Abu Hisham Saquafi

Official Website Of Hafiz Ilyas Saquafi Padaladka

Friday, October 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -107|| ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

   ಪ್ರವಾದಿಯವರು ﷺ ತ್ವಾಹಿಫ್'ನಲ್ಲೇ ಹತ್ತು ದಿನ ಕಳೆದರು. ಒಂದು ತಿಂಗಳು ಎನ್ನುವ ಅಭಿಪ್ರಾಯವೂ ಇದೆ. ತ್ವಹೀಫಿನ ಒಂದೊಂದೇ ನಾಯಕರನ್ನು ಭೇಟಿಯಾಗಿ ಆದರ್ಶವನ್ನು ತಿಳಿಸಿ ಕೊಟ್ಟರೂ ಯಾರೂ ಕೂಡ ಅಂಗೀಕರಿಸಲಿಲ್ಲ. ತಕ್ಷಣವೇ ಊರು ಬಿಟ್ಟು ಹೋಗಲು ಹೇಳಿದರು, ಮಕ್ಕಳನ್ನು, ಸೇವಕರನ್ನು ಹಾಗೂ ಮೂರ್ಖರನ್ನು ಪ್ರವಾದಿಯವರಿಗೆ ﷺ ತೊಂದರೆ ನೀಡಲು, ಕಲ್ಲು ತೂರಾಟ ನಡೆಸಲು ಎತ್ತಿಕಟ್ಟಿದರು. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಅವರು ಒಟ್ಟಾಗಿ ತಿರುಗಿ ಕಲ್ಲೆಸೆಯ ಆರಂಭಿಸಿದಾಗ, ಕೆಲವೊಂದು ಕಲ್ಲು ಪ್ರವಾದಿಯವರಿಗೆ ﷺ ತಾಗಿ ರಕ್ತ ಬರಲು ಆರಂಭಿಸಿತು. ಪ್ರವಾದಿಯವರು ﷺ ತಿರುಗಿ ಬರುವ ಸಂದರ್ಭದಲ್ಲಿ ಎರಡು ಭಾಗದಿಂದ ಸುತ್ತುವರಿದು ಪ್ರವಾದಿಯವರಿಗೆ ﷺ ತೊಂದರೆ ನೀಡಲು ಆರಂಭಿಸಿದರು. ಪ್ರವಾದಿಯವರ ﷺ ಶರೀರದಲ್ಲಿ ಬಹಳಷ್ಟು ಗಾಯಗಳು ಆದವು. ಜೊತೆಯಲ್ಲಿದ್ದ ಝೈದ್ ಬಿನ್ ಹಾರಿಸ್ ಕೂಡ ತಮ್ಮ ಕೈಯ್ಯಲ್ಲಿ ಆಗುವಷ್ಟು ಸಂರಕ್ಷಣೆ ನೀಡಿದ್ದರೂ ಕೊನೆಗೆ ಅವರಿಗೂ ಕಲ್ಲು ತಾಗಿ ತಲೆಯಿಂದ ರಕ್ತ ಬರಲು ಆರಂಭಿಸಿತು. ಪ್ರವಾದಿಯವರ ﷺ ಕುಳಿತ ಸ್ಥಳದಿಂದ ಎಬ್ಬಿಸಿ ಕಳುಹಿಸಿ, ಮುಂದಕ್ಕೆ ಹೋಗುವಾಗ ಪುನಃ ಹಿಂಸಿಸತೊಡಗಿದರು. 

     ಇಬ್'ನು ಉಖ್'ಬ ಮಾತು ಮುಂದುವರಿಸುತ್ತಾ, ಎರಡು ಕಾಲಿನಿಂದಲೂ ರಕ್ತ ಹರಿಯುತ್ತಲೇ ಇತ್ತು. ಹೇಗೋ ಅವರಿಂದ ರಕ್ಷೆ ಹೊಂದಿ ಒಂದು ತೋಟದ ಒಳಗೆ ಬಂದು, ನೋಯುತ್ತಿರುವ ಶರೀರವನ್ನು ಹೊತ್ತು ಬೇಸರದಿಂದ ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯಲು ಮುಂದಾದರು. ಆದರೆ ಆ ತೋಟ ಇಸ್ಲಾಮಿನ ಶತ್ರುಗಳಾದ, ರಬೀಅನ ಮಕ್ಕಳು ಉತ್'ಬ ಹಾಗೂ ಶೈಬನದ್ದಾಗಿತ್ತು . ಆದರೂ ಪ್ರವಾದಿಯವರು ﷺ ಅಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಕುಳಿತುಕೊಂಡರು. ಇಮಾಮ್ ತ್ವಬ್'ರಾನಿಯವರು ◌ؓ ಇಲ್ಲಿ ಮತ್ತೊಂದು ಘಟನೆಯನ್ನು ಸೇರಿಸಿ ವಿವರಿಸುವುದು ಕಾಣಬಹುದು. ಪ್ರವಾದಿಯವರು ﷺ ಮರದ ಬಳಿ ತಲುಪಿದಾಗ, ಅಲ್ಲೇ ಎರಡು ರಕಾಅತ್ ನಮಾಝ್ ಮಾಡಿ ಅಲ್ಲಾಹನಲ್ಲಿ, ನಾನು ನಿನ್ನಲ್ಲಿ ದೂರು ನೀಡುತ್ತಿದ್ದೇನೆ, ನನ್ನ ಶಕ್ತಿ, ತಂತ್ರದ ಕೊರತೆ, ಹಾಗೂ ಜನರ ಮುಂದೆ ಇರುವ ಪರಿಮಿತಿ, ಕರುಣೆಯ ಮಹಾ ಸಾಗರವಾದ ಅಲ್ಲಾಹನೇ.! ದುರ್ಬಲರ ರಕ್ಷಕನಲ್ಲವೇ ನೀನು, ನಿರ್ಗತಿಕರ ರಕ್ಷಕನಾದ ಅಲ್ಲಾಹನೇ, ನೀನು ಯಾರಿಗೆ ನನ್ನನ್ನು ಬಿಟ್ಟು ಕೊಡುತಿದ್ದೀಯ.? ಈ ವಿರೋಧಿಗಳಿಗೋ.? ನಿನ್ನ ಕೋಪ, ಅಸಮಾಧಾನ ಇರದೇ ಇರುತ್ತಿದ್ದರೆ ನನಗೆ ಯಾವುದೇ ಭಯ ಇರುತ್ತಿರಲಿಲ್ಲ. ನಿನ್ನ ಚಿಕಿತ್ಸೆಯೇ ನನ್ನ ಶಕ್ತಿ, ಈ ಜಗತ್ತನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಪ್ರಕಾಶಿಸುವ ನಿನ್ನ ಕೋಪದಿಂದ, ನಿನ್ನ ರಕ್ಷಣೆಯನ್ನು ನಾನು ಬಯಸುತ್ತಿದ್ದೇನೆ. ಎಲ್ಲಾ ನಿಯಂತ್ರಣ, ಎಲ್ಲಾ ಶಕ್ತಿಯೂ ನಿನಗೆ ಮಾತ್ರ ಅಲ್ಲವೇ ಅಲ್ಲಾಹ್." ಎಂದು ಪ್ರಾರ್ಥನೆ ನಡೆಸಿದರು. 

    ಮರದ ಕೆಳಗೆ ಕುಳಿತು ಆಯಾಸಗೊಂಡು ಪ್ರಾರ್ಥನೆ ನಡೆಸುತ್ತಿದ್ದ, ಪ್ರವಾದಿಯವರನ್ನು ﷺ ಉತ್'ಬ ಹಾಗೂ ಶೈಬರಿಗೆ ಕಂಡಾಗ ಏನೋ ಒಂತರ ಬೇಸರ ಆಯಿತು. ಅವರು ಅವರ ಸೇವಕ ಅದ್ದಾಸನ್ನು ಕರೆದು, ಅಲ್ಲಿ ನಿಂತಿರುವ ವ್ಯಕ್ತಿಗೆ ಒಂದು ಗೊಂಚಲು ದ್ರಾಕ್ಷಿಯನ್ನು ಕೊಟ್ಟು ಬರಲು ಹೇಳಿದರು. ಅದ್ದಾಸ್ ಅದೇ ರೀತಿ ಅದನ್ನು ಪ್ರವಾದಿಯವರ ﷺ ಬಳಿ ಬಂದು ಕೊಟ್ಟಾಗ, ಪ್ರವಾದಿಯವರು ﷺ ಅದನ್ನು ಸ್ವೀಕರಿಸಿದರು. ಅವರು ಅದನ್ನು ಬಿಸ್ಮಿಲ್ಲಾಹ್ ಎಂದು ಅಲ್ಲಾಹನ ಹೆಸರು ಹೇಳಿ ತಿನ್ನಲು ಮುಂದಾದಾಗ, ಅದ್ದಾಸ್ ಪ್ರವಾದಿಯವರನ್ನು ﷺ ಬಿಟ್ಟ ಕಣ್ಣು ಬಿಟ್ಟಹಾಗೆ ನೋಡುತ್ತಾ ಇದು ಸಾಮಾನ್ಯವಾಗಿ ಈ ಊರಿನವರು ಹೇಳಲು ವಾಕ್ಯ ಅಲ್ಲವಲ್ಲ ಎಂದು ಹೇಳಿದರು.? ಅದನ್ನು ಕೇಳಿ ಪ್ರವಾದಿಯವರು ﷺ ನೀವು ಯಾವ ಊರಿನವರು, ನಿಮ್ಮ ಧರ್ಮ ಯಾವುದು ಎಂದು ಕೇಳಿದರು.? ಅದಕ್ಕೆ ನಾನು ಕ್ರೈಸ್ತ ಧರ್ಮದ, ನೀನಾವ ಪ್ರದೇಶದ ನಿವಾಸಿಯಾಗಿರುವೆನು ಎಂದು ಹೇಳಿದರು. ಒಸಾದ್ ಎಂದು ಹೆಸರು ವಾಸಿಯಾದ ಯೂನುಸು ಬಿನ್ ಮತ ಅವರ ಊರಿನವರಲ್ಲವೇ.? ನೀವು, ನಿಮಗೆ ಅವರ ಬಗ್ಗೆ ಗೊತ್ತೇ ಎಂದು ಪ್ರವಾದಿಯವರು ﷺ ಕೇಳಿದಾಗ, ನಾನು ನೀನವದಿಂದ ಹೊರಟಿದ್ದಾಗ, ಕನಿಷ್ಠ ಹತ್ತು ಜನರಿಗೂ ಕೂಡ ಅವರು ಯಾರೆಂದು ಗೊತ್ತೇ ಇಲ್ಲ. ಹೀಗಿರುವಾಗ ಅವರ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಅವರು ಪುನಃ ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಅದು ನನ್ನ ಸಹೋದರ ಪ್ರವಾದಿ ಆಗಿರುವರು. ನಾನು ಕೂಡ ಅಲ್ಲಾಹನ ಪ್ರವಾದಿ ಆಗಿರುವೆನು. ಅದನ್ನು ಕೇಳಿ ಅದ್ದಾಸ್ ಬಹಳ ವಿನಮ್ರತೆಯಿಂದ ತಲೆ ಬಾಗಿ, ಕೈಯಲ್ಲೂ, ನೆತ್ತಿಯಲ್ಲೂ ಮುತ್ತಿಟ್ಟರು. ಅದನ್ನು ದೂರದಿಂದಲೇ ನೋಡುತ್ತಿದ್ದ ರಬೀಅನ ಮಕ್ಕಳು ಒಬ್ಬ ಇನ್ನೊಬ್ಬನಲ್ಲಿ, ನಿನ್ನ ಸೇವಕ ನಾಶ ಮಾಡಿದ ಅಲ್ಲವೇ ಎಂದು ಹೇಳಿದನು. ಸೇವಕ ತಿರುಗಿ ಬಂದ ನಂತರ, ನೀನು ಯಾಕೆ ಆ ವ್ಯಕ್ತಿಯ ಕೈಯನ್ನೂ, ನೆತ್ತಿಯನ್ನು ಚುಂಬಿಸಿದ್ದು ಎಂದು ಕೇಳಿದಾಗ, ಪ್ರೀತಿಯ ಒಡೆಯ ಈ ವ್ಯಕ್ತಿಯಷ್ಟು ಮಹತ್ವ ಇರುವವರು ಇಂದು ಈ ಭೂಮಿಯಲ್ಲಿ ಯಾರೂ ಇಲ್ಲ, ಒಬ್ಬ ಪ್ರವಾದಿ ಮಾತ್ರ ಹೇಳುವ ಮಾತನ್ನಾಗಿತ್ತು ಅವರು ನನ್ನ ಬಳಿ ಹೇಳಿದ್ದು ಎಂದು ಹೇಳಿದರು. ಅದನ್ನು ಕೇಳಿ ಅವರು, ಅಯ್ಯೋ ಕಷ್ಟ.! ಅದ್ದಾಸ್ ನೀವು ಕೂಡ ನಿಮ್ಮ ಧರ್ಮವನ್ನು ಬಿಟ್ಟು ಹೋಗಬೇಡಿ, ಅದು ಆ ವ್ಯಕ್ತಿಯ ಧರ್ಮಕ್ಕಿಂತ ಶ್ರೇಷ್ಠವಾದದ್ದು ಆಗಿದೆ ಎಂದು ಹೇಳಿದರು. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: