ಭಾಗ - 02
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮಕ್ಕ ಹಿಂದಿನಿಂದಲೂ ಪಟ್ಟಣ ಪ್ರದೇಶವಾಗಿದೆ. ಪಟ್ಟಣದಲ್ಲಿ ಜನಿಸುವ ಗಂಡು ಮಕ್ಕಳನ್ನು ಮೊಲೆಹಾಲುಣಿಸಲು ಗ್ರಾಮಗಳಿಗೆ ಕಳುಹಿಸುತ್ತಿದ್ದರು ಅದು ಆ ಊರಿನ ಸಂಪ್ರದಾಯವಾಗಿತ್ತು. ಶುದ್ಧವಾದ ಗಾಳಿ ಸಿಗಲು ಹಾಗೂ ಸಾಂಕ್ರಾಮಿಕ ರೋಗಗಳಿಂದ ಮಗುವನ್ನು ರಕ್ಷಿಸಲು ಅದು ಉಪಯುಕ್ತವಾಗುತ್ತಿತ್ತು, ಮರುಭೂಮಿಯ ಜೀವನ ಶೈಲಿಯು ಅದು ಮಕ್ಕಳಿಗೆ ಬಹಳಷ್ಟು ಒಳಿತುಗಳಿಗೆ ಅವಕಾಶಗಳನ್ನು ನೀಡುತ್ತಿತ್ತು.
ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದರಲ್ಲಿ ಕೆಲವು ಕುಟುಂಬಗಳು ಉತ್ತಮರಾಗಿದ್ದರು, ಅದರಲ್ಲಿ ಪ್ರಸಿದ್ಧರಾಗಿದ್ದವರು ಬನೂ ಸಅದ್ ಜನಾಂಗ. ಮಕ್ಕದ ಆಗ್ನೇಯ ಭಾಗದಲ್ಲಿ ವಾಸಿಸುತ್ತಿದ್ದ ಹವಾಸಿಲ್ ಕುಲದವರಾಗಿದ್ದರು ಅವರು. ಆಮೀನ ಬೀವಿಯು ಕೂಡ ಮಗನಿಗೆ ಮೊಲೆಹಾಲುಣಿಸಲು ಬನೂ ಸಅದ್ ಜನಾಂಗವನ್ನು ಬಯಸಿದರು, ಸಾಕು ತಾಯಿಗಳು ಮಕ್ಕಳನ್ನು ಹುಡುಕಿ ಮಕ್ಕ ಪಟ್ಟಣಕ್ಕೆ ಬರುವುದನ್ನು ಕಾದು ಕುಳಿತಿದ್ದರು, ತಡವಾಗದೆ ಅವರ ಗುಂಪು ಮಕ್ಕ ಪಟ್ಟಣಕ್ಕೆ ಬರಲು ಆರಂಭಿಸಿತು. ಅವರ ಜೊತೆಯಲ್ಲಿ ಅಬ್ದು ಐಬ್'ನ ಮಗಳಾದ ಹಲೀಮ ಬೀವಿ ಕೂಡ ಇದ್ದರು ಜೊತೆಯಲ್ಲಿ ಅವರ ಪತಿಯಾದ ಹಾರಿಸ್ ಹಾಗೂ ನವಜಾತ ಶಿಶುವಾದ ಅಬ್ದುಲ್ಲಾಹ್ (ಲಂರ) ಎನ್ನುವ ಮಗು ಕೂಡ ಇತ್ತು.
ಹಲೀಮ ಅವರು ತಮ್ಮ ನೆನಪುಗಳ ಅಂಗಳಕ್ಕೆ ಮರಳಿದರು. ಅದೊಂದು ಅದ್ಭುತವಾಗಿತ್ತು. ಬೀವಿಯವರು ಈ ರೀತಿಯಾಗಿ ವಿವರಿಸುತ್ತಾರೆ. ಅದೊಂದು ಬರಗಾಲ ಸಮಯ ಇರುವ ಸಂಪತ್ತುಗಳೆಲ್ಲವು ಖಾಲಿಯಾಗಿತ್ತು. ಆದಷ್ಟು ಬೇಗ ಮಕ್ಕ ಪಟ್ಟಣಕ್ಕೆ ತೆರಳಬೇಕು, ಎದೆಹಾಲುಣಿಸಲು ಒಂದು ಮಗುವನ್ನು ಪಡೆಯಬೇಕು, ಅದರಿಂದ ಸಿಗುವ ಪ್ರಯೋಜನಗಳಿಂದ ಜೀವನವನ್ನು ಸುಧಾರಿಸಿಕೊಳ್ಳಬೇಕು, ಬೂದು ಬಣ್ಣದ ಹೆಣ್ಣು ಕತ್ತೆ ಹಾಗೂ ಕೆಚ್ಚಲಲ್ಲಿ ಹಾಲು ಕಮ್ಮಿಯಿರುವ ಒಂದು ಒಂಟೆ ಮಾತ್ರವಾಗಿದೆ ನಮ್ಮ ಬಳಿಯಿರುವುದು. ನನ್ನ ಎದೆಯಲ್ಲಿ ಹಾಲಿಲ್ಲದ ಕಾರಣ ಮಗು ಅಳು ನಿಲ್ಲಿಸುತ್ತಲೇ ಇಲ್ಲ, ಏನೇ ಆಗಲಿ ಮಕ್ಕ ಪಟ್ಟಣಕ್ಕೆ ತೆರಳಿದೆವು. ನಮ್ಮಂತೆಯಿರುವ ಮತ್ತೊಂದು ಗುಂಪಿನೊಂದಿಗೆಯಾಗಿತ್ತು ಪ್ರಯಾಣ ಬೆಳೆಸಿದ್ದು. ಮೆಲ್ಲ ಮೆಲ್ಲ ಹೆಜ್ಜೆ ಇಟ್ಟು ನಡೆಯುವ ನಮ್ಮ ವಾಹನವನ್ನು ಕಾಯುತ್ತ ನಮ್ಮ ಗೆಳೆತಿಯರು ಗೊಂದಲಕ್ಕೆ ಸಿಲಿಕಿದರು, ಮಳೆ ಬಂದಿದ್ದರೆ ಅದೆಷ್ಟೋ ಒಳ್ಳೆದಿತ್ತು ಎಂದು ಬಹಳಷ್ಟು ಆಗ್ರಹಿಸಿದರೂ ಕೂಡ ಮಕ್ಕ ನಗರ ತಲುಪುವವರೆಗೂ ಒಂದು ಹನಿ ಕೂಡ ಮಳೆ ಬರಲೇ ಇಲ್ಲ. ಎಲ್ಲರೂ ಮಕ್ಕಳನ್ನು ಹುಡುಕಿ ಹೊರಟರು. ಆಮೀನ ಬೀವಿ ಅವರ ಮನೆಗೂ ತಲುಪಿದರು ತಂದೆ ಮರಣ ಹೊಂದಿದ ಕಾರಣ ಮಗುವನ್ನು ಯಾರೂ ಕೂಡ ಎತ್ತಿಕೊಳ್ಳಲು ತಯಾರಾಗಿಲ್ಲ. ಮಗುವಿನ ತಂದೆಯಿಂದ ಸಿಗುವ ಬಹುಮಾನ, ಉಡುಗೊರೆಗಲ್ಲವೇ ಸಾಕು ತಾಯಿಯರ ಭರವಸೆ. ನೇರವಾಗಿ ಕೂಲಿ ಪಡೆಯುವ ವೃತ್ತಿಯಾಗರಲಿಲ್ಲ ಎದೆಹಾಲುಣಿಸುವುದು. ಇದೊಂದು ದೀರ್ಘಾವಧಿಯ ಭವಿಷ್ಯ ಹಾಗೂ ಅದರೊಂದಿಗೆ ಬರುವ ಪ್ರಯೋಜನಗಳೊಂದಿಗಿನ ಸಂಬಂಧವಾಗಿತ್ತು ಹಾಗೂ ಸಾಂಪ್ರದಾಯಿಕವಾಗಿ ಬರುತ್ತಿದ್ದ ಒಂದು ಆಚರಣೆಯ ಭಾಗವಾಗಿತ್ತು ಅಷ್ಟೆ. ಒಂದು ಗ್ರಾಮೀಣ ಕುಟುಂಬ ಹಾಗೂ ಪಟ್ಟಣವಾಸಿಗಳ ನಡುವಿನ ಈ ಸಂಬಂಧಗಳಲ್ಲಿ ಬಹಳ ಆಯಾಮಗಳಿರುತಿತ್ತು, ಪರಸ್ಪರರ ಅವಶ್ಯಕತೆಗಳನ್ನು ಪೂರೈಕೆ ಮಾಡುತಿದ್ದರು.
ಒಂದು ಅನಾಥ ಮಗುವನ್ನು ನೋಡುಕೊಳ್ಳುದರಲ್ಲಿ ವೈಮನಸ್ಸು ಬಂದದ್ದು ಇಲ್ಲಿಯಾಗಿತ್ತು. ಏನೇ ಆಗಲಿ ಮಗುವನ್ನು ಒಮ್ಮೆ ನೋಡೋಣ ಎಂದು ಅಂದು ಕೊಂಡೆನು ಅಷ್ಟರಲ್ಲಿ ಇತರರು ಮಕ್ಕಳೊಂದಿಗೆ ಮಕ್ಕದಿಂದ ಹೊರಡಲು ತಯಾರಾಗಿದ್ದರು. ಆಮೀನ ಬೀವಿಯವರ ಸುಂದರ ಮಗುವಿನ ಬಳಿ ನಾನು ತಲುಪಿದೆನು. ಈ ಮಗುವನ್ನು ನಾವು ಕೊಂಡಾಗುತ್ತೇನೆ ದೇವನು ನಮ್ಮನ್ನು ಅನುಗ್ರಹಿಸುವನು ಎಂದು ತೀರ್ಮಾನಿಸಿದಾಗ ಇದಕ್ಕೆ ಪತಿಯೂ ಕೂಡ ಸಮ್ಮತಿಸಿದರು. ಮಗುವನ್ನು ಎತ್ತಿ ಎದೆಗೆ ಅಪ್ಪಿಕೊಂಡದ್ದೇ ತಡ ಎದೆಹಾಲು ತುಂಬಿ ಹೋಯಿತು. ನನ್ನ ಮಗನೂ, ಸಾಕು ಮಗನೂ ಹೊಟ್ಟೆ ತುಂಬಾ ಹಾಲು ಕುಡಿದರು. ಎಂಥಾ ಅದ್ಭುತ.! ಒಂಟೆಯ ಕೆಚ್ಚಲಲ್ಲೂ ಕೂಡ ಹಾಲು ತುಂಬಿತ್ತು, ಕತ್ತೆಯು ಕೂಡ ಆರೋಗ್ಯದಿಂದ ಬಹಳ ಲವಲವಿಕೆಯಿಂದ ಆಟವಾಡುತ್ತಿತ್ತು. ನನ್ನ ಪತಿ ಹೇಳಿದರು ನೀನು ಎತ್ತಿಕೊಂಡ ಮಗು ಒಂದು ಅನುಗ್ರವಲ್ಲವೇ ಎಂದು? ಹೌದು ನನ್ನ ಭರವಸೆಯೂ ಕೂಡ ಅದುವೇ ಆಗಿದೆ ಎಂದು ಉತ್ತರಿಸಿದೆನು ನಂತರ ಅಲ್ಲಿಂದ ಗ್ರಾಮಕ್ಕೆ ಹಿಂತಿರುಗಳು ತೀರ್ಮಾನಿಸಿ ನಾನು ಈ ಹೊಸ ಮಗುವಿನೊಂದಿಗೆ ಕತ್ತೆಯ ಮೇಲೆ ಹತ್ತಿದೆನು. ವಾಹನವು ಬಹಳ ವೇಗವಾಗಿ ಲವಲವಿಕೆಯಿಂದ ಚಲಿಸುತ್ತಿತ್ತು. ಗೆಳೆತಿಯರು ಎಲ್ಲರೂ ನಮ್ಮಿಂದ ಹಿಂದೆಯೇ ಬಾಕಿಯಾದರು. ಅವರು ನಮ್ಮ ಬಳಿ ಕಾಯಲು ಹೇಳಿದರು. ಇದೆಂಥಾ ಅದ್ಭುತ ಹಲೀಮ ಬಹಳ ಪುಣ್ಯ ಮಾಡಿದ್ದಾಳೆ ಎಂದು ಗೆಳೆತಿಯರು ಹೇಳತೊಡಗಿದರು.
ಹೌದು ಮುತ್ತು ಮುಹಮ್ಮದ್ ನಬಿ ತಂಙಳವರು ಮಕ್ಕ ಪಟ್ಟಣದಿಂದ ಕುಗ್ರಾಮಕ್ಕೆ ಯಾತ್ರೆ ಆರಂಭಿಸಿದರು.....
(ಮುಂದುವರಿಯುವುದು)
https://ilyaspilikoor99.blogspot.com/2022/06/blog-post_42.html

No comments:
Post a Comment