ಭಾಗ - 05
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇನ್ನೂ ಪ್ರಯಾಣ ಮುಂದುವರಿಸುವುದು ತೊಂದರೆಯಾಗಬಹುದು ಎಲ್ಲಿಯಾದರೂ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಹಾಗಾಗಿ ಅಬವಾಅ್ ಎನ್ನುವ ಸ್ಥಳದಲ್ಲಿ ಡೇರೆ ಹಾಕಲಾಯಿತು, ಮದೀನಾದಿಂದ ಮಕ್ಕ ಪಟ್ಟಣಕ್ಕೆ ತೆರಳುವ ದಾರಿಯಲ್ಲಿ ಸುಮಾರು 273 ಕಿ ಮೀ ದೂರದಲ್ಲಿರುವ ಸ್ಥಳವಾಗಿದೆ ಈ ಅಬವಾಅ್. ರೋಗವು ಉಲ್ಬಣಗೊಳ್ಳುತ್ತಲೇ ಇತ್ತು ಹೀಗೆ ಆಮೀನ ಬೀವಿಯವರು (ರಲಿಯಲ್ಲಾಹ್) ಇಹಲೋಕ ತ್ಯಜಿಸಿದರು. ಮುತ್ತು ಪ್ರವಾದಿಯವರನ್ನು ﷺ ತಾಯಿ ಗರ್ಭವತಿಯಾಗಿದ್ದಾಗ ತಂದೆ ಮರಣ ಹೊಂದಿದ್ದರು ಈಗ ತಾಯಿ ಕೂಡ ಇಹಲೋಕ ತ್ಯಜಿಸಿದರು ಪ್ರವಾದಿವರ್ಯರು ﷺ ತಮ್ಮ ಆರನೇ ವಯ್ಯಸಿನಲ್ಲಿ ಸಂಪೂರ್ಣವಾಗಿ ಅನಾಥರಾದರು.
ತಾಯಿ ಕೊನೆಯುಸಿರು ಎಳೆಯುವ ಅಲ್ಪ ಸಮಯದ ಹಿಂದಿನ ತಾಯಿ ಮಗನ ಸಂಭಾಷಣೆಯು ಬಹಳ ಚಿಂತನಾರ್ಹವಾಗಿತ್ತು: ಮಗನೇ ನಾನು ಯಾತ್ರೆಯಾಗುತಿದ್ದೇನೆ ಬಹಳ ಒಳಿತುಗಳನ್ನು ಬಾಕಿಯಾಗಿಸಿಯಾಗಿದೆ ನಾನು ಹೋಗುತ್ತಿರುವುದು ನಾನು ಕಂಡ ಕನಸು ಖಂಡಿತ ಸಾಕ್ಷಾತ್ಕಾರವಾಗಿಯೇ ತೀರುತ್ತದೆ ಹಾಗಿದ್ದರೆ ಮಗನು ಇಡೀ ಮನುಷ್ಯ ಕುಲಕ್ಕತೀತವಾದ ಪ್ರವಾದಿಯಾಗಿರುವೆ ಎಂದು ಹೇಳುತ್ತಾ ಬಿಸಿ ಮುತ್ತೊಂದನ್ನು ನೀಡಿದರು, ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಿರಿ ಎಂದು ಹೇಳುತ್ತಾ ಸೇವಕಿ ಬರಕರ ಕೈಗೆ ಮಗನನ್ನು ನೀಡಿದರು.
ಅತೀ ಭಾಗ್ಯವಂತಳಾದ ಸೇವಕಿಯಾಗಿದ್ದರು ಬರಕರವರು, ಉಮ್ಮ ಐಮನ್ ಎಂದಾಗಿತ್ತು ಅವರನ್ನು ಕರೆಯಲ್ಪಡುವುದು, ಮುತ್ತು ಪ್ರವಾದಿಯವರ ﷺ ಪೋಷಣೆಯ ಜವಾಬ್ದಾರಿ ವಹಿಸಿಕೊಂಡ ಭಾಗ್ಯಶಾಲಿ, ಪ್ರವಾದಿವರ್ಯರ ಶೈಶವ, ಬಾಲ್ಯ, ಯವ್ವನ ಎಲ್ಲವನ್ನು ನೇರವಾಗಿ ಕಂಡ ಯುವತಿ, ಪ್ರಬೋಧನೆಯನ್ನೂ, ನಿರ್ಗಮನವನ್ನೂ (ಹಿಜ್'ರ) ನೇರವಾಗಿ ಕಂಡು ಅನುಭವಿಸಿದ ಯುವತಿ, ಆರಂಭದಲ್ಲಿಯೇ ವಿಶ್ವಾಸಿನಿಯಾಗಿದ್ದರು, ನಂತರದ ದಿನಗಳಲ್ಲಿ ಪ್ರವಾದಿವರ್ಯರ ﷺ ಮಕ್ಕಳನ್ನೂ, ಮೊಮ್ಮಕ್ಕಳನ್ನು ಕೂಡ ಅವರೇ ಆಗಿತ್ತು ಪೋಷಣೆ ಮಾಡಿದ್ದು ಕೂಡ.
ನಿರ್ಗಮನ (ಹಿಜ್'ರ) ಸಂದರ್ಭದಲ್ಲಿ ಯುವತಿಗೆ ಲಭಿಸಿದ ಅನುಗ್ರಹದ ಕುರಿತು ಹದೀಸ್'ಗಳಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ ಮದೀನಕ್ಕೆ ತೆರಳುತ್ತಿದ್ದ ಯಾತ್ರೆಯಲ್ಲಿ ಯುವತಿಯು ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾದಾಗ ಕುಡಿಯಲು ಒಂದು ತೊಟ್ಟು ನೀರಿಲ್ಲದೆ ಮರುಭೂಮಿಯಲ್ಲಿ ಕಂಗಳಾಗಿದ್ದರು, ಅಚಾನಕ್ಕಾಗಿ ಅದೋ ಆಕಾಶದಿಂದ ಒಂದು ನೀರಿನ ಬಕೆಟ್ ಅವರ ಹತ್ತಿರಕ್ಕೆ ಬಂದಿತು ಅದರಿಂದ ದಾಹ ತೀರಿಸಲು ನೀರನ್ನು ಕುಡಿದರು ನಂತರದ ಜೀವನದಲ್ಲಿ ಒಮ್ಮೆಯೂ ಕೂಡ ಅವರಿಗೆ ಬಾಯಾರಿಕೆ ಆಗಲೇ ಇಲ್ಲ ಎಂದು.
ಪ್ರವಾದಿವರ್ಯರಿಂದ ﷺ ನೇರವಾಗಿ ಸ್ವರ್ಗ ಪ್ರವೇಶದ ಸಂತೋಷ ವಾರ್ತೆ ಲಭಿಸಿದ್ದ ಯುವತಿಯವರು ಮುತ್ತು ಪ್ರವಾದಿವರ್ಯರ ﷺ ಸೇವಕರಾಗಿದ್ದ ಝೈದ್'ರವರ (ರಲಿಯಲ್ಲಾಹ್) ಪತ್ನಿಯಾಗಿದ್ದರು, ಅದೇ ರೀತಿ ಪ್ರವಾದಿಯವರ ﷺ ಆತ್ಮೀಯರಾದ ಉಸಾಮರವರ ತಾಯಿಯೂ ಕೂಡ, ಹೀಗೆ ಹಲವಾರು ವಿಶೇಷತೆಯನ್ನು ಹೊಂದಿರುವ ಯುವತಿಯಾಗಿರುವರು.
ತಾಯಿ ಆಮೀನ ಬೀವಿಯವರನ್ನು (ರಲಿಯಲ್ಲಾಹ್) ದುಃಖದ ಹೃದಯದೊಂದಿಗೆ, ಹರಿಯುವ ಕಂಬನಿಯೊಂದಿಗೆ ಅಬವಾಅ್ ಎನ್ನುವ ಸ್ಥಳದಲ್ಲಿಯೇ ಸಮಾಧಿ ಮಾಡಲಾಯಿತು. ಆರನೇ ವಯಸ್ಸಿನಲ್ಲಿ ಅನುಭವಿಸಿದ ಆ ವಿರಹದ ವೇದನೆಯು ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿತು ಅರುವತ್ತು ವಯಸ್ಸು ದಾಟಿ ತಮ್ಮ ಅನುಯಾಯಿಗಳೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿದಾಗಲೂ ಕೂಡ ನೋವಿನ ಕಟ್ಟೆ ಹೊಡೆದು ಕಂಬನಿ ಹರಿಯುತ್ತಲೇ ಇತ್ತು.
ಸೇವಕಿ ಬರಕ ಹಾಗೂ ಮುಹಮ್ಮದ್ ﷺ ಮಗನು ಮಕ್ಕ ಪಟ್ಣಣಕ್ಕೆ ಯಾತ್ರೆ ಮುಂದುವರಿಸಿದರು, ಇದರ ನಡುವೆ ತಾತ ಅಬ್ದುಲ್ ಮುತ್ತಲಿಬರಿಗೂ ವಿಷಯ ತಿಳಿಯಿತು ಪ್ರೀತಿಯ ಮೊಮ್ಮಗನಿಗಾಗಿ ಕಾದು ಕುಳಿತು ಬಹಳ ಪ್ರೀತಿಯಿಂದಲೇ ಮೊಮ್ಮಗನ್ನು ಸ್ವೀಕರಿಸಿದರು. ತಂದೆ ತಾಯಿ ಇಲ್ಲದ ನೋವು ಯಾವತ್ತೂ ಬರಬಾರದು ಎನ್ನುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ತೀರ್ಮಾನಿಸಿ ಎಲ್ಲಾ ಸಮಯದಲ್ಲೂ ಜೊತೆಯಲ್ಲಿಯೇ ಇರ ತೊಡಗಿದರು, ಪ್ರತಿ ಕ್ಷಣವೂ ಕೂಡ ಮೊಮ್ಮಗನಲ್ಲಿ ಕಾಣುತ್ತಿದ್ದ ಅದ್ಭುತ ವಿಸ್ಮಯಗಳನ್ನು ಗುರುತಿಸುತ್ತಿದ್ದರು, ಇದರ ಕುರಿತು ಇತರರಲ್ಲಿ ಚರ್ಚಿಸುತ್ತಾ ಅದರ ಬಗ್ಗೆ ಬಹಳಷ್ಟು ಗರ್ವ ಪಡುತ್ತಿದ್ದರು, ಜೊತೆಯಲ್ಲಿಯೇ ಆಗಿತ್ತು ಆಹಾರ ಸೇವನೆಯೂ ಕೂಡ. ತಮ್ಮ ಮಕ್ಕಳು, ಇತರ ಮೊಮ್ಮಕ್ಕಳು ಯಾರಿದ್ದರೂ ಕೂಡ ಮುಹಮ್ಮದ್ ﷺ ಮಗನು ಬರುವವರೆಗೂ ಸಮಾಧಾನವಾಗುತ್ತಿರಲಿಲ್ಲ, ನಡು ನಡುವೆ ಉಮ್ಮು ಐಮನ್ ಅವರನ್ನು ಕರೆದು ಈ ರೀತಿ ಹೇಳುತ್ತಿದ್ದರು "ಉಮ್ಮು ಐಮನ್ ನನ್ನ ಮುದ್ದು ಮಗನನ್ನು ನೀವು ಗಮನಿಸುತ್ತಿದ್ದೀರಿ ಅಲ್ಲವೇ.! ಇತರ ಮಕ್ಕಳೊಂದಿಗೆ ಸಿದ್'ರ ಮರದ ಬಳಿ ನಾನು ಕಂಡೆನು" ಒಟ್ಟಾರೆ ಹೇಳುದಾದರೆ ತಾತ ಅಬ್ದುಲ್ ಮುತ್ತಲಿಬರು ಮೊಮ್ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಬಹಳ ಕಾಳಜಿಯಿಂದಲೇ ನೋಡುತ್ತಿರುವಾಗ ಪ್ರವಾದಿಯವರು ﷺ ಕೂಡ ಆ ಪ್ರೀತಿಯನ್ನು ಚೆನ್ನಾಗಿಯೇ ಅನುಭವಿಸಿದರು ಹೀಗೆ ದಿವಸಗಳು ಕಳೆದು ಹೋಯಿತು....
(ಮುಂದುವರಿಯುತ್ತದೆ)
https://ilyaspilikoor99.blogspot.com/2022/06/blog-post_19.html
No comments:
Post a Comment