Abu Hisham Saquafi

Official Website Of Hafiz Ilyas Saquafi Padaladka

Monday, June 20, 2022

ಪ್ರವಾದಿ ಮುಹಮ್ಮದ್ (ﷺ) ತಂಙಳವರ ಜೀವನ ಚರಿತ್ರೆ || ಭಾಗ -04 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ - 04
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

ಪ್ರವಾದಿತ್ವದ ಮುದ್ರೆಯಾಗಿತ್ತು ಅದು, "ಖಾತಮುನ್ನುಬುವ್ವ" ಎಂದು ಆಗಿದೆ ಅರಬಿ ಭಾಷೆಯಲ್ಲಿ ಹೇಳುವುದು. ಜನಿಸಿದ ಅಂದಿನಿಂದಲೂ ಆ ಮುದ್ರೆ ಮುತ್ತು ಪ್ರವಾದಿ ﷺ ತಂಙಳವರ ಭುಜದ ಮೇಲೆ ಇತ್ತು ಈಗ ಸಾಂದರ್ಭಿಕವಾಗಿ ಒಂದು ನೋಟ ಅಲ್ಲಿಗೆ ಹೋಯಿತು ಎಂದು ಮಾತ್ರ ಪಾರಿವಾಳದ ಮೊಟ್ಟೆಯ ರೂಪದಲ್ಲಿರುವ ಶರೀರಕ್ಕೆ ಅಂಟಿಕೊಂಡಿರುವ ಸ್ವಲ್ಪ ರೋಮಗಳಿಂದ ಆವೃತವಾಗಿರುವ ದಪ್ಪವಾದ ಒಂದು ಪದರ ಈ ರೀತಿಯಾಗಿದೆ ಹದೀಸ್'ನಲ್ಲಿ ಉಲ್ಲೇಖಿಸಲಾಗಿರುವುದು.
       ಹಲೀಮ ಬೀವಿ ಹಾಗೂ ಅವರ ಪತಿ ಇಬ್ಬರೂ ಬಹಳ ಚಿಂತಿತರಾದರು ಇನ್ನು ಏನು ಮಾಡುವುದು ಎಂದು, ಆದಷ್ಟು ಬೇಗ ಮಕ್ಕ ಪಟ್ಟಣಕ್ಕೆ ತೆರಳಿ ತಾಯಿಗೆ ಮಗನನ್ನು ಮರಳಿಸಿ ನಡೆದ ವಿಷಯಗಳನ್ನು ಎಲ್ಲವನ್ನು ತಿಳಿಸೋಣ ಎಂದು ಅಂದು ಕೊಂಡರು ಇದರ ನಡುವೆ ಇನ್ನೊಂದು ಭಯವೂ ಕೂಡ ಅವರನ್ನು ಆವರಿಸಿತು. ಅದೇನೆಂದರೆ ಪ್ರವಾದಿತ್ವದ ಮುದ್ರೆ ಇರುವ ಮಗುವಿನ ಕುರಿತು ವೇಧ ಗ್ರಂಥಸ್ತರಿಗೆ ಮಾಹಿತಿ ಸಿಕ್ಕಿತ್ತು ಭವಿಷ್ಯದಲ್ಲಿ ಬರಲಿರುವ ಪ್ರವಾದಿ ಇವರೇ ಎಂದು ಅವರಿಗೆ ಅರ್ಥವಾಯಿತು ಯಹೂದಿಗಳು ಅವರನ್ನು ಶತ್ರುತ್ವದೊಂದಿಗೆಯಾಗಿತ್ತು ಕಾಣುತಿದ್ದದ್ದು. ಹಾಗಾಗಿ ಹಲೀಮ ವೇಗವಾಗಿ ಮಗನನ್ನು ಎತ್ತಿ ಮಕ್ಕ ಪಟ್ಟಣಕ್ಕೆ ತೆರಳಿ ನಡೆದ ಘಟನೆಗಳನ್ನು ಸಣ್ಣ ರೀತಿಯಲ್ಲಿ ವಿವರಿಸಿದಾಗ ಆಮೀನ ಸಂಪೂರ್ಣವಾಗಿ ತಿಳಿಯಲು ಆಗ್ರಹಿಸಿದರು ಹಲೀಮ ವಿಧಿಯಿಲ್ಲದೆ ಎಲ್ಲವನ್ನು ವಿವರಿಸಿಬೇಕಾಯಿತು ವಿಷಯ ತಿಳಿದಾಗ ಆಮೀನರಿಂದ ಚಿಂತಿತರಾಗುವ ಸನ್ನಿವೇಶವೇನು ಉಂಟಾಗಲಿಲ್ಲ ಬದಲಾಗಿ ಅವರೇ ಸಮಾಧಾನ ಪಡಿಸಿದರು. ಉನ್ನತವಾದ ಪದವಿಗಳು ನನ್ನ ಮಗನಿಗಾಗಿ ಕಾಯುತ್ತಿದೆ ಎಂದು ಹೇಳುತ್ತಾ ತಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಉಂಟಾದ ಅದ್ಭುತ ಅನುಭವಗಳನ್ನು ಕೂಡ ತಿಳಿಸಿದರು. ಹಾಗಿರುವಾಗ ಮಗನನ್ನು ವಾಪಸು ಕೊಂಡೊಗುತ್ತೇವೆ ಎಂದು ಆಗ್ರಹ ವ್ಯಕ್ತಪಡಿಸಿದಾಗ ತಾಯಿ ಆಮೀನ ಬೀವಿಯವರು ಅದಕ್ಕೆ ಅನುಮತಿ ನೀಡಲಿಲ್ಲ ಯಾತ್ರೆಯ ಶುಭಾಶಯವನ್ನು ತಿಳಿಸಿ ಕಳುಹಿಸಿದರು. ನಂತರದ ಜೀವನ ತಾಯಿ ಮಗನೊಂದಿಗಿನ ಅದ್ಭುತವಾದ ದಿವಸಗಳಾಗಿತ್ತು ಕುಟುಂಬದೊಂದಿಗೆ ಮನೆಯಲ್ಲಿ ಇನ್ನೂ ಬಹಳಷ್ಟು ಜನರು ಸದಸ್ಯರಿದ್ದಾರೆ ತಾತನ ಹಾಗೂ ತಂದೆಯ ಸಹೋದರನ ಸಮಾನ ವಯಸ್ಸಿನ ಮಕ್ಕಳು ಪ್ರತ್ಯೇಕವಾಗಿ ಹಂಝ ಹಾಗೂ ಸ್ವಫೀಯ ಪಿತ ಮಹಾನರಾದ ಅಬ್ದುಲ್ ಮುತ್ತಲಿಬ್'ರ (ತಾತ) ಮಕ್ಕಳಾಗಿದ್ದರು ಅವರು. ಮೂವರು ಕೂಡ ಬಹಳ ಅನ್ಯೋನ್ಯತೆಯಲ್ಲಿದ್ದರು ಹೀಗೆ ಸುಂದರವಾದ ಮೂರು ವರ್ಷಗಳು ಕಳೆದು ಹೋಯಿತು. ಕಅಬಾದ ಪಕ್ಕದಲ್ಲಿ ತಾತ ಅಬ್ದುಲ್ ಮುತ್ತಲಿಬರು ಕುಳಿತುಕೊಳ್ಳುವ ಸ್ಥಳವಿತ್ತು ಆ ಸ್ಥಳಕ್ಕೆ ಯಾವುದೇ ಮಕ್ಕಳಿಗೂ ಅನುಮತಿಯಿರಲಿಲ್ಲ ಆದರೆ ಮುಹಮ್ಮದ್ ಮಗನಿಗೆ ಮಾತ್ರ ಅಲ್ಲಿಗೆ ಅನುಮತಿ ಇತ್ತು. ಇದರ ಕುರಿತು ಕೆಲವು ಗಣ್ಯರು ತಾತ ಅಬ್ದುಲ್ ಮುತ್ತಲಿಬ್'ರ ಬಳಿ ಕೇಳಿದಾಗ ಈ ಮಗನಲ್ಲಿ ನಾನು ಬಹಳಷ್ಟು ವಿಸ್ಮಯಗಳನ್ನು, ಅದ್ಬುತಗಳನ್ನು ಕಂಡಿದ್ದೇನೆ ಎಂದಾಗಿತ್ತು ಅವರು ಹೇಳುತ್ತಿದ್ದ ಉತ್ತರ. ಮಗನಿಗೆ ಆರು ವಯಸ್ಸು ಪ್ರಾಯವಾದಾಗ ತಾಯಿ ಆಮೀನಾರಿಗೆ ಯಸ್'ರಿಬ್'ನಲ್ಲಿರುವ ತಮ್ಮ  ಸಂಬಂಧಿಗಳನ್ನು ಕಾಣಬೇಕೆಂಬ ಆಗ್ರಹ ಉಂಟಾಯಿತು. ತಡ ಮಾಡದೆ ಒಂದು ವ್ಯಾಪಾರ ಗುಂಪಿನೊಂದಿಗೆ ಎರಡು ಒಂಟೆಯೊಂದಿಗೆ ಯಾತ್ರೆ ತೆರಳಿದರು ಅವರ ಜೊತೆಯಲ್ಲಿ ಸೇವಕಿ ಉಮ್ಮ ಐಮನ್ (ಬರಕ) ಕೂಡ ಇದ್ದರು. ಯಸ್'ರಿಬ್ ತಲುಪಿದ ಬಳಿಕ ಕೆಲವು ದಿವಸಗಳು ಅಲ್ಲಿಯೇ ತಮ್ಮ ಸಂಬಂಧಿಕರೊಂದಿಗೆಯೇ ಕಳೆದರು ಮಗನೊಂದಿಗೆ ತಮ್ಮ ಪ್ರಿಯ ಪತಿ ಅಬ್ದುಲ್ಲಾಹ್ ಅವರ ಖಬರ್ ಕೂಡ ಸಂದರ್ಶಿಸಿದರು ಈ ಘಟನೆಯನ್ನು ನಂತರ ಕಾಲದಲ್ಲಿ ಪ್ರವಾದಿವರ್ಯರು ನೆನೆದು ಹೇಳುತಿದ್ದರು. ಕಝ್'ರಜ್'ರವರ ಕೊಳದಲ್ಲಿ ಈಜುತ್ತಾ, ಗಾಳಿಪಟ ಹಾರಿಸುತ್ತಾ ಹೀಗೆ ಕೆಲವು ದಿವಸಗಳು ಕಳೆದು ಮಕ್ಕ ಪಟ್ಟಣಕ್ಕೆ ಹಿಂತಿರುಗಲು ತೀರ್ಮಾನಿಸಿದರು. ಯಾತ್ರೆ ಆರಂಭಿಸಿ ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಆಮೀನರು ರೋಗ ಪೀಡಿತರಾದರು.... 

(ಮುಂದುವರೆಯುವುದು....)

https://chat.whatsapp.com/DPBbF5ID0reHVZyPPQpci1

No comments: