Abu Hisham Saquafi

Official Website Of Hafiz Ilyas Saquafi Padaladka

Tuesday, July 5, 2022

ಪ್ರವಾದಿ ಮುಹಮ್ಮದ್ ﷺ) ತಂಙಳವರ ಜೀವನ ಚರಿತ್ರೆ || ಭಾಗ -20 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

 ವ್ಯಾಪಾರ ಸಂಘವು ಮಕ್ಕಾ ಪಟ್ಟಣಕ್ಕೆ ತಲುಪುವುದರಲ್ಲಿದೆ, ಯಾತ್ರೆಯಲ್ಲಿ ಕಂಡ ಎಲ್ಲಾ ವಿಸ್ಮಯಗಳನ್ನೂ ಮೈಸರ ತನ್ನ ಮನಸ್ಸಿನಲ್ಲಿ ಜೋಪಾನವಾಗಿ ಇಟ್ಟಿದ್ದಾನೆ. ಆ ನೆನಪುಗಳು ಮೈಸರನನ್ನು ಸಂಪೂರ್ಣವಾಗಿ ಆವರಿಸಿದೆ. ಯಾತ್ರಾ ಸಂಘವು 'ಇಸ್'ಫಾನ್' ಕಣಿವೆಯನ್ನು ದಾಟಿ 'ಮರ್'ರುಳಹ್'ರಾನ್' ಅಥವಾ 'ವಾದಿ ಫಾತಿಮಾ' ಎನ್ನುವ ಸ್ಥಳಕ್ಕೆ ತಲುಪಿತು. ಅಷ್ಟೊತ್ತಿಗೆ ಮೈಸರ ಪ್ರವಾದಿವರ್ಯರ ﷺ ಬಳಿ ಬಂದು "ಓ ಬಹುಮಾನ್ಯರೇ ತಾವು ಆದಷ್ಟು ಬೇಗನೆ ಖದೀಜರವರ (ರ) ಬಳಿ ತೆರಳಿ ಯಾತ್ರೆಯ ಎಲ್ಲಾ ವಿವರಗಳನ್ನು ಅಧಿಕೃತವಾಗಿ ತಿಳಿಸಿರಿ, ಒಡತಿಗೆ ಬಹಳಷ್ಟು ಸಂತೋಷವಾಗಬಹುದು" ಎಂದು ಹೇಳಿದನು. ಮೈಸರನಿಗೆ ಮೊದಲೇ ತಿಳಿದಿದ್ದ ಪ್ರಕಾರ ಪ್ರವಾದಿವರ್ಯರಿಗೆ ﷺ ಎರಡು ಒಂಟೆಯಾಗಿತ್ತು ವೇತನವಾಗಿ ನಿಶ್ಚಯಿಸಿದ್ದದ್ದು. ಆದರೆ ಅದಕ್ಕಿಂತಲೂ ಅಧಿಕ ವೇತನ ಲಭಿಸಬೇಕೆಂದಾಗಿತ್ತು ಮೈಸರನು ಆಗ್ರಹಿಸಿದ್ದು ಹಾಗಾಗಿ ಹೀಗೆ ಸಲಹೆ ಕೊಟ್ಟಿದ್ದನು. 

    ಪ್ರವಾದಿವರ್ಯರು ﷺ ಮೈಸರನ ಸಲಹೆಯನ್ನು ಸ್ವೀಕರಿಸಿ ಖದೀಜ (ರ) ಬೀವಿಯವರ ವಸತಿಯನ್ನು ಲಕ್ಷ್ಯವಿರಿಸಿ ಮುಂದೆ ಸಾಗಿದರು. ಮದ್ಯಾಹ್ನದ ಹೊತ್ತಿಗೆ ಛಾವಣಿಯ ಮೇಲೆ ತಮ್ಮ ಗೆಳೆತಿಯರೊಂದಿಗೆ ಕುಳಿತಿದ್ದ ಸಮಯದಲ್ಲಿ ದೂರದಿಂದ ಕೆಂಪು ಒಂಟೆಯೊಂದು ಮನೆಯ ಮುಂಭಾಗಕ್ಕೆ ತಲುಪಿತು. ಪುಣ್ಯ ಪ್ರವಾದಿಯವರು ﷺ ಯಾತ್ರೆ ಮಾಡಿದ ಒಂಟೆಯಾಗಿತ್ತು ಅದು. ಅವರ ಮುಖವು ಬಹಳ ಅಭಿಮಾನದಿಂದ, ಪ್ರಸನ್ನತೆಯಿಂದ ಕೂಡಿತ್ತು. ತಕ್ಷಣವೇ ಖದೀಜರವರು (ರ) ಅಲ್ ಅಮೀನರಿಗೆ (ಪ್ರವಾದಿವರ್ಯರು) ಮೋಡ ನೆರಳು ನೀಡುತ್ತಾ ಒಟ್ಟಿಗೆ ಸಂಚರಿಸುತ್ತಿದ್ದದ್ದನ್ನು ಗಮನಿಸಿ ಬಹಳ ಕುತೂಹಲದಿಂದ ಅದನ್ನು ನೋಡುತ್ತಾ ನಿಂತರು. 
         ಪ್ರವಾದಿವರ್ಯರು ﷺ ಖದೀಜರವರ (ರ) ಮನೆಯೊಳಗೆ ಪ್ರವೇಶಿಸಿದರು. ಹೌದು ಸೌಂದರ್ಯದ ಪ್ರತೀಕವಾದ ಪುಣ್ಯ ಪ್ರವಾದಿಯವರು ﷺ ಮಕ್ಕಾದ ಸುಂದರಿಯೂ, ರಾಣಿಯೂ ಆದ ಖದೀಜಬೀವಿಯವರ (ರ) ಮನೆಗೆ ತಲುಪಿದರು. ಬಹಳ ವಿನಮ್ರತೆಯಿಂದಾಗಿತ್ತು ಮನೆಯೊಳಗೆ ಸ್ವೀಕರಿಸಿದ್ದು. ಖದೀಜರಿಗೆ (ರ) ವ್ಯಾಪಾರದ ವಿಷಯಗಳನ್ನು ತಿಳಿಯುದಕ್ಕೂ ಮೊದಲು ಒಂದು ವಿಷಯವನ್ನು ತಿಳಿಯಬೇಕಿತ್ತು, ಅದು ಇನ್ಯಾವುದು ಅಲ್ಲ ಮೋಡ ನೆರಳು ನೀಡುತ್ತಿದ್ದ ವಿಷಯವಾಗಿತ್ತು. ಅದಕ್ಕೆ ಅವರೊಂದು ಉಪಾಯ ಪ್ರಯೋಗಿಸಿದರು. ಮೈಸರ ಎಲ್ಲಿ.? ಎಂದು ಪ್ರವಾದಿಯವರಲ್ಲಿ ﷺ ಕೇಳಿದಾಗ. ಪಕ್ಕದಲ್ಲೇ ಇರುವ ಕಣಿವೆಯ ಬಳಿ ತಲುಪಿದ್ದಾರೆ ಎಂದು ಉತ್ತರಿಸಿದರು. ಅದಕ್ಕೆ ಬೀವಿಯವರು ಅವರಲ್ಲಿ ಇಲ್ಲಿಗೆ ಬೇಗ ಬರಲು ಹೇಳುತ್ತೀರ.? ಎಂದು ವಿನಂತಿಸಿದರು. ಕಾರಣ ಮೋಡವು ನೆರಳು ನೀಡುತ್ತಿದ್ದ ವಿಷಯವನ್ನು ಸ್ಪಷ್ಟವಾಗಿ ತಿಳಿಯಲು ಮಾಡಿದ ಉಪಯವಾಗಿತ್ತಲ್ಲವೇ ಇದು. ಪ್ರವಾದಿಯವರು ﷺ ಒಂಟೆಯ ಮೇಲೆ ಹತ್ತಿ ತಿರುಗಿ ಹೋದರು. ಖದೀಜ (ರ) ಪುನಃ ಛಾವಣಿಯ ಬಳಿ ನಿಂತು ದೃಶ್ಯವನ್ನು ವೀಕ್ಷಿಸುತ್ತಿದ್ದರು. ತಡಮಾಡದೆ ಪ್ರವಾದಿಯವರು ﷺ ಹಾಗೂ ಮೈಸರ ಮನೆಗೆ ಬಂದು ತಲುಪಿದರು. ಖದೀಜರು (ರ) ವ್ಯಾವಹಾರದ ವಿಷಯಗಳಿಗಿಂತ ಅಲ್ ಅಮೀನರ ಜೊತೆಗಿನ ಪ್ರವಾಸದ ಕುರಿತು ತಿಳಿದುಕೊಳ್ಳುವ ಆತುರದಿಂದ ವಿಷಯವನ್ನು ಕೇಳಿದಾಗ ಮೈಸರನು ಬಹಳ ಆವೇಶದಿಂದ ಉತ್ತರಿಸಿದನು. ಪ್ರವಾದಿಯವರ ﷺ ಉತ್ತಮವಾದ ಗುಣ ನಡತೆಗಳನ್ನು, ಅದ್ಭುತ ವಿಸ್ಮಯಗಳನ್ನು ಹೀಗೆ ಹಲವಾರು ಘಟನೆಗಳ ಕುರಿತು ಹೇಳಿದನು

      ಜೊತೆಗೆ ಖದೀಜರು ಕಂಡ ಮೋಡ ನೆರಳು ನೀಡುವ ದೃಶ್ಯವನ್ನೂ ಕೂಡ ಸೇರಿಸಿ ಹೇಳಿದನು. ಮೈಸರಿನಿಗೆ ಆ ದೃಶ್ಯಗಳನ್ನು ಕಂಡು ಅಭ್ಯಾಸವಾಗಿತ್ತು. ನಸ್'ತೂರ ಪುರೋಹಿತರ ಕುರಿತು ಹಾಗೂ ಅವರು ಹೇಳಿದ ಮುನ್ಸೂಚನೆಯ ಕುರಿತು ಕೂಡ ಹೇಳಿದನು. ಎಲ್ಲವನ್ನೂ ಗಮನವಿಟ್ಟು ಕೇಳಿದ ಖದೀಜರಿಗೆ ಮನಸ್ಸಿನಲ್ಲಿ ಕೆಲವೊಂದು ಅದೃಷ್ಟದ ಭರವಸೆಯು ಮೂಡಿತು. ಪ್ರವಾದಿವರ್ಯರಿಗೆ ﷺ ಅತ್ಯುನ್ನತ ಉಡುಗೊರೆಗಳ ಜೊತೆಯಲ್ಲಿ ನಾಲ್ಕು ಒಂಟೆಗಳನ್ನು ಕೂಡ ಕೊಟ್ಟು ಕಳುಹಿಸಿದರು. ಇದರ ಕುರಿತು ಗ್ರಂಥಗಳಲ್ಲಿ ಉಲ್ಲೇಖವಿದೆ. 

   "ತಿಹಾಮದಲ್ಲಿರುವ" ಹಬಾಶ ಮಾರುಕಟ್ಟೆಗೆ ತೆರಳಿದ್ದ ವ್ಯಾಪಾರ ಯಾತ್ರೆಯ ಕುರಿತು ಕೂಡ ಚರಿತ್ರೆಯಲ್ಲಿ ಉಲ್ಲೇಖವಿದೆ. ಜುರಶ್ ಎನ್ನುವ ಹೆಸರು ಕೂಡ ಆ ಸ್ಥಳದ ಕುರಿತು ಪ್ರಯೋಗಿಸಿದ್ದೂ ಕಾಣಬಹುದು. ಒಂದೊಂದು ವ್ಯಾಪಾರ ಯಾತ್ರೆಗೂ ಒಂದೊಂದು ಹೆಣ್ಣು ಒಂಟೆ ಉಡುಗೊರೆಯಾಗಿ ಲಭಿಸುತ್ತಿತ್ತು. 
     ಪ್ರವಾದಿವರ್ಯರಿಗೆ ﷺ ಲಭಿಸಿದ ಸಂಪತ್ತುಗಳನ್ನು ತಮಗಾಗಿ ಮಾತ್ರ ಉಪಯೋಗಿಸಿತ್ತಿರಲಿಲ್ಲ ಬದಲಾಗಿ ತಮ್ಮ ದೊಡ್ಡಪ್ಪರ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದಲೂ ಆಗಿತ್ತು. ಕೆಲವು ರಹಸ್ಯಗಳು ಕೂಡ ಇದರಲ್ಲಿ ಅಡಗಿದೆ ಅದೇನೆಂದರೆ ಅಬೂತ್ವಾಲಿಬರಿಂದ ಪುಣ್ಯ ಪ್ರವಾದಿಯವರಿಗೆ ﷺ ಲಭಿಸಿದ ಅನುಗ್ರಹಗಳನ್ನು ತೀರಿಸಲು ಅಲ್ಲಾಹನು ನೀಡಿದ ಉತ್ತಮ ಅವಕಾಶವು ಕೂಡ ಇದಾಗಿತ್ತು. ಪ್ರವಾದಿವರ್ಯರು ﷺ ತಮ್ಮ ಪ್ರಬೋಧನೆಯ ದಾರಿಯನ್ನು ಸ್ವೀಕರಿಸುವಾಗ ಯಾರ ಋಣದ ಹಂಗಿನಲ್ಲೂ ಇರಬಾರದು ಎನ್ನುದಾಗಿತ್ತು ಇದರ ಹಿಂದಿನ ಉದ್ದೇಶ. ಕಾರಣ ಅತ್ಯಧಿಕ ಉಪಕಾರ ಮಾಡಿದ ಅಬೂತ್ವಾಲಿಬರೂ ಕೂಡ ಪುಣ್ಯ ಪ್ರವಾದಿಯವರ ﷺ ಋಣದ ಹಂಗಿನಲ್ಲಿದ್ದರು. ಯಾರಾದರೂ ಒಂದು ಉಪಕಾರ ಮಾಡಿದರೆ ಅದಕ್ಕಿಂತ ಹೆಚ್ಚಾಗಿ ಅವರಿಗೆ ಪ್ರತ್ಯುಪಕಾರ ಮಾಡಬೇಕು, ಯಾರಾದರೂ ಒಂದು ಉಡುಗೊರೆ ನೀಡಿದರೆ ಅದಕ್ಕಿಂತಲೂ ಉತ್ತಮವಾದ ಉಡುಗೊರೆ ಅವರಿಗೆ ನೀಡಬೇಕು, ಯಾರಾದರೂ ಹೊಗಳಿದರೆ ಜಿಪುನತನವಿಲ್ಲದೆ ಒಳ್ಳೆಯ ಸಂತೋಷದ ಮಾತುಗಳನ್ನು ಅವರಿಗೆ ತಿರುಗಿ ಹೇಳಬೇಕು. ಇವೆಲ್ಲವೂ ಪುಣ್ಯ ಪ್ರವಾದಿಯವರು ﷺ ತಮ್ಮ ಜೀವನದ ಮೂಲಕ ಕಲಿಸಿಕೊಟ್ಟ ಆದರ್ಶಗಳಾಗಿದೆ. ಪ್ರವಾದಿವರ್ಯರ ﷺ ನೈಜ ಅನುಯಾಯಿಗಳು ಇವತ್ತಿಗೂ ಅದನ್ನು ಹಿಂಬಾಲಿಸುತ್ತಿದ್ದಾರೆ. 

     ಪ್ರವಾದಿವರ್ಯರು ﷺ ಯೌವನದ ಕಾಂತಿಯಲ್ಲಿ ಸೌಂದರ್ಯದ ಪ್ರತಿರೂಪವಾಗಿ ಬೆಳಗುತ್ತಿದ್ದಾರೆ. ಈಗ ಪ್ರವಾದಿವರ್ಯರಿಗೆ ﷺ ಇಪ್ಪತ್ತೈದು ವರ್ಷ ಪ್ರಾಯ. ಸಾಮಾನ್ಯವಾಗಿ ಮದುವೆಯಾಗುವ ವಯಸ್ಸು. ಮದುಮಗನ ವಯಸ್ಸಿಗೆ ಬಂದಿರುವ ಪುಣ್ಯ ಪ್ರವಾದಿಯವರ ﷺ ಸೌಂದರ್ಯವನ್ನು ಒಮ್ಮೆ ತಿಳಿದುಕೊಂಡರೆ ಹೇಗೆ?

(ಮುಂದುವರಿಯುವುದು...)

No comments: