Abu Hisham Saquafi

Official Website Of Hafiz Ilyas Saquafi Padaladka

Tuesday, June 28, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -12 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಹೌದು ನಮ್ಮ ಜೊತೆಯಲ್ಲಿ ಬಹಳ ಕಿರಿಯ ವಯ್ಯಸಿನ ವ್ಯಕ್ತಿಯೊಬ್ಬರು ತಮ್ಮ ವ್ಯಾಪಾರ ಸಾಮಾಗ್ರಿಗೊಳೊಂದಿಗೆ ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಿರಿಯರು ಎಲ್ಲರೂ ಬಂದಿದ್ದೇವೆ ಎಂದು ಗುಂಪಿನಲ್ಲಿದ್ದ ಒಂದು ವ್ಯಕ್ತಿ ಹೇಳಿದರು. ಅದಕ್ಕೆ ಅದು ಸರಿಯಲ್ಲ ಅವರನ್ನೂ ಕೂಡ ಕರೆಯಿರಿ ಎಂದು ಪುನಃ ಬಹೀರ ಹೇಳಿದಾಗ. ಅಬ್ದುಲ್ಲಾಹ್ (ರ) ಅವರ ಮಗ ಮುಹಮ್ಮದರನ್ನು ﷺ ಬಿಟ್ಟು ಬಂದದ್ದು ಸರಿಯಲ್ಲ ಎಂದು ಜೊತೆಯಲ್ಲಿದ್ದ ಮತ್ತೊಂದು ವ್ಯಕ್ತಿ ಹೇಳಿದರು. ಇದನ್ನು ಕೇಳಿದಾಗ ಬಹೀರರ ಮನಸ್ಸು ಒಮ್ಮೆಲೆ ಮಂದಹಾಸ ಬೀರಿತು ಮುಹಮ್ಮದ್ ﷺ ಎನ್ನುವ ಹೆಸರು ಕೇಳಿದ್ದೆ ತಡ ಬಹೀರರಿಗೆ ಅದೇನೋ ಒಂದು ಸಂತೋಷ ಲಭಿಸಿದ ಹಾಗೆ. ತೌರಾತ್'ನಲ್ಲಿ ಹೇಳಿದ ಅಹ್ಮದ್ ಎನ್ನುವ ಹೆಸರಿಗೆ ಸಮಾನವಾದ ಹೆಸರಲ್ಲವೇ ಇದು. ತಡಮಾಡದೆ ಗುಂಪಿನಲ್ಲಿದ್ದ ಒಂದು ವ್ಯಕ್ತಿ ಹೋಗಿ ಮುಹಮ್ಮದ್ ﷺ ಮಗನನ್ನು ಕರೆದುಕೊಂಡು ಬಂದರು. ತಮ್ಮ ದೊಡ್ಡಪ್ಪನ ಪಕ್ಕದಲ್ಲೇ ಮುಹಮ್ಮದ್ ﷺ ಮಗನು ಬಂದು ಕುಳಿತರು. ಮಗನನ್ನು ಕಂಡದ್ದೆ ತಡ ಆ ವೇದ ಪಂಡಿತರ ಆತ್ಮದ ಕಣ್ಣುಗಳು ತೆರೆದುಕೊಂಡಿತು ಮೋಡ ನೆರಳು ನೀಡುತ್ತಾ ಸಂಚರಿಸುತ್ತಿದ್ದ ಚಿತ್ರಗಳು ಅವರ ಕಣ್ಣಿನ ಮುಂದೆ ಹಾದು ಹೋಯಿತು. ನಂತರ ಇಷ್ಟೊಂದು ಕಷ್ಟದಾಯಕವಾದ ಈ ಯಾತ್ರೆಯಲ್ಲಿ ಯಾಕಾಗಿ ಈ ಮಗುವನ್ನು ಜೊತೆಗೆ ಕರೆದುಕೊಂಡು ಬಂದಿದ್ದೀರ.? ಅಷ್ಟೇ ಅಲ್ಲ ಈ ಮಗುವನ್ನು ಆ ವ್ಯಾಪಾರ ವಸ್ತುಗಳ ಜೊತೆಯಲ್ಲಿ ನಿಲ್ಲಿಸಿದ್ದೀರಲ್ವ.? ಎಂದು ಕೇಳಿದರು. 

     ಉತ್ತರಕ್ಕೆ ಕಾಯದೆ ಮಗನನ್ನು ಬಹಳ ಸೂಕ್ಷ್ಮವಾಗಿ ಗಮನಿಸ ತೊಡಗಿದರು. ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಎಲ್ಲಾ ಲಕ್ಷಣಗಳು ಕೂಡ ಈ ಮಗುವಿನಲ್ಲಿ ಕಾಣುತ್ತಿದೆ ಅಲ್ಲವೇ.? ಪ್ರವಾದಿತ್ವದ ಮುದ್ರೆಯ ಕುರಿತು ವೇದ ಗ್ರಂಥದಲ್ಲಿ ಬಂದಿದ್ದರೂ ಈಗ ಅಂಗಿ ತೆಗೆದು ಭುಜವನ್ನು ಪರಿಶೀಲಿಸಲು ಹೇಗೆ ಕೇಳಲಿ.? ಹೀಗೆ ಆಲೋಚಿಸುತ್ತಿರುವಾಗ ಖುರೈಶಿಗಳು ತಮ್ಮ ಡೇರೆಗೆ ವಾಪಸು ಹೋಗಲು ತಯಾರಾದರು. 

     ಅಬೂತ್ವಾಲಿಬರು ಸ್ವಲ್ಪ ತಡ ಮಾಡಿದರು,ಮಗನನ್ನು ಬಹಳ ಹೊತ್ತಿನಿಂದ ಯಾಕೆ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೀರ.? ಎಂದು ಪಂಡಿತರೊಂದಿಗೆ ಕೇಳಬೇಕು ಎಂದು ಅಂದುಕೊಂಡಾಗ ಪಂಡಿತರೆ ಮಾತಾಡಿದರು, ನಿಮ್ಮ ದೇವರಾದ ಲಾತವನ್ನು, ಉಝ್ಝವನ್ನು ಮುಂದೆ ನಿಲ್ಲಿಸಿ ಕೇಳುತ್ತಿದ್ದೇನೆ ನೀವು ಸತ್ಯವಾಗಿ ಉತ್ತರ ಹೇಳುತ್ತೀರಿ ಅಲ್ವಾ.? ತಕ್ಷಣವೇ ಮುಹಮ್ಮದ್ ﷺ ಮಗನು ಮುಂದೆ ಬಂದು ಲಾತವನ್ನು, ಉಝ್ಝವನ್ನು ಮುಂದೆ ನಿಲ್ಲಿಸಿ ಏನೂ ಕೇಳಬೇಡಿ ಎಂದಾಗ ಸರಿ ಹಾಗಾದರೆ ಅಲ್ಲಾಹನನ್ನು ಮುಂದೆ ನಿಲ್ಲಿಸಿ ಕೇಳಬಹುದೇ.? ಎಂದು ಬಹೀರ ಕೇಳಿದಾಗ. ಕೇಳಿರಿ ಎಂದು ಮುಹಮ್ಮದ್ ﷺ ಮಗನು ಉತ್ತರಿಸಿದರು. ವೆಯ್ಯುಕ್ತಿಕವಾದ ಕೆಲವೊಂದು ಪ್ರಶ್ನೆಗಳನ್ನು ಬಹೀರ ಕೇಳಿದಾಗ ಸ್ಪಷ್ಟವಾದ ಉತ್ತರವೂ ಕೂಡ ಸಿಕ್ಕಿತು. ಪ್ರವಾದಿತ್ವದ ಮುದ್ರೆಯನ್ನೂ ಪರಿಶೀಲಿಸಿದಾಗ ಬಹೀರರಿಗೆ ಎಲ್ಲವೂ ಅರ್ಥವಾಯಿತು. ಬಹೀರಾರಿಂದ ಆದ ಬದಲಾವಣೆಯನ್ನು ಕಂಡು ಅಬೂತ್ವಾಲಿಬರಿಗೆ ಆಶ್ಚರ್ಯವಾಗಿ ಯಾಕಾಗಿ ನೀವು ಇಷ್ಟು ಗಂಭೀರವಾಗಿ ಪರೀಕ್ಷಿಸುತ್ತಿದ್ದೀರ.? ಎಂದು ಕೇಳಿಯೇ ಬಿಟ್ಟರು. ಓ ಖುರೈಶಿಗಳೇ ಇದು ಜಗದೊಡೆಯನು ಪ್ರಪಂಚಕ್ಕೆ ಅನುಗ್ರಹವಾಗಿ ನಿಯೋಗಿಸಿದ ಪ್ರವಾದಿಯವರಾಗಿದ್ದಾರೆ ﷺ ಎಂದು ಬಹೀರ ಉತ್ತರಿಸಿದರು. 

    ಮಾತು ಮುಂದುವರೆಸಿ, ಹೌದು ಅದು ನಿಮಗೆ ಹೇಗೆ ಗೊತ್ತು.? ಎಂದು ಕೇಳಿದಾಗ. ಈ ಸಂಘವು ಬರುತ್ತಿದ್ದದನ್ನು ನಾನು ದೂರ ನಿಂತು ನೋಡುತ್ತಲೇ ಇದ್ದೆ, ಬದಿಯಲ್ಲಿದ್ದ ಕಲ್ಲು  ಮರಗಳು ಈ ಮಗುವಿಗೆ ನಮಸ್ಕರಿಸೂದನ್ನು ನಾನು ಗಮನಿಸುತ್ತಲೇ ಇದ್ದೆ. ಅದು ಪ್ರವಾದಿಯರಿಗೆ ಮಾತ್ರ ಹಾಗೆ ಇರುತ್ತದೆ. ಸಾಲದ್ದಕ್ಕೆ ಭುಜದಲ್ಲಿರುವ ಪ್ರವಾದಿತ್ವದ ಮುದ್ರೆಯನ್ನೂ ನೋಡಿದ್ದೇನೆ. ನಿಮ್ಮ ಬರುತ್ತಿದ್ದ ಗುಂಪಿನಲ್ಲಿ ಮೋಡ ನೆರಳು ನೀಡುತ್ತಿದ್ದದ್ದು ಯಾರಿಗೆ ಎಂದು ಗಮನಿಸಿದ್ದೇನೆ. 

     ನಂತರ ಮುಂದುವರಿದು ಅಬೂತ್ವಾಲಿಬರನ್ನು ಸಂದರ್ಶನ ನಡೆಸಿದರು. 
ಈ ಮಗು ನಿಮಗೆ ಏನಾಗಬೇಕು.?
ನನ್ನ ಮಗ;
ಹಾಗೆ ಆಗಲು ಸಾಧ್ಯವಿಲ್ಲವಲ್ಲ. ಈ ಮಗುವಿನ ತಂದೆ ಬದುಕಿರಲು ಸಾಧ್ಯವೇ ಇಲ್ಲ.
ಹೌದು ಇದು ನನ್ನ ಸಹೋದರನ ಮಗ. 
ತಂದೆಯೆಲ್ಲಿದ್ದಾರೆ.? 
ಅವರ ಪತ್ನಿ ಗರ್ಭಿಣಿಯಾಗಿದ್ದಾಗಲೇ ಮರಣ ಹೊಂದಿದ್ದಾರೆ. 
ಅಲ್ಲಾಹ್! ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಎಲ್ಲಾ ಲಕ್ಷಣಗಳು ಈ ಮಗುವಿನಲ್ಲಿ ಎದ್ದು ಕಾಣುತ್ತಿದೆ. 
 
ಅಬೂ ತ್ವಾಲಿಬ್'ರವರೇ ನಿಮ್ಮಲ್ಲಿ ಒಂದು ವಿನಂತಿಯಿದೆ ನೀವು ಆದಷ್ಟು ಬೇಗ ಇಲ್ಲಿಂದ ನಿಮ್ಮ ಸಹೋದರನ ಮಗನನ್ನೂ ಕರೆದುಕೊಂಡು ಊರಿಗೆ ಮರಳಿ ಹೋಗಿರಿ ಯಹೂದಿಗಳಿಗೆ ತಿಳಿದರೆ ಅಪಾಯವಾಗುವ ಸಾಧ್ಯತೆಯಿದೆ. ವೇದ ಗ್ರಂಥಗಳಲ್ಲಿ ಮುನ್ಸೂಚನೆ ನೀಡಿರುವ ಈ ಪ್ರವಾದಿಯವರು ಬಹಳ ಉನ್ನತವಾದ ಮಹತ್ವವಿರುವ ವ್ಯಕ್ತಿತ್ವವಾಗಿದ್ದಾರೆ. 

   ಕಾಲವು ಕಾದು ಕುಳಿತಿದ್ದ ಭವಿಷ್ಯದ ಪ್ರವಾದಿಯವರನ್ನು ಜರ್'ಜಿಸ್ ಗುರುತಿಸಿದ್ದರು, ಆದರೆ ಪ್ರವಾದಿಯವರ ನಿಯೋಗಕ್ಕೂ ಮೊದಲೇ ಇಹಲೋಕ ತ್ಯಜಿಸಿದರು. ಸತ್ಯ ವಿಶ್ವಾಸದ ಆದರ್ಶದೊಂದಿಗೆ ಪರಲೋಕ ವಿಜಯದ ಭರವಸೆಯೊಂದಿಗೆ ಯಾತ್ರೆಯಾದರು. ಅರ್ಧ ಶತಮಾನದ ಅನ್ವೇಷಣೆಯನ್ನು ಯಶಸ್ವಿ ಗೊಳಿಸಿಯಾಗಿತ್ತು ಅವರು ಯಾತ್ರೆಯಾದದ್ದು. ಪ್ರವಾದಿಯವರ ﷺ ಚರಿತ್ರೆಯಲ್ಲಿ ಶಾಶ್ವತವಾಗಿ ಗುರುತಿಸಲ್ಪಟ್ಟ ಬಹೀರ, ಅಂತ್ಯವಿಲ್ಲದ ಸ್ಮರಣೆಯ ಭಾಗವಾದರು.

(ಮುಂದುವರಿಯುವುದು...)

No comments: