ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇದು ಕೇವಲ ಆಮೀರ್ ಬಿನ್ ರಬೀಅರ ಅಭಿಪ್ರಾಯ ಮಾತ್ರವಾಗಿರಲಿಲ್ಲ, ಉಮರನ್ನು ಹತ್ತಿರದಿಂದ ತಿಳಿದ ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು. ಆದರೆ ಸತ್ಯವಿಶ್ವಾಸಿಗಳ ಯುಟೋಪಿಯಕ್ಕೆ ಹೊರಟಿದ್ದ ಯಾತ್ರೆಯ ನಂತರ ಉಮರ್ ಬಿನ್ ಖತ್ವಾಬ್'ರವರು ◌ؓ ಇಸ್ಲಾಮ್ ಸ್ವೀಕರಿಸಿದ ದೃಶ್ಯಕ್ಕೆ ಮಕ್ಕಾ ನಗರವು ಸಾಕ್ಷಿಯಾಯಿತು.
ಇಸ್ಲಾಮ್ ಸ್ವೀಕರಿಸಿದವರಲ್ಲಿ ನಲ್ವತ್ತನೆ ವ್ಯಕ್ತಿಯಾಗಿದ್ದರು ಉಮರ್ ◌ؓ. ಅಥವಾ ನಲ್ವತ್ತನೆ ಪುರುಷನಾಗಿದ್ದರು, ಅಥವಾ ಪ್ರಮುಖ ವ್ಯಕ್ತಿ ಎನ್ನುವ ಅಭಿಪ್ರಾಯವು ಇದೆ.
ಉಮರ್'ರವರು ◌ؓ ಇಸ್ಲಾಮ್ ಸ್ವೀಕರಿಸಿದ ಕುರಿತು, ಬಹಳಷ್ಟು ವಿಭಿನ್ನವಾದ ಅಭಿಪ್ರಾಯಗಳು ಕಾಣಬಹುದು. ಖುದ್ದಾಗಿ ಉಮರ್'ರವರೇ ◌ؓ ಹೇಳುವ ಒಂದು ಅಭಿಪ್ರಾಯವು ಈ ರೀತಿಯಾಗಿದೆ. ಉಮರ್'ರವರು ◌ؓ ತನ್ನ ಸೇವಕನಾದ ಅಸ್'ಲಮ್'ರಲ್ಲಿ ನಾನು ಇಸ್ಲಾಮ್ ಸ್ವೀಕರಿಸಿರುವುದರ ಬಗ್ಗೆ ತಿಳಿಸುತ್ತೇನೆ ಕೇಳು ಎಂದು ಹೇಳಿದಾಗ, ಸರಿ ನೀವು ಹೇಳಿ ಎಂದು ಉತ್ತರಿಸಿದರು. ಒಂದು ದಿನ ಅಬೂಜಹಲ್, ಶೈಬತ್ ಹಾಗೂ ಇತರ ಜನರು ಒಟ್ಟಿಗೆ ಕುಳಿತು ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅಬೂಜಹಲ್ ಖುರೈಷಿಗಳನ್ನು ಕರೆದು, ಓ ಖುರೈಷಿಗಳೇ, ಮುಹಮ್ಮದ್ ﷺ ನಿಮ್ಮ ದೇವರುಗಳನ್ನು ವಿರೋಧಿಸುತ್ತಿದ್ದಾರೆ. ಸಹಿಷ್ಣುತೆಗಳಿಗೆ ಬೆಲೆಯೇ ನೀಡದೆ, ನಿಮ್ಮ ಪೂರ್ವಿಕರು ನರಕಲ್ಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ಹಾಗಾಗಿ ಆ ಮುಹಮ್ಮದ್'ರನ್ನು ﷺ ಯಾರಾದರೂ ಕೊಲೆ ಮಾಡಿದರೆ, ಅವರಿಗೆ ಕಪ್ಪು ಹಾಗೂ ಬಿಳಿ ಬಣ್ಣದ ನೂರು ಒಂಟೆಯನ್ನು, ಹಾಗೂ ಸಾವಿರ ಉಖಿಯ ಬೆಳ್ಳಿಯನ್ನು ಕೂಡ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದನು. ಅದನ್ನು ಕೇಳಿದ ನಾನು ಬಿಲ್ಲು ಬಾಣದ ಜೊತೆಯಲ್ಲಿ, ಹರಿತವಿರುವ ಖಡ್ಗವನ್ನು ಹಿಡಿದು ಅಲ್ಲಿಂದ ಹೊರೆಟೆನು. ದಾರಿ ಮಧ್ಯದಲ್ಲಿ ಕೆಲವು ಜನರು ಒಂದು ಪ್ರಾಣಿಯನ್ನು ಖುರ್ಬಾನಿ ಮಾಡಲು ತಯಾರಿ ಮಾಡುತಿದ್ದರು, ನಾನದನ್ನೇ ನೋಡುತ್ತಾ ನಿಂತಿದ್ದೆನು. ಅಷ್ಟೊತ್ತಿಗೆ ಅಲ್ಲಾಹನ ಬಳಿ ಆಹ್ವಾನಿಸುವ ಪುಣ್ಯ ಪುರುಷನ ಆಗಮನವಾಗಿದೆ ಎಂದು ಯಾರೋ ಒಬ್ಬರು ಹೇಳಿದ್ದು ಕೇಳಲು ಸಾಧ್ಯವಾಯಿತು. ಅದನ್ನು ಕೇಳಿದ ನನಗೆ ಇದು ನನ್ನನ್ನು ಉದ್ದೇಶಿಸಿ ಹೇಳಿದ ಹಾಗೆ ಇದೆಯಲ್ವಾ.? ಎಂದು ಅಂದುಕೊಳ್ಳುತ್ತಾ ಅಲ್ಲಿಂದ ಮುಂದೆ ನಡೆದನು. ಸ್ವಲ್ಪ ದೂರ ಹೋದಾಗ ಅಲ್ಲಿದ್ದ, ಮೇಕೆಗಳ ಗುಂಪಿನ ನಡುವೆ ಒಂದು ಕವಿತೆಯು ಕೇಳಲು ಸಾಧ್ಯವಾಯಿತು. ಅದರ ಅರ್ಥ ಏಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ಉದಾಸೀನತೆ ತೋರಿಸದೆ ಇಸ್ಲಾಮಿಗೆ ಬನ್ನಿರಿ ಎಂದಾಗಿತ್ತು. ಅದನ್ನು ಕೇಳಿದಾಗಲೂ ನನಗೆ ಪುನಃ ಅನಿಸಿದ್ದು ಇದು ನನ್ನನ್ನೇ ಉದ್ದೇಶಿಸಿ ಹೇಳಿದ ಹಾಗೆ ಕಾಣುತ್ತಿದೆ ಅಲ್ವಾ ಎಂದು.
ಇನ್ನೊಂದು ಉಲ್ಲೇಖದ ಪ್ರಕಾರ, ಉಮರ್'ರವರು ◌ؓ ಹರಿತವಾದ ಖಡ್ಗವನ್ನು ಹಿಡಿದು ಮುಂದೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ, ದಾರಿಯಲ್ಲಿ ನುಐಂ ಬಿನ್ ಅಬ್ದಿಲ್ಲಾಹ್ ಅನ್'ಹಾಂ'ರವರನ್ನು ಕಾಣಲು ಸಾಧ್ಯವಾಯಿತು. ಅವರು ಇಸ್ಲಾಮ್ ಸ್ವೀಕರಿಸಿದ್ದ ವ್ಯಕ್ತಿಯಾಗಿದ್ದರು. ಉಮರ್'ರವರನ್ನು ◌ؓ ಕಂಡಾಗ, ಎಲ್ಲಿಗೆ ಹೋಗುತ್ತಿದ್ದೀರ ಎಂದು ಕೇಳಿದರು. ಅದಕ್ಕೆ ಉಮರ್'ರವರು ◌ؓ ನಾನು ಆ 'ಸಿಬಾಯಿ' ಅಥವಾ ಪ್ರವಾದಿಯವರನ್ನು ﷺ ಹುಡುಕಿ, ನಮ್ಮ ದೇವರನ್ನು ವಿರೋಧಿಸುವ ಅವರನ್ನು ಕೊಲೆ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ನುಐಂ, ನೀವು ನಿಮ್ಮನ್ನೇ ವಂಚಿಸಲು ಆಗಿದೆ ಹೋಗುತ್ತಿರುವುದು. ಬಹುಶಃ ನೀವು ಅವರನ್ನು ಸಾಯಿಸಿದರೆ, ಅಬ್ದುಮಾನಾಫಿನ ಕುಟುಂಬವು ನಿಮ್ಮನ್ನು ಈ ಭೂಮಿಯಲ್ಲಿ ಶಾಂತಿಯಿಂದ ಇರಲು ಬಿಡುವರೆಂದು ಆಲೋಚಿಸಿದ್ದೀರ.? ಅದು ಬಿಡಿ ನೀವು ನಿಮ್ಮ ಸ್ವಂತ ಮನೆಯ ವಿಷಯವನ್ನು ಸರಿ ಮಾಡುದಿಲ್ವಾ.? ಎಂದು ಹೇಳಿದರು. ಅದಕ್ಕೆ ಉಮರ್, ಏನು ನನ್ನ ಮನೆಯಲ್ಲಾ.?ಎಂದು ಪುನಃ ಅವರಲ್ಲೇ ಕೇಳಿದಾಗ, ಹೌದು ನಿಮ್ಮ ಮಾವನ ಮಗನಾದ, ನಿಮ್ಮ ಬಾವ ಸಯೀದ್ ಬಿನ್ ಝೈದ್ ಹಾಗೂ ನಿಮ್ಮ ಸಹೋದರಿ ಫಾತಿಮ ಕೂಡ ಇಸ್ಲಾಮ್ ಸ್ವೀಕರಿಸಿದ್ದಾರೆ, ಮೊದಲು ಅವರನ್ನು ಸರಿ ಮಾಡಿ, ಆಮೇಲೆ ಬೇಕಾದರೆ ಬೇರೆ ನೋಡಿ ಎಂದು ಹೇಳಿದರು. ನುಐಂ ಹೀಗೆ ಯಾಕೆ ಹೇಳಿದ್ದೆಂದರೆ, ಪ್ರವಾದಿಯವರಿಗೆ ﷺ ಏನು ಮಾಡದೆ ಬಿಟ್ಟು ಬಿಡಲಿ ಎನ್ನುವ ಉದ್ದೇಶದಿಂದಾಗಿತ್ತು. ಅದನ್ನು ಕೇಳಿದ ತಕ್ಷಣವೇ ಉಮರ್ ತನ್ನ ಸಹೋದರಿ ಫಾತಿಮರ ಮನೆ ಕಡೆ ಹೊರಟರು.
ಅಂದು ಪ್ರವಾದಿಯವರು, ﷺ ಬಡವರು ಯಾರಾದರೂ ಇಸ್ಲಾಮ್ ಸ್ವೀಕರಿಸಿದರೇ, ಸ್ವಲ್ಪ ಶ್ರೀಮಂತರ ಬಳಿ ರಹಸ್ಯವಾಗಿ ಕಳಿಸಿ ಅವರ ಆಶ್ರಯದಲ್ಲಿ ಉಳಿದುಕೊಳ್ಳವ ವ್ಯವಸ್ಥೆ ಮಾಡುತಿದ್ದರು. ಇದು ಅವತ್ತಿನ ಒಂದು ಪದ್ಧತಿಯಾಗಿತ್ತು, ಅದೇ ರೀತಿ ಸಈದ್'ರವರಿಗೆ ◌ؓ ಇಬ್ಬರು ಸತ್ಯ ವಿಶ್ವಾಸಿಗಳ ಜವಾಬ್ದಾರಿ ನೀಡಲಾಗಿತ್ತು, ಅದರಲ್ಲಿ ಒಬ್ಬರಾಗಿದ್ದರು, ಖಬ್ಬಾಬ್ ಬಿನ್ ಅಲ್ ಅರತ್ ◌ؓಎನ್ನುವ ವ್ಯಕ್ತಿಯಾಗಿದ್ದರು.
ಉಮರ್ ಕೆಂಡದಂತಾಹ, ಮುಖದೊಂದಿಗೆ ತನ್ನ ಸಹೋದರಿಯ ಮನೆ ಕಡೆ ಹೊರಟರು. ಅಲ್ಲಿ ಅವರ ಸಹೋದರಿ ಫಾತಿಮ ಒಳಗೆ ಕುಳಿತು ಖುರ್'ಆನ್ ಪಠಿಸುತ್ತಿದ್ದರು. ತಕ್ಷಣವೇ ಮನೆಯ ಬಾಗಿಲು ತೆರೆಯಿತು, ಅದನ್ನು ಕಂಡ ತಕ್ಷಣವೇ ಖಬ್ಬಾಬ್ ◌ؓ ಎಲ್ಲೋ ಅಡಗಿ ಕುಳಿತುಕೊಂಡರು. ಖುರ್'ಆನಿನ ತ್ವಹಾ ಅಧ್ಯಾಯವನ್ನು ಬರೆದಿದ್ದ ಆ ಫಲಕವನ್ನು ಫಾತಿಮ ಅಡಗಿಸಿ ಇಟ್ಟರು. ಒಳಗೆ ಬಂದ ಉಮರ್, ನಾನು ಈ ಕೇಳಿದ ಮಂತ್ರ ಯಾವುದು.? ಏನದು ಎಂದು ಕೇಳಿದರು. ಅದಕ್ಕೆ ಅವರು ಗಾಬರಿಯಿಂದ ಏನು.? ನೀವು ಕೇಳಿದ್ದ ಅಂತದ್ದು ಏನು ಇಲ್ಲವಲ್ಲ ಎಂದು ಹೇಳಿದರು. ಅದಕ್ಕೆ ಉಮರ್, ಏನು.! ಏನು ಇಲ್ವಾ.? ನೀವಿಬ್ಬರೂ ಮುಹಮ್ಮದ್'ರ ﷺ ಅನುಯಾಯಿಯಾದದ್ದು ನನಗೆ ಆಗಲೇ ತಿಳಿದಿದೆ ಎಂದು ಹೇಳುತ್ತಾ, ಸಈದನ್ನು ◌ؓ ಹೋಗಿ ಹಿಡಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment