وَانْطِقْ عَلَی قَدْرِ فَهْمِ النَّاسِ عِلْمَكَ لَا
تَجْعَلْهُ مِثْلَ عِصِيِّ الْعُمْيِ تَحْقِيرًا
لَا طَالِبَ الْمِلْحِ كَافُورًا تَبِيعُ وَلَا
تَبِيعُ مِلْحًا لِمَنْ يَقْصِدُ كَوَافِيرًا
ಜನರ ಗ್ರಹಿಕೆಯ ಸಾಮರ್ಥ್ಯಕ್ಕನುಸಾರವಾಗಿ ನೀನು ನಿನ್ನ ವಿದ್ಯೆಯನ್ನು ಧಾರೆಯೆರೆದು ಕೊಡು. ಕುರುಡನು ತನ್ನ ಊರುಗೋಲನ್ನು ಎಲ್ಲಾ ಜಾಗಕ್ಕೂ ತಾಗಿಸುವ ಹಾಗೆ
ಜನರ ಸಾಮರ್ಥ್ಯ ಮನಗಾನದೆ ನೀನು ನಿನ್ನ ವಿದ್ಯೆಯನ್ನು ಅವರ ಮುಂದೆ ಹೇಳಿ ವಿದ್ಯೆಯ ಮಹಿಮೆಯನ್ನು ಕಳಂಕಪಡಿಸ ಬೇಡ. ಉಪ್ಪು ಕೇಳುವವನಿಗೆ ಕರ್ಪೂರವನ್ನೋ ಕರ್ಪೂರ ಕೇಳುವವನಿಗೆ ಉಪ್ಪನ್ನೋ ನೀಡ ಬೇಡ.
ذُو الْعِلْمِ إِنْ صَغُرَ سِنًّا فَالْكَبِيرُ وَذُو
جَهْلٍ صَغِيرٌ وَإِنْ يَكْبُرْ بِآلَاءِ
وَالْبَحْرُ أَكْبَرُ مِنْ عَيْنٍ بِسَاحِلِهِ
وَذَاكَ مِلْحٌ وَهٰذِي عَذْبَةُ الْمَاءِ
ಪಂಡಿತನು ಪ್ರಾಯದಲ್ಲಿ ಸನ್ನವನಾದರೂ ಆತ ದೊಡ್ಡವನೆ. (ವಿದ್ಯೆಯು* *ಆತನನ್ನು ದೊಡ್ಡವನನ್ನಾಗಿಸಿದೆ)
ಪಾಮರನು ಇನ್ನಿತರ ಯಾವುದೇ ಅನುಗ್ರಹಗಳಿದ್ದರೂ ಆತ ಸಣ್ಣವನೆ.
ಸಾಗರವು ನೀರಿನ ತೊರೆಗಿಂತ ಹಿರಿದಾದರೂ ಸಾಗರದಲ್ಲಿರುವ ನೀರು ಉಪ್ಪೂ ತೂರೆಯ ನೀರು ಕುಡಿಯಲು ಯೋಗ್ಯವಾದದ್ದೂ ಆಗಿದೆ....!
وَالْجَاهِلُونَ وَلَوْ أَلْفًا إِذَا عَزَمُوا
حَلَّا لِوَاقِعَةٍ أَعْيَوْا وَلَوْ يُسْرًا
إِذَا الْكَوَاكِبُ فِي الْخَضْرَاءِ تَجْتَمِعُ
فِي مَجْمَعٍ لَمْ تَصِرْ فِي ضَوْئِهَا بَدْرًا
ಸಹಸ್ರಾರು ಪಾಮರರು ಸೇರಿದರೂ ಒಂದು ಸಮಸ್ಯೆಗೆ ಪರಿಹಾರಕಂಡುಕೊಳ್ಳುವುದು ಅವರಿಂದ ಸಾಧ್ಯವಿಲ್ಲ( ಪಂಡಿತನಿಗೆ ಸಾಧ್ಯವಿರುವ ಹಾಗೆ).
ಬಾನಲ್ಲಿ ಎಲ್ಲಾ ನಕ್ಷತ್ರಗಳು ಒಂದೇ ಕಡೆ ಸಮ್ಮೇಳಿಸಿದರೂ ಅದಕ್ಕೆ ಪೌರ್ಣಮಿಯ ಬೆಳಕು ಇರದು...!
وَعَالِمٌ نُصِبَ فِي الدُّنْيَا لِيَدْفَعَ عَنْ
خَلْقٍ مَضَرَّةَ مَا فِي الدِّينِ مُحْتَسِبًا
كَمَنْ تَرَاهُ عَلَی الْمِشْبَابِ يَزْجُرُ عَنْ
زَرْعٍ سِبَاعًا وَطَيْرَ الْجَوِّ مُرْتَقِبًا
ಅಲ್ಲಾಹನ ಪ್ರೀತಿಗಾಗಿ ಈ ಐಹಿಕ ಲೋಕದಲ್ಲಿ ಜನರನ್ನು ಕೆಡುಕಿನಿಂದ ತಡೆದು ಒಳಿತಿನೆಡೆಗೆ ಕೊಂಡೊಯ್ಯಲು ನಿಯುಕ್ತಿಗೊಳಿಸಲ್ಪಟ್ಟ ಪಂಡಿತನು
ಕೃಷಿ ನಾಶಗೊಳಿಸಲು ಬರುವ ಮೃಗಗಳನ್ನು, ಪಕ್ಷಿಗಳನ್ನು, ಓಡಿಸಿ "ಕೃಷಿ ಕಾಯುವ ಗುಡಿಸಲಿನಲ್ಲಿ" ಕಾವಲು ನಿಲ್ಲುವ ಕಾವಲುಗಾರನಂತೆ ( ಕಾವಲುಗಾರನಿಗೆ ಕೃಷಿ ಒಡೆಯನಿಂದ ಕೂಲಿ ಸಿಗುವ ಹಾಗೆ ಈ ಪಂಡಿತನಿಗೆ ಅಲ್ಲಾಹನಿಂದ ಪ್ರತಿಫಲ ಲಭಿಸುವುದು)
ظَنُّ الْجَهُولِ بِأَنْ لاَ عَيْشَ لِلْعُلَمَا
إِنْ لَمْ عَلَيْهِمْ أَجُدْ فِي حَالَةِ الضَّرَرِ
ظَنُّ اللَّعِينِ بِأَنَّ الزَّرْعَ يَفْسُدُ إِنْ
لَمْ أَحْفَظَنْهُ بِرَدِّ الطَّيْرِ وَالسَّه
ವಿಷಮ ಪರಿಸ್ಥಿತಿಯಲ್ಲಿ ಸಂಪನ್ನರ ಔದಾರ್ಯ ಲಭಿಸದಿದ್ದರೆ ಪಂಡಿತರು ಜೀವಿಸುವುದು ಅಸಾಧ್ಯವೆಂಬ ಮೂರ್ಖನ ಭಾವನೆಯು ಕೃಷಿಗಳಿಗೆ ದೃಷ್ಟಿ ದೋಷ ಬೀರದಿರಲು ಇಡುವ ಬೆರ್ಚಪ್ಪವು(ಮನುಷ್ಯ ಆಕೃತಿ) ತನ್ನ ಸಂರಕ್ಷಣೆ ಇಲ್ಲದಿದ್ದರೆ ಈ ಕೃಷಿಯು ನಾಶವಾಗುವುದು ಎಂದು ಭಾವಿಸುವುದಕ್ಕೆ ಸಮಾನವಾಗಿದೆ.
لَا فَخْرَ يَا غُمْرُ بِالْإِعْطَاءِ لِلْعُلَمَا
شَيْئًا مِنَ الْأَرَبِ أَوْ شَيْئًا مِنَ الذَّهَبِ
لِأَنَّ إِعْطَاهُمُ إِيَّاكَ فِي الْخَلَدِ
يَثْبُتُ وَ يَخْرُجُ مَا تُعْطِيهِ عَنْ قُرْبِ
ಪಂಡಿತರಿಗೆ ನೀನು ನೀಡುವ ಸ್ವರ್ಣ ಮತ್ತಿತರ ದಾನದರ್ಮದ ಕುರಿತು ಸ್ವ ಅಭಿಮಾನ ಗೊಳ್ಳಲು ನಿನಗೆ ಅವಕಾಶವಿಲ್ಲ.
ಕಾರಣ ಪಂಡಿತ ನಿನಗೆ ನೀಡುವುದು (ವಿಜ್ಞಾನ) ಹೃದಯದಲ್ಲಿ ಅಚ್ಚಲಿಯದೆ ಉಳಿಯುವುದು.ಆದರೆ ನೀನು ಪಂಡಿತನಿಗೆ ನೀಡುವ ದಾನವು ಬೇಗನೆ ಮುಗಿಯುವುದು.
ذُو الْعِلْمِ يَحْمِلُ كُلَّ الطَّعْنِ فِيهِ وَلَا
ذُو الطَّعْنِ مِنْهُ يَرَی شَيْئًا سِوَی الْخَيْرِ
وَمُثْمِرُ الشَّجَرِ يُرْمَی بِالْحِجَارَةِ لَا
يُرْمَی سِوَاهُ فَيَرْمِي يَانِيَ الثَّمَرِ
ಪಂಡಿತನು ಹಲವರಿಂದ
ಹಲವಾರು ರೀತಿಯ 'ಆಕ್ಷೇಪ' 'ಟೀಕೆಗಳನ್ನು'ಎದುರಿಸಬೇಕಾಗುವುದು.ಆದರೆ ಅದಕ್ಕೆ ಪ್ರತಿಯಾಗಿ ಟೀಕಾಕಾರನಿಗೆ ಪಂಡಿತನಿಂದ ಒಳಿತಲ್ಲದೆ ಇನ್ನೇನು ಲಭಿಸದು. ಹಣ್ಣುಗಳಿರುವ ವೃಕ್ಷಗಳಿಗೆ ಕಲ್ಲುಗಳನ್ನು ಎಸೆಯುವುದು ಸಹಜ. ( ಹಣ್ಣುಗಳಿಲ್ಲದ ವೃಕ್ಷಗಳಿಗೆ ಕಲ್ಲೇಟು ಬೀಳದು) ಬದಲಾಗಿ ಆ ಮರವು ತಾಜಾ ಹಣ್ಣು ಗಳನ್ನು ನೀಡುವುದು.
لَا تَغْتَبَنْ أَحَدًا فَضْلًا عَنِ الْعُلَمَا
وَلَوْ بِسَهْوٍ لِمَا فِي لَحْمِهِمْ ذُعْفُ
إِنَّ الذُّعَافَ مَتَی مَا كُنْتَ تَأْكُلُهُ
وَلَوْ بِجَهْلٍ جَرَی فِي نَفْسِكَ التَّلَفُ
ನೀನು ಯಾರ ಕುರಿತೂ ಪರದೂಷಣೆ ಹೇಳಬೇಡ. ವಿಶೇಷವಾಗಿ ಪಂಡಿತರನ್ನು ಮರೆತೂ ದೂಷಿಸಬೇಡ.
ಕಾರಣ ಪಂಡಿತರ ಮಾಂಸದಲ್ಲಿ ವಿಷವು ( ನಂಜು) ಅಡಗಿದೆ. ವಿಷವು ನೀನರಿಯದೆ ನಿನ್ನ ಉದರ ಸೇರಿದರೆ ನಾಶ (ಮರಣ )ನಿಶ್ಚಿತ.....!
فَتِّشْ عُيُوبَكَ قَبْلَ الْعَيْبِ غَيْرَكَ مَنْ
قُلْ لِي مِنَ النَّاسِ مِنْ عَيْبٍ لَهُ سَلِمَا
وَلَا تَكُنْ كَذُبَابٍ بِالْجُرُوحِ وَقَعْ
دُونَ الصِّحَاحِ مِنَ الْأَعْضَاءِ مُسْتَلِمَا
ಇನ್ನೊಬ್ಬರ ನ್ಯೂನತೆಗಳನ್ನು ಪರಿಶೋಧಿಸುವುದಕ್ಕಿಂತ ಮೊದಲು ಸ್ವ ನ್ಯೂನತೆಗಳನ್ನು ಪರಿಶೋಧಿಸು. (ಇನ್ನೊಬ್ಬರ ಕೊರತೆಗಳನ್ನು ನೋಡಬೇಡ ತನ್ನ ಶರೀರದ ಕೊರತೆಗಳನ್ನು ನೋಡಿ ಸರಿಪಡಿಸು)
ಒಂದೂ ನ್ಯೂನತೆಯು ಇಲ್ಲದವರನ್ನು ಕಾಣಲು ಅಸಾಧ್ಯ.
ಶರೀರದ ಹುಣ್ಣುಗಳನ್ನು ಹುಡುಕಿ ಅದರ ಮೇಲೆ ಕುಳಿತು ಅದರ ಕೀವುಗಳನ್ನು ನೆಕ್ಕುವ ನೊಣದ ಹಾಗೆ ನೀನಾಗ ಬೇಡ.
إِنَّ الْأَمِيرَ وَإِنْ مِنْ أَعْظَمِ الْأُمَرَا
فَالْأَمْرُ لَمْ يَجْرِ إِلَّا فِي رَعَايَاهُ
وَذُو الْعُلُومِ لِمَنْ تَحْتَ السَّمَا سَكَنُوا
تَجْرِي كَوَقَعِ ضِيَا شَمْسٍ قَضَايَاهُ
ಎಷ್ಟೇ ದೊಡ್ಡ ಆಡಳಿತಾಧಿಕಾರಿಯಾದರೂ ಆತನ ತೀರ್ಪುಗಳು ಆತನ ಪ್ರಜೆಗಳಲ್ಲಿ ಮಾತ್ರ ಅನುಷ್ಠಾನಗೊಳ್ಳುವುದು.
ಆದರೆ ಧಾರ್ಮಿಕ ಪಂಡಿತನ ತೀರ್ಪು ಸೂರ್ಯ ಪ್ರಕಾಶ ವ್ಯಾಪಿಸುವ ಹಾಗೆ ಸರ್ವ ವ್ಯಾಪಕವಾಗಿ ಅದು ಜಾರಿಯಲ್ಲಿರುವುದು( ಸರ್ವ ಮುಸ್ಲಿಮರು ಅದನ್ನು ಅಂಗೀಕರಿಸುವರು)
ಇಶಾಅತುಸ್ಸುನ್ನಃ ದರ್ಸ್
Ph:- +919535627170
+918105381393


No comments:
Post a Comment