Abu Hisham Saquafi

Official Website Of Hafiz Ilyas Saquafi Padaladka

Thursday, June 30, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -15 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಆರನೇ ಶತಮಾನದಲ್ಲಿ ಜೀವಿಸುತ್ತಿದ್ದ ಮಕ್ಕಾ ಜನತೆಯು  ಬಹಳ ಅಧರ್ಮಿಗಳಾಗಿದ್ದರು. ಅವರ ನಡುವೆಯಿರುವ ಬಹಳ ವಿಶೇಷ ಯುವಕನ ಕುರಿತಾಗಿದೆ ನಾವು ತಿಳಿಯುತ್ತಿರುವುದು. ಸುಳ್ಳು ಹೇಳುವುದನ್ನು, ವಂಚಿಸುವುದನ್ನು ತಪ್ಪೇಯಲ್ಲದ ರೀತಿಯಲ್ಲಿ ಕಾಣುತ್ತಿದ್ದ ಜನತೆಯ ನಡುವೆ ತಮಾಷೆಗೂ ಕೂಡ ಸುಳ್ಳು ಹೇಳದ ಜೀವಿಸಿದ್ದರು, ಮದ್ಯಪಾನವನ್ನು ಪುಣ್ಯತೀರ್ಥದ ಹಾಗೆ ಅಥವಾ ನೀರಿನ ಹಾಗೆ ಕುಡಿಯುತ್ತಿದ್ದ ಜನರೆಡೆಯಲ್ಲಿ ಮಧ್ಯದ ವಾಸನೆಯನ್ನೂ ಕೂಡ ತಿಳಿಯದ ಸೂಕ್ಷ್ಮತೆ ವಹಿಸಿದ್ದರು, ಎಲ್ಲಾ ರೀತಿಯ ವಿನೋದಗಳಲ್ಲಿ ಮೈಮರೆಯುತ್ತಿದ್ದ ಜನ ಸಮೂಹದ ನಡುವೆ ಒಂದು ಸಣ್ಣ ವಿನೋದವನ್ನೂ ಕೂಡ ಮಾಡದೆ ಬದುಕುತಿದ್ದರು. ಈ ರೀತಿಯಲ್ಲಾಗಿತ್ತು ಪುಣ್ಯ ಪ್ರವಾದಿಯವರು ﷺ ಮಕ್ಕ ಪಟ್ಟಣದಲ್ಲಿ ಬೆಳೆದು ಬಂದದ್ದು. 

     ಪವಿತ್ರವಾದ ಈ ರೀತಿಯ ಜೀವನದ ನಡುವೆ ಅಲ್ಲಾಹನ ಕಾವಲು ಇದ್ದದ್ದು ನಮಗೆ ತಿಳಿಯಲು ಸಾದ್ಯವಾಗುತ್ತದೆ. ಸ್ವೀಕಾರಯೋಗ್ಯವಾದ ಒಂದು ಉಲ್ಲೇಖವೂ ಈ ರೀತಿಯಾಗಿದೆ ಅದೇನೆಂದರೆ ಖುರೈಶಿಗಳು ಕಅಬಾಲಯನ್ನು ನವೀಕರಣ ಮಾಡುತಿದ್ದ ಸಮಯವಾಗಿತ್ತು ಅದು. ಕಲ್ಲು ಕೊಂಡೊಗುವವರೊಂದಿಗೆ ಪ್ರವಾದಿವರ್ಯರ ﷺ ಜೊತೆಯಲ್ಲಿ ಅವರ ಚಿಕ್ಕಪ್ಪ ಅಬ್ಬಾಸ್'ರವರು (ರ) ಕೂಡ ಇದ್ದರು. ಲುಂಗಿ ತೆಗೆದು ಹೆಗಲ ಮೇಲೆ ಇಟ್ಟು ಅದರ ಮೇಲೆ ಕಲ್ಲು ಇಟ್ಟು ತೆಗೆದುಕೊಂಡು ಬರುವುದಾಗಿತ್ತು ವಾಡಿಕೆ. ಆದರೆ ಮುಹಮ್ಮದರು ﷺ ಮಾತ್ರ ಲುಂಗಿ ತೆಗೆಯದೆ ಹಾಗೆ ಹೆಗಲ ಮೇಲೆ ಕಲ್ಲು ಇಟ್ಟು ಕೊಂಡೊಗುತ್ತಿದ್ದರು ಇದನ್ನು ಕಂಡ ಅಬ್ಬಾಸ್'ರವರಿಗೆ (ರ) ಅಯ್ಯೋ ಎನಿಸಿ ಮಗನೇ ಲುಂಗಿ ತೆಗೆದು ಹೆಗಲ ಮೇಲಿಟ್ಟು ಕಲ್ಲು ಕೊಂಡೋಗಬಹುದಲ್ಲವೇ.? ಎಂದು ಕೇಳಿದಾಗ. ಪ್ರವಾದಿವರ್ಯರು ﷺ ಅದನ್ನು ವಿರೋಧಿಸಿದರು. ಅವರಿಬ್ಬರು ಇರುವ ಸಂದರ್ಭದಲ್ಲಿ ಮಾತ್ರ ಲುಂಗಿ ತೆಗೆಯೋಣ ಎಂದು ಭಾವಿಸಿ ಲುಂಗಿಯನ್ನು ತೆಗೆಯಲು ಮುಂದಾದಾಗ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ಏನಾಯಿತು ಮಗನೇ ಎಂದು ಚಿಕಪ್ಪ ಅಬ್ಬಾಸ್'ರವರು (ರ) ಕೇಳಿದಾಗ ಪ್ರವಾದಿವರ್ಯರು ಆಕಾಶದತ್ತ ನೋಡುತ್ತಾ ನನಗೆ ನಗ್ನತೆಯಿಂದ ಇರುವುದನ್ನು ವಿರೋಧಿಸಲಾಗಿದೆ ಎಂದು ಹೇಳಿದರು. ನಂತರ ಅಂತಹ ಪ್ರಯತ್ನವನ್ನು ಕೈಬಿಟ್ಟರು. 

     ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ಪ್ರವಾದಿವರ್ಯರು ﷺ ಪಾಪಗಳಿಂದ  ಸಂರಕ್ಷಿತರಾಗಿದ್ದರು ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ. ಇಮಾಮ್ ಬುಖಾರಿಯವರು (ರ) ಕೂಡ ಈ ಹದೀಸನ್ನು ಉಲ್ಲೇಖಿಸಿದ್ದಾರೆ. ಈ ಘಟನೆಗಿಂತಲೂ ಮುಂಚೆಯು ಇದೆ ರೀತಿ ಇತರ ಮಕ್ಕಳೊಂದಿಗೆ ಪ್ರವಾದಿವರ್ಯರು ﷺ ಲುಂಗಿ ತೆಗೆಯದೆ ಕಲ್ಲು ಕೊಂಡೊಗುತ್ತಿದ್ದ ಸಂದರ್ಭದಲ್ಲಿಯೂ ಈ ರೀತಿಯ ಒಂದು ಪ್ರಯತ್ನ ನಡೆಸಿದ್ದರು ಆಗಲೂ ಕೂಡ ನೀವು ಲುಂಗಿ ಧರಿಸಿರಿ ಎನ್ನುವ ಆದೇಶ ನೀಡಿ ಹಿಂದಿನಿಂದ ಬೆನ್ನಿಗೆ ಯಾರೋ ಹೊಡೆದ ಅನುಭವವಾಯಿತು ಆದರೆ ಸ್ವಲ್ಪವೂ ನೋವೂ ಆಗಿರಲಿಲ್ಲ ಹಾಗೂ ಅಲ್ಲಿ ಯಾವುದೇ ವ್ಯಕ್ತಿಯೂ ಇರಲಿಲ್ಲ ಅದರ ನಂತರ ಬರೀ ಹೆಗಲಿನಲ್ಲೇ ಕಲ್ಲು ಕೊಂಡು ಹೋಗಿ ಕೆಲಸ ಪೂರ್ಣಗೊಳಿಸಿದ್ದರು. 

       ಇಬ್'ನು ಅಬ್ಬಾಸ್ (ರ) ರವರು ಉಲ್ಲೇಖಿಸಿದ ಮತ್ತೊಂದು ಘಟನೆ ಈ ರೀತಿಯಾಗಿದೆ. ಒಮ್ಮೆ ಅಬೂತ್ವಾಲಿಬರು ಝಮ್ ಝಮ್ ಬಾವಿಯ ದುರಸ್ತಿ ಕಾರ್ಯವನ್ನು ಮಾಡುತಿದ್ದರು. ಸಹೋದರನ ಮಗನಾದ ಮುಹಮ್ಮದರು ﷺ ಕೂಡ ಅವರ ಜೊತೆಯಲ್ಲಿದ್ದರು. ಕಲ್ಲುಗಳನ್ನು ಎತ್ತಿ ಹೆಗಲ ಮೇಲೆ ಇಟ್ಟು ಕೊಂಡೊಗುತ್ತಿದ್ದರು. ಇದನ್ನು ಕಂಡ ಒಬ್ಬ ವಯಸ್ಸಾದ ವ್ಯಕ್ತಿಗೆ ಅಯ್ಯೋ ಎನಿಸಿ ಅವರ ಬಟ್ಟೆ ಬಿಚ್ಚಿ ಹೆಗಳಲ್ಲಿ ಇಟ್ಟ ತಕ್ಷಣವೇ ಮುಹಮ್ಮದ್ ﷺ ಮಗನು ಪ್ರಜ್ಞೆ ತಪ್ಪಿದರು. ಪ್ರಜ್ಞೆ ಬಂದ ನಂತರ ದೊಡ್ಡಪ್ಪ ಅಬೂತ್ವಾಲಿಬರು ಬಂದು ಏನಾಯಿತು ಮಗನೇ.? ಎಂದು ಕೇಳಿದಾಗ ಅಪ್ಪ ಪ್ರಕಾಶವಾಗಿದ್ದ ವಸ್ತ್ರವನ್ನು ಧರಿಸಿದ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ನೀವು ಸಂಪೂರ್ಣವಾಗಿ ವಸ್ತ್ರ ಧರಿಸಿರಿ ಎಂದು ಹೇಳಿದ್ದಾಗಿ ಮುಹಮ್ಮದ್ ﷺ ಮಗನು ಉತ್ತರಿಸಿದರು. ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ದಿವ್ಯ ಸಂದೇಶಗಳು ಲಭಿಸಿತ್ತು ಎನ್ನುವುದಕ್ಕೆ ಉದಾಹರಣೆಯಾಗಿ ಈ ಘಟನೆಯನ್ನು ವಿದ್ವಾಂಸರು ವಿವರಿಸುತ್ತಾರೆ.

     ನೈತಿಕತೆಯ ಪ್ರತಿರೂಪವಾಗಿ ಪ್ರವಾದಿವರ್ಯರು ﷺ ಜೀವನ ಸಾಗಿಸಿದರು. ಜೀವನದುದ್ದಕ್ಕೂ ತಿದ್ದುಪಡಿಗಳನ್ನು ಮಾಡುತ್ತಲೇ ಇದ್ದರು. ಪ್ರವಾದಿವರ್ಯರು ﷺ ಹೇಳಿರುವುದನ್ನು ಅಲಿರವರು (ರ) ಈ ಉಲ್ಲೇಖಿಸುತ್ತಾರೆ ಅಜ್ಞಾನದ ಕಾಲದಲ್ಲಿದ ಜನತೆ ಮಾಡುತಿದ್ದ ಒಂದೇ ಒಂದು ಕಾರ್ಯವನ್ನು ಕೂಡ ಮಾಡಲು ಉದ್ದೇಶಿಸಿಯೂ ಇರಲಿಲ್ಲ, ಆದರೆ ಎರಡು ಸಂದರ್ಭಗಳು ಎದುರಾಗಿತ್ತು ಆ ಸಮಯಗಳಲ್ಲಿ ಅಲ್ಲಾಹನು ನನಗೆ ರಕ್ಷಣೆ ನೀಡಿದನು. ಅದರಲ್ಲಿ ಒಂದು ಇತರ ಗೆಳೆಯರೊಂದಿಗೆ ಮೇಕೆ ಮೇಯಿಸುತ್ತಿದ್ದ ಕಾಲವಾಗಿತ್ತು ಅದು, ಒಮ್ಮೆ ಇವತ್ತು ನನ್ನ ಮೇಕೆಯನ್ನು ಕೂಡ ನೀವೆ ನೋಡಿಕೊಳ್ಳುತ್ತೀರ ಎಂದು ಅವರಲ್ಲಿ ಹೇಳಿ. ಇತರ ಯುವಕರೊಂದಿಗೆ ಒಮ್ಮೆ ವಿನೋಧಗಳಲ್ಲಿ ಸೇರೋಣ ಎಂದು ಭಾವಿಸಿ ಪಟ್ಟಣಕ್ಕೆ ಹೊರಟೆನು. ಪಟ್ಟಣಕ್ಕೆ ತಲುಪಿದ ನಂತರ ಒಂದು ಮನೆಯಲ್ಲಿ ವಾದ್ಯಗಳು ಕೇಳುತ್ತಿತ್ತು. ಮದುವೆ ಸಮಾರಂಭದಲ್ಲಿ ನಡೆಯುತ್ತಿದ್ದ ವಾದ್ಯವಾಗಿತ್ತು ಅದು. ಅದನ್ನು ಕೇಳಲೆಂದು ಒಳಗೆ ಹೋಗಿ ಒಂದು ಕಡೆಯಲ್ಲಿ ಕುಳಿತದ್ದೇ ತಡ ನನಗೆ ನಿದ್ದೆ ಬಂದು ಬಿಟ್ಟಿತು. ಕಾರ್ಯಕ್ರಮವೆಲ್ಲಾ ಮುಗಿದು ಮರು ದಿವಸ ಮುಂಜಾನೆಯಾಗಿತ್ತು ನನಗೆ ಎಚ್ಚರಿಕೆಯಾದದ್ದು. ಸ್ವಲ್ಪವೂ ಕೂಡ ವಾದ್ಯವನ್ನು ಕೇಳಲು ಸಾಧ್ಯವಾಗಿಲ್ಲ, ನಂತರ ಅಲ್ಲಿಂದ ವಾಪಸು ಗೆಳೆಯರ ಬಳಿಗೆ ಹೋದಾಗ ಅವರು ವಿನೋಧದ ಕುರಿತು ಕೇಳಿದರು. ನಡೆದ ಎಲ್ಲಾ ಘಟನೆಯನ್ನು ವಿವರಿಸಿದೆನು. ಅದೇ ರೀತಿಯ ಇನ್ನೊಂದು ಬಾರಿಯೂ ಅಂತಹ ಅನುಭವ ಮತ್ತೊಮ್ಮೆ ಉಂಟಾಯಿತು ಅದರ ನಂತರ ಒಮ್ಮೆಯೂ ಕೂಡ ಅಂತಹ ಒಂದು ಪ್ರಯತ್ನ ಮಾಡಿರಲಿಲ್ಲ. 

      ಪ್ರವಾದಿವರ್ಯರು ﷺ ಅಪ್ರತಿಮ ನಂಬಿಕೆಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ಅದು ಸ್ಪಷ್ಟವಾಗಿತ್ತು....

(ಮುಂದುವರಿಯುವುದು...)

No comments: