Abu Hisham Saquafi

Official Website Of Hafiz Ilyas Saquafi Padaladka

Monday, July 11, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -26 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ವಧುವರರ ಹಿನ್ನೆಯ ಕುರಿತು ತಿಳಿದುಕೊಂಡೆವು. ಪ್ರತಿಯೊಬ್ಬರೂ ಈ ವಿವಾಹಕ್ಕೆ ಯಾಕಾಗಿ ತಯಾರಾಗಿದ್ದರೆಂದು, ಉದಾತ್ತ ಸೌಂದರ್ಯವಂತೆಯೂ, ಬುದ್ಧಿವಂತೆಯೂ, ಶ್ರೀಮಂತರೂವಾದ  ಖದೀಜರಿಗಿದ್ದ ಕಾರಣಗಳು ಯಾವುದಾಗಿತ್ತೆಂದು.? ಇತಿಹಾಸಕ್ಕೆ ಕೆಲವೊಂದು ವಿಷಯಗಳನ್ನು ತಿಳಿಸಲಿದೆ.
     ಪ್ರವಾದಿಯವರಿಗಿದ್ದ ﷺ ಉದಾತ್ತತೆ, ಚಾರಿತ್ರ್ಯ ಶುದ್ದಿ, ಸ್ವೀಕಾರ, ಇದೆಲ್ಲದ್ದಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಸಂದೇಶಗಳು ಲಭಿಸಿದ್ದಾಗಿತ್ತು, ನಿಯೋಗ ಪುರುಷನ ಅಂತಃಪುರಕ್ಕಾಗಿ ಸೃಷ್ಟಿಕರ್ತನು ಖದೀಜರನ್ನು ಕಾದಿರಿಸಿದ್ದು.

    ಇದರ ನಡುವೆ ಒಂದು ಘಟನೆ ನಡೆದಿತ್ತು. ಖುರೈಷಿಗಳಿಗೊಂದು ಸಂಭ್ರಮದ ದಿನ ಬಂದಿತ್ತು. ಮಕ್ಕಾ ಪಟ್ಟಣದ ಎಲ್ಲಾ ಮಹಿಳೆಯರೂ ಕಅಬಾದ ಪರಿಸರದಲ್ಲಿ ಜೊತೆಸೇರಿದ್ದರು. ಮಹಿಳೆಯರಿಗೆಂದು ವಿಶೇಷವಾಗಿ ಮೀಸಲಿರಿಸಿದ್ದ ಸ್ಥಳದಲ್ಲಿ ಖದೀಜ (ರ) ಕೂಡ ಜೊತೆಯಲ್ಲಿದ್ದರು. ಎಲ್ಲರೂ ಸಂಭ್ರಮದಲ್ಲಿ ಮೈಮರೆತಿದ್ದಾಗ, ತೀರ್ಥ ಯಾತ್ರೆಗೆಂದು ಮಕ್ಕಾ ಪಟ್ಟಣಕ್ಕೆ ಬಂದಿದ್ದ ಒಬ್ಬ ಯಹೂದಿಯು ಅಲ್ಲಿಗೆ ಆಗಮಿಸಿದರು. ಮಹಿಳೆಯರ ವೇಧಿಕೆಯತ್ತ ತೆರಳಿ ಆ ವ್ಯಕ್ತಿ ಹೀಗೆ ಹೇಳಿದರು. ಓ ಖುರೈಷಿ  ಮಹಿಳೆಯರೇ.! ಶೀಘ್ರದಲ್ಲೇ ದೇವ ದೂತನೊಬ್ಬರು ನಿಮ್ಮ ನಡುವೆ ಪ್ರವೇಶಿಸುವರು. ನಿಮ್ಮಲ್ಲಿ ಯಾರಾಗಿರಬಹುದು ಆ ಮಹಾನ್ ವ್ಯಕ್ತಿಯ ಮನದರಸಿಯಾಗುವವರು.? ಯಾರಾಗಿರಬಹುದು ಆ ಭಾಗ್ಯವಂತಳು.? ನೀವು ಬಯಸುದಾದರೆ ಒಮ್ಮೆ ಪರೀಕ್ಷಿಸೋಣ. ಈ ಮಾತನ್ನು ಕೇಳಿದ ಮಹಿಳೆಯರಲ್ಲಿ ಕೆಲವರು ನಕ್ಕರು, ಕೆಲವರು ಯಹೂದಿಯ ವಿರುದ್ಧ ಮಣ್ಣೆಸೆದರು, ಕೆಲವರು ಅವರನ್ನು ದೂಷಿಸಿದರು. ಆದರೆ ಖದೀಜ (ರ) ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ವೇದಜ್ಞಾನಿ ಹೇಳಿದ ಮಾತನ್ನು ಆಲೋಚಿಸುತ್ತಾ ಕುಳಿತಿದ್ದರು.

    ದಿವಸಗಳ ನಂತರ ಮೈಸರ ಪ್ರವಾದಿಯವರ ﷺ ವಿಸ್ಮಯಗಳನ್ನು ತಿಳಿಸಿದಾಗ, ಆ ವೇದಜ್ಞಾನಿಯ ಮಾತುಗಳು ನೆನಪಿಗೆ ಬಂದವು. ಶಾಮ್'ಗೆ ತೆರಳಿದ್ದ ಯಾತ್ರೆಯ ನಂತರ ಲಭಿಸಿದ್ದ ವಿವರಗಳು ಖದೀಜರ ಭರವಸೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿತ್ತು. ನೇರವಾಗಿ ಕೆಲವೊಂದು ವಿಸ್ಮಯಗಳನ್ನು ಕಂಡ ನಂತರ ಅಧಿಕವಾಗಿ ಯೋಚಿಸಲಿಲ್ಲ. 
     ನಲ್ವತ್ತು ವರ್ಷಗಳಿಂದ ಕಅಬಾದ ಪರಿಸರದಲ್ಲೇ ವಾಸವಾಗಿದ್ದ ಖದೀಜರಿಗೆ ಪ್ರವಾದಿಯವರ ﷺ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಕಾಣಲು ಅವಕಾಶ ಲಭಿಸಿತ್ತು. ಬರಗಾಲದ ಸಂದರ್ಭದಲ್ಲಿ ಅಬ್ದುಲ್ ಮುತ್ತಲಿಬರು ಮಾಡಿದ್ದ ಪ್ರಾರ್ಥನೆ, ಅವರ ಜೊತೆಯಲ್ಲಿದ್ದ ಮುಹಮ್ಮದರು ﷺ, ಮುಂತಾದ ಅನುಭವಗಳನ್ನು ಖದೀಜರಿಗೆ ಕಾಣಲು ಅವಕಾಶ ಲಭಿಸಿತ್ತು. 

ಇಮಾಮ್ ಕುಲಾಯಿ ಉಲ್ಲೇಖಿಸಿದ ಒಂದು ಘಟನೆ ಈ ರೀತಿಯಾಗಿದೆ. ಮೈಸರ ಹೇಳಿದ ವಿಷಯಗಳನ್ನೂ, ಖದೀಜ (ರ) ನೇರವಾಗಿ ವಿಸ್ಮಯಗಳನ್ನೂ, ಖದೀಜ (ರ) ನಂತರ ಆಲೋಚಿಸ ತೊಡಗಿದರು. ವಾಸ್ತವ ತಿಳಿಯಲೆಂದು ಬೀವಿಯವರ ಸಂಬಂಧಿಕರೂ, ವೇದಜ್ಞಾನಿಯಾಗಿದ್ದ ವರಕತ್ ಬಿನ್ ನೌಫಲರ ಬಳಿ ತೆರಳಿದರು. ಎಲ್ಲಾ ವಿಷಯಗಳನ್ನು ಗಮವಿಟ್ಟು ಕೇಳಿದ ನಂತರ "ಓ ಖದೀಜ.. (ರ) ನೀವು ಹೇಳಿದ್ದೆಲ್ಲವೂ ಸತ್ಯವಾಗಿದ್ದರೆ, ಮುಹಮ್ಮದ್ ﷺ ಖಂಡಿತ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯಾಗಿರುತ್ತಾರೆ ﷺ. ಇಂತಹ  ಒಬ್ಬರು ಪ್ರವಾದಿಯವರನ್ನು ﷺ ನಿಯೋಗಿಸಲಿದೆಯೆಂದು, ನನಗೆ ಮೊದಲೇ ತಿಳಿದಿತ್ತು. ಆ ಪ್ರವಾದಿಯವರ ﷺ ನಿಯೋಗದ ಸಮಯವು ಹತ್ತಿರವಾಗುತ್ತಿದೆ" ಎಂದು ಹೇಳಿದರು. ಈ ವಿವರಣೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಖದೀಜ ಸೌಭಾಗ್ಯವನ್ನು ನೆನೆದು ಒಂದು ಹೊಸ ಜೀವನವನ್ನು ಬಯಸಿದರು. 
    ನಂತರವೂ ಪ್ರವಾದಿಯವರ ﷺ ಕುರಿತಿರುವ ವಿಶೇಷತೆಗಳನ್ನು ವರಕತ್ ಖದೀಜರಿಗೆ (ರ) ತಿಳಿಸುತ್ತಿದ್ದರು. ಈ ವಿಷಯದಲ್ಲಿ ಕವಿತೆಯನ್ನು ರಚಿಸಿ ಅವರಿಗೆ ತಲುಪಿಸುತ್ತಿದ್ದರು. ಈ ಕವಿತೆಗಳನ್ನು ಚರಿತ್ರೆಗಳಲ್ಲಿ ಉಲ್ಲೇಖಿಸಲಾಗಿದೆ. 

    ಇಮಾಮ್ ಫಾಕಿಹಿ ಉಲ್ಲೇಖಿಸಿದ ಒಂದು ಘಟನೆಯು ಈ ರೀತಿಯಿದೆ. ಖದೀಜರ ವಿವಾಹನ್ವೇಷಣೆ ಅಬೂತ್ವಾಲಿಬರಿಗೆ ತಲುಪಿತು, ಅವರು ತಕ್ಷಣವೇ ಅದಕ್ಕೆ ಸಮ್ಮತಿಸಿದರು, ನೇರವಾದ ಮಾತುಕತೆಗಾಗಿ ಮುಹಮ್ಮದರನ್ನು ﷺ ಹಾಗೂ ಸೇವಕ ನಬ್ಅಃರನ್ನು ಜೊತೆಗೆ ಖದೀಜರ ಮನೆಗೆ ಕಳುಹಿಸಿದರು. ನಬ್'ಅ ಹೇಳುತ್ತಾರೆ, ನಾವು ಖದೀಜರ (ರ) ಮನೆಗೆ ತಲುಪಿದೆವು. ಅವರು ನಮ್ಮನ್ನು ಬಾಗಿಲ ಬಳಿ ಬಂದು ಖುದ್ದಾಗಿ ಸ್ವೀಕರಿಸಿದರು. ನಂತರ ನನ್ನ ತಂದೆ ತಾಯಿಯವರು ಮುಹಮ್ಮದರ ﷺ ಸಂಬಂಧಿಕರಾಗಿತ್ತಾರೆ, ನಾನು ಈ ವಿವಾಹವನ್ನು ಒಪ್ಪಿಕೊಳ್ಳಲು ಕಾರಣವಿದೆ ಮುಹಮ್ಮದರು ﷺ ಈ ಸಮೂಹಕ್ಕೆ ನಿಯೋಗಿಸಲ್ಪಡುವ ಪ್ರವಾದಿಯಾಗಿದ್ದಾರೆ, ಎನ್ನುವ ಭರವಸೆ ನನಗಿದೆ. ಹೀಗಿರುವಾಗ ಪ್ರವಾದಿಯಾದ ನಂತರ ನನ್ನನ್ನು ಅಂಗೀಕರಿಸಬಹುದಲ್ಲವೇ.? ಪ್ರವಾದಿಯಾಗಿ ನೇಮಿಸಿದ ಅಲ್ಲಾಹನಲ್ಲಿ ನನಗಾಗಿ ಪ್ರಾರ್ಥಿಸಬಹುದಲ್ಲವೇ ಎಂದು ಖದೀಜ ಹೇಳಿದಾಗ, ನೀವು ಹೇಳುವ ಆ ವ್ಯಕ್ತಿ ನಾನಾಗಿದ್ದರೆ.? ನಾವು ಎಂದಿಗೂ ಮುರಿಯದ ಭಾಧ್ಯತೆಯಲ್ಲಾಗಿದೆ ಒಟ್ಟು ಸೇರುತ್ತಿರುವುದು.? ಇನ್ನೂ ಆ ವ್ಯಕ್ತಿ ನಾನು ಆಗಿರದಿದ್ದರೆ ನೀವು ಬಯಸಿದ್ದನ್ನು ಖಂಡಿತ ಸೃಷ್ಟಿಕರ್ತನು ನಿರಾಶೆಗೊಳಿಸಲಾರನೆಂದು ಪ್ರವಾದಿಯವರು ﷺ ಹೇಳಿದರು.
(ಮುಂದುವರಿಯುವುದು...)

No comments: