ಭಾಗ - 08
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬ್ದುಲ್ ಮುತ್ತಲಿಬರಿಗೆ ಈಗ 120 ವಯಸ್ಸು ಪ್ರಾಯವಾಯಿತು, (ಚರಿತ್ರೆಯಲ್ಲಿ 82,95,140,144 ಎನ್ನುವ ಅಭಿಪ್ರಾಯಗಳೂ ಇವೆ) ನಾನು ಈ ಲೋಕದಿಂದ ಯಾತ್ರೆಯಾಗುವ ಸಮಯ ಹತ್ತಿರವಾಯಿತೆಂದು ಅವರಿಗೆಯೇ ಅನಿಸತೊಡಗಿತು. ಆ ಸಂದರ್ಭದಲ್ಲಿ ಅವರ ಮನದಲ್ಲಿ ನನ್ನ ವಿಯೋಗದ ನಂತರ ಹಾಡಲಿರುವ ವಿರಹ ಕಾವ್ಯವನ್ನು ಕೇಳಬೇಕೆಂಬ ಅತ್ಯಾಗ್ರಹ ಉಂಟಾಯಿತು. ಸಾಮಾನ್ಯವಾಗಿ ಮರಣ ಹೊಂದಿದ ನಂತರ ಅವರ ಒಳ್ಳೆತನವನ್ನು ಎತ್ತಿ ಹಿಡಿದು ಹಾಡುವ ಕಾವ್ಯಕ್ಕೆ ಅಲ್ಲವೇ ವಿರಹ ಕಾವ್ಯವೆಂದು ಹೇಳುವುದು. ಅವರು ತಮ್ಮ ಕವಯಿತ್ರಿಗಳಾದ ಆರು ಹೆಣ್ಣು ಮಕ್ಕಳನ್ನು ಕರೆದರು, ಸ್ವಫೀಯ, ಬರ್'ರ, ಆತ್ವಿಕ, ಉಮ್ಮು ಹಕೀಮ್, ಉಮೈಮ, ಅರ್'ವ ಎನ್ನುವುದಾಗಿದೆ ಅವರ ಹೆಸರುಗಳು. ತಮ್ಮ ಮನದ ಆಗ್ರಹವನ್ನು ಮಕ್ಕಳಲ್ಲಿ ವ್ಯಕ್ತಪಡಿಸಿದರು, ಹಿರಿಯ ಮಗಳಾದ ಸ್ವಫೀಯರವರ ದೀರ್ಫಾವಾದ ಕಾವ್ಯವು ಅವರನ್ನು ಬಹಳಷ್ಟು ಸಂತೋಷಗೊಳಿಸಿತು, ಮರಣದ ಮುಂಚೆ ವಿರಹಕಾವ್ಯ ಕೇಳಿದ ವ್ಯಕ್ತಿ ಎನ್ನುವ ವಾರ್ತೆಯೂ ಹರಡಿತು. ಹೀಗೆ ಮಹಾಮನಿಷಿ ಅಬ್ದುಲ್ ಮುತ್ತಲಿಬರು ಇಹಲೋಕ ತ್ಯಜಿಸಿದರು.
ಪ್ರೀತಿಯ ತಾತ ಅಬ್ದುಲ್ ಮುತ್ತಲಿಬರ ವಿಯೋಗವೂ ಎಂಟು ವರ್ಷ ಪ್ರಾಯವಿರುವ ಮುಹಮ್ಮದ್ ﷺ ಮಗನ ಮನಸ್ಸನ್ನು ಆಳವಾಗಿ ಘಾಸಿಗೊಳಿಸಿತು. ತಂದೆಯನ್ನು ಒಂದು ಬಾರಿಯೂ ಕಾಣದ ಮಗನಿಗೆ ತಂದೆಯೂ, ತಾತವೂ ಕೂಡ ಅವರೇ ಆಗಿದ್ದರು. ತಾಯಿಯ ವಿಯೋಗದ ನಂತರ ಎಲ್ಲವೂ ತಾತ ಮಾತ್ರವಾಗಿದ್ದರು. ಅನಾಥನೆಂಬ ನೋವು ಮತ್ತೊಂದು ಬಾರಿಯೂ ಕೂಡ ಪ್ರವಾದಿಯವರಿಗೆ ﷺ ಸಹಿಸಬೇಕಾಯಿತು, ಅವರ ಕಣ್ಣುಗಳು ತೇವಗೊಂಡಿದ್ದವು. ಸಾಕು ತಾಯಿಯಾದ ಉಮ್ಮು ಐಮನ್ ಆ ಸಂದರ್ಭವನ್ನು ಈ ರೀತಿ ವಿವರಿಸುತ್ತಾರೆ, ಅಬ್ದುಲ್ ಮುತ್ತಲಿಬರು ಮರಣ ಹೊಂದಿದಾಗ ಪ್ರವಾದಿಯವರಿಗೆ ﷺ ಎಂಟು ವಯಸ್ಸು ಪ್ರಾಯವಾಗಿತ್ತು, ಪಿತಾಮಹಾನರ ಪಾರ್ಥಿವ ಶರೀರವನ್ನು ಮಲಗಿಸಿದ ಮಂಚದ ಹಿಂದೆ ನಿಂತು ಬಹಳ ದುಃಖದಿಂದ ಅಳುತ್ತಿರುದನ್ನು ನಾನು ಕಂಡೆನು. ವಿರಹ ವೇದನೆಯನ್ನು ಸಹಿಸೂದನ್ನು ಕಲಿತು, ಇನ್ನೊಬ್ಬರಿಗೆ ಕಲಿಸುವ ಸಂದರ್ಭವಾಗಿತ್ತು ಅದು.
ಅಬ್ದುಲ್ ಮುತ್ತಲಿಬರು ಕೂಡ ತಮ್ಮ ಮೊಮ್ಮಗನ ಕುರಿತು ಬಹಳಷ್ಟು ಚಿಂತಿತರಾಗುತ್ತಿದ್ದರು ಹಾಗಾಗಿ ಮಕ್ಕಳಲ್ಲಿ ಪ್ರತ್ಯೇಕವಾಗಿ ಕೆಲವು ವಿಷಯಗಳನ್ನು ಹೇಳಿದ್ದರು, ಪುಣ್ಯ ಪ್ರವಾದಿಯವರ ﷺ ಜವಾಬ್ದಾರಿಯನ್ನು ಅಬೂತ್ವಾಲಿಬರಿಗೆ ವಹಿಸಿಕೊಡಲಾಯಿತು. ಅವರು ತಂದೆ ಅಬ್ದುಲ್ಲಾಹ್'ರವರ ಸ್ವಂತ ಸಹೋದರನಾಗಿದ್ದರು. ಈ ವಿಷಯದಲ್ಲಿ ಒಂದು ಅಭಿಪ್ರಾಯ ಈ ರೀತಿಯೂ ಇದೆ ಅದೇನೆಂದರೆ ಅಬ್ದುಲ್ ಮುತ್ತಲಿಬರ ನಂತರ ಮುಹಮ್ಮದ್ ﷺ ಮಗನ ಸಂರಕ್ಷಣೆಯನ್ನು ಝುಬೈರ್ ಆಗ್ರಹಿಸಿದ್ದರು ಸಹೋದರನಾದ ಅಬೂತ್ವಾಲಿಬರೊಂದಿಗೆ ಸ್ಪರ್ಧೆ ನಡೆಯಿತು ಕೊನೆಗೆ ಚೀಟಿ ಹಾಕಲು ತೀರ್ಮಾನಿಸಿದರು, ಚೀಟಿಯಲ್ಲಿ ಅಬೂತ್ವಾಲಿಬರ ಹೆಸರು ಬಂದಿತು. ಪುಣ್ಯ ಪ್ರವಾದಿಯವರಿಗೂ ﷺ ಕೂಡ ಅಬೂತ್ವಾಲಿಬರ ಜೊತೆಯಲ್ಲಿ ಹೋಗುವುದೇ ಇಷ್ಟವಾಗಿತ್ತು. ಹಾಗಿದ್ದರೂ ಝುಬೈರ್ ಪ್ರವಾದಿವರ್ಯರನ್ನು ﷺ ಬಹಳಷ್ಟು ಕಾಳಜಿ ವಹಿಸುತ್ತಿದ್ದರು ಪ್ರವಾದಿಯವರ ﷺ 14 ನೇ ವಯಸ್ಸಿನಲ್ಲಿ ಅವರೂ ಕೂಡ ಇಹಲೋಕ ತ್ಯಜಿಸಿದರು. ನಂತರ ಮುಹಮ್ಮದ್ ﷺ ಮಗನ ಸಂಪೂರ್ಣ ಜವಾಬ್ದಾರಿ ಅಬೂತ್ವಾಲಿಬರಿಗೆ ಸೇರಿತು.
ಕ್ರಿ. ಶ 579 ರಲ್ಲಾಗಿತ್ತು ಅಬ್ದುಲ್ ಮುತ್ತಲಿಬರು ಮರಣ ಹೊಂದಿದ್ದು ಮಕ್ಕ ಪಟ್ಟಣದ ಅಲ್ ಹಜೂನ್ ಪ್ರಾಂತ್ಯದಲ್ಲಿ ಮುತ್ತಾತ ಖುಸಯ್ಯ್ ಅವರ ಪಕ್ಕದಲ್ಲೇ ತಾತ ಅಬ್ದುಲ್ ಮುತ್ತಲಿಬರನ್ನು ಕೂಡ ಸಮಾಧಿ ಮಾಡಲಾಯಿತು.
ತಂದೆಯ ಹಾಗೆ ಅಬೂತ್ವಾಲಿಬರಿಗೂ ಮಕ್ಕಾದ ನಾಯಕತ್ವ ಲಭಿಸಿತಾದರೂ ಅವರ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ, ಅತೀ ಹೆಚ್ಚು ಸದಸ್ಯರಿರುವ ತಮ್ಮ ಕುಟುಂಬದ ಖರ್ಚುಗಳನ್ನೇ ನಿಭಾಯಿಸಲು ಬಹಳ ಕಷ್ಟಪಡುತ್ತಿದ್ದರು. ಆದರೆ ಪುಣ್ಯ ಪ್ರವಾದಿಯವರ ﷺ ಆಗಮನವು ಅವರಿಗೊಂದು ಆಶ್ವಾಸನೆಯಾಯಿತು ಪ್ರವಾದಿಯವರು ﷺ ಜೊತೆಯಲ್ಲಿರುವಾಗ ಸ್ವಲ್ಪ ಆಹಾರವೂ ಕೂಡ ಎಲ್ಲರ ಹಸಿವನ್ನು ನೀಗಿಸುತ್ತಿತ್ತು. ಪ್ರೀತಿಯ ಮುದ್ದು ಮಗನು ಬರುವವರೆಗೂ ಅಬೂ ತ್ವಾಲಿಬರು ಕಾಯಲು ಹೇಳುತ್ತಿದ್ದರು, ಹಾಲು ಕುಡಿಯುವಾಗಲು ಅಷ್ಟೇ ಮೊದಲು ಪ್ರವಾದಿಯವರಿಂದಲೇ ﷺ ಆರಂಭ, ನಂತರವೇ ಮಕ್ಕಳಿಗೆ ನೀಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಮುದ್ದು ಮಗನ ಕಾರಣದಿಂದ ಲಭಿಸಿದ ಅನುಗ್ರಹವನ್ನು ಹೇಳುತ್ತಾ ಪ್ರಶಂಸಿಸುತಿದ್ದರು. ಮುದ್ದು ಮಗುವಿನ ಪ್ರತೀ ಚಲನೆ ವಲನೆಗಳನ್ನೂ ವೀಕ್ಷಿಸುತ್ತಾ ಯಾವುದೇ ಕಾರಣಕ್ಕೂ ತಬ್ಬಲಿತನದ ನೋವು ಕಾಡಬಾರದೆಂದು ಜೊತೆಯಲ್ಲಿಯೇ ಇರಿಸುತ್ತಿದ್ದರು.
ಏನೇ ಆದರೂ ಬಹುಶಃ ಅನಾಥನೆಂಬೂದು ದುರದೃಷ್ಟವಲ್ಲವೇ ಎನ್ನುವ ಸಂಶಯ ಬರಲೂಬಹುದು...
(ಮುಂದುವರಿಯುತ್ತದೆ...)
#mahabbacampaign #taybacentre #farooqnaeemi #muthunabi #tweet #tayba #Mahabba
No comments:
Post a Comment