ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಗಣ್ಯ ವ್ಯಕ್ತಿಗಳೆಲ್ಲರನ್ನು ಅಬೂತ್ವಾಲಿಬ್ ಆಮಂತ್ರಿಸಿದರು. ಮಕ್ಕ ಪಟ್ಟಣದ ಸುಮಾರು ಹತ್ತರಷ್ಟು ಗಣ್ಯವಕ್ತಿಗಳು ಮದುಮಗನ ಜೊತೆಯಲ್ಲಿ ವಧುವಿನ ಮನೆಗೆ ತೆರಳಿದರು. ವಿವಾಹ ವೇಧಿಕೆಯನ್ನು ಬಹಳ ಸೊಗಸಾಗಿ ಸಜ್ಜಿಕರಿಸಲಾಗಿತ್ತು. ವಧುವಿನ ಕಡೆಯ ಗಣ್ಯರು ಜೊತೆಸೇರಿದ್ದರು. ಮುಖ್ಯ ಅತಿಥಿಯಾಗಿ ವೇದ ಜ್ಞಾನಿಯಾದ ವರಕತ್ ಬಿನ್ ನೌಫಲ್ ಬಂದಿದ್ದರು. ಪ್ರಥಮವಾಗಿ ವಿವಾಹ ಖುತುಬವನ್ನು (ವಿಶೇಷವಾದ ಭಾಷಣ) ಆರಂಭಿಸಲಾಯಿತು. ಅಬೂತ್ವಾಲಿಬರಾಗಿದ್ದರು ಖುತುಬ ನಿರ್ವಹಿಸಿದ್ದು. ಖುತುಬದಲ್ಲಿದ್ದ ವಿಷಯ ಈ ರೀತಿಯಾಗಿದೆ. ಎಲ್ಲಾ ಸ್ತುತಿಯೂ ಅಲ್ಲಾಹನಿಗಾಗಿದೆ, ಅವನು ನಮ್ಮನ್ನು ಇಬ್ರಾಹಿಮರ ಸಂತಾನದಲ್ಲಿಯೂ, ಇಸ್ಮಾಯಿಲರ ಪರಂಪರೆಯಲ್ಲಿಯೂ ಜೊತೆ ಸೇರಿಸಿದನು, ನಾವು ಮಅದ್ದ್'ರ ವಂಶಸ್ಥರೂ, ಮುಳಿರ್'ರವರ ದಾರಿಯಲ್ಲಾಗಿದೆ ಚಲಿಸುತ್ತಿರುವುದು. ಅಲ್ಲಾಹನು ಅವನ ಭವನವಾದ ಕಅಬಾದ ಪಾಲಕರನ್ನಾಗಿಯೂ, ಹರಮ್'ನ ರಕ್ಷಕರನ್ನಾಗಿಯೂ ನಮ್ಮನ್ನು ಆರಿಸಿಕೊಂಡಿದ್ದಾನೆ. ಅವನು ನಮಗೆ ಸುರಕ್ಷಿತ ಪವಿತ್ರ ನಗರವನ್ನೂ, ಯಾತ್ರಿಕರು ಬಂದು ತಲುಪುವ ಪವಿತ್ರ ಸ್ಥಳವನ್ನು ನೀಡಿದನು. ಅವನು ನಮ್ಮನ್ನು ಜನರೆಡೆಯಲ್ಲಿ ನ್ಯಾಯಾಧೀಶರಾಗಿ ನೇಮಕ ಮಾಡಿರುತ್ತಾನೆ.
ನನ್ನ ಅಣ್ಣ ಅಬುಲ್ಲಾಹ್'ರ (ರ) ಮಗನಾದ ಮುಹಮ್ಮದ್ ﷺ ಇತರ ಯಾವುದೇ ವ್ಯಕ್ತಿಗಳಿಗಿಂತ ಎಲ್ಲಾ ರೀತಿಯಲ್ಲೂ ಉತ್ತಮ ವ್ಯಕ್ತಿಯಾಗಿರುವವರು. ಯಾರೊಂದಿಗೆ ಹೋಲಿಕೆ ಮಾಡಿದರೂ ಮುಹಮ್ಮದರಾಗಿರುತ್ತಾರೆ ﷺ ಉತ್ತಮ ಸ್ಥಾನದಲ್ಲಿ ನಿಲ್ಲುವುದು. ಮಹತ್ವ, ಬುದ್ದಿವಂತಿಕೆ, ಸಾಮರ್ಥ್ಯ, ಹೀಗೆ ಏನನ್ನು ನೋಡಿದರೂ ಅವರೇ ಆಗಿದ್ದಾರೆ ಉತ್ತಮ ವ್ಯಕ್ತಿ. ಆರ್ಥಿಕವಾಗಿ ಅವರಿಗೆ ಸಣ್ಣ ಕೊರತೆಯಿದೆ, ಅದೊಂದು ಸ್ಥಾನ ಬದಲಿಸುವ ನೆರಳು ಮಾತ್ರವಾಗಿದೆಯಲ್ಲವೇ.
ಆದರೆ ನಾನು ಘೋಷಿಸುತ್ತೇನೆ ನನ್ನ ಅಣ್ಣನ ಮಗನಿಗೆ ಎಲ್ಲವನ್ನೂ ಮೀರಿಸುವ ಸುವಾರ್ತೆ ಬರಲಿದೆ. ಒಂದು ಮಹತ್ವವಾದ ವಿಷಯ ಬರಲಿದೆ.
ನನ್ನ ಅಣ್ಣ ಮಗ ನಿಮ್ಮ ಪ್ರೀತಿಯ ಮಗಳಾದ ಖದೀಜರನ್ನು (ರ) ಮದುವೆಯಾಗುತ್ತಿದ್ದಾರೆ. ಮದುವೆಗೆ ವಧುದಕ್ಷಿಣೆಯಾಗಿ (ಮಹ್'ರ್) ಹನ್ನೆರಡುವರೆ ಊಖಿಯವಾಗಿದೆ (500 ದಿರ್ಹಂ) ನೀಡುತ್ತಿರುವುದು.
ಅಬೂತ್ವಾಲಿಬರ ಭಾಷಣ ಕಳೆದ ತಕ್ಷಣವೇ ವಧುವಿನ ಭಾಗದಿಂದ ಅಂರ್ ಬಿನ್ ಅಸದ್ ಎದ್ದು ನಿಂತರು. ಖದೀಜರ ಚಿಕ್ಕಪ್ಪನ ಮಗನಾಗಿದ್ದರು ಅವರು. ಅಬೂತ್ವಾಲಿಬರ ಮಾತಿಗೆ ಉತ್ತರವಾಗಿ ನೀವು ಹೇಳಿದ ಯುವಕ ನಿಜವಾಗಿಯೂ ಸಂಪೂರ್ಣ ವ್ಯಕ್ತಿಯಾಗಿರುವರು. ಈ ವಿನಂತಿಯನ್ನು ನಿರಾಕರಿಸಲಾಗದು, ನಾವು ಖದೀಜರನ್ನು ಮುಹಮ್ಮದರಿಗೆ ﷺ ಮದುವೆ ಮಾಡಿ ಕೊಟ್ಟೆವು. ಎಂದು ಹೇಳಿದ ನಂತರ ವರಕತ್ ಬಿನ್ ನೌಫಲ್ ಮಾತು ಮುಂದುವರಿಸಿದರು , ಸರ್ವ ಸ್ತುತಿಯು ಅಲ್ಲಾಹನಿಗಾಗಿ, ನೀವು ಹೇಳಿದ ಎಲ್ಲಾ ಸ್ಥಾನಗಳನ್ನು ಅಲ್ಲಾಹು ನಮಗೂ ನೀಡಿದ್ದಾನೆ. ನಾವು ಕೂಡ ಅರಬಿಗಳ ನಡುವೆ ಉನ್ನತ ಸ್ಥಾನದಲ್ಲಿದ್ದೇವೆ, ನೀವೂ ಕೂಡ ಅದಕ್ಕೆ ಅರ್ಹರಾಗಿದ್ದೀರಿ, ನಿಮ್ಮ ಉನ್ನತ ಸ್ಥಾನವನ್ನು ಅರಬಿಗಳು ಪರಿಗಣಿಸದೆ ಇರಲಾರರು. ನಿಮ್ಮ ವೈಭವ ಹಾಗೂ ಘನತೆಯನ್ನು ಯಾರೂ ಪ್ರಶ್ನಿಸುವುದಿಲ್ಲ. ನಿಮ್ಮ ಕುಟುಂಬದೊಂದಿಗೆ ಸಂಬಂಧ ಬೆಳೆಸಲು ನಾವು ಆಗ್ರಹಿಸುತ್ತೇವೆ. ಓ ಖುರೈಶಿಗಳೇ ನಿವಾಗಿರುತ್ತೀರಿ ಇದಕ್ಕೆ ಸಾಕ್ಷಿ. ಅಬ್ದುಲ್ಲಾರ (ರ) ಮಗನಾದ ಮುಹಮ್ಮದರಿಗೂ, ಖುವೈಲಿದ್'ರ ಮಗಳಾದ ಖದೀಜರಿಗೂ ಮೇಲೆ ತಿಳಿಸಿದ ಮಹ್'ರ್'ಗೆ (ವಧು ದಕ್ಷಿಣೆ) ವಿವಾಹಿತರಾದರು ಎಂದು ಘೋಷಿಸುತ್ತಿದ್ದೇನೆ.
ಖದೀಜರ (ರ) ಸಂತೋಷಕ್ಕೆ ಪಾರವೇ ಇಲ್ಲ. ಇಡೀ ಪ್ರಪಂಚದಲ್ಲೇ ಒಂದು ಹೆಣ್ಣಿಗೆ ಲಭಿಸಬಹುದಾದ ಅತ್ಯುತ್ತಮ ಭಾಗ್ಯವಾಗಿದೆ ಲಭಿಸಿದ್ದು. ವಿಧವತ್ವದ ಕತ್ತಲಾಗಲಿ, ತಾಯ್ತನದ ಧಣಿವಾಗಲಿ ಇರಲಿಲ್ಲ. ಅದೃಷ್ಟದ ಸಂತೋಷದಲ್ಲಿ ತನ್ನ ರಾಜಕುಮಾರನನ್ನು ಸ್ವೀಕರಿಸಲು ಸಿದ್ಧರಾದರು. ಮಕ್ಕಾ ನಿವಾಸಿಗಳೆಲ್ಲರೂ ಆ ಸಂಭ್ರಮವನ್ನು ಕೊಂಡಾಡಿದರು, ಖದೀಜರ ಗೆಳೆತಿಯರು ಹಾಡು ಹಾಡತೊಡಗಿದರು. ಖುರೈಶಿ ಮಹಿಳೆಯರ ನಾಯಕಿಗೆ ಅಲ್ ಅಮೀನ್ ವರನಾಗಿದ್ದಾರೆ, ಎಲ್ಲಿ ಹೋದರೂ ಅದೃಷ್ಟ ಮಾತ್ರ, ಎಂದು ಹೇಳತೊಡಗಿದರು. ಕವಿಗಳು ಶುಭಾಶಯ ಕವಿತೆಗಳನ್ನು ರಚಿಸಿದರು, ಹಲವರು ಅದನ್ನು ವಾಚಿಸಿದರು. ಅದರ ಕೆಲವು ಸಾಲುಗಳು ಈ ರೀತಿಯಾಗಿದೆ.
"ಲಾ ತಸ್'ಹದೀ ಖದೀಜು ಫೀ ಮುಹಮ್ಮದೀ- ನಜ್'ಮುನ್ ಯುಳೀಉ ಕಮಾ ಅಳಾ ಅಲ್ ಫರ್'ಖದು" ದಾರಿ ಕಾಣುತ್ತೆ ಮಿನುಗುವ ನಕ್ಷತ್ರದ ಹಾಗೆ, ಹೊರಟು ಹೋಗಿರಿ ಮುಹಮ್ಮದರ ಜೊತೆಯಲ್ಲಿ , ಯಾವುದೇ ವಿಷಾದವಿಲ್ಲದೆ ಆನಂದಿಸಿರಿ ಯುವತಿ ಖದೀಜರೇ ನೀವು. (ಸಂತೋಷದಿಂದ)
(ಮುಂದುವರಿಯುವುದು...)

No comments:
Post a Comment