತು. ಇದನ್ನು ಕಂಡ ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರವಾಗಿತ್ತು. ಪರಿಹಾರಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಅನುಯಾಯಿಗಳನ್ನು ಕರೆದು, ನೀವು ಯುಟೋಪಿಯ ನಗರಕ್ಕೆ ಹೋಗಿರಿ. ಅಲ್ಲಿನ ರಾಜನಾದ ನಜ್ಜಾಶ್ ನೀತಿವಂತನಾಗಿರುವರು. ಅಲ್ಲಿ ಯಾರು ಕೂಡ ತೊಂದರೆ ನೀಡಲು ಬರಲಾರರು, ಅಲ್ಲಾಹನು ಒಂದು ಪರಿಹಾರ ನೀಡುವವವರೆಗೂ ನೀವು ಅಲ್ಲಿಯೇ ವಾಸವಾಗಿರಿ ಎಂದು ಹೇಳಿದರು.

    ಇದು ಇಸ್ಲಾಮಿನ ಇತಿಹಾಸದಲ್ಲಿ ಮೊದಲ ಪಲಾಯನವಾಗಿತ್ತು. ಹಿಜ್'ರ ಐದನೇ ವರ್ಷದ ರಜಬ್ ತಿಂಗಳಲ್ಲಾಗಿತ್ತು ಪಲಾಯನ ಮಾಡಿದ್ದು. ಹನ್ನೆರಡು ಪುರುಷರು ಹಾಗೂ, ನಾಲ್ಕು ಮಹಿಳೆಯರಾಗಿತ್ತು ಯುಟೋಪಿಯಕ್ಕೆ ತೆರಳಿದ್ದು. 
    ಅವರ ಹೆಸರುಗಳು ಈ ಕೆಳಗಿನಂತಿದೆ. 

1. ಉಸ್ಮಾನ್ ಬಿನ್ ಅಫ್ಫಾನ್ ◌ؓ 
2. ಅವರ ಪತ್ನಿ ರುಖಿಯ ◌ؓ (ಪ್ರವಾದಿಯವರ ಮಗಳು)
3. ಅಬೂಹುದೈಫ ಬಿನ್ ಉತ್'ಬ ◌ؓ 
4. ಅವರ ಪತ್ನಿ ಸಹ್'ಲ ಬಿಂತ್ ಸುಹೈಲ್ ◌ؓ
5. ಝುಬೈರ್ ಬಿನ್ ಅಲ್ ಅವ್ವಾಮ್ ◌ؓ 
6. ಮಿಸ್'ಅಬ್ ಬಿನ್ ಉಮೈರ್ ◌ؓ
7. ಅಬ್ದುಲ್ ರಹ್ಮಾನ್ ಬಿನ್ ಔಫ್ ◌ؓ
8. ಉಸ್ಮಾನ್ ಬಿನ್ ಮಳ್'ಗೂನ್ ◌ؓ
9. ಅಬೂಸಬ್'ರ ಬಿನ್ ಅಬೂರಹಂ ◌ؓ
10. ಹತ್ವಾಬ್ ಬಿನ್ ಅಂರ್ ◌ؓ
11. ಸುಹೈಲ್ ಬಿನ್ ಬೈಳಾ ◌ؓ
12. ಅಬ್ದುಲ್ಲಾಹ್ ಬಿನ್ ಮಸ್'ವೂದ್ ◌ؓ
13. ಅಬೂಸಲಮ ಬಿನ್ ಅಬ್ದುಲ್ ಅಸದ್ ◌ؓ
14. ಅವರ ಪತ್ನಿ ಉಮ್ಮು ಸಲಮ ಬಿಂತ್ ಅಬೀಉಮಯಃ ◌ؓ
15. ಆಮಿರ್ ಬಿಂತ್ ರಬೀಅಃ ◌ؓ
16. ಅವರ ಪತ್ನಿ ಲೈಲಾ ಬಿಂತ್ ಅಬೀ ಹಸ್'ಮಃ ◌ؓ ಎನ್ನುವವರು ಆಗಿದ್ದರು.

     ಅಬೂಹಸ್'ಮರ ಮಗಳಾದ ಲೈಲಾರವರು ◌ؓ ಹೇಳುವುದು ಕಾಣಬಹುದು. ನಾವು ಇಸ್ಲಾಮ್ ಸ್ವೀಕರಿಸಿದಾಗ ನಮ್ಮ ಮೇಲೆ ಬಹಳಷ್ಟು ಶತ್ರುತ್ವ ತೋರಿಸಿದ್ದು ಉಮರ್ ಆಗಿದ್ದರು. ನಾವು ಯುಟೋಪಿಯಕ್ಕೆ ಹೊರಡುವ ಸಂದರ್ಭದಲ್ಲಿ, ಒಂಟೆಯ ಮೇಲೆ ಕುಳಿತಿದ್ದ ನನ್ನ ಬಳಿ ಬಂದು, ಇದು ನೀವು ಎಲ್ಲಿಗೆ ಹೋಗುವುದು.? ಉಮ್ಮು ಅಬ್ದುಲ್ಲಾಹ್ ಎಂದು ಕೇಳಿದರು. ಅದಕ್ಕೆ, ನಾವು ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕಾಗಿ ನೀವುಗಳು ಸೇರಿ ನಮಗೆ ಬಹಳಷ್ಟು ತೊಂದರೆ ನೀಡುತ್ತಿದ್ದೀರಿ, ಹಾಗಾಗಿ ಯಾವುದೇ ತೊಂದರೆಯಿಲ್ಲದ ಸುರಕ್ಷಿತ ಸ್ಥಳವನ್ನು ಹುಡುಕಿ ಹೋಗುತ್ತಿದ್ದೇವೆ ಎಂದು ಹೇಳಿದೆನು. ಅದಕ್ಕೆ ಉಮರ್ ಅಲ್ಲಾಹು ನಿಮಗೆ ಸಹಾಯ ಮಾಡಲಿ ಎಂದು ಹೇಳಿದರು. ನಾನು ಆ ವಿಷಯವನ್ನು ನನ್ನ ಪತಿಯಲ್ಲಿ ಹೇಳುತ್ತಾ, ಉಮರಿನ ವರ್ತನೆಯಲ್ಲಿ ಏನೋ ಬದಲಾವಣೆ ಎದ್ದು ಕಾಣುತ್ತಿದೆ ಅಲ್ಲವೇ.? ಎಂದು ಹೇಳಿದೆನು. ಅದಕ್ಕೆ ನನ್ನ ಪತಿಯು, ನಿನಗೆ ಅನಿಸುತ್ತಾ ಉಮರ್ ಇಸ್ಲಾಮ್ ಸ್ವೀಕರಿಸಬಹುದು ಎಂದು.? ಬಹುಶಃ ಉಮರಿನ ಕತ್ತೆ ಇಸ್ಲಾಮ್ ಸ್ವೀಕರಿಸಿದರೂ ಉಮರ್ ಮಾತ್ರ ಇಸ್ಲಾಮ್ ಸ್ವೀಕರಿಲಿಕ್ಕಿಲ್ಲ.! ಎಂದು ಹೇಳಿದರು. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: