ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮಕ್ಕಾದಲ್ಲಿ ನಡೆಯುತ್ತಿದ್ದ ಸಮಸ್ಯೆ ಹಾಗೂ ಯುಟೋಪಿಯದಿಂದ ಹಿಂತಿರುಗಿ ಬಂದವರ ದುಃಖಗಳನ್ನು ಕಂಡು ಪ್ರವಾದಿಯವರು ﷺ ಬಹಳಷ್ಟು ಬೇಸರ ಪಟ್ಟಿದ್ದರು. ಹಾಗಾಗಿ ಸಧ್ಯಕ್ಕೆ ಏನಾದರೂ ಒಂದು ಪರಿಹಾರ ಹುಡುಕಲೇ ಬೇಕೆಂದು ಆಲೋಚಿಸಿ, ಹೃದಯವಂತರಾದ ನೇಗಸ್ ರಾಜರ ಬಳಿಯೇ ಮತ್ತೊಂದು ಬಾರಿಯೂ ಕೂಡ ವಿಶ್ವಾಸಿಗಳನ್ನು ಕಳುಹಿಸುವ ತೀರ್ಮಾನಕ್ಕೆ ಬಂದರು. ಹಾಗಾಗಿ ಪುನಃ ಮತ್ತೊಂದು ಸಂಘ ಯೋಟೋಪಿಯ ( ಹಬ್'ಶ) ನಗರಕ್ಕೆ ಯಾತ್ರೆ ಹೊರಡಲು ಸಿದ್ಧರಾದರು. ಎಂಬತ್ಮೂರು ಪುರುಷರು ಹಾಗೂ ಹದಿಮೂರು ಮಹಿಳೆಯರು ಈ ಗುಂಪಿನಲ್ಲಿ ಇದ್ದರು. ಪ್ರವಾದಿಯವರ ﷺ ಅಳಿಯನಾದ ಉಸ್ಮಾನ್'ರವರು ◌ؓ ಪ್ರವಾದಿಯವರ ﷺ ಬಳಿ ಬಂದು, ನಾವು ಕಳೆದ ಬಾರಿ ಹೋಗಿದ್ದ ಯಾತ್ರೆಯಲ್ಲಿಯೂ ಇದ್ದೆವು, ಈಗ ಪುನಃ ನಾವು ಯಾತ್ರೆ ಹೋಗುತ್ತಿದ್ದೇವೆ. ಆದರೆ ನೀವು ಮಾತ್ರ ಇಲ್ಲಿಯೇ ನಿಂತಿದ್ದೀರಿ ಅಲ್ವಾ.? ಎಂದು ಹೇಳಿದಾಗ, ಪ್ರವಾದಿಯವರು ﷺ, ನೀವು ಯಾತ್ರೆ ಮಾಡುತ್ತಿರುವುದು ಅಲ್ಲಾಹನಿಗಾಗಿ ಹಾಗೂ ನನಗಾಗಿ ಆಗಿದೆ. (ಅವನ ಹಾಗೂ ಅವನ ಪ್ರವಾದಿಯವರ ﷺ ಸಂತೃಪ್ತಿಯನ್ನು ಬಯಸಿ ಆಗಿದೆ.) ಹಾಗಾಗಿ ನೀವು ಬೇಸರ ಮಾಡಬೇಡಿ, ಈಗ ನಿಮಗೆ ಎರಡು ಹಿಜ್'ರ (ಪಲಾಯನ) ಮಾಡಿದ ಪ್ರತಿಫಲ ಲಭಿಸುತ್ತದೆ ಎಂದು ಹೇಳಿದರು. ಅದನ್ನು ಕೇಳಿ ಉಸ್ಮಾನ್'ರವರಿಗೆ ಬಹಳಷ್ಟು ಸಂತೋಷವಾಯಿತು.
ಹಬ್'ಶದ ಯಾತ್ರೆಯ ಕುರಿತು ಜಅಫರ್'ರವರು ವಿವರಿಸುವುದು ಕಾಣಬಹುದು, ನಾವು ಹಬ್'ಶಾದಲ್ಲಿ ಯಾವುದೇ ತೊಂದರೆಯಿಲ್ಲದೆ ದಿನ ಕಳೆಯುತ್ತಿದ್ದೆವು. ನಾವು ನಮ್ಮ ಆರಾಧನೆಗಳನ್ನು, ಯಾರದೇ ಭಯವಿಲ್ಲದೆ ಮಾಡುತ್ತಿದ್ದೆವು, ಯಾರೂ ನಮಗೆ ತೊಂದರೆ ನೀಡುತ್ತಿರಲಿಲ್ಲ. ಆದರೆ ಈ ವಿಷಯ ಖುರೈಷಿಗಳಿಗೆ ತಿಳಿದಾಗ, ಅವರಿಗೆ ಅದು ಸಹಿಸಲು ಆಗಲಿಲ್ಲ. ಅವರು ತಕ್ಷಣವೇ ಸಭೆ ಕರೆದು, ಇಬ್ಬರು ಸಮರ್ಥರಾದ ಪ್ರತಿನಿಧಿಗಳನ್ನು, ನಗೀಸ್ ಚಕ್ರವರ್ತಿಯ ಬಳಿ ಕಳುಹಿಸಿ, ಅವರಿಗೆ ಅತ್ಯುನ್ನತ ಉಡುಗೊರೆಗಳನ್ನು ನೀಡುವ ಮೂಲಕ, ಅವರ ಮನ ಹೊಲಿಸಿ, ಮುಸ್ಲಿಮರಿಗೆ ನೀಡಿದ ಆಶ್ರಯಗಳನ್ನು ನಿಲ್ಲಿಸಲು ಹೇಳುವುದಾಗಿ ತೀರ್ಮಾನಿಸಿದರು.
ಹಾಗಾಗಿ ಉಮಾರತ್ ಬಿನ್ ಅಲ್ ವಲೀದ್ ಹಾಗೂ ಅಂರ್ ಬಿನ್ ಅಲ್ ಆಸ್ ಯುಟೋಪಿಯಕ್ಕೆ ಯಾತ್ರೆ ಹೊರಟರು. ಅವರು ರಾಜರ ಅರಮನೆಗೆ ಬಂದು ತಲುಪಿದ ಕೂಡಲೇ, ಅಲ್ಲಿದ್ದ ಎಲ್ಲಾ ಸೇವಕರಿಗೂ ಒಂದೊಂದು ಉಡುಗೊರೆಗಳನ್ನು ಕೊಟ್ಟು ಸೇವಕರ ಮನ ಹೋಲಿಸಿಕೊಂಡರು. ರಾಜರೊಂದಿಗಿನ ಸಂಭಾಷಣೆಗೆ ಅವಕಾಶ ನೀಡಲು ಹಾಗೂ, ಅದೇ ರೀತಿ ಮುಸ್ಲಿಮರಿಗೆ ಮಾತಾಡಲು ಯಾವುದೇ ಅವಕಾಶ ನೀಡದೆ ಖುರೈಷಿಗಳಿಗೆ ಬಿಟ್ಟು ಕೊಡಬೇಕು. ಎನ್ನುವ ಉದ್ದೇಶದಿಂದಾಗಿತ್ತು, ಈ ರೀತಿಯ ಷಡ್ಯಂತ್ರಗಳನ್ನು ರೂಪಿಸಿದ್ದು.
ಆಕರ್ಷಕ ಉಡುಗೊರೆಗಳೊಂದಿಗೆ ರಾಜದರ್ಬಾರಿಗೆ ತಲುಪಿದ ಅವರು, ರಾಜರಿಗೆ ಬಹಳ ವಿನಮ್ರತೆಯಿಂದ ವಂದಿಸಿ, ಬಂದ ವಿಷಯವನ್ನು ತಿಳಿಸಲು ಮುಂದಾದರು. ಮಹಾರಾಜ.! ನಮ್ಮ ಊರಿನಿಂದ (ಮಕ್ಕದಿಂದ) ಕೆಲವೊಂದು ಬುದ್ಧಿಹೀನರಾದ ಜನರು ಇಲ್ಲಿಗೆ ಬಂದಿರುತ್ತಾರೆ. ಅವರು, ಅವರ ಜನತೆಯನ್ನು ವಿರೋಧಿಸಿ, ನಮಗಾಗಲಿ, ನಿಮಗಾಗಲಿ ಪರಿಚಯವೇ ಇಲ್ಲದ ಧರ್ಮವನ್ನು ಸ್ವೀಕರಿಸಿರುತ್ತಾರೆ. ನಾವು ಇಲ್ಲಿಗೆ ಬಂದದ್ದು, ನಮ್ಮ ಊರಿನ ನಾಯಕರ ಅನುಮತಿಯಿಂದಾಗಿದೆ. ಹಾಗಾಗಿ ಅವರನ್ನು ನಮ್ಮ ಜೊತೆಯಲ್ಲಿ ಕಳುಹಿಸಿ ಕೊಡಬೇಕು. ಅವರ ಬಗ್ಗೆ ಚೆನ್ನಾಗಿ ತಿಳಿದವರಾಗಿದ್ದೇವೆ ನಾವು, ಎಂದು ಹೇಳುವಾಗ, ರಾಜರ ಸೇವಕನೊಬ್ಬ ಬಂದು, ಹೌದು ಮಹಾರಾಜ, ಇವರು ಮಕ್ಕಾದ ನಾಯಕರಾಗಿರುತ್ತಾರೆ. ಅವರ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಗಳಾದ ಕಾರಣ, ನಮಗೆ ಅವರನ್ನು ಇವರ ಜೊತೆಯಲ್ಲೇ ಕಳುಹಿಸಿ ಕೊಡೋಣ ಎಂದು ಹೇಳಿದರು.
ಅದಕ್ಕೆ ನಗೀಸ್ ಚಕ್ರವರ್ತಿಯು ಅವರು ಈಗ ಎಲ್ಲಿದ್ದಾರೆ.? ಎಂದು ಕೇಳಿದಾಗ, ನಿಮ್ಮ ಉರಿನಲ್ಲೇ ಇದ್ದಾರೆ ಮಹಾರಾಜ ಎಂದು ಅಲ್ಲಿ ಬಂದಿದ್ದ ಖುರೈಷಿಗಳು ಹೇಳಿದರು. ಅದನ್ನು ಕೇಳಿದ ಕೂಡಲೇ, ರಾಜರಿಗೆ ಬಹಳಷ್ಟು ಕೋಪ ಬಂದಿತು. ಅವರು ಕೋಪದಲ್ಲೇ, ಓಹೋ.! ನನ್ನ ಊರಿಗೆ ನನ್ನ ಆಶ್ರವನ್ನು ಪಡೆದು ಬಂದ ವ್ಯಕ್ತಿಗಳನ್ನು, ನಾನು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಬೇರೆ ಯಾವುದಾದರೂ ರಾಜರ ಬಳಿ ಹೋಗದೆ, ನನ್ನ ಬಳಿ ಬಂದವರನ್ನು, ನಾನು ಬಿಟ್ಟು ಕೊಡುವುದಿಲ್ಲ. ನಾನು ಅವರನ್ನು ಕರೆದು, ಎಲ್ಲವನ್ನೂ ಕೇಳುತ್ತೇನೆ. ಬಹುಶಃ ನೀವು ಹೇಳಿದ್ದು ಸತ್ಯವಾದಲ್ಲಿ ಅದರ ಬಗ್ಗೆ ಆಲೋಚಿಸುತ್ತೇನೆ. ಅಲ್ಲದಿದ್ದರೆ ನಾವು ಅವರನ್ನು ಖಂಡಿತ ರಕ್ಷಿಸುತ್ತೇನೆ ಎಂದು ಹೇಳಿದರು.
ಪ್ರವಾದಿಯವರ ﷺ ಅನುಯಾಯಿಗಳಿಗೆ, ರಾಜರ ಕಡೆಯಿಂದ ಅಧಿಕೃತವಾಗಿ ಮಾಹಿತಿ ತಿಳಿಸಲಾಯಿತು. ಅವರು ಪರಸ್ಪರ ಜೊತೆಗೂಡಿ, ರಾಜದರ್ಬಾರಿನಲ್ಲಿ ಏನು ಉತ್ತರ ನೀಡಬೇಕು ಎಂದು ಆಲೋಚಿಸಿದರು. ಕೊನೆಗೆ, ಎಲ್ಲವನ್ನೂ ನಾವು ಸರಿಯಾಗಿ ವಿವರಿಸೋಣ, ನಮ್ಮ ವಿಶ್ವಾಸವನ್ನು ಸ್ಪಷ್ಟವಾಗಿ ತಿಳಿಸೋಣ ಎಂದು ತೀರ್ಮಾನಿಸಿದರು. ಅಷ್ಟರಲ್ಲಿ ಜಅಫರ್ ಬಿನ್ ಅಬೀತ್ವಾಲಿಬ್'ರವರು ◌ؓ ಇಂದು ನಿಮ್ಮೆಲ್ಲರ ಪ್ರತಿನಿಧಿಯಾಗಿ, ನಾನು ಅವರ ಬಳಿ ಹೋಗುತ್ತೇನೆ ಎಂದು ಹೇಳಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment