Abu Hisham Saquafi

Official Website Of Hafiz Ilyas Saquafi Padaladka

Wednesday, September 14, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -90 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

  ಖುರೈಷಿಗಳು ಇನ್ನೊಬ್ಬರು ಆಶ್ರಯ ನೀಡಿದ ವ್ಯಕ್ತಿಗಳಿಗೆ ತೊಂದರೆ ಕೊಡುತ್ತಿರಲಿಲ್ಲ. ಹಾಗಾಗಿ ಉಸ್ಮಾನ್ ಬಿನ್ ಮಳ್'ಗೂನ್ ◌ؓ ಯಾರ ಭಯವಿಲ್ಲದೆ ಓಡಾಡುತ್ತಿದ್ದರು. ಕೆಲವು ದಿನಗಳ ಬಳಿಕ ಅವರ ಮನಸ್ಸಿನಲ್ಲಿ ಅದೊಂದು ಬೇಸರವಾಗಿ ಕಂಡಿತು. ಕಾರಣ ನನ್ನ ಇತರ ಸ್ವಾಹಾಬಿ ಗೆಳೆಯರು ಇಲ್ಲಿ ತೊಂದರೆ ಅನುಭವಿಸುವಾಗ ನಾನು ಹೇಗೆ ಇನ್ನೊಬ್ಬರ ಆಶ್ರಯದಲ್ಲಿ ಸಂತೋಷದಿಂದ ತಿರುಗಾಡಲಿ. ಎಂದು ಅಂದುಕೊಂಡು, ಅವರು ನೇರವಾಗಿ ವಲೀದ್'ನ ಬಳಿ ತೆರಳಿ, ನಾನು ನಿಮ್ಮ ಆಶ್ರಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದಾಗ, ವಲೀದ್ ಮಗನೇ ಯಾಕೆ ಈ ತೀರ್ಮಾನ ಮಾಡುತ್ತಿದ್ದೀಯ.? ಯಾರಾದರೂ ನಿನಗೆ ತೊಂದರೆ ನೀಡಿದರೆ.? ಎಂದು ಕೇಳಿದರು. ಅದಕ್ಕೆ ಉಸ್ಮಾನ್, ◌ؓ ನಾನು ಇನ್ನುಮುಂದೆ ಅಲ್ಲಾಹನ ಆಶ್ರಯವನ್ನು ಬಯಸುತ್ತಿದ್ದೇನೆ. ಹಾಗಾಗಿ ನೀವು ನನಗೆ ಆಶ್ರಯ ನೀಡಿದ್ದು ಘೋಷಣೆ ಮಾಡಿದ ಹಾಗೆ, ನಿಮ್ಮ ಆಶ್ರಯದಿಂದ ಹಿಂದೆ ಸರಿದದ್ದನ್ನು ಕೂಡ ಘೋಷಣೆ ಮಾಡಿರಿ ಎಂದು ಹೇಳಿದರು. 

     ಅವರಿಬ್ಬರೂ ಮಸ್ಜಿದ್'ಗೆ ತಲುಪಿ, ನಾನು ಉಸ್ಮಾನ್ ಬಿನ್ ಮಳ್'ಗೂನ್'ರವರಿಗೆ ◌ؓ ನೀಡುತ್ತಿದ್ದ ಆಶ್ರಯದಿಂದ ಹಿಂದೆ ಸರಿಯಲು ಅವರೇ ಆಗ್ರಹಿಸುತ್ತಿದ್ದಾರೆ, ಹಾಗಾಗಿ ಇವತ್ತಿನಿಂದ ನಾನು ಅವರಿಗೆ ಆಶ್ರಯ ನೀಡಿತ್ತಿಲ್ಲ ಎಂದು ಜೋರಾಗಿ ಹೇಳಿದರು. ತಕ್ಷಣವೇ ಉಸ್ಮಾನ್ ◌ؓ ಕೂಡ, ಹೌದು ವಲೀದ್ ಹೇಳಿದ್ದು ಸರಿ, ಅವರು ನನ್ನನ್ನು ಅವರ ಆಶ್ರಯದಲ್ಲಿರುವಾಗ ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ನಾನೇ ಖುದ್ದಾಗಿ ಅವರ ಆಶ್ರಯದಿಂದ ಹಿಂದೆ ಸರಿಯುತ್ತಿದ್ದೇನೆ, ನಾನು ಇನ್ನುಮುಂದೆ ಅಲ್ಲಾಹುವಿನ ಆಶ್ರಯವನ್ನು ಬಯಸುತ್ತೇನೆ ಎಂದು ಹೇಳುತ್ತಾ ಖುರೈಷಿಗಳ ಸಭೆಯಿಂದ ಹೊರ ನಡೆದರು. 

    ಅದನ್ನು ನೋಡುತ್ತಾ ನಿಂತಿದ್ದ ವಲೀದ್ ತಕ್ಷಣವೇ ಈ ರೀತಿ ಹಾಡಿದರು. "ಅಲಾ ಕುಲ್ಲು ಶೈಈನ್..."
"ಅಲ್ಲಾಹು ಅಲ್ಲದೆ ಬೇರೆ ಎಲ್ಲವು ನಿರಾರ್ಥಕ" ಎಂದು ಹೇಳಿದಾಗ, ಉಸ್ಮಾನ್ ◌ؓ ಅದುವೇ ಸತ್ಯ! ಎಂದು ಹೇಳಿದರು.
   ಅದಕ್ಕೆ ವಲೀದ್ "ವ ಕುಲ್ಲು ನಈಮಿನ್..." ಎಲ್ಲಾ ಅನುಗ್ರಹವು ನಶಿಸಲ್ಪಡುತ್ತದೆ" ಎಂದು ಹೇಳಿದಾಗ, ತಕ್ಷಣವೇ ಉಸ್ಮಾನ್ ◌ؓ ಇಲ್ಲ "ಸ್ವರ್ಗದ ಅನುಗ್ರಹ ಯಾವತ್ತೂ ನಶಿಸಿ ಹೋಗುವುದಿಲ್ಲ.." ಎಂದು ಹಾಡಿದರು. 

    ಲಬೀದ್ ಮಾತು ಮುಂದುವರಿಸುತ್ತಾ, ಇಷ್ಟು ದಿನ ಉಸ್ಮಾನ್ ◌ؓ ವಲೀದ್'ನ ಸಂರಕ್ಷಣೆಯಲ್ಲಿ ಇದ್ದರು. ಆದರೆ ಇನ್ನುಮುಂದೆ ಅವರಿಗೆ ಏನಾದರೂ ತೊಂದರೆ ಆಗಬಹುದೇ.? ಎಂದು ಕೇಳಿದಾಗ, ತಕ್ಷಣವೇ ಖುರೈಷಿಗಳಲ್ಲಿ ಒಬ್ಬ ವ್ಯಕ್ತಿ ಎಂದು ನಿಂತು, ನಮ್ಮ ಧರ್ಮವನ್ನು ಬಿಟ್ಟು ಹೋದವರನ್ನು ನಾವೇ ಹಾಗೆ ಅಲ್ವಾ.? ಮಾಡುತ್ತಿದ್ದದ್ದು ಎಂದು ಹೇಳಿದರು. ನಂತರ ಆ ವ್ಯಕ್ತಿ ಹಾಗೂ ಉಸ್ಮಾನ್'ರ ◌ؓ ನಡುವೆ ವಾಗ್ವಾದ ನಡೆದು, ಆ ವ್ಯಕ್ತಿ ಉಸ್ಮಾನ್'ರ ಮುಖಕ್ಕೆ ಹೊಡೆದಾಗ, ಅವರು ಕಣ್ಣಿನ ಭಾಗವು ಊದುಕೊಂಡಿತು. ಅದನ್ನು ಕಂಡ ವಲೀದ್, ನೀವು ಈ ನಿಮಿಷದ ತನಕ ನನ್ನ ಆಶ್ರಯದಲ್ಲಿ ಎಷ್ಟು ಸುರಕ್ಷಿತವಾಗಿ ಇದ್ದಿರಿ ಅಲ್ವಾ.? ನೀವೇ ಅಲ್ವಾ ಅದನ್ನ ಬೇಡ ಅಂತ ಹೇಳಿದ್ದು.? ಎಂದು ಹೇಳಿದರು. ಅದಕ್ಕೆ ಉಸ್ಮಾನ್, ನನ್ನ ಇನ್ನೊಂದು ಕಣ್ಣು ಕೂಡ ಈ ರೀತಿಯಾದರೂ ನನಗೆ ಬೇಸರವಿಲ್ಲ, ಕಾರಣ ನಾನು ಆಶ್ರಯ ಆಗ್ರಹಿಸಿದ ಅಲ್ಲಾಹನು ಸರ್ವಶಕ್ತನಾಗಿರುವನು ಎಂದು ಹೇಳಿದರು. ಅದನ್ನು ಕೇಳಿದ ವಲೀದ್, ನೀವು ಒಪ್ಪುದಾದರೆ ನಾನು ಇನ್ನು ಮುಂದೆಯೂ ನಿಮಗೆ ಆಶ್ರಯ ನೀಡುತ್ತೇನೆ ಎಂದು ಹೇಳಿದರು. ಅದಕ್ಕೆ ಉಸ್ಮಾನ್ ಬೇಡ ಎಂದು ಹೇಳಿದರು. 

    ಅಬೂಸಲಮಃ'ರಿಗೆ ◌ؓ ಅಬೂತ್ವಾಲಿಬ್ ಆಶ್ರಯ ನೀಡುದಾಗಿ ಘೋಷಣೆ ಮಾಡಿದರು. ಅದನ್ನು ನೋಡುತ್ತಿದ್ದ ಬನೂಮಖ್'ಸೂಮ್ ಜನಾಂಗದ ವ್ಯಕ್ತಿಯೊಬ್ಬರು, ಅಬೂತ್ವಾಲಿಬರ ಬಳಿ ಬಂದು, ನೀವು ನಿಮ್ಮ ಸಹೋದರನ ಮಗನಾದ ಮುಹಮ್ಮದ್'ರನ್ನು ﷺ ತಡೆದ ಹಾಗೆ, ಯಾಕೆ ಅಬೂಸಲಮಃರನ್ನು ತಡೆಯಲಿಲ್ಲ ಎಂದು ಕೇಳಿದಾಗ, ಅಬೂತ್ವಾಲಿಬ್, ಅವರು ನನ್ನ ಸಹೋದರಿಯ ಮಗನಾಗಿದ್ದಾನೆ, ಅವರು ನನ್ನ ಬಳಿ ಬಂದು ಆಶ್ರಯ ಕೇಳಿದಾಗ, ಹೇಗೆ ನನಗೆ ನೀಡದೆ ಇರಲು ಸಾಧ್ಯ.? ನಾನು ನನ್ನ ಸಹೋದರನ ಮಗನನ್ನು ತಡೆದಿದ್ದರೆ, ಇವರನ್ನು ಕೂಡ ತಡೆಯುತ್ತಿದ್ದೆ, ಆದರೆ ನಾನು ಯಾರನ್ನು ಕೂಡ ತಡೆಯಲಿಲ್ಲ ಎಂದು ಹೇಳಿದರು. ಈ ದೃಶ್ಯವನ್ನು ನೋಡುತ್ತಿದ್ದ ಅಬೂಲಹಬ್ ಬಂದು, ಈ ವಯಸ್ಸಾದ ವ್ಯಕ್ತಿಯನ್ನು (ಅಬೂತ್ವಾಲಿಬ್) ಯಾಕೆ ಯಾವಾಗಲೂ ಜನರ ಮದ್ಯೆಯೆ ನೀವುಗಳು ಪ್ರಶ್ನೆ ಮಾಡುತ್ತೀರಿ.? ನಾನು ಅವರ ಜೊತೆಯಲ್ಲಿ ನಿಂತು, ಅವರ ಉದ್ದೇಶ ಪೂರ್ತಿಯಾಗಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದಾಗ, ಬನೂ ಮಖ್'ಸೂಮ್ ಜನಾಂಗದ ವ್ಯಕ್ತಿ, ಇಲ್ಲ ನಿಮಗೆ ಇಷ್ಟವಿಲ್ಲದ್ದು ಏನು ನಾವು ಯಾವತ್ತೂ ಮಾಡುದಿಲ್ಲ, ಎಂದು ಹೇಳಿ ಅಬೂತ್ವಲೀಬನ್ನು ಬಿಟ್ಟು ಅವರು ಹೋದರು. ಅಬೂಲಹಬಿನ ಈ ಮಧ್ಯಸ್ಥಿಕೆ ಅಬೂತ್ವಾಲಿಬಿಗೆ ಬಹಳಷ್ಟು ಸಂತೋಷ ನೀಡಿತು.

      (ಮುಂದುವರಿಯುವುದು...)


اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: