ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಉಮರ್'ರವರಿಗೆ ◌ؓ ಇಸ್ಲಾಮಿನ ಕುರಿತು ಬಗ್ಗೆ, ಒಲವು ಮೂಡಿದ ವಿಷಯನ್ನು ಸ್ವತಃ ಉಮರ್ ◌ؓ ವಿವರಿಸುವುದು ಕಾಣಬಹುದು. ನಾನು ಅಜ್ಞಾನದ ಕಾಲದಲ್ಲಿ ಮದ್ಯಕ್ಕೆ ದಾಸನಾಗಿದ್ದೆ, ಕುಡಿಯುವುದು, ಅದನ್ನು ಇನ್ನೊಬ್ಬರಿಗೆ ನೀಡುವುದು ಎಲ್ಲವನ್ನೂ ಮಾಡುತ್ತಿದ್ದೆ. ಆಲು ಉಮರಿನ ಮನೆಯ ಪಕ್ಕದ, ಹಸವ್ವರ ಎನ್ನುವ ಭಾಗದಲ್ಲಿ ನಾವೆಲ್ಲರೂ ಒಟ್ಟಿಗೆ ಸೇರುವ ಸ್ಥಳವಿತ್ತು. ಒಂದು ದಿನ, ರಾತ್ರಿ ನಾನಲ್ಲಿಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿಂದ ಮದ್ಯ ಮಾರಾಟ ಮಾಡುವ ವ್ಯಕ್ತಿ ಬಳಿ ಇರಬಹುದೇನೋ ಎಂದು ಅಲ್ಲಿಗೆ ಹೊರಟೆ, ಆದರೆ ಅಲ್ಲಿ ಮದ್ಯ ಮಾರಾಟ ಮಾಡುವ ವ್ಯಕ್ತಿಯೇ ಇರಲಿಲ್ಲ. ಇನ್ನೆಲ್ಲಿ ಹೋಗುವುದು ಎಂದು ಆಲೋಚಿಸಿ, ಕಅಬಾಲಯದ ಪರಿಸರಕ್ಕೂ ಬಂದು ನೋಡಿದನು, ಆದರೆ ಅಲ್ಲಿಯೂ ಯಾರೂ ಇರಲಿಲ್ಲ.
ಹೀಗೆ ಮಸ್ಜಿದ್'ಗೆ ತಲುಪಿದೆನು. ಅಲ್ಲಿ ಮುಹಮ್ಮದ್'ರು ﷺ ನಮಾಝ್ ಮಾಡ್ತಿದ್ರು. ಪ್ರವಾದಿಯವರು ﷺ ನಮಾಝ್ ಮಾಡುವಾಗ ಶಾಮಿನ ಭಾಗಕ್ಕೆ ತಿರುಗಿ ನಿಂತಿದ್ದರು. ಹೀಗೆ ಶಾಮಿನ ಭಾಗಕ್ಕೆ ತಿರುಗಿ ನಿಂತಾಗ ಪ್ರವಾದಿಯವರ ﷺ ನಡುವೆ ಕಅಬಾಲಯ ಇರುತ್ತಿತ್ತು. ಅಥವಾ ಕಅಬಾದ ಅಸ್'ವದ್ ಮೂಲೆ ಹಾಗೂ ಯಮಾನಿ ಮೂಲೆಯ ನಡುವೆ ನಿಂತಾಗಿತ್ತು ನಮಾಝ್ ಮಾಡುತ್ತಿದ್ದದ್ದು. ಪ್ರವಾದಿಯವರು ﷺ ನಮಾಝ್ ಮಾಡುವುದನ್ನು ಕಂಡಾಗ, ಇವತ್ತು ರಾತ್ರಿ ಮುಹಮ್ಮದ್'ರನ್ನು ﷺ ಒಮ್ಮೆ ವೀಕ್ಷಿಸಿದರೆ ಹೇಗೆ.? ಎಂಬ ಯೋಚನೆ ಬಂತು. ಆದರೆ ಅವರ ಹತ್ತಿರ ಹೋಗುವುದು ಬೇಡ ಕಾರಣ ಬಹುಶಃ ಅವರ ಏಕಾಗ್ರತೆ ತಪ್ಪಬಹುದು ಎಂದು. ಕಅಬಾಲಯದ ಉತ್ತರದಲ್ಲಿರುವ ಹಿಜ್'ರಿನ ಭಾಗದಲ್ಲಿದ್ದ ಪರದೆಯ ಹಿಂದೆ ಹೊದೆನು. ಮೆಲ್ಲ ಮೆಲ್ಲನೆ ಪ್ರವಾದಿಯವರು ﷺ ಹತ್ತಿರ ಬಂದೆನು, ನನ್ನ ಹಾಗೂ ಪ್ರವಾದಿಯವರು ﷺ ನಡುವೆ ಇದ್ದದ್ದು ಕೇವಲ ಪರದೆ ಮಾತ್ರವಾಗಿತ್ತು. ಪ್ರವಾದಿಯವರ ﷺ ಕುರ್'ಆನ್ ಪಠನೆಯನ್ನು ಶ್ರದ್ಧೆಯಿಂದ ಕೇಳುತಿದ್ದೆನು. ಅದು ನನ್ನನ್ನು ಬಹಳಷ್ಟು ಆಕರ್ಷಣೆ ಗೊಳಿಸಿತು. ಅದನ್ನು ಕೇಳುತ್ತಿದ್ದಾಗ ನಾನರಿಯದೆ ಕಂಬನಿ ಜಾರಿ ಬೀಳುತ್ತಿತ್ತು. ನನ್ನ ಹೃದಯಕ್ಕೆ ಇಸ್ಲಾಮಿನ ಪ್ರಕಾಶವು ಹತ್ತಿ ಬಂದಿತು. ಪ್ರವಾದಿಯವರ ﷺ ನಮಾಝ್ ಮುಗಿಯುವವರೆಗೂ ನಾನಲ್ಲೇ ಕುಳಿತು ನೋಡುತ್ತಿದ್ದೆನು. ಅವರು ನಮಾಝ್ ಮುಗಿಸಿ ಹಿಂತಿರುಗಿ ಹೋಗುವಾಗ, ನಾನು ಕೂಡ ಅವರನ್ನೇ ಹಿಂಬಾಲಿಸಿ ಹೋದೆನು. ದಾರುಲ್ ಅಬ್ಬಾಸ್ ಹಾಗೂ ದಾರುಲ್ ಬಿನ್ ಅಝ್'ಹರ್'ರವರ ಮನೆಯ ನಡುವೆ, ನಾನು ಪ್ರವಾದಿಯವರ ﷺ ಬಳಿ ಬಂದು ತಲುಪಿದೆನು. ನನ್ನನ್ನು ಗುರುತಿಸಿ, ಬಹುಶಃ ತೊಂದರೆ ನೀಡಲು ಬಂದದ್ದು ಆಗಿರಬಹುದು ಎಂದು, ಅಂದುಕೊಂಡು ನನ್ನನ್ನು ಗದರಿಸಲು ಮುಂದಾದರು. ನಂತರ ಓ ಖತ್ತಾಬಿನ ಮಗನೇ ಯಾಕೆ ಈ ರಾತ್ರಿ ಇಲ್ಲಿಗೆ ಬಂದದ್ದು.? ಎಂದು ಕೇಳಿದರು. ಅದಕ್ಕೆ ನಾನು ಅಲ್ಲಾಹನನ್ನೂ, ಅವನ ಪ್ರವಾದಿಯವರನ್ನು ﷺ ಅಂಗೀಕರಿಸಲು ಬಂದಿದ್ದೇನೆ, ಎಂದು ಹೇಳಿದೆನು. ಅದನ್ನು ಕೇಳಿ ಪ್ರವಾದಿಯವರು ﷺ ಅಲ್ಲಾಹನನ್ನು ಸ್ತುತಿಸಿ, ನಿಮಗೆ ಅಲ್ಲಾಹನು ಒಳಿತು ನೀಡಲಿ ಎಂದು ಹೇಳಿ, ನನ್ನ ಎದೆ ಮೇಲೆ ಕೈ ಇಟ್ಟು ಪ್ರಾರ್ಥಿಸಿದರು. ಆಮೇಲೆ ಅವರು ಅಲ್ಲಿಂದ ಮನೆಗೆ ಹೋದರು.
ಈ ಘಟನೆ ಹಿಂದೆ ನಡೆದಿಯಿತು, ಎನ್ನುವ ಕಾರಣಕ್ಕೆ ಈ ಹಿಂದೆ ತಿಳಿಸಿದ ಉಲ್ಲೇಖಕ್ಕೆ ಇದು ವಿರುದ್ಧವಾಗುವುದಿಲ್ಲ. ಕಾರಣ ಈ ಹಿಂದಿನ ಒಂದು ಅನುಭವದ ನಂತರ, ಬಹುಶಃ ಅವರ ಮನಸ್ಸಿನಲ್ಲಿ ಬದಲಾವಣೆ ಬಂದಿರಬಹುದು, ಅಥವಾ ವಶೀಕರಣ ಮಾಡಿಯೂ ಇರಬಹುದು. ಅಷ್ಟೇ ಅಲ್ಲ ಈ ಹಿಂದೆ ಅಬೂಜಹಲ್ ತೋರಿಸಿದ್ದ ಆಮಿಷದ ಆಸೆಗಾಗಿತ್ತು, ಉಮರ್ ಹರಿತವಾದ ಖಡ್ಗ ಹಿಡಿದು ಬಂದಿದ್ದು. ಅಂದಿನ ಕಾಲದಲ್ಲಿದ್ದ ಯಾವುದೇ ಯುವಕನನ್ನು ಮನ ಹೋಲಿಸಲು ಅಷ್ಟು ಆಮಿಷ ಸಾಕಾಗುತ್ತಿತ್ತು. ಇದೆಲ್ಲವನ್ನೂ ಪರಿಗಣಿಸಿ, ಉಮರ್'ರವರ ಎರಡು ಉಲ್ಲೇಖವನ್ನೂ ಒಟ್ಟಿಗೆ ಸೇರಿಸಿ ನಾವು ಹೀಗೆ ಅರ್ಥ ಮಾಡಬಹುದು.
ಉಮರ್'ರವರಿಗೆ ◌ؓ ಇಸ್ಲಾಮಿನ ಮೇಲೆ ಮೂಡಿದ ಒಲವಿನ ಬಗ್ಗೆ ಹೇಳುವುದಾದರೆ, ಅವರ ಮನಸ್ಸಿನಲ್ಲಿ ತಾನಾಗಿಯೇ ಇಸ್ಲಾಮಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು, ಅದರ ಬಗ್ಗೆ ಅವರೇ ಹೇಳುವ ಕವಿತೆಯೂ ಈ ರೀತಿಯಾಗಿದೆ.
"ನಿಶ್ಚಯವಾಗಿಯೂ ಹೇಳಲೇಬೇಕಾದ ಸ್ತುತಿಗಳನ್ನು ಜಗದೊಡೆಯನೇ ನಿನಗೆ ತಿಳಿಸುವೆನು.
ವಿಸ್ಮಯ ತುಂಬಿದ್ದ ದೂತರ ಸತ್ಯ ವಚನಗಳನ್ನು ಆರಂಭದಲ್ಲೇ ಸುಳ್ಳೆಂದು ಅಂದುಕೊಂಡಿದ್ದೆವು.
ಖತ್ತಾಬಿನ ಮಗಳಿಗೆ ಹೊಡೆದ ನಂತರ, ಸನ್ಮಾರ್ಗವನ್ನು ಸೃಷ್ಟಿಕರ್ತನು ಅನುಗ್ರಹಿಸಿದನು.
ಶತ್ರುಗಳೂ ಕೂಡ ಹೇಳಿದ್ದರು, ಉಮರ್ ಸಾಬಿಯಿಗಳ ದಾರಿಯಲ್ಲಿ ಸೇರಿಕೊಂಡನು ಎಂದು.
ಶ್ರೇಷ್ಠವಾದ ವಚನವನ್ನು ಅವಳು ಓದಿದ ಕಾರಣಕ್ಕೆ ನಾನು ಹೊಡೆದದ್ದು ಬಹಳಷ್ಟು ಬೇಸರ ತರಿಸುತ್ತಿದೆ ಎನಗೆ.
ಅರ್ಶ್'ನ ಒಡೆಯನಾದ ದೇವನಲ್ಲಿ ಕೇಳಿಕೊಂಡಳು ಅವಳು, ಅಹ್'ಮದ್'ರು ಇಂದು ನಮ್ಮ ಜೊತೆಯಲ್ಲಿರುವರು.
ವಾಸ್ತವವನ್ನು ತಿಳಿಸುವ ಸತ್ಯ ಸಂದೇಶವಾಹಕರು, ಎಚ್ಚರಿಕೆ ನೀಡುವ ನಂಬಿಕಸ್ಥ ನಾಯಕ.."
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment