ಭಾಗ - 07
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ರುಖೈಖರವರ ಕನಸನ್ನು ಮಕ್ಕಾ ನಿವಾಸಿಗಳು ಬಹಳ ಶ್ರದ್ಧೆಯಿಂದಲೇ ಕೇಳತೊಡಗಿದರು, ಅವರು ಕಂಡ ಕನಸನ್ನು ವಿವರಿಸಿದರು ನನಗೆ ಒಂದು ಅಶರೀರವಾಣಿ ಕೇಳಲು ಸಾಧ್ಯವಾಯಿತು, ಅದರಲ್ಲಿ ಒಂದು ವ್ಯಕ್ತಿಯು ಓ ಖುರೈಶಿ ನಿವಾಸಿಗಳೇ ಭವಿಷ್ಯದಲ್ಲಿ ನಿಯೋಗಿಸಲ್ಪಡುವ ಪ್ರವಾದಿಯವರು ﷺ ನಿಮ್ಮ ಜೊತೆಯಲ್ಲೇ ಇದ್ದಾರೆ, ಅವರ ಆಗಮನದ ಸಮಯವು ಬಹಳ ಹತ್ತಿರದಲ್ಲೇ ಇದೆ, ನಿಮಗೆ ಬಹಳಷ್ಟು ಸಮೃದ್ಧಿ ಸಂಪತ್ತು ಲಭಿಸಲಿದೆ, ನಿಮ್ಮ ಜೊತೆಯಲ್ಲಿ ಅತ್ಯುತ್ತಮರಾದ ಒಬ್ಬರು ಎತ್ತರದ ವ್ಯಕ್ತಿಯಿದ್ದಾರೆ, ಅವರು ಶ್ವೇತ ವರ್ಣದ ಸುಂದರನಾಗಿದ್ದಾರೆ, ಉದ್ದನೆಯ ಹುಬ್ಬುಗಳನ್ನು ಹೊಂದಿರುವ ಸೂಕ್ಷ್ಮ ಶರೀರದ ವ್ಯಕ್ತಿ, ಅಷ್ಟೇ ಅಲ್ಲ ಸುಂದರವಾದ ಮೂಗು ಹಾಗೂ ಕೋಮಲ ಕೆನ್ನೆಗಳನ್ನೂ ಹೊಂದಿರುತ್ತಾರೆ, ಅವರೂ, ಅವರ ಮಕ್ಕಳು, ಮೊಮ್ಮಕ್ಕಳು ಸಾಲಾಗಿ ನಿಲ್ಲಲಿ, ಮಕ್ಕಾದ ಪ್ರತಿಯೊಂದು ಜನಾಂಗದಿಂದ ಒಂದೊಂದು ಪ್ರತಿನಿಧಿಗಳು ಅವರ ಜೊತೆಯಲ್ಲಿ ನಿಲ್ಲಲಿ, ಎಲ್ಲರೂ ಅಂಗ ಸ್ನಾನ ಮಾಡಿ ಸುಗಂಧ ದ್ರವ್ಯವನ್ನು ಉಪಯೋಗಿಸಿದ ನಂತರ ಕಅಬಾದ ಮೂಲೆಯಲ್ಲಿ ನಿಲ್ಲಲಿ, ಬಹಳ ವಿನಯದಿಂದ ಕಅಬಾವನ್ನು ಚುಂಬಸಿದ ನಂತರ ಏಳು ಬಾರಿ ಕಅಬಾದ ಪ್ರದಕ್ಷಿಣೆ ಹಾಕಬೇಕು, ನಂತರ ಎಲ್ಲರೂ ಅಬೂ ಖುಬೈಸ್ ಬೆಟ್ಟದ ಮೇಲೆ ಹತ್ತಿ ಪ್ರಾರ್ಥನೆ ನಡೆಸಬೇಕು, ನಾಯಕನ ಸುತ್ತಲೂ ಎಲ್ಲರೂ ಒಟ್ಟು ಸೇರಬೇಕು, ಜೊತೆಯಲ್ಲಿ ಪವಿತ್ರ ವ್ಯಕ್ತಿಯನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಬೇಕು ಅದಕ್ಕೆ ಬಾಕಿರುವರೆಲ್ಲರೂ ಆಮೀನ್ ಹೇಳಬೇಕು ಎಂದು ಕೂಗಿ ಹೇಳಿದರು.
ಕವಯಿತ್ರಿಯೂ ಕೂಡ ಆಗಿದ್ದ ರುಖೈಖರವರು ಆದಷ್ಟೂ ಬೇಗ ಸ್ನಾನ ಮುಗಿಸಿ ಕಅಬಾದ ಪ್ರದಕ್ಷಿಣೆಯನ್ನು ಪೂರ್ತಿ ಗೊಳಿಸಿದರು, ಅಷ್ಟೊತ್ತಿಗೆ ಅಬ್ದುಲ್ ಮುತ್ತಲಿಬ್, ಅವರ ಮಕ್ಕಳು ಹಾಗೂ ಮಕ್ಕಾದ ಇತರ ಪ್ರಮುಖ ನೇತಾರರು ಅಲ್ಲಿಗೆ ತಲುಪಿದರು, ಕನಸಿನಲ್ಲಿ ತಿಳಿಸಲ್ಪಟ್ಟ ನೇತಾರ ಅಬ್ದುಲ್ ಮುತ್ತಲಿಬ್ ಆಗಿರುವರೆಂದು ಎಲ್ಲರಿಗೂ ಅರ್ಥವಾಯಿತು, ನಂತರ ಎಲ್ಲರೂ ಒಂದು ಸಂಘವಾಗಿ ಅಬೂ ಖುಬೈಸ್ ಬೆಟ್ಟದ ಮೇಲೆ ಹತ್ತಿದರು. ಬೆಟ್ಟದ ಮೇಲೆ ತಲುಪಿದ ನಂತರ ತಾತ ಅಬ್ದುಲ್ ಮುತ್ತಲಿಬರು ತಮ್ಮ ಏಳು ವಯಸ್ಸು ಪ್ರಾಯವಿರುವ ಮುಹಮ್ಮದ್ ﷺ ಮಗನನ್ನು ಕರೆದು ಮಡಿಲಿನಲ್ಲಿ ಕೂರಿಸಿ (ಅಥವಾ ಪವಿತ್ರ ವ್ಯೆಕ್ತಿಯನ್ನು ಮುಂದೆ ನಿಲ್ಲಿಸಿ) ಪ್ರಾರ್ಥನೆ ಆರಂಭಿಸಿದರು. ಓ ಅಲ್ಲಾಹನೇ ನಾವು ನಿನ್ನ ದಾಸರಾಗಿದ್ದೇವೆ, ನಿನ್ನ ದಾಸರ ಮಕ್ಕಳಾದ ನಾವು ಈಗ ಸಂಕಷ್ಟದಲ್ಲಿ ಸಿಲುಕಿದ್ದೇವೆ, ಬಹಳ ದಿನಗಳಿಂದ ನಾವು ಬರಗಾಲ ಅನುಭವಿಸುತ್ತಿದ್ದೇವೆ. ಅಲ್ಲಾಹನೇ... ಪರಿಮಿತಿಗಳನ್ನು ಪರಿಹರಿಸುವವನೇ... ಸಂಕಷ್ಟಗಳನ್ನು ನಿವಾರಿಸುವವನೇ.. ನಿನ್ನ ಪವಿತ್ರ ಕಅಬಾದ ಪರಿಸರದಲ್ಲಿ ನಾವು ಬರಗಾಲದಲ್ಲಿ ಸಿಲುಕಿದ್ದೇವೆ, ನಾವು ನಿನ್ನಲ್ಲಿ ದೂರು ಸಲ್ಲಿಸುತ್ತಿದ್ದೇವೆ ಒಡೆಯಾ... ನಮಗೆ ಮಳೆ ನೀಡಿ ಅನುಗ್ರಹಿಸು... ಸುಖ ಸಮೃದ್ಧಿಯನ್ನು ಒದಗಿಸುವ ಮಳೆ... ಎಲ್ಲರಿಗೂ ಹಿತವನ್ನು ಬಯಸುವ ಅನುಗ್ರಹವಾದ ಮಳೆ...
ರುಖೈಖ ಮುಂದುವರೆಸಿದರು.. ಅಬ್ದುಲ್ ಮುತ್ತಲಿಬರ ಪ್ರಾರ್ಥನೆ ಮುಗಿದದ್ದೇ ತಡ ಅನುಗ್ರಹಿತವಾದ ವರ್ಷಧಾರೆಯಾಗಳು ಆರಂಭಿಸಿತು, ಕಣಿವೆಗಳು ತುಂಬಿಕೊಂಡವು, ಎಲ್ಲರೂ ಬಹಳಷ್ಟು ಆನಂದಿಸಿದರು, ಮಕ್ಕಾ ನಿವಾಸಿಗಳು ಒಗ್ಗಟ್ಟಾಗಿ ಅಬ್ದುಲ್ ಮುತ್ತಲಿಬರಿಗೆ ಧನ್ಯವಾದ ಸಲ್ಲಿಸಿದರು. ಅವರು ಮಾಡಿದ ಒಳಿತನ್ನು ಬಹಳಷ್ಟು ಪ್ರಶಂಸಿಸಿದರು. ಈ ಘಟನೆಯನ್ನು ಸ್ಮರಿಸಿ ರುಖೈಖ ಒಂದು ಕವಿತಾ ಹೇಳಲು ಆರಂಭಿಸಿದರು. ಶೈಬತುಲ್ ಹಂದ್ (ಅಬ್ದುಲ್ ಮುತ್ತಲಿಬರ ಹೆಸರು) ಮೂಲಕ ಅಲ್ಲಾಹು ನಮಗೆ ಮಳೆಯನ್ನು ನೀಡಿದನು, ಬಹಳ ಸಮಯದ ನಂತರ ಒಂದು ಅನುಗ್ರಹ ವರ್ಷಧಾರೆ, ವನ್ಯಜೀವಿಗಳೂ, ಸಸ್ಯವರ್ಗಗಳೂ ಮೊಳಕೆಯೊಡೆತ್ತಲಿದೆ, ಬತ್ತಿ ಹೋದ ಕಣಿವೆಗಳು ಹಚ್ಚ ಹಸಿರಾಗುತ್ತಿದೆ, ವೈಭವಗಳು ಕೂಡಲೆಂದು ಅಲ್ಲಾಹನು ನೀಡಿದ ಮಳೆಯಾಗಿದೆ. "ಮುಳರ್ ಜನಾಂಗದಿಂದ ಉದಯಿಸಲಿರುವ ಸನ್ಮಾರ್ಗ ಬೋಧಕನ (ದೇವ ದೂತರು) ನಿಮಿತ್ತವಾಗಿ ಲಭಿಸಿದ ಮಳೆಯಾಗಿದೆ, ಆ ಪುಣ್ಯ ವ್ಯಕ್ತಿಯ ಕಾರಣದಿಂದಾಗಿದೆ ಇಂದು ಪ್ರಾರ್ಥನೆ ಸ್ವೀಕರಿಸಲ್ಪಟ್ಟದ್ದು. ಮನುಷ್ಯ ಕುಲದಲ್ಲೇ ಅತ್ಯುತ್ತಮ ವ್ಯೆಕ್ತಿತ್ವವಾಗಿದ್ದಾರೆ"
ಹೀಗೆ ಒಂದೊಂದು ಘಟನೆಗಳೂ ಮುಹಮ್ಮದ್ ﷺ ಮಗನ ಅಸಾಧಾರಣ ವ್ಯೆಕ್ತಿತ್ವವನ್ನು ಗುರುತಿಸುತ್ತಲೇ ಇತ್ತು, ಇದರ ನಡುವೆ ಮುತ್ತು ಪ್ರವಾದಿಯವರ ﷺ ಒಂದು ಕಣ್ಣಿಗೆ ರೋಗ ಬಾಧಿಸಿತು ಪಿತಾಮಹಾನರು ಹಲವಾರು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಕೊನೆಗೆ ಉಕ್ಕಾಲ್ ಮಾರುಕಟ್ಟೆಯಲ್ಲಿ ಒಬ್ಬರು ವೈದ್ಯರ ಕುರಿತು ಮಾಹಿತಿ ಲಭಿಸಿತು ಅವರೊಬ್ಬ ವೇಧ ಪಂಡಿತರು ಕೂಡ ಆಗಿದ್ದರು. ತಾತ ಅಬ್ದುಲ್ ಮುತ್ತಲಿಬರು ಮೊಮ್ಮಗನ್ನು ವೈದ್ಯರ ಬಳಿ ಕೊಂಡೊದರು. ಅವರು ಪರಿಶೀಲಿಸಿದ ನಂತರ ಈ ರೀತಿ ಹೇಳಿದರು ಇದೊಂದು ಸಾಧಾರಣ ಮಗುವಲ್ಲ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯಾಗಿದ್ದಾರೆ ﷺ ವೇದ ಪಂಡಿತರು ಈ ಮಗುವನ್ನು ಹಿಂಬಾಲಿಸುವರು, ಯಾವಾಗಲೂ ಬಹಳ ಶ್ರದ್ಧೆಯಿಂದಲೇ ಇರಬೇಕು ಎಂದು ಹೇಳಿ ಚಿಕಿತ್ಸೆಯನ್ನು ನೀಡಿದ ನಂತರ ಇಬ್ಬರೂ ಅಲ್ಲಿಂದ ಯಾತ್ರೆಯಾದರು.
ಈಗ ಮುತ್ತು ಪ್ರವಾದಿಯವರಿಗೆ ﷺ ಎಂಟು ವರ್ಷ ಪ್ರಾಯ ಕಳೆಯಿತು, ವಯ್ಯಸ್ಸಾಗಿದ್ದ ಕಾರಣ ತಾತ ಅಬ್ದುಲ್ ಮುತ್ತಲಿಬರಿಗೆ ದಣಿವಾಗತೊಡಗಿತು....
(ಮುಂದುವರಿಯುತ್ತದೆ..)
https://m.facebook.com/story.php?story_fbid=pfbid0KvXeoLM8SFvD9gdFRPsDhdPZdMfpUm3Yb34nA5K4SFJ5GM6JNHboTj7VvWGjdnikl&id=100024538882825
No comments:
Post a Comment