ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪುಣ್ಯ ಪ್ರವಾದಿಯವರ ﷺ ವಿಶೇಷತೆಗಳನ್ನು ಚೆನ್ನಾಗಿ ಅರಿತಿದ್ದ ವ್ಯಕ್ತಿಯಾಗಿದ್ದರಲ್ಲವೇ ಅಬೂತ್ವಾಲಿಬ್. ಸಂಕಷ್ಟದ ಸಂದರ್ಭದಲ್ಲಿ ಅದು ನಮಗೆ ಅನುಗ್ರಹವಾಗಬಹುದು ಎಂದು ಅವರಿಗೆ ಅರ್ಥವಾಯಿತು. ಜಲ್'ಹಮತು ಬಿನ್ ಅರ್'ಫತ್ವ ಎನ್ನುವವರು ಕಠಿಣವಾದ ಬರಗಾಲದ ಸಂದರ್ಭದಲ್ಲಿ ಮಕ್ಕ ಪಟ್ಟಣಕ್ಕೆ ತೆರಳಿದ್ದಾಗ ಅಲ್ಲಿ ಖುರೈಶಿಗಳು ಅಬೂತ್ವಾಲಿಬರಲ್ಲಿ ವಿನಂತಿಸೂದನ್ನು ಈ ರೀತಿ ವಿವರಿಸುತ್ತಾರೆ. ಅಬೂತ್ವಾಲಿಬ್'ರವರೇ ಕಣಿವೆಗಳು ಬತ್ತಿ ಹೋಗಿದೆ, ನಮ್ಮ ಕುಟುಂಬವೂ ಹಸಿವಿನಿಂದ ನರಳುತ್ತಿದೆ, ತಾವೊಮ್ಮೆ ಮುಂದೆ ನಿಂತು ಮಳೆಗಾಗಿ ಪ್ರಾರ್ಥಿಸಿದರೆ ಬಹಳ ಉತ್ತಮವಾಗಿತ್ತು ಎಂದು. ಅಬೂತ್ವಾಲಿಬರು ಪ್ರಾರ್ಥಿಸಲು ತಯಾರಾದರು ಅವರ ಜೊತೆಯಲ್ಲಿ ಬಹಳ ಸುಂದರನಾದ ಒಬ್ಬ ಬಾಲಕನಿದ್ದರು , ಕಗ್ಗತ್ತಲು ತುಂಬಿದ ವಾತಾವರಣದಲ್ಲಿ ಬಾನಿನ ಅಂದವನ್ನು ಹೆಚ್ಚಿಸುವ ಪೂರ್ಣ ಚಂದಿರನ ಹಾಗೆ ಆ ಮಗನ ಮುಖವು ಹೊಳೆಯುತ್ತಿತ್ತು. ಯಾರನ್ನೂ ಆಕರ್ಷಿಸುವ ನೋಟವಾಗಿತ್ತು ಅದು. ಅವರ ಜೊತೆಯಲ್ಲಿ ಸುತ್ತಲೂ ಯುವಕರಿದ್ದರು.
ಅಬೂತ್ವಾಲಿಬ್ ಆ ಮಗನನ್ನು ತನ್ನ ಭುಜದಲ್ಲಿ ಕುಳ್ಳಿರಿಸಿ ಕಅಬಾದ ಸಮೀಪ ತಲುಪಿದರು, ಕಅಬಾದ ಗೋಡೆಗೆ ಮಗನನ್ನು ತಾಗಿಸುವ ಹಾಗೆ ಮಗನನ್ನು ಎತ್ತಿ ಹಿಡಿದರು. ಆ ಸಂದರ್ಭದಲ್ಲಿ ಬಾನಿನಲ್ಲಿ ಸ್ವಲ್ಪವೂ ಕೂಡ ಮೋಡವಿರಲಿಲ್ಲ ಆದರೆ ಏನದ್ಭುತ ನಿಮಿಷಗಳೊಳಗೆ ಎಲ್ಲಾ ಕಡೆಗಳಲ್ಲೂ ಕಾರ್ಮೋಡ ಕವಿಯಿತು. ಅನುಗ್ರಹಿತವಾದ ವರ್ಷಧಾರೆಯಾಯಿತು ಮಕ್ಕಾ ಜನತೆಯು ಸಂತೋಷದಿಂದ ಕುಣಿದರು, ಕಣಿವೆಗಳು ತುಂಬಿ ತುಳುಕತೊಡಗಿತು. ಈ ಘಟನೆಯನ್ನು ಸ್ಮರಿಸಿ ನಂತರದ ದಿನಗಳಲ್ಲಿ ಅಬೂತ್ವಾಲಿಬರು ಸುಂದರವಾದ ಕವಿತೆ ಹೇಳಿದ್ದರು ಅದನ್ನು ಕೇಳುವುದು ಕೂಡ ಪ್ರವಾದಿಯವರಿಗೆ ﷺ ತುಂಬಾ ಇಷ್ಟವಾಗಿತ್ತು.
ಹದಿನೆಂಟು ವರ್ಷದ ನಂತರ ಮದೀನದಲ್ಲಿ ಬರಗಾಲ ಉಂಟಾಗಿತ್ತು ಆ ಸಂದರ್ಭದಲ್ಲಿ ಪ್ರವಾದಿವರ್ಯರು ﷺ ಮಳೆಗಾಗಿ ಪ್ರಾರ್ಥಿಸಿದ್ದರು ತಕ್ಷಣವೇ ಬಂದ ಅನುಗ್ರಹಿತ ವರ್ಷಧಾರೆಯಿಂದ ಮದೀನ ಜನತೆಯೂ ಸಂತೋಷದಿಂದ ಆಹ್ಲಾದಿಸಿದರು. ಆ ಸಂತೋಷದ ನಡುವಿನಲ್ಲೂ ಪುಣ್ಯ ಪ್ರವಾದಿಯವರು ﷺ ಕಂಬನಿ ವರೆಸುತ್ತಾ ಅಬೂತ್ವಾಲಿಬರು ಈ ಸಂದರ್ಭದಲ್ಲಿ ಬದುಕಿರುತಿದ್ದರೆ ಬಹಳಷ್ಟು ಸಂತೋಷ ಪಡುತ್ತಿದ್ದರು ಎಂದು ಹೇಳಿತ್ತಾ ಜೊತೆಯಲ್ಲಿದ್ದ ಗುಂಪಿನೊಂದಿಗೆ ಅಬೂತ್ವಾಲಿಬರು ಹಾಡಿದ್ದ ಆ ಕವಿತೆ ಯಾರಿಗಾದರೂ ನೆನಪಿದೆಯಾ? ಎಂದು ಕೇಳಿದರು. ಆ ಸ್ಥಳದಲ್ಲಿ ಅಬೂತ್ವಾಲಿಬರ ಮಗನಾದ ಅಲಿಯವರು (ರ) ಉಪಸ್ಥಿತರಿದ್ದರು ತಕ್ಷಣವೇ ಆ ಕವಿತೆಯನ್ನು ಅವರು ಹಾಡಿದಾಗ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಯಿತು.
ಅಬೂತ್ವಾಲಿಬರಿಗೆ ಉಂಟಾದ ಜೀವನ ಅನುಭವಗಳು ಅಲ್ಲಿಗೆ ಕೊನೆಯಾಗಿರಲಿಲ್ಲ ಅಬೂತ್ವಾಲೀಬರಿಂದ ಅಂರ್ ಬಿನ್ ಸಈದ್ ಎನ್ನುವವರು ಈ ರೀತಿ ವಿವರಿಸುತ್ತಾರೆ. ನಾನು ಸಹೋದರನ ಮಗನಾದ ಮುಹಮ್ಮದ್ ﷺ ಮಗನೊಂದಿಗೆ ದುಲ್ ಮಜಾಲಿಸ್ ಎನ್ನುವ ಸ್ಥಳದಲ್ಲಿದ್ದೆ ನನಗೆ ತೀವ್ರವಾದ ಹಸಿವು, ದಾಹವುಂಟಾಯಿತು. ಮಗನೇ ಬಹಳಷ್ಟು ಬಾಯಾರಿಕೆ ಆಗುತ್ತಿದೆ ಅಲ್ಲವೇ ಎಂದು ಮಗನಲ್ಲಿ ಕೇಳಿದಾಗ, ಅಪ್ಪ ನಿಮಗೆ ಬಹಳಷ್ಟು ಬಾಯಾರಿಕೆಯಾಗುತ್ತಿದೆ ಅಲ್ಲವೇ ಎಂದು ತಿರುಗಿ ನನ್ನಲ್ಲಿಯೇ ಕೇಳಿದರು ಹೌದು ಮಗನೇ ಎಂದು ಪುನಃ ಉತ್ತರಿಸಿದೆನು. ತಕ್ಷಣವೇ ಮುಹಮ್ಮದ್ ﷺ ಮಗನು ಪಕ್ಕದಲ್ಲೇ ಇದ್ದ ಬಂಡೆಯ ಮೇಲೆ ಸಣ್ಣದಾಗಿ ಒಮ್ಮೆ ಹೆಜ್ಜೆಯಿಟ್ಟರು ಏನದ್ಭುತ ಶುದ್ಧವಾದ ಹೊಳೆಯುವ ನೀರು ಬಂಡೆಯಿಂದ ಹರಿಯತೊಡಗಿತು. ನನ್ನ ದಾಹ ತೀರುವವರೆಗೂ ಕುಡಿದ ನಂತರ ಮುಹಮ್ಮದ್ ಮಗನು ಅಪ್ಪ ನಿಮ್ಮ ಬಾಯಾರಿಕೆ ಮುಗಿಯಿತೇ.? ಎಂದು ಪುನಃ ಕೇಳಿದಾಗ ಹೌದು ಮುಗಿಯಿತು ಎಂದು ಉತ್ತರಿಸಿದನು. ಆ ಸಂದರ್ಭದಲ್ಲಿ ಮಗನು ಅದೇ ಬಂಡೆಯ ಮೇಲೆ ಮತ್ತೊಮ್ಮೆ ಹೆಜ್ಜೆ ಇಟ್ಟಾಗ ಆ ಬಂಡೆಯು ಹಿಂದಿನ ಅದೇ ಅವಸ್ಥೆಗೆ ಬದಲಾಯಿತು. ನೀರು ಹರಿಯುವುದು ಕೂಡ ಸಂಪೂರ್ಣವಾಗಿ ನಿಂತಿತು. ಈ ಘಟನೆಯನ್ನು ಇಮಾಮ್ ಇಬ್'ನು ಸಅದ್'ರವರು (ರ) ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಜನ ಸಾಮಾನ್ಯರ ಮುಂದೆ ಮುಹಮ್ಮದ್ ﷺ ಮಗನ ವಿಸ್ಮಯಗಳು ಕಾಣತೊಡಗಿದ ನಂತರ ಅಬೂತ್ವಾಲಿಬರು ಮಗನ ಕುರಿತು ಬಹಳಷ್ಟು ಜಾಗರೂಕರಾಗಿದ್ದರು. ವೇದ ಪಂಡಿತರ, ಜೋತಿಷ್ಯರ ವಂಚನೆಯಲ್ಲಿ ಬೀಳದೆ ಬಹಳಷ್ಟು ಕಾಳಜಿ ವಹಿಸತೊಡಗಿದರು. ಒಂದು ದಿನ ಅಸದ್ ಶನುಅ ಜನಾಂಗದ ತಜ್ಞ ಜ್ಯೋತಿಷಿಯೊಬ್ಬರು ಮಕ್ಕಾ ಪಟ್ಟಣಕ್ಕೆ ಬಂದಿದ್ದರು ಮುಖ ಲಕ್ಷಣಗಳನ್ನು ನೋಡಿ ಹೇಳುತ್ತಿದ್ದ ವಿಷಯಗಳಲ್ಲಿ ಕೆಲವೊಂದು ನಿಜವಾಗುತ್ತಿತ್ತು. ಲಹಬ್ ಬಿನ್ ಅಹ್'ಜನ್ ಎಂದಾಗಿತ್ತು ಅವರ ಹೆಸರು. ಮೂಢನಂಬಿಕೆಗಳಲ್ಲಿ ಅಧಿಕ ವಿಶ್ವಾಸವಿರಿಸುತ್ತಿದ್ದ ಅವತ್ತಿನ ಮಕ್ಕಾ ನಿವಾಸಿಗಳು ತಮ್ಮ ಮಕ್ಕಳನ್ನು ಅವರ ಬಳಿ ಕರೆದುಕೊಂಡು ಹೋಗುತ್ತಿದ್ದರು. ಅವರು ಅಬೂತ್ವಾಲಿಬರನ್ನು ಕಂಡ ತಕ್ಷಣವೇ ಅವರ ಜೊತೆಯಲ್ಲಿದ್ದ ಮುಹಮ್ಮದ್ ﷺ ಮಗನನ್ನು ನೋಡತೊಡಗಿದರು ಆ ನೋಟವನ್ನು ಕಂಡ ಅಬೂತ್ವಾಲಿಬರಿಗೆ ಯಾಕೋ ಕಸಿವಿಸಿಯಾಯಿತು ತಕ್ಷಣ ಅಬೂತ್ವಾಲಿಬರು ಅವರ ಗಮನವನ್ನು ಬೇರೆ ಕಡೆ ಬದಲಾಯಿಸಿ ಅದರ ನಡುವೆ ಮಗನನ್ನು ಅಲ್ಲಿಂದ ಅಡಗಿಸಿದರು. ನಂತರ ಲಹಬ್ ಆ ಮಗುವೆಲ್ಲಿ? ನಾನೀಗ ಕಂಡ ಆ ಮಗುವನ್ನು ಮತ್ತೊಮ್ಮೆ ಕಾಣಲೇನು! ಆ ಮಗುವಿಗೆ ಉಜ್ವಲ ಭವಿಷ್ಯವಿದೆ ಎಂದು ಬಹಳಷ್ಟು ಬಾರಿ ಹೇಳುತ್ತಲೇ ಇದ್ದರು.
ಜವಾಬ್ದಾರಿಯಿರುವ ಪೋಷಕರು ಹಾಗೆ ಸಂಪೂರ್ಣ ಕಾಳಜಿಯೊಂದಿಗೆ ನೆರಳಿನ ಹಾಗೆ ಅಬೂತ್ವಾಲಿಬರು ಯಾವಾಗಲೂ ಜೊತೆಯಲ್ಲಿಯೇ ಇರುತ್ತಿದ್ದರು. ಸುದೀರ್ಘವಾದ ಯಾತ್ರೆಯಾದರೂ ಕೂಡ ಜೊತೆಗೆ ಕೊಂಡೊಗುತಿದ್ದರು. ಅಂತಹ ಸಂದರ್ಭಗಳಲ್ಲೂ ವಿಸ್ಮಯಕಾರಿ ಅದ್ಭುತ ಅನುಭವಗಳನ್ನು ಅವರು ಕಾಣುತಿದ್ದರು.
(ಮುಂದುವರೆಯುವುದು...)
No comments:
Post a Comment