Abu Hisham Saquafi

Official Website Of Hafiz Ilyas Saquafi Padaladka

Monday, September 12, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -89 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ಕಣಿವೆಯಲ್ಲಿ ದಿನ ನಿತ್ಯದ ಜೀವನವು ಬಹಳ ಕಷ್ಟಕರವಾಗಿತ್ತು, ಆದರೂ ಒಬ್ಬರೇ ಒಬ್ಬ ಸತ್ಯ ವಿಶ್ವಾಸಿಯೂ ಕೂಡ ಹಿಂತಿರುಗುವ ಆಲೋಚನೆಯೂ ಮಾಡಿರಲಿಲ್ಲ. ಎಲ್ಲವನ್ನೂ ತಾಳ್ಮೆಯಿಂದಲೇ ಸಹಿಸಿಕೊಂಡರು. ಹೀಗಿರುವಾಗ ಒಂದು ದಿನ ಪ್ರವಾದಿಯವರು ﷺ, ಅಬೂತ್ವಾಲಿಬರನ್ನು ಕರೆದು, ಖುರೈಷಿಗಳು ನಮ್ಮ ವಿರುದ್ಧವಾಗಿ ಬರೆದಿದ್ದ ಒಪ್ಪಂದ ಪತ್ರವನ್ನು ಗೆದ್ದಲು ತಿಂದಿರುತ್ತದೆ. ಅಲ್ಲಾಹನ ಹೆಸರು ಬಿಟ್ಟು ಬಾಕಿ ಇರುವ ಎಲ್ಲಾ ಭಾಗವು ನಾಶವಾಗಿದೆ. ಎಂದು ಹೇಳಿದಾಗ, ಇದು ನಿಮಗೆ ಹೇಗೆ ಗೊತ್ತಾಯಿತು.? ಈ ವಿಷಯವನ್ನು ನಿಮಗೆ ಅಲ್ಲಾಹನು ತಿಳಿಸಿದ್ದ.? ಎಂದು ಕೇಳಿದರು. ಪ್ರವಾದಿಯವರು ﷺ ಹೌದು ಎಂದು ಉತ್ತರಿಸಿದರು, ಅದಕ್ಕೆ ಅಬೂತ್ವಾಲಿಬರು ನಿಮ್ಮನ್ನು ವಿರೋಧಿಸಲು ಯಾರಿಗಾದರೂ ಸಾಧ್ಯವಿದೆಯೇ ಎಂದು ಹೇಳಿದರು. 

    ಅಬೂತ್ವಾಲಿಬ್ ಒಂದು ಗುಂಪಿನೊಂದಿಗೆ ಖುರೈಷಿಗಳ ಬಳಿ ತೆರಳಿದರು. ಅದನ್ನು ಕಂಡ ಖುರೈಷಿಗಳು, ಬಹುಶಃ ಜನರು ಅಸಹಾಯಕಯಿಂದ ಮುಹಮ್ಮದ್'ರನ್ನು ﷺ ಖುರೈಷಿಗಳಿಗೆ ಬಿಟ್ಟು ಕೊಡಲು ತೀರ್ಮಾನಿಸಿ, ಇಲ್ಲಿಗೆ ಬಂದಿರಬೇಕು ಎಂದು ಅಂದುಕೊಂಡರು. ಅಬೂತ್ವಾಲಿಬ್ ಮಾತುಕತೆ ಆರಂಭಿಸಿ, ನಮ್ಮ ನಡುವೆ ನಡೆದದ್ದೆಲ್ಲಾ ನಡೆಯಿತು. ಇನ್ನು ಅದರ ಬಗ್ಗೆ ಏನು ಹೇಳುವುದಿಲ್ಲ, ನಮ್ಮ ವಿರುದ್ಧ ಬರೆದ ಒಪ್ಪಂದ ಪತ್ರವನ್ನು ಒಮ್ಮೆ ತೆಗಿಯಿರಿ. ನಮ್ಮ ನಡುವೆ ಇರುವ ಎಲ್ಲಾ ಸಮಸ್ಯೆಗಳಿಗೆ ಏನಾದರೂ ಪರಿಹಾರ ಹುಡುಕೋಣ ಎಂದು ಹೇಳಿದರು. ಗೆದ್ದಲು ತಿಂದಿದ್ದ ವಿಷಯವನ್ನು ತಿಳಿಸಿದರೆ ಏನಾದ್ರು ಕುತಂತ್ರ ಬಳಸಿ ಪರ್ಯಾಯ ವ್ಯವಸ್ಥೆ ಮಾಡಿದರೆ ಎಂದು ಅದನ್ನು ಹೇಳದೆ ಮುಚ್ಚಿಟ್ಟಿದ್ದರು. 

    ಖುರೈಷಿಗಳು ಕಅಬಾಲಯದ ಒಳಗಿನಿಂದ ಒಪ್ಪಂದ ಪತ್ರದ ಪಟ್ಟಿಗೆಯನ್ನೇ ಸಭೆಯ ಮುಂದೆ ತಂದು ನಿಲ್ಲಿಸಿ, ಮಾತುಕತೆ ಆರಂಭಿಸಿದರು. ನೀವು ಹೊಸ ವಿಶ್ವಾಸದಿಂದ ಹಿಂತಿರುಗಿ ಬರುವ ಸಮಯವಾಗಿದೆ ಇದು ಎಂದು ಹೇಳಿದಾಗ, ಅಬೂತ್ವಾಲಿಬ್ ಮಾತು ಮುಂದುವರಿಸುತ್ತಾ, ನಾನು ಇಲ್ಲಿ ನಮ್ಮೆಡೆಯಲ್ಲಿ ಮಧ್ಯಸ್ಥಿಕೆ ವಹಿಸುವ ಉದ್ದೇಶದಿಂದಾಗಿದೆ ಬಂದದ್ದು. ಮುಹಮ್ಮದ್ ﷺ ಸುಳ್ಳು ಹೇಳದ ವ್ಯಕ್ತಿ ಅಲ್ಲವೇ.? ಅವರು ಹೇಳುವುದು ಏನೆಂದರೆ.? ನೀವು ಅವರುಗಳ ವಿರುದ್ಧವಾಗಿ ಬರೆದ ಒಪ್ಪಂದ ಪತ್ರದಲ್ಲಿ ಅಲ್ಲಾಹು ಎನ್ನುವ ಹೆಸರು ಬಿಟ್ಟು ಬಾಕಿ ಎಲ್ಲವೂ ಗೆದ್ದಲು ತಿಂದಿರುತ್ತದೆ. ಮುಹಮ್ಮದ್ ﷺ ಹೇಳಿದ ಈ ಮಾತು ಸತ್ಯವಾಗಿದ್ದಲ್ಲಿ, ಖಂಡಿತ ನಾವು ಮುಹಮ್ಮದ್'ರನ್ನು ﷺ ಬಿಟ್ಟುಕೊಡುವುದಿಲ್ಲ. ಇನ್ನು ಅವರು ಹೇಳಿದ್ದು ಸುಳ್ಳಾಗಿದ್ದಲ್ಲಿ ನಾವು ನಿಮಗೆ, ಅವರನ್ನು ಬಿಟ್ಟು ಕೊಡುತ್ತೇವೆ ಎಂದು ಹೇಳಿದಾಗ, ಅವರು ಅದಕ್ಕೆ ಸಮ್ಮತಿಸಿದರು. ಮೂರು ವರ್ಷಗಳ ಹಿಂದೆ ಬರೆದು, ಕಅಬಾಲಯಾದ ಒಳಗೆ ಅಡಗಿಸಿಟ್ಟ ಒಪ್ಪಂದ ಪತ್ರವನ್ನು ಪ್ರವಾದಿಯವರಿಗೆ ﷺ ತಿಳಿಯಲು ಯಾವುದೇ ದಾರಿ ಇಲ್ಲ ಎಂದು, ಬಾರಿ ಆವೇಶದಿಂದ ಪೆಟ್ಟಿಗೆಯನ್ನು ತೆರೆದರು. ಏನಾದ್ಭುತ.! ಪ್ರವಾದಿಯವರು ﷺ ಹೇಳಿದ ಹಾಗೆ, ಅಬೂತ್ವಾಲಿಬ್ ಹೇಳಿದ ವಿಷಯವು ಸತ್ಯವಾಗಿ ನಡೆದಿತ್ತು. 
    ವಾಸ್ತವದಲ್ಲಿ ಇಷ್ಟು ಸಾಕಿತ್ತು ಬುದ್ದಿವಂತರಿಗೆ ಅರ್ಥ ಮಾಡಿಕೊಳ್ಳಲು, ಆದರೆ ಕತ್ತಲ ಮರೆಯಲ್ಲಿ ಮುಲುಗಿದ್ದ ಆ ಅಜ್ಞಾನಿಗಳಿಗೆ ಇದು ಅರ್ಥವಾಗಲಿಲ್ಲ. ಅವರು, ಇದು ನಿಮ್ಮ ತಮ್ಮನ ಮಗನ ವಾಮಾಚಾರವಾಗಿದೆ ಎಂದು ಹೊಸ ಆರೋಪವನ್ನು ಹೊರಿಸಿದರು. 

    ಅದಕ್ಕೆ ತಕ್ಷಣವೇ, ಅಬೂತ್ವಾಲಿಬ್ ಸತ್ಯಾಸತ್ಯತೆ ಎಲ್ಲವೂ ಸ್ಪಷ್ಟವಾಗಿ ತಿಳಿದನಂತರವೂ ನೀವು ಯಾವ ಆಧಾರದಲ್ಲಾಗಿದೆ ವಿರೋಧಿಸುತ್ತಿರುವುದು.? ನಿಜವಾಗಿಯೂ ನೀವೆ ಅಲ್ವಾ.? ಅನ್ಯಾಯ ಅಕ್ರಮಾ ಮಾಡುತ್ತಿರುವುದು ಎಂದು ಕೇಳಿದರು. ನಂತರ ಅಬೂತ್ವಾಲಿಬ್ ಹಾಗೂ ಜೊತೆಯಲ್ಲಿರುವ ಜನರೆಲ್ಲರೂ ಸೇರಿ ಕಅಬಾಲಯದ ಒಳಗೆ ಹೋಗಿ "ಅಲ್ಲಾಹನೆ.. ನಮ್ಮನ್ನು ಬಹಿಷ್ಕರಿಸಿ, ಬಹಳಷ್ಟು ಹಿಂಸೆಗಳನ್ನು ನೀಡಿದವರ ವಿರುದ್ಧ ನಮಗೆ ನೀನು ಸಹಾಯ ನೀಡು" ಎಂದು ಪ್ರಾರ್ಥನೆ ನಡೆಸಿ ಅಲ್ಲಿಂದ ಪುನಃ ಕಣಿವೆಗೆ ಹೊರಟರು.

     ಕಠಿಣವಾದ ಬಹಿಷ್ಕಾರದ ದಿನಗಳು ಕೊನೆಗೊಂಡಿತು. ಆದರೆ ಸಮಸ್ಯೆಗಳು ಅವರನ್ನು ಕಾಡುತ್ತಲೇ ಇತ್ತು. 
   ಇದರ ನಡುವೆ ಯುಟೋಪಿಯಕ್ಕೆ ತೆರಳಿದ್ದ ಮುಸ್ಲಿಮರಿಗೆ, ಮಕ್ಕಾದ ಪರಿಸ್ಥಿತಿಯು ಈಗ ಶಾಂತವಾಗಿದೆ, ಕೆಲವು ಗಣ್ಯ ವ್ಯಕ್ತಿಗಳು ಇಸ್ಲಾಂ ಸ್ವೀಕರಿಸಿದ್ದಾರೆ, ಎನ್ನುವ ವಾರ್ತೆ ಸಿಕ್ಕಿದಾಗ ಕೆಲವು ಜನರು ಮಕ್ಕಾ ನಗರಕ್ಕೆ ಹಿಂತಿರುಗಿ ಬಂದರು. ಊರಿಗೆ ತಲುಪಲು ಒಂದು ಗಂಟೆಯ ದೂರವೇ ಇದ್ದದ್ದು, ಅಲ್ಲಿ ಕಿನಾನ ಜನಾಂಗದ ಯಾತ್ರಿಕರನ್ನು ಭೇಟಿಯಾದರು. ಅವರಲ್ಲಿ ಮಕ್ಕಾದ ಸದ್ಯದ ಪರಿಸ್ಥಿತಿಯ ಕುರಿತು ಕೇಳಿದಾಗ, ಖುರೈಷಿಗಳು ಈಗಲೂ ಕೂಡ ಅದೇ ರೀತಿ ಕ್ರೂರವಾಗಿಯೇ ವರ್ತಿಸುತ್ತಿದ್ದಾರೆ, ಮಕ್ಕಾದ ವಿಶ್ವಾಸಿಗಳ ಜೀವನವು ಬಹಳಷ್ಟು ಕಷ್ಟಕರವಾಗಿದೆ ಎನ್ನುವ ನಿಜಾಂಶ ಮಕ್ಕಾದ ಬಳಿ ಅವರಿಗೆ ತಿಳಿದದ್ದು ಬಹಳಷ್ಟು ಬೇಸರ ತಂದಿತು. ಹೀಗೆ ಅವರಲ್ಲಿ ಕೆಲವರು, ಪರಿಚಯದವರ ಆಶ್ರಯ ಪಡೆದುಕೊಂಡರೆ, ಇನ್ನೂ ಕೆಲವರು ಗುಟ್ಟಾಗಿ ಅವರ ಸಂಬಂಧಿಕರ ಮನೆಗೆ ಹೊರಟರು. ಆದರೆ ಇಬ್'ನು ಮಸ್'ವೂದ್'ರವರು ◌ؓ ಮಾತ್ರ ಯುಟೋಪಿಯಕ್ಕೆ ವಾಪಸ್ಸು ಮರಳಿ ಹೋದರು. ಉಸ್ಮಾನ್ ಬಿನ್ ಮಳ್'ಗೂನ್'ರವರು ◌ؓ ವಲೀದ್ ಬಿನ್ ಮುಗೀರರ ಸಹಾಯದಿಂದ ಮಕ್ಕಾದಲ್ಲೇ ಉಳಿದುಕೊಂಡರು.

    (ಮುಂದುವರಿಯುವುದು...) 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: