ಭಾಗ - 03
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹಲೀಮ ಬೀವಿ ತಮ್ಮ ಮಾತು ಮುಂದುವರೆಸುತ್ತಾರೆ, ನಾವು ಬನೂ ಸಅದ್ ಗ್ರಾಮಕ್ಕೆ ತಲುಪಿದೆವು. ನಮ್ಮ ಮಗು ನಮ್ಮ ಕುಟೀರವನ್ನು ಪ್ರವೇಶಿಸಿತು. ಏನೋ ಒಂದು ಸಂತೋಷ ಮುಹಮ್ಮದ್ ಮಗನ ಆಗಮನದಿಂದ ಎಲ್ಲರಿಗೂ ಅನುಗ್ರಹಗಳು ಲಭಿಸತೊಡಗಿತು. ಗ್ರಾಮದ ಸಂಪೂರ್ಣ ಛಾಯಾವೇ ಬದಲಾಯಿತು ಒಂದು ಸಣ್ಣ ಗಿಡವು ಕೂಡ ಇಲ್ಲದ ಊರಾಗಿತ್ತು ಅದು ಈಗ ಹಚ್ಚ ಹಸಿರಿನಿಂದ ತುಂಬಿ ತುಳುಕುತ್ತಿದೆ. ಜಾನುವಾರುಗಳು ಹೊಟ್ಟೆ ತುಂಬುವಷ್ಟು ಮೆಯ್ಯಲು ಸಾಕಾಗುವಷ್ಟು ಹುಲ್ಲುಗಳಿವೆ, ಎಲ್ಲಾ ಸಮಯದಲ್ಲೂ ಕೆಚ್ಚಲು ತುಂಬಿ ಇರುತ್ತದೆ, ನೆರೆಹೊರೆಯವರ ಮನೆಯ ಜಾನುವಾರಗಳ ಕೆಚ್ಚಲಲ್ಲಿ ಹಾಲಿಲ್ಲದಿದ್ದರೂ ನಮ್ಮ ಮನೆಯ ಜಾನುವಾರಗಳಲ್ಲಿ ಹಾಲು ಇದ್ದೆ ಇರುತ್ತದೆ, ಕೆಲವರು ಹೇಳುತ್ತಿದ್ದರು ಹಲೀಮ ಬೀವಿಯವರ ಮೇಕೆಗಳನ್ನು ಕಟ್ಟುವ ಸ್ಥಳದಲ್ಲಿಯೇ ನಮ್ಮ ಮೇಕೆಗಳನ್ನು ಮೇಯಿಬೇಕೆಂದು, ಆದರೆ ಅದು ಮಾತ್ರವಾಗಿರಲಿಲ್ಲ ನಮ್ಮ ಮೇಕೆಯಲ್ಲಿ ಯಾವಾಗಲೂ ಹಾಲು ಇರುದಕ್ಕೆ ಕಾರಣ.
ಎರಡು ವಯ್ಯಸಿನ ವರೆಗೂ ನಾನು ಮುಹಮ್ಮದ್ ಮಗನಿಗೆ ಹಾಲುಣಿಸಿದೆನು, ಆಗಲೂ ನಂತರವೂ ಅಸಾಧಾರಣವಾದ ಬೆಳವಣಿಗೆಯಾಗಿತ್ತು ಮಗನಲ್ಲಿ ಕಂಡದ್ದು, ಇದೀಗ ಸ್ವಂತ ತಾಯಿಗೆ ಮಗುವನ್ನು ತಿರುಗಿ ನೀಡುವ ಸಮಯ ಬಂದೆ ಬಿಟ್ಟಿದೆ. ಬಿಟ್ಟು ಕೊಡಲು ಮನಸ್ಸು ಒಂಚೂರು ಒಪ್ಪುತ್ತಿಲ್ಲ, ಮುದ್ದು ಮಗುವಿನ ಆಗಮನದಿಂದ ನಮಗೆ ಲಭಿಸಿದ ಆನಂದ, ಐಶ್ವರ್ಯವೆಲ್ಲವೂ ವರ್ಣನಾತೀತವಾಗಿದೆ. ತಾಯಿ ಆಮೀನರಲ್ಲಿ ಒಮ್ಮೆ ವಿನಂತಿಸಿ ನೋಡೋಣ ಎಂದು ಅಂದು ಕೊಂಡೆನು. ಆ ಸಮಯದಲ್ಲಿ ಮಕ್ಕ ಪಟ್ಟಣದಲ್ಲಿ ಪ್ಲೇಗ್ ಮಹಾಮಾರಿ ಹರಡುತ್ತಿದ್ದ ಸಮಯವಾಗಿತ್ತು. ನಮ್ಮ ಒತ್ತಾಯಕ್ಕೂ, ಪ್ಲೇಗ್ ಮಹಾಮಾರಿಯ ಕಾರಣದಿಂದಲೂ ಮನಸ್ಸಿಲ್ಲದ ಮನಸ್ಸಿನಲ್ಲಿ ಮತ್ತೊಮ್ಮೆ ನಮ್ಮೊಂದಿಗೆ ಮಗುವನ್ನು ತಾಯಿ ಆಮೀನರು ಬಿಟ್ಟು ಕೊಡಲು ಒಪ್ಪಿದರು, ಬಹಳ ಸಂತೋಷದಿಂದ ಊರಿಗೆ ಪುನಃ ಮರಳಿದೆವು. ನನ್ನ ಮಗಳು ಶೈಮಾಳಿಗಂತೂ ಅದೇನೋ ಒಂಥರ ಸಂತೋಷವಾಗಿತ್ತು. ಮಗುವಿಗೆ ಲಾಲಿ ಅವಳೇ ಹಾಡುತ್ತಿದ್ದಳು, ಮಗಿವಿನ ಜೊತೆ ಜೊತೆಯಲ್ಲಿಯೇ ಯಾವಾಗಲೂ ಓಡಾಡುತ್ತಿದ್ದಳು, ಹೀಗೆ ಕಾಲವು ಉರುಳಿತು. ಎರಡು ಮಕ್ಕಳು ಕೂಡ ನಮ್ಮ ಮನೆಯ ಹತ್ತಿರದಲ್ಲೇ ಇರುವ ಹುಲ್ಲುಗಾವಲಿನಲ್ಲಿ ಆಟವಾಡುತ್ತಿದ್ದರು, ತಕ್ಷಣವೇ ಲಂರ ಮಗನು ಓಡಿ ಬಂದು ನಡುಗಿತ್ತಾ ಹೇಳಿದನು ನಮ್ಮ ಖುರೈಶಿ ಸಹೋದರನನ್ನು ಯಾರೋ ಇಬ್ಬರು ಬಂದು ಕೊಂಡು ಹೋದರು, ಬಿಳಿ ವಸ್ತ್ರಧಾರಿಗಳಾಗಿದ್ದರು, ಅವರು ಮಗುವನ್ನು ದೂರ ಕೊಂಡೊಗಿ ಮಲಗಿಸಿ ಎದೆ ಸೀಳಿ ಎದೆಯೊಳಗೆ ಕೈಹಾಕಿದರು ಎಂದು ಹೇಳಿದನು. ನಾನು ನನ್ನ ಪತಿಯು ಭಯದಿಂದ ಕಂಗಾಲಾದೆವು, ತಕ್ಷಣವೇ ನಾವು ಓಡಿ ಹೋಗಿ ನೋಡಿದಾಗ ಅದೋ ಅಲ್ಲಿ ನಿಂತಿರುವನು ಮುಹಮ್ಮದ್ ಮಗನು, ಆದರೆ ಮುಖದಲ್ಲಿ ಏನೋ ಒಂದು ಬದಲಾವಣೆ ಎದ್ದು ಕಾಣುತ್ತಿತ್ತು. ತಕ್ಷಣವೇ ಮಗುವನ್ನು ಎತ್ತಿ ಎದೆಗಪ್ಪಿಕೊಂಡು ಮುದ್ದು ಮಗನೇ ಏನಾಯಿತು? ಎಂದು ಕೇಳಿದಾಗ ಯಾರೋ ಬಿಳಿ ವಸ್ತ್ರಧಾರಿಗಳು ಬಂದು ನನ್ನನ್ನು ಮಲಗಿಸಿ ನನ್ನ ಎದೆಯನ್ನು ಸೀಳಿ ಒಳಗಿನಿಂದ ಏನೋ ಒಂದನ್ನು ಹೊರತೆಗೆದರು ಏನೆಂದು ತಿಳಿಯಲಿಲ್ಲ ಎಂದು ಉತ್ತರಿಸಿದನು. ನಾನೂ, ನನ್ನ ಪತಿಯು ಸುತ್ತ ಮುತ್ತಲು ಬಹಳಷ್ಟು ನೋಡಿದೆವು ಯಾರನ್ನೂ ಕಾಣಲಿಲ್ಲ, ಶರೀರದಲ್ಲಾದರೆ ಸಣ್ಣ ಗಾಯದ ಗುರುತು ಕೂಡ ಕಾಣುತ್ತಿಲ್ಲ. ಶರೀರವನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ಇನ್ನೊಂದು ಅದ್ಭುತವೂ ಕೂಡ ಕಾಣಲು ಸಾಧ್ಯವಾಯಿತು.
ಭುಜದ ಮೇಲೆ ಅದೋ ಆ ಮುದ್ರೆ...
(ಮುಂದುವರಿಯುವುದು)
*ನಮ್ಮ ವಾಟ್ಸಪ್ ಗ್ರೂಪ್*
https://chat.whatsapp.com/IwjGwEXrPxhCp8oLi5vV7G
*ಫೇಸ್ಬುಕ್*
https://www.facebook.com/351451788595173/posts/pfbid0wDtX4aAZPAs3p4bg62TFnNFuxaUAG7xiKFP4zctCY37ubQtc5VJHrXW6mofUAoawl/

No comments:
Post a Comment