ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಧಿಕ ಯೋಚಿಸಲು ಏನು ಇಲ್ಲ, ನಾನು ಇಲ್ಲಿಯೇ ಇರುತ್ತೇನೆ ಎಂದು ಝೈದ್ ಪ್ರತಿಕ್ರಿಯೆ ನೀಡಿದನು. ನಾನು ತಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನನಗೆ ತಂದೆ ತಾಯಿ ಎಲ್ಲವೂ ನೀವೇ ಆಗಿರುತ್ತೀರಿ.
ಈ ಒಂದು ಉತ್ತರವನ್ನು ಊಹಿಸಿಯೂ ಇರದ ಹಾರಿಸ್ ಹಾಗೂ ಅವರ ಸಹೋದರನಿಗೆ ಆಶ್ಚರ್ಯವಾಯಿತು. ಮಗನೇ ಇದೇನು ಹೇಳುತ್ತಿರುವುದು ನೀನು.? ನಿನಗೆ ತಂದೆ, ತಾಯಿ ಇರುವಾಗ ಸೇವಕನಾಗಿ ಜೀವಿಸಲು ಇಷ್ಟ ಪಡುತ್ತಿಯೇ.? ಸ್ವಂತವಾದ ಮನೆ, ಕುಟುಂಬವೆಲ್ಲವೂ ಇರುವಾಗ ಸೇವಕನಾಗಿ ಜೀವಿಸುತ್ತಿಯೇ.? ಇದೆಂಥ ಹೊಸತನ.?
ಹೌದು ಅಪ್ಪ, ಈ ಮಹಾನ್ ವ್ಯಕ್ತಿತ್ವವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ. ಈ ಮಹಾಪುರುಷರಿಂದ ಭವಿಷ್ಯದಲ್ಲಿ ಕೆಲವೊಂದು ವಿಸ್ಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ಝೈದ್ ಹೇಳಿದನು.
ಹಾರಿಸಿಗೆ ವಿಷಯ ಅರ್ಥವಾಯಿತು. ಇಷ್ಟೊಂದು ಪ್ರೀತಿಸುವ ವ್ಯಕ್ತಿಯಿಂದ ನಾನು ಹೇಗೆ ಮಗನನ್ನು ದೂರ ಮಾಡಲು ಸಾಧ್ಯ ಎಂದು ಹೇಳಿದರು. ಝೈದಿನ ಭರವಸೆ ಹಾಗೂ ಪ್ರತಿಕ್ರಿಯೆವನ್ನು ಅರ್ಥ ಮಾಡಿಕೊಂಡ ಪ್ರವಾದಿಯವರು ﷺ ಝೈದಿನ ಕೈ ಹಿಡಿದು ನೇರವಾಗಿ ಕಅಬಾದ ಬಳಿ ತೆರಳಿದರು. ಹಾರಿಸ್ ಹಾಗೂ ಕಅಬ್ ಕೂಡ ಅವರ ಹಿಂದೆ ತೆರಳಿದರು. ಖುರೈಶಿಗಳ ಸಾನಿಧ್ಯದಲ್ಲಿ ಮುತ್ತು ಹಬೀಬರು ﷺ ಹೀಗೆ ಘೋಷಿಸಿದರು. "ಪ್ರೀತಿಯ ಜನಗಳೇ, ಖುರೈಶಿ ನಾಯಕರೇ ಇವನು ಝೈದ್, ಹಾರಿಸಿನ ಮಗ, ಇವನನ್ನು ನಾನು ದತ್ತು ಪುತ್ರನಾಗಿ ಸ್ವೀಕರಿಸುತ್ತಿದ್ದೇನೆ." ನನ್ನ ಅನುವಂಶಿಕ ಆಸ್ತಿಯಲ್ಲಿ ಅವನಿಗೂ, ಅವನ ಅನುವಂಶಿಕ ಆಸ್ತಿಯಲ್ಲಿ ನನಗೂ ಅವಕಾಶವಿದೆ. ಆ ಕಾಲದಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದದ್ದು ಕಅಬಾದ ಪರಿಸರದಲ್ಲಾಗಿತ್ತು. ಮಕ್ಕಾದ ಗಣ್ಯ ವ್ಯಕ್ತಿಗಳು ಜೊತೆ ಸೇರುವುದು, ಇತರ ಮಾತುಕತೆ ನಡೆಸುತ್ತಿದ್ದದ್ದೂ ಕೂಡ ಕಅಬಾದ ಪರಿಸರದಲ್ಲಾಗಿತ್ತು.
ಹಾರಿಸ್ ಹಾಗೂ ಕಅಬ್'ಗೆ ಈಗ ಸಮಾಧಾನವಾಯಿತು. ಝೈದ್ ಈಗ ಸೇವಕನಲ್ಲ ಬದಲಾಗಿ 'ಅಲ್ ಅಮೀನರ' ಮಗನಾಗಿದ್ದಾನೆ. ಏನೇ ಆದರೂ ಮಗನನ್ನು ಮಕ್ಕದಿಂದ ದೂರ ಮಾಡಲು ಸಾಧ್ಯವಿಲ್ಲ, ಅವರಿಬ್ಬರ ನಡುವಿನ ಅಘಾದವಾದ ಪ್ರೀತಿಯನ್ನು ಅರ್ಥಮಾಡಿದರು. ಮಗನನ್ನು ಮಕ್ಕಾದಲ್ಲಿ ಬಿಟ್ಟು ಅವರು ಊರಿಗೆ ಮರಳಲು ತೀರ್ಮಾನಿಸಿದಾಗ ಪ್ರವಾದಿಯವರು ﷺ ಅವರನ್ನು ಕಳುಹಿಸಿದರು. ಮಗನನ್ನು ಜೊತೆಯಲ್ಲಿ ಕೊಂಡೋಗಳು ಸಾದ್ಯವಾಗದಿದ್ದರೂ ಏನೋ ಒಂದು ಸಮಾಧಾನದಿಂದಾಗಿತ್ತು ಮರಳಿದ್ದು. ಕುಟುಂಬಸ್ಥರಲ್ಲಿ ಎಲ್ಲಾ ವಿವರವನ್ನು ತಿಳಿಸಿದರು. ಕೇಳಿದವರೂ ಅಧಿಕವೇನು ಪ್ರತಿಕ್ರಿಯೆ ನೀಡಲಿಲ್ಲ. ನಂತರದ ದಿನಗಳಲ್ಲಿ ಅವರು ಆಗಾಗ ಮಕ್ಕಾ ನಗರಕ್ಕೆ ಕುಟುಂಬಸ್ಥರೊಂದಿಗೆ ಬಂದು ಮಗನನ್ನು ಭೇಟಿಯಾಗಿ ಹೋಗುತ್ತಿದ್ದರು.
ಝೈದ್ ಪ್ರವಾದಿಯವರು ﷺ ಆಶ್ರಯದಲ್ಲಿ ಬೆಳೆಯ ತೊಡಗಿದರು. ಪ್ರವಾದಿಯವರ ﷺ ಜೀವನದಲ್ಲಿದ್ದ ಪ್ರಗತಿಗಳ ಜೊತೆಯಲ್ಲಿ ಝೈದ್ ಕೂಡ ಒಂದೊಂದೇ ಮೆಟ್ಟಿಲು ಹತ್ತಿದರು. ಅಂತ್ಯ ಪ್ರವಾದಿಯವರನ್ನು ﷺ ಅಖಾಡದಲ್ಲೂ, ಅಡುಗೆಮನೆಯಲ್ಲೂ, ತಿಳಿಯಲು ಭಾಗ್ಯ ಲಭಿಸಿದ ವ್ಯಕ್ತಿಯಾಗಿ ಇತಿಹಾಸದಲ್ಲಿ ಝೈದ್ ಅರಿಯಲ್ಪಟ್ಟರು.
ಪ್ರವಾದಿಯವರ ﷺ ಪ್ರಬೋಧನೆಯ ಆರಂಭದಲ್ಲಿಯೇ ಇಸ್ಲಾಮ್ ಸ್ವೀಕರಿಸಿದ್ದರು, ತಂದೆ ಹಾರಿಸ್ ಕೂಡ ಇಸ್ಲಾಂ ಸ್ವೀಕರಿಸಿದರು. ನಂತರ ಪ್ರವಾದಿಯವರ ﷺ ನೆರಳಿನ ಹಾಗೆ ಪ್ರವಾದಿಯವರ ﷺ ಜೊತೆಯಾಗಿ ಸಂಚರಿಸುವ ಭಾಗ್ಯ ಪಡೆದುಕೊಂಡರು. ಪವಿತ್ರ ಕುರ್'ಆನಿನಲ್ಲಿ ಹೆಸರು ಉಚ್ಚರಿಸಲ್ಪಟ್ಟ ಏಕೈಕ ಸ್ವಹಾಬಿ (ಪ್ರವಾದಿಯ ﷺ ಅನುಚರರು) ಎನ್ನುವ ಸ್ಥಾನವನ್ನು ಪಡೆದರು.
ಪ್ರವಾದಿತ್ವದ ಘೋಷಣೆಯ ಮುಂಚೆ ಹಾಗೂ ನಂತರವೂ ಪ್ರವಾದಿಯವರ ﷺ ಜೊತೆಯಲ್ಲಿದ್ದ ಅಪರೂಪದ ವ್ಯಕ್ತಿಯಾಗಿದ್ದರು ಝೈದ್. ಪ್ರವಾದಿಯವರ ﷺ ಸ್ವಭಾವ, ವರ್ತನೆ, ಜೀವನ ಹಾಗೂ ಮುಂತಾದ ವೈಯುಕ್ತಿಕ ವಿಷಯಗಳನ್ನು ತಿಳಿಯಲು ಅವಕಾಶ ಲಭಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲೊಬ್ಬರು ಕೂಡ ಆಗಿದ್ದರು.
ಕೆಲವೊಂದು ಸಂದರ್ಭಗಳಲ್ಲಿ, ಪ್ರವಾದಿಯವರ ﷺ ಜೀವನದ ಬಹಳ ಮುಖ್ಯವಾದ ಪರೀಕ್ಷೆಗಳ ದಿನಗಳಲ್ಲಿ ಝೈದ್ (ರ) ಸಾಕ್ಷಿಯಾಗಿರುತ್ತಿದ್ದರು.
ಪ್ರವಾದಿಯವರ ﷺ ಮುಂದಿನ ಇತಿಹಾಸದಲ್ಲಿ ಈ ಸ್ವಹಾಬಿಯವರು ಆಗಮಿಸಲಿದ್ದಾರೆ. ಕುಟುಂಬ ಜೀವನದಲ್ಲಿಯೂ, ರಣ ರಂಗದಲ್ಲಿಯೂ, ಝೈದ್ (ರ) ಜೊತೆಯಲ್ಲಿರುತ್ತಿದ್ದರು.
ಝೈದ್ ಎಲ್ಲಿಗೆ ತಲುಪಿದರೆಂದು ನಂತರ ನಾವು ತಿಳಿಯೋಣ. ಇನ್ನೂ ಪ್ರವಾದಿಯವರ ﷺ ಮಧ್ಯಸ್ಥಿಕೆಯ ಇನ್ನೊಂದು ಅಧ್ಯಾಯಕ್ಕೆ ಹೋಗಲಿದ್ದೇವೆ...
(ಮುಂದುವರಿಯುತ್ತದೆ...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment