ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರ ﷺ ಜೀವನದಲ್ಲಿ ಮನೆಯ ಹೊಸ ಸದಸ್ಯರಾಗಿ ಇನ್ನೊಂದು ವ್ಯಕ್ತಿಯೂ ಕೂಡ ಸೇರಿದರು. ಇನ್ಯಾರು ಅಲ್ಲ, ಉಕ್ಕಾಳ್ ಮಾರುಕಟ್ಟೆಯಲ್ಲಿ ಖರೀದಿಸಿದ ಸೇವಕ ಝೈದ್ ಆಗಿದ್ದರು. ಪ್ರವಾದಿಯವರ ﷺ ವ್ಯಕ್ತಿತ್ವವನ್ನು, ಜೀವನವನ್ನು ಬೆಳಗಿಸುವ ಒಂದು ಘಟನೆಯನ್ನು ಇಲ್ಲಿ ತಿಳಿಯಲಿಕ್ಕಿದೆ. ಝೈದ್ ಪ್ರವಾದಿಯವರ ﷺ ಜೀವನದಲ್ಲಿ ಆಗಮಿಸಿದ್ದು ಹೇಗೆ ಎಂದು ತಿಳಿಯೋಣ.
ಅರೇಬಿಯಾದ ಸುಪ್ರಸಿದ್ಧ ಕಲ್'ಬ್ ಜನಾಂಗದ ಶುರಾಹಿಲರ ಮಗನಾಗಿದ್ದಾರೆ ಹಾರಿಸ್. ತ್ವಯ್ ವಂಶದ ಸಅಲಬರ ಮಗಳಾದ ಝುಅದಃ ಆಗಿದ್ದರು ಇವರ ಪತ್ನಿ. ಹಾರಿಸ್, ಝುಅದಃ ದಂಪತಿಗಳ ಪ್ರೀತಿಯ ಮಗನೇ ಝೈದ್. ಶ್ರೀಮಂತ ಕುಟುಂಬವಾಗಿತ್ತು ಅವರದ್ದು, ಒಂದು ದಿನ ಝುಅದಃ ತನ್ನ ಮಗನ ಜೊತೆಯಲ್ಲಿ ಮಾವನ ಮನೆಗೆ ಹೊರಟರು. 'ಬನುಲ್ ಖೈನ್ ಬಿನ್ ಜಸ್'ರ್' ಎನ್ನುವ ಕುಖ್ಯಾತ ದರೋಡೆಕೋರರು ಅಲೆದಾಡುತಿದ್ದ ಸಮಯವಾಗಿತ್ತು ಅದು. ಆಯುಧದಾರಿಗಳಾಗಿದ್ದ ದರೋಡೆಕೋರರು ದಾರಿ ಮದ್ಯೆ ತಾಯಿ, ಮಗನನ್ನು ಬಂಧಿಸಿದರು. ಕ್ಷಮೆ ಕೇಳಿದಾಗ ತಾಯಿಯನ್ನು ಬಿಟ್ಟು, ಮಗನನ್ನು ಕೊಂಡೊದರು. ಝೈದನ್ನು ಗುಲಾಮರ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿತ್ತು ಅವರ ಉದ್ದೇಶ.
ಝುಅದಃ ಅದೃಷ್ಟದಿಂದ ಮಾತ್ರವಾಗಿತ್ತು ರಕ್ಷೆ ಹೊಂದಿದ್ದು. ಸಂಬಂಧಿಕರಿಗೆ ವಿಷಯ ತಿಳಿಸಿದರು. ತಂದೆ ಹಾರಿಸ್ ಹಾಗೂ ಸಹೋದರ ಕಲ್'ಬ್'ರ ಜೊತೆಯಲ್ಲಿ ಸಂಬಂಧಿಕರೆಲ್ಲರೂ ನಾಲ್ಕು ದಿಕ್ಕಿನಲ್ಲಿಯೂ ಹುಡುಕ ತೊಡಗಿದರು. ಬಲಿಷ್ಠರಾದ ಜನಾಂಗದವರು ತಮ್ಮ ಸಾಮರ್ಥ್ಯವನ್ನು ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ದರೋಡೆಕೋರರು ಝೈದನ್ನು ಗುಲಾಮನಾಗಿಸಿ ಬಹಳ ವೇಗವಾಗಿ ಬೇರೆ ಊರಿಗೆ ತಲುಪಿಸಿದರು. ಮಗನ ವಿರಹದ ನೋವಿನಲ್ಲಿ ಹಾರಿಸ್ ಬಹಳ ದುಃಖಿತರಾದರು. ಅಲ್ಲಲ್ಲಿ ಹುಡುಕುತ್ತಾ ಅಲೆಯ ತೊಡಗಿದರು. ಯಾವತ್ತಾದರೂ ಮಗನನ್ನು ಭೇಟಿಯಾಗಬಹುದೆಂದು ಆಶಿಸಿದ್ದರು. ಎಷ್ಟೇ ಬೆಲೆ ಕೊಟ್ಟಾದರೂ ಬಿಡುಗಡೆ ಮಾಡಿಸುವೆನು ಎಂದು ನಿರ್ಧರಿಸಿದರು. ಅವನನ್ನು ವಾಪಸು ಸಿಗುವವರೆಗೂ ಆಡಂಬರದ ಜೀವನವನ್ನು ವರ್ಜಿಸಲು ತೀರ್ಮಾನಿಸಿದರು. ಆದರೂ ಅವನ ಜನಾಂಗವೂ ಅವನನ್ನು ಹುಡುಕುದನ್ನು ನಿಲ್ಲಿಸಿರಲಿಲ್ಲ. ಕೊನೆಗೆ ಮಗನು ಜೀವಿಸಿರಬಹುದೋ ಅಥವಾ ಮರಣ ಹೊಂದಿರಬಹುದೋ ಎಂದು ತಿಳಿಯದೆ ಚಿಂತಿತರಾದರು. ಮಗನೊಂದಿನ ಪ್ರೀತಿಯ ಕಾರಣ ವಿರಹ ವೇದನೆಯಿಂದ ಕವಿತೆ ಹೇಳುತ್ತಾ ಅಲೆದರು. ಅದು ಒಂದು ಮಗನೊಂದಿಗೆ ತಂದೆಗಿರುವ ಪ್ರೀತಿಯ ಉದಾಹರಣೆಯಾಗಿ ಬದಲಾಯಿತು. ಝೈದಿನ ಕಣ್ಮರೆಯ ಕುರಿತು ಹಾರಿಸರ ಕವಿತೆಗಳನ್ನು ಇವತ್ತಿಗೂ ಓದುತ್ತಿದ್ದಾರೆ.
ಇದರೆಡೆಯಲ್ಲಿ ಝೈದ್ ಮಕ್ಕಾದ ಸುಪ್ರಸಿದ್ಧ ಉಕ್ಕಾಳ್ ಮಾರುಕಟ್ಟೆಯಲ್ಲಿ ಗುಲಾಮನಾಗಿ ತಲುಪಿದ್ದನು. ಪ್ರವಾದಿಯವರು ﷺ ಏನೋ ಅಗತ್ಯಕ್ಕೆ ಮಾರುಕಟ್ಟೆಗೆ ಬಂದಿದ್ದರು. ಗುಲಾಮರ ಗುಂಪಿನಲ್ಲಿ ಒಳ್ಳೆಯ ಮುಖ ಲಕ್ಷಣವಿರುವ ಝೈದನ್ನು ಕಂಡರು. ಅವನ ಮುಖ ಭಾವವು ಪ್ರವಾದಿಯವರನ್ನು ﷺ ಬಹಳ ಆಕರ್ಷಿಸಿತು. ಮನೆಗೆ ತೆರಳಿ ಖದೀಜರಲ್ಲಿ ವಿಷಯ ತಿಳಿಸಿದರು. ಒಳ್ಳೆಯ ಸ್ವಭಾವ ಗುಣನಡತೆಯಿರುವ ಆ ಮಗನನ್ನು ನಾವು ಖರೀದಿಸಬೇಕು. ಅವನನ್ನು ನಾವು ಮಗನಾಗಿ ಬೆಳೆಸೋಣ, ಅವನಲ್ಲಿ ಒಳ್ಳೆಯ ಭವಿಷ್ಯವನ್ನು ಕಾಣುತಿದ್ದೇನೆ. ಅದಕ್ಕೆ ಬೀವಿಯವರು ಸಮ್ಮತಿ ನೀಡಿದರು. ಪ್ರವಾದಿಯವರ ﷺ ಆಸಕ್ತಿಯು ಬೀವಿಯವರಿಗೆ ಯಾವಾಗಲೂ ಮುಖ್ಯವಾಗಿತ್ತಲ್ಲವೇ.? ಬೀವಿಯವರು ತಕ್ಷಣವೇ ಸಹೋದರ ಹಿಸಾಮಿನ ಮಗನಾದ ಹಕೀಮನ್ನು ಕರೆದು. ಅಗತ್ಯವಿರುವ ಹಣ ನೀಡಿ ಝೈದನ್ನು ಖರೀದಿಸಲು ಮಾರುಕಟ್ಟೆಗೆ ಕಳುಹಿಸಿದರು. ಬಹಳ ವೇಗವಾಗಿ ಮಾರುಕಟ್ಟೆಗೆ ತೆರಳಿ ನಾನೂರು ದಿರ್ಹಂಗೆ ಝೈದನ್ನು ಖರೀದಿಸಿ ಅತ್ತೆ ಖದೀಜರಿಗೆ ತಲುಪಿಸಿದರು. ಪ್ರವಾದಿತ್ವ ನಿಯೋಗದ ಹನ್ನೆರಡು ವರ್ಷ ಹಿಂದಿನ ಘಟನೆಯಾಗಿತ್ತೆಂದು 'ಅಲಿ ಅಲ್ ಖುಸಾಯಿಯವರು' ಅಭಿಪ್ರಾಯ ಪಟ್ಟಿರುತ್ತಾರೆ. ಅಂದು ಝೈದಿಗೆ ಎಂಟು ವರ್ಷ ಪ್ರಾಯವಾಗಿತ್ತು. ಹಾಗಿದ್ದರೆ ಅಂದು ಪ್ರವಾದಿಯವರ ﷺ ಪ್ರಾಯ ಇಪ್ಪತ್ತೆಂಟು ವರ್ಷವಾಗಿರಬಹುದು.
ಇನ್ನುಮುಂದೆ ಝೈದಿನ ಒಡೆಯ ಪ್ರವಾದಿಯವರು ﷺ ಹಾಗೂ ಒಡತಿ ಖದೀಜ ಬೀವಿಯಾಗಿರುತ್ತಾರೆ. ಹೊಸ ವಾತಾವರಣಕ್ಕೆ ಝೈದ್ ಬಹಳ ವೇಗವಾಗಿ ಹೊಂದಿಕೊಂಡನು. ಪ್ರವಾದಿಯವರಿಗೆ ﷺ ಒಳ್ಳೆಯ ಉಡುಗೊರೆ ನೀಡಿದ್ದು ಬೀವಿಯವರಿಗೆ ಬಹಳ ಸಂತೋಷವಾಗಿತ್ತು. ಒಳ್ಳೆಯ ಸೇವಕನನ್ನು, ಮಗನನ್ನು ಸಿಕ್ಕಿದ ಸಂತೋಷವಾಗಿತ್ತು ಪ್ರವಾದಿಯವರಿಗೆ ﷺ. ಸ್ವಂತ ತಂದೆ ತಾಯಿಗಿಂತ ಅಧಿಕವಾಗಿ ಪ್ರೀತಿ ನೀಡುತ್ತಿದ್ದ ತಂದೆ,ತಾಯಿಯನ್ನು ಸಿಕ್ಕಿದ ಸಂತೋಷದಲ್ಲಾಗಿದೆ ಝೈದ್ ಇರುವುದು.
ಪ್ರವಾದಿಯವರ ﷺ ಜೊತೆಗಿನ ನಿರಂತರವಾದ ಸಹವಾಸದ ಕಾರಣ ತನ್ನ ಯಜಮಾನ ಸಾಧಾರಣ ವ್ಯಕ್ತಿಯಲ್ಲ ಎನ್ನುವುದು ಝೈದ್'ಗೆ ಅರ್ಥವಾಯಿತು. ಅವರ ಬಳಿ ಏನೋ ಒಂದು ವಿಸ್ಮಯವಾದ ವಿಷಯಗಳು ಬಂದು ಸೇರುತ್ತಿದೆ...
(ಮುಂದುವರಿಯುವುದು...)

No comments:
Post a Comment