Abu Hisham Saquafi

Official Website Of Hafiz Ilyas Saquafi Padaladka

Tuesday, June 21, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -06 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ - 06

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು 

ಅಬ್ದುಲ್ ಮುತ್ತಲಿಬರು ಮಕ್ಕ ಪಟ್ಟಣದ ಪ್ರಮುಖ ನಾಯಕರಿಗೂ ಕೂಡ ನಾಯಕರಾಗಿದ್ದರು, ಇವರನ್ನು ಭೇಟಿಯಾಗಲು ವಿದೇಶದಿಂದಲೂ ಜನರು ಬರುತ್ತಿದ್ದರು, ಆ ಗುಂಪಿನಲ್ಲಿ ಪುರೋಹಿತರು, ವೇದಜ್ಞಾನಿಗಳು ಕೂಡ ಇರುತ್ತಿದ್ದರು. ಅವರು ಬಹಳ ಪ್ರೀತಿಯಿಂದ ಕಾಳಜಿ ವಹಿಸುತ್ತಿದ್ದ ಮೊಮ್ಮಗನ್ನು ಕಂಡಾಗ ಭವಿಷ್ಯದಲ್ಲಿ ಬರಲಿರುವ ಅಂತ್ಯ ಪ್ರವಾದಿಯವರ ﷺ ಕುರಿತು ವಿವರಿಸತೊಡಗಿದರು, ಅಷ್ಟೇ ಅಲ್ಲದೆ ಮುಹಮ್ಮದ್ ﷺ ಮಗನಲ್ಲಿ ಕಾಣುವ ಲಕ್ಷಣಗಳನ್ನು ಕೂಡ ವಿವರಿಸುತ್ತಿದ್ದರು, ಆ ಸಂದರ್ಭಗಳಲ್ಲಿ ತಾತ ಅಬ್ದುಲ್ ಮುತ್ತಲಿಬರು ತಮ್ಮ ಮೊಮ್ಮಗನ ಕುರಿತು ಬಹಳ ಹೆಮ್ಮೆ ಪಡುತ್ತಿದ್ದರು. 

     ಒಮ್ಮೆ ನಜ್'ರಾನ್'ನಿಂದ  ವೇದಗಾರರ ಒಂದು ಗುಂಪು ಬಂದಿತ್ತು ಜೊತೆಯಲ್ಲಿ ಪುರೋಹಿತರು ಕೂಡ ಇದ್ದರು. ಮಕ್ಕ ಪಟ್ಟಣದ ನಾಯಕನ ಜೊತೆಯಲ್ಲಿ ಬಹಳಷ್ಟು ಮಾತು ಕಥೆ ನಡೆಸಿದರು ಪ್ರತ್ಯೇಕವಾಗಿ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತು ಕೂಡ ಪ್ರಸ್ತಾಪಿಸಿದರು, ಇಸ್ಮಾಯಿಲ್ ಪ್ರವಾದಿಯವರ (ಅಲೈಹಿ ಸಲಾಂ) ಪರಂಪರೆಯಲ್ಲಿ ಆಗಿದೆ ಅವರ ಜನನ, ವೇದಗಳಲ್ಲಿ ಉಲ್ಲೇಖಿಸಿದ ಹಾಗೆ ಅವರ ನಿಯೋಗದ ಸಮಯ ಹತ್ತಿರವಾಗಿದೆ ಹೀಗೆ ಮಾತು ಕಥೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಮುಹಮ್ಮದ್ ﷺ ಮಗನು ಅವರ ಮುಂದೆ ಹಾದು ಹೋದಾಗ ಸ್ವಾಭಾವಿಕವಾಗಿ ಪುರೋಹಿತರ ಶ್ರದ್ಧೆ ಮಗನ ಮೇಲೆ ಬಿದ್ದಿತು, ಅವರು ಬಹಳ ಗಂಭೀರವಾಗಿಯೇ ವೀಕ್ಷಿಸ ತೊಡಗಿದರು, ಕಣ್ಣು, ಕೈ, ಕಾಲು ಭುಜ ಹೀಗೆ ಸಂಪೂರ್ಣವಾಗಿ ಆಳವಾದ ಪರಿಶೋಧನೆಯ ನಂತರ ಅವರು ಉಚ್ಛ ಸ್ವರದೊಂದಿಗೆ ಕೂಗಿ ಹೇಳಿದರು "ಇವರಾಗಿದ್ದಾರೆ ಆ ವ್ಯೆಕ್ತಿ" ನಂತರ ಮಾತು ಮುಂದುವರೆಸಿ ನೀವು ಈ ಮಗುವಿಗೆ ನೀವು ಏನಾಗಬೇಕು.? ಎಂದು ಕೇಳಿದರು. ಇದು ನನ್ನ ಮಗನಾಗಿರುವನು ಎಂದು ಅಬ್ದುಲ್ ಮುತ್ತಲಿಬರು ಉತ್ತರಿಸಿದಾಗ ನೀವು ಈ ಮಗುವಿನ ತಂದೆಯೇ.? ಹಾಗೆ ಆಗಲು ಸಾಧ್ಯವೇ ಇಲ್ಲ ಎಂದು ಪುರೋಹಿತರು ಹೇಳಿದರು ಇದು ನನ್ನ ಮಗನ ಮಗುವಾಗಿದೆ ಎಂದು ಮತ್ತೊಮ್ಮೆ ವ್ಯೆಕ್ತಪಡಿಸಿದಾಗ ಹೌದು ಅದು ಆಗಿರಬಹುದು ಎಂದು ಅವರು ಪ್ರತಿಕ್ರಿಯೆ ನೀಡಿದರು, ಅಷ್ಟೇ ಅಲ್ಲದೆ ಈ ಮಗನನ್ನು ಬಹಳ ಶ್ರದ್ಧೆಯಿಂದಲೇ ನೋಡಿಕೊಳ್ಳಬೇಕು ಎಂದು ಕೂಡ ಅವರು ಉಪದೇಶ ನೀಡಿದರು. ಅಬ್ದುಲ್ ಮುತ್ತಲಿಬರು ತಮ್ಮ ಎಲ್ಲಾ ಮಕ್ಕಳನ್ನು ಕರೆದು ಪುರೋಹಿತರು ಹೇಳಿದ ಸಂಪೂರ್ಣ ವಿಷಯಗಳನ್ನು ವಿವರಿಸಿ ನೀವು "ಈ ಮುದ್ದು ಮಗನ ಕಡೆಗೆ ಬಹಳಷ್ಟು ಗಮನ ಹರಿಸಬೇಕು, ಎಲ್ಲಾ ಸಮಯದಲ್ಲಿಯೂ ಕೂಡ ಬಹಳಷ್ಟು ಶ್ರದೆ ವಹಿಸಬೇಕು" ಎಂದು ಹೇಳಿದರು.

      ಮತ್ತೊಂದು ದಿವಸ ಮುಹಮ್ಮದ್ ﷺ ಮಗನು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ ಬನೂ ಮುದ್'ಲಜ್ ಜನಾಂಗದ ಕೆಲವು  ಜ್ಞಾನಿಗಳು ಮುಹಮ್ಮದ್ ﷺ ಮಗನನ್ನು ನಿರೀಕ್ಷಿಸುತ್ತಿದ್ದರು, ಸ್ವಲ್ಪ ಸಮಯದ ನಂತರ ಮಗನನ್ನು ಅವರು ಹತ್ತಿರಕ್ಕೆ ಕರೆದು ಕಾಲ್ಪಾದಗಳನ್ನು ಇತರ ಗುರುತುಗಳನ್ನು ಪರೀಕ್ಷಿಸಿದ ನಂತರ ಈ ಮಗನ ಕಡೆಗೆ ನೀವು ಬಹಳಷ್ಟು ಗಮನ ಹರಿಸಿಕೊಂಡೇ ಇರಬೇಕು, ಪ್ರವಾದಿ ಇಬ್ರಾಹಿಂ (ಅಲೈಹಿ ಸಲಾಂ) ರವರ ಪಾದಗಳಿಗೆ ಅತೀ ಹೆಚ್ಚು ಸಾಮೀಪ್ಯ ಇರುವ ಹಾಗೆ ಕಾಣುತ್ತಿದೆ ಎಂದು ತಾತ ಅಬ್ದುಲ್ ಮುತ್ತಲಿಬರಲ್ಲಿ ಹೇಳಿದರು. 
     ಈ ರೀತಿಯಾದ ಹಲವಾರು ಭವಿಷ್ಯವಾಣಿಗಳಿಗೆ ತಾತ ಅಬ್ದುಲ್ ಮುತ್ತಲಿಬರು ಸಾಕ್ಷಿಯಾದರು, ಖುರೈಶಿ ನಾಯಕರಿಗೆ ಯಮನಿನ ರಾಜನಿಂದ ಔತಣಕೂಟವನ್ನು ಏರ್ಪಡಿಸಲಾಗಿತ್ತು, ಔತಣಕೂಟದ ನಂತರ ರಾಜನು ಅಬ್ದುಲ್ ಮುತ್ತಲಿಬರನ್ನು ಭೇಟಿಯಾಗಲು ತಮ್ಮ ಕೋಣೆಗೆ ಕರೆಸಿಕೊಂಡರು. ತಾವು ಕಾಯುತ್ತಿದ್ದ ಪ್ರವಾದಿಯವರ ﷺ ಪಿತಮಹರಾಗಿದ್ದಾರೆ ಎನ್ನುವ ನಿಟ್ಟಿನಲ್ಲಿ ಬಹಳ ಗೌರವದಿಂದಲೇ ಅವರನ್ನು ಕಾಣಲಾಯಿತು. ಸೈಫ್ ಬಿನ್ ಝೀಯಸನ್ ಎಂದಾಗಿತ್ತು ಆ ರಾಜನ ಹೆಸರು. 
      
      ಮೊಮ್ಮಗನ ಅತ್ಯನ್ನತ ಸ್ಥಾನದ ಕುರಿತು ತಾತ ಅಬ್ದುಲ್ ಮುತ್ತಲಿಬರಿಗೆ ಸಂಪೂರ್ಣವಾಗಿ ಅರ್ಥವಾಯಿತು, ಪ್ರೀತಿ, ಮಮತೆ, ವಾತ್ಸಲ್ಯ ಮನ ತುಂಬಿ ನೀಡತೊಡಗಿದರು. ಹೀಗಿರುವಾಗ ಮಕ್ಕ ಪಟ್ಟಣದಲ್ಲಿ ಬರಗಾಲ ಆರಂಭವಾಯಿತು, ಮಕ್ಕಾ ನಿವಾಸಿಗಳು ಈ ಬರಗಾಲದಿಂದ ಬಹಳಷ್ಟು ತತ್ತರಿಸಿ ಹೋಗಿದ್ದರು, ಅವರು ಮಳೆಗಾಗಿ ಬಹಳಷ್ಟು ಪ್ರಾರ್ಥನೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ, ಇದರ ನಡುವೆ ರುಖೇಖ ಎನ್ನುವ ಯುವತಿಗೆ ಒಂದು ಕನಸು ಬಿತ್ತು ಅಂತ್ಯ ಪ್ರವಾದಿಯವರು ಮಕ್ಕಾದಲ್ಲಿ ಜನಿಸಿದ್ದಾರೆ ಎನ್ನುತ್ತಾ ಪ್ರವಾದಿಯವರ ﷺ ಹಾಗೂ ಅವರ ಸಂರಕ್ಷಕರ ವಿಶೇಷತೆಗಳನ್ನು ಆ ಕನಸಿನಲ್ಲಿಯೇ ವಿವರಿಸಲಾಗಿತ್ತು. ಅವರೊಂದಿಗೆ ಸೇರಿ ಪ್ರಾರ್ಥಿಸಿರಿ ಎಂದು ಹೇಳುತ್ತಾ ಪ್ರಾರ್ಥನೆಯ ರೀತಿ ನೀತಿ ಎಲ್ಲವನ್ನೂ ಕೂಡ ಕನಸಿನಲ್ಲಿಯೇ ತೋರಿಸಿ ಕೊಡಲಾಗಿತ್ತು.

      ಬೆಳ್ಳಗಿನಜಾವ ರುಖೇಖ ಭಯ ಬೀತಾರಾಗಿ ಎಚ್ಚರವಾದರು, ಕೊನೆಗೆ ಅವರು ಕಂಡ ಕನಸನ್ನು ಎಲ್ಲರಿಗೂ ತಿಳಿಸಲಾಯಿತು...

(ಮುಂದುವರಿಯುತ್ತದೆ...)

No comments: