Abu Hisham Saquafi

Official Website Of Hafiz Ilyas Saquafi Padaladka

Sunday, June 26, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -11 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಮುದ್ದು ಮಗನನ್ನೂ, ಮಕ್ಕಾ ಪಟ್ಟಣವನ್ನೂ ಬಿಟ್ಟು ಹೋಗಲು ಅಬೂತ್ವಾಲೀಬರಿಗೆ ಒಂದಿಷ್ಟು ಇಷ್ಟವಿರಲಿಲ್ಲ ಆದರೆ ಕುಟುಂಬದ ಸಂಕಷ್ಟದ ಕಾರಣ ವ್ಯಾಪಾರಕ್ಕೆ ತೆರಳದೆ ಬೇರೆ ದಾರಿಯೂ ಇಲ್ಲ. ಮಕ್ಕ ನಿವಾಸಿಗಳ ಮೂಲ ಕಸುಬು ವ್ಯಾಪಾರವಾಗಿತ್ತು ಅದೂ ಕೂಡ ನಿರ್ದಿಷ್ಟ ಕಾಲಾವಧಿಯ ವ್ಯಾಪಾರಗಳಾಗಿತ್ತು ಅವರ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತಿದ್ದದ್ದು. 

     ಸದ್ಯಕ್ಕೆ ಮಗನನ್ನು ಇನ್ನೊಬ್ಬರಿಗೆ ಜವಾಬ್ದಾರಿ ವಹಿಸಿ ಹೋಗೋಣ ಎಂದು ತೀರ್ಮಾನಿಸಿ ತಮ್ಮ ಯಾತ್ರೆಗಳಿಗೆ ಬೇಕಾದ ಸಂಪೂರ್ಣ ತಯಾರಿ ನಡೆಸಿದರು. ಆಗಲೇ ಮುಹಮ್ಮದ್ ﷺ ಮಗನ ಮುಖದ ಭಾವನೆ ಬದಲಾಗ ತೊಡಗಿತು. ಅಬೂತ್ವಾಲಿಬರ ಒಂಟೆಯ ಲಗಾಮು ಹಿಡಿದು ಅಪ್ಪ ನನ್ನನ್ನು ಒಬ್ಬನನ್ನು ಬಿಟ್ಟು ಹೋಗುತಿದ್ದೀರಾ.? ತಂದೆ, ತಾಯಿ ಇಬ್ಬರೂ ಇಲ್ಲದ ನಾನು ಇಲ್ಲಿ ಒಬ್ಬಂಟಿಯಾಗುದಿಲ್ಲವೇ.? ನನ್ನನ್ನು ಕೂಡ ಜೊತೆಯಲ್ಲಿ ಕರೆದುಕೊಂಡು ಹೋಗಿರಿ. ಎಂದು ಅಳುವ ಮುಖದೊಂದಿಗೆ ಮುಹಮ್ಮದ್ ﷺ ಮಗನು ಕೇಳಿದಾಗ. 
     ತನ್ನನ್ನು ಬಿಟ್ಟಿರಲು ಮುಹಮ್ಮದ್ ﷺ ಮಗನಿಗೂ ಸಾಧ್ಯವೇ ಇಲ್ಲ ಎನ್ನುವ ಸತ್ಯ ಅಬೂತ್ವಾಲಿಬರಿಗೂ ಅರ್ಥವಾಯಿತು. ಮಗನ ಮೇಲೆ ಅನುಕಂಪ, ಪ್ರೀತಿ, ವಾತ್ಸಲ್ಯ ಉಕ್ಕಿ ಹರಿಯಿತು. ಮಗನನ್ನು ತಬ್ಬಿಕೊಂಡು ಮುದ್ದು ಮಗನೇ "ಅಲ್ಲಾಹನಾಣೆ ನಾನು ಖಂಡಿತ ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವೆನು ಮಗನನ್ನು ಬಿಟ್ಟಿರಲು ನನ್ನಿಂದಲೂ ಸಾಧ್ಯವಿಲ್ಲ " ಎಂದು ಹೇಳಿದರು.
    ನಾಲ್ಕು ವರ್ಷದ ಬೇರ್ಪಡಿಸಲಾಗದ ಅನುಬಂಧವಾಗಿತ್ತು ಅದು. 12 ವರ್ಷ ಪ್ರಾಯವಿರುವ ಮುಹಮ್ಮದ್ ﷺ ಮಗನೂ ಕೂಡ ತಮ್ಮ ದೊಡ್ಡಪ್ಪರೊಂದಿಗೆ ಯಾತ್ರೆಯಲ್ಲಿ ಸೇರಿದರು. ಶಾಮ್ (ಇವತ್ತಿನ ಸಿರಿಯಾ) ನಗರಕ್ಕೆ ಯಾತ್ರೆ ಮುಂದುವರಿಸಿದರು. 
  ಸಾಮಾನ್ಯವಾಗಿ ಯಾತ್ರೆಯ ಮದ್ಯೆ ವಿಶ್ರಾಂತಿ ಕೇಂದ್ರಗಳಲ್ಲಿ ವಿಶ್ರಾಂತಿ ಪಡೆದು ಯಾತ್ರೆ ಮುಂದುವರಿಸುವುದಾಗಿತ್ತು ವಾಡಿಕೆ. ಯಾತ್ರಾ ಸಂಘವು ಬುಸ್'ರ (ಇವತ್ತಿನ ಸಿರಿಯಾದ ಹೌರಾನ್) ಪಟ್ಟಣಕ್ಕೆ ತಲುಪಿತು, ಸಾಮಾನ್ಯವಾಗಿ ಯಾವಾಗಲೂ ಖುರೈಶಿಗಳ ವ್ಯಾಪಾರ ಸಂಘ ಡೇರೆ ಹಾಕುವ ಸ್ಥಳದಲ್ಲಿಯೇ ಈ ಬಾರಿಯೂ ಕೂಡ ಡೇರೆ ಹಾಕಿದರು.

    ಅದರ ಪಕ್ಕದಲ್ಲೇ ಜರ್'ಜಿಸ್ ಎನ್ನುವ ಒಬ್ಬರು ವೇದ ಪಂಡಿತರ ಆಶ್ರಮವಿತ್ತು. ಆ ಕಾಲದ ವೇದ ಜ್ಞಾನಿಗಳಲ್ಲಿ ಪ್ರಮುಖರಾಗಿದ್ದರು ಅವರು. ಆಧ್ಯಾತ್ಮಿಕ ಗುರುವಿನ ಪರಂಪರೆಯಲ್ಲಿ ಪ್ರವಾದಿ ಈಸರವರ (ಅಲೈಹಿಸಲಾಂ) ನಂತರ ಆರನೇ ವ್ಯಕ್ತಿಯಾಗಿದ್ದರು ಜರ್ಜಿಸ್. ಅವರ ಪರಂಪರೆಯು ಈ ರೀತಿಯಾಗಿದೆ. ಪ್ರವಾದಿ ಈಸ (ಅ) - ಪವಾದಿ ಯಹ್ಯಾ (ಅ) - ಪ್ರವಾದಿ ದಾನಿಯೆಲ್ (ಅ) - ಪಂಡಿತ ದಸೀಖ - ಪಂಡಿತ ನಸ್ವ್'ತುರಸ್ - ಅವರ ಮಗ ಮೌಈದ್ - ಜರ್ಜಿಸ್. ಎಂದು ಅಬ್ದುಲ್ಲಾಹ್ ಅಲ್ ಇಸ್ವ್'ಬಹಾನಿ ಉಲ್ಲೇಖಿಸಿದ್ದಾರೆ. ಬಹೀರ ಎನ್ನುವ ಹೆಸರಿನಿಂದಾಗಿತ್ತು ಅವರನ್ನು ಕರೆಯುತ್ತಿದ್ದದ್ದು. ಬಹಳ ಆಳವಾದ ಜ್ಞಾನವಿರುವ ವೇದ ಪಂಡಿತ ಎಂದಾಗಿದೆ ಬಹೀರ ಎನ್ನುವ ಹೆಸರಿನ ಅರ್ಥ. ಇವರು ಯಹೂದಿಗಳೋ ಅಥವಾ ಕ್ರೈಸ್ತರೋ ಎನ್ನುವುದರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ಮೊದಲು ಮೂಸ ಪ್ರವಾದಿಯವರ (ಅ) ದಾರಿಯಲ್ಲಿಯೂ ನಂತರ ಈಸ ಪ್ರವಾದಿಯವರ (ಅ) ದಾರಿಯಲ್ಲಿಯೂ ಎನ್ನುವ ಅಭಿಪ್ರಾಯಗಳೂ ಕೂಡ ಉಲ್ಲೇಖಿಸಲಾಗಿದೆ. ಏನೇ ಇರಲಿ ಜರ್ಜಿಸ್ ಖುರೈಶ್ ಯಾತ್ರೆ ಸಂಘವನ್ನು ನಿರೀಕ್ಷಿಸುತ್ತಿದ್ದರು ಅದರಲ್ಲಿ ಕೆಲವೊಂದು ವೈಶಿಷ್ಟ್ಯತೆಗಳು ಅವರ ಗಮನಕ್ಕೆ ಬಂದಿತು.

    ಬಹೀರ ಆಲೋಚಿಸ ತೊಡಗಿದರು ಯಾರಿಗಾಗಿರಬಹುದು ಈ ಮೊಡವು ಇವರೊಂದಿಗೆ ಚಲಿಸುತ್ತಿರುವುದು, ಮೋಡ ನೆರಳು ನೀಡುತ್ತಿರುವ ಆ ವ್ಯಕ್ತಿಯನ್ನು ಹೇಗೆ ಭೇಟಿಯಾಗುವುದು, ಸಾಮಾನ್ಯವಾಗಿ ನಾನು ಹೊರಗೆ ಹೋಗುವುದೂ ಇಲ್ಲ, ಯಾತ್ರೆಯ ಗುಂಪುಗಳು ಕೂಡ ಬಹಳಷ್ಟು ಹೋಗುತ್ತಲೇ ಇರುತ್ತದೆ ನಾನು ಗಮನಿಸುವುದು ಇಲ್ಲ. ಕೊನೆಗೆ ಒಂದು ಉಪಾಯ ಹೊಳೆಯಿತು ಒಂದು ಔತಣ ಆಯೋಜಿಸಿ ಅವರನ್ನು ಆಮಂತ್ರಿಸಿದರೆ ಹೇಗೆ.? ಯಾತ್ರಾ ಸಂಘವು ಕೂಡ ಅವರ ಆಮಂತ್ರಣ ಸ್ವೀಕರಿಸಿ ಔತಣಕ್ಕೆ ತಲುಪಿದರು ಎಲ್ಲರನ್ನೂ ಬಹಳ ಗೌರವದಿಂದಲೇ ಸ್ವೀಕರಿಸಲಾಯಿತು. ಬಂದ ಅತಿಥಿಗಳಿಗೂ ಬಹಳ ಸಂತೋಷವಾಗಿತ್ತು ಯಾಕೆಂದರೆ ಬುಸ್'ರ ಪಟ್ಟಣದ ಮಹಾ ಪಂಡಿತರಲ್ಲವೇ ಔತಣಕ್ಕೆ ಆಮಂತ್ರಿಸಿದ್ದು. ಬಹಳ ಗಾಂಭೀರ್ಯತೆ ತುಂಬಿರುವ ಪ್ರೌಢಿಯಾದ ಮುಖ, ಅವರ ಅತ್ಯುತ್ತಮ ನಡವಳಿಕೆ ಕಂಡು ಬಂದ ಅಥಿತಿಗಳಿಗೂ ಒಂದು ಕ್ಷಣ ಆಶ್ಚರ್ಯವಾಯಿತು. 

    ಆದರೆ ಬಹೀರರ ನೋಟ ಮಾತ್ರ ಏನನ್ನೋ ಹುಡುಕುತ್ತಿತ್ತು. ಮೋಡ ನೆರಳು ನೀಡಿದ್ದ ಆ ಯಾತ್ರಿಕ ಎಲ್ಲಿ.? ಔತಣಕ್ಕೆ ಬಂದವರಲ್ಲಿ ಅವರನ್ನು ಕಾಣುತ್ತಿಲ್ಲವಲ್ಲ.? ಆ ಪಂಡಿತರು ಯಾತ್ರಾ ಗುಂಪಿನೊಂದಿಗೆ ಕೇಳಿಯೇ ಬಿಟ್ಟರು ನಾನು ನಿಮ್ಮ ಗುಂಪಿನಲ್ಲಿರುವ ಎಲ್ಲಾರನ್ನಾಗಿತ್ತು ಔತಣಕ್ಕೆ ಆಮಂತ್ರಿಸಿದ್ದು, ಯಾರೊಬ್ಬರೂ ಬಾಕಿಯಾಗದೆ ಬಂದ್ದಿದ್ದೀರಿ ಅಲ್ಲವೇ.? ಅದರ ನಡುವೆ ಒಬ್ಬರು ಕೇಳಿಯೇ ಬಿಟ್ಟರು. ನಾವು ಬಹಳಷ್ಟು ಬಾರಿ ಇದೇ ದಾರಿಯಲ್ಲಿ ಸಂಚರಿಸಿದ್ದೇವೆ ಆದರೆ ಇಷ್ಟು ದಿನ ಇಲ್ಲದ ಈ ಒಂದು ಔತಣ ಈಗ ಯಾಕೆ.? ಹೌದು ನೀವು ಅಥಿತಿಗಳಲ್ಲವೇ ಹಾಗಾಗಿ ಒಮ್ಮೆ ಔತಣಕ್ಕೆ ಆಮಂತ್ರಣ ನೀಡಿದ್ದು ಎಂದು ಮಾತ್ರ, ಹಾಗಾದರೆ ಇನ್ನೂ ಕೂಡ ಯಾರೋ ಬರಲು ಬಾಕಿರುವವರು ಅಲ್ಲವೇ.? 

(ಮುಂದುವರಿಯುವುದು...)

#mahabbacampaign #Taybacentre #farooqnaeemi #kannada #muthunabi #tweet #tayba #HindiNews #Mahabba #englishtranslation

No comments: