ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರು ﷺ ಎಲ್ಲರೂ ಅಂಗೀಕರಿಸುವ ರೀತಿಯಲ್ಲಿ ಮಕ್ಕಾ ನಗರದಲ್ಲಿ ತಮ್ಮ ಯವ್ವನವನ್ನು ಕಳೆದರು. ಸರ್ವರೆಡೆಯಲ್ಲಿ ಮಾನ್ಯತೆ ಲಭಿಸುವ ಬಹಳಷ್ಟು ಘಟನೆಗಳು ನಡೆಯಿತು. ಅದರಲ್ಲಿ ಪ್ರಮುಖ ಘಟನೆಯಾಗಿತ್ತು ಕಅಬಾದ ನವೀಕರಣ ಸಂದರ್ಭದಲ್ಲಿ ಉಂಟಾದ ಘಟನೆ.
ಕಅಬಾದ ಪರಿಸರದಲ್ಲಿ ಒಬ್ಬರು ಮಹಿಳೆ ಆಹಾರ ತಯಾರಿಸಲೆಂದೋ ಅಥವಾ ಇನ್ಯಾವುದೋ ವಿಷಯಕ್ಕೋ ಬೆಂಕಿ ಹಚ್ಚಿದ್ದರು. ಅದರ ಕಿಚ್ಚು ಕಅಬಾಲಯಕ್ಕೆ ಹಾರಿ ಬೆಂಕಿ ಹಿಡಿದು ಬಹಳಷ್ಟು ಹಾನಿಯಾಗಿತ್ತು. ಇನ್ನು ಕಅಬಲಾಯವನ್ನು ಪುನರ್'ನಿರ್ಮಾಣ ಮಾಡದೆ ಮುಂದೆ ಸಾಗಲು ಎಂದಿಗೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಗೆ ತಲುಪಿತು. ತಕ್ಷಣದ ನವೀಕರಣಕ್ಕೆ ಇತರ ಬೇರೆ ಎರಡು ಕಾರಣಗಳಿತ್ತೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಒಂದು; ಒಮ್ಮೆ ಬಲವಾದ ಪ್ರವಾಹ ಬಂದ ಕಾರಣ ಕಅಬಾಲಯಕ್ಕೆ ಹಾನಿಯುಂಟಾಗಿತ್ತು. ಬೆಟ್ಟಗಳಿಂದ ಆವೃತವಾದ ಪ್ರದೇಶದಲ್ಲಿ ಕಅಬಾಲಯವಿರೂದರಿಂದ ಪರ್ವತಗಳಿಂದ ಇಳಿದು ಬಂದ ನೀರು ಕಅಬಾದ ಗೋಡೆಯನ್ನು ಬಹಳಷ್ಟು ಹಾನಿಗೊಳಿಸಿತ್ತು. ಎರಡು, ಕಅಬಾದೊಳಗೆ ಮಾಡಿದ ದರೋಡೆ. ಕಾಬಾದೊಳಗಿದ್ದ ಅನೇಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿದ್ದರು. ಕಾಬಾದ ಒಳಗಿನ ಬಾವಿಯಲ್ಲಿ ಇರಿಸಲಾಗಿದ್ದ ಜಿಂಕೆಗಳ ರೂಪದ ಎರಡು ಚಿನ್ನದ ಶಿಲ್ಪಗಳು ಹಾಗೂ ಇತರ ಅತ್ಯಮೂಲ್ಯ ರತ್ನಗಳು ಖುಸಾಅ ಜನಾಂಗದ ದುವೈಕ್'ನ ಮನೆಯಲ್ಲಿ ಸಿಕ್ಕಿತ್ತು. ಯಾರೋ ಕಳ್ಳರು ತನ್ನ ಸ್ಥಳದಲ್ಲಿ ಹಾಕಿ ಹೋಗಿರುವುದೆಂದು ವಾದಿಸಿದರು. ಆದರೆ ಸಮಗ್ರವಾಗಿ ತನಿಖೆ ನಡೆದ ನಂತರ ಅವರೇ ಆಗಿರುತ್ತಾರೆ ಕಳ್ಳತನ ಮಾಡಿದ್ದೆಂದು ಸಾಬಿತಾಗಿ, ಅವರ ಕೈಯನ್ನು ಕತ್ತರಿಸಿ ಶಿಕ್ಷೆ ವಿಧಿಸಲಾಯಿತು. ಭವಿಷ್ಯದಲ್ಲಿ ಇಂತಹ ದುಷ್'ಕೃತ್ಯ ನಡೆಯಬಾರದೆಂಬ ಉದ್ದೇಶದಿಂದ ಕಅಬಾದ ನವೀಕರಣ ಅನಿವಾರ್ಯವಾಯಿತು.
ಈ ಶುಭಾ ಕಾರ್ಯದ ಮುಹೂರ್ತವೂ ಕೂಡ ಬಂದೇ ಬಿಟ್ಟಿತು . ಆ ಸಮಯದಲ್ಲಿ ರೋಮ್ ಚಕ್ರವರ್ತಿಯ ಹಡಗೊಂದು ಸಮುದ್ರದಲ್ಲಿ ಚಲಿಸುತ್ತಿತ್ತು. ಅದರಲ್ಲಿ ಸಂಪೂರ್ಣವಾಗಿ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ವಸ್ತುಗಳಿದ್ದವು. ಕಲ್ಲು, ಮರ, ಕಬ್ಬಿಣ ಹೀಗೆ ಮುಂತಾದ ವಸ್ತುಗಳಿಂದ ತುಂಬಿ ಕೊಂಡಿದ್ದ ಹಡಗು ಯುಥೋಪಿಯಕ್ಕಾಗಿತ್ತು ಯಾತ್ರೆ ಹೊರಡಿದ್ದದ್ದು. ಜಿದ್ದಾದ ಬಳಿ ತಲುಪಿದಾಗ ಬಲವಾದ ಬಿರುಗಾಳಿಗೆ ಸಿಲುಕಿ ಜಿದ್ದಾ ಬಂದರಿನಲ್ಲಿ ಹಡಗನ್ನು ನಿಲ್ಲಿಸಬೇಕಾಯಿತು. ಹಡಗಿನಲ್ಲಿ ಇತರ ಸಾಮಗ್ರಿಗಳ ಜೊತೆಯಲ್ಲಿ ಶಿಲ್ಪಿಯೂ ಕೂಡ ಇದ್ದರು.
ಹಡಗು ಹಾಗೂ ವಸ್ತುಗಳು ಜಿದ್ದಾ ಪಟ್ಟಣಕ್ಕೆ ತಲುಪಿದ ವಿವರವು ಖುರೈಶಿಗಳಿಗೂ ತಲುಪಿತು. ಅವಕಾಶವನ್ನು ಸದುಪಯೋಗಗೊಳಿಸೋಣ ಎನ್ನುವ ಉದ್ದೇಶದಿಂದ ವಲೀದ್ ಬಿನ್ ಅಲ್'ಮುಗೀರರ ನಾಯಕತ್ವದ ಒಂದು ಗುಂಪು ಜಿದ್ದಾ ನಗರಕ್ಕೆ ತೆರಳಿ, ಹಡಗಿನ ಮೇಲ್ವಿಚಾರಕರನ್ನು ಭೇಟಿಯಾದರು. ಕಟ್ಟಿ ಹಾಕಿದ ಸಾಮಗ್ರಿಗಳನ್ನು ಖರೀದಿಸುವ ಯೋಚನೆಯನ್ನು ವ್ಯಕ್ತಪಡಿಸಿದರು. ಶಿಲ್ಪಿ ಬಾಖಿಮನ ಕೂಡ ಮೇಲ್ವಿಚಾರಣೆಯ ಭರವಸೆಯನ್ನು ನೀಡಿದರು.
ನವೀಕರಣದ ಎಲ್ಲಾ ಸಂದರ್ಭಗಳೂ ಒಟ್ಟು ಸೇರಿವೆ. ಇನ್ನೂ ತಕ್ಷಣವೇ ಕಾಮಗಾರಿ ಆರಂಭಿಸಬೇಕು. ಆದರೆ ಪುನಃ ನಿರ್ಮಿಸಲು ಇರುವುದನ್ನು ಕೆಡವಿ ಹಾಕಬೇಕು. ಆದರೆ ಯಾರಿಗೂ ಧೈರ್ಯ ಬರುತ್ತಿಲ್ಲ. ಕೊನೆಗೆ ಕಅಬಾಲದ ಒಂದು ಕಲ್ಲನ್ನು ತೆಗೆದರು, ಈ ಕಲ್ಲು ತೆಗೆದ ವ್ಯಕ್ತಿಗೆ ಏನಾದರೂ ಅನಾಹುತ ಸಂಭವಿಸಬಹುದೇ ಎಂದು ತಿಳಿಯಲು ಮೂರು ದಿನ ಕಾದು ನೋಡಿದರು. ಏನು ಸಂಭವಿಸಿದಿದ್ದಾಗ ಅದನ್ನು ಶುಭ ಲಕ್ಷಣವಾಗಿ ಕಂಡು ಹಳೆಯ ಕಟ್ಟಡವನ್ನು ಕೆಡವಿ ಹಾಕಲು ತೀರ್ಮಾನಿಸಿದರು.
ವಲೀದ್ ಬಿನ್ ಮುಗೀರ, ಆಯಿದ್ ಬಿನ್ ಅಂರ್ ಅಲ್ ಮಖ್ಸೂಮಿ ಎಂಬವರ ನಾಯಕತ್ವದಲ್ಲಿ ಪ್ರಾರ್ಥನೆಯನ್ನೂ, ಸೇವೆಯನ್ನು ನೀಡಿದರು. ಅದರ ನಡುವೆ ಒಂದು ಘಟನೆ ನಡೆಯಿತು. ಆಯಿದ್ ಒಂದು ಕಲ್ಲು ತೆಗೆದ ತಕ್ಷಣವೇ ಆ ಕಲ್ಲು ಕೈಯಿಂದ ತಪ್ಪಿ ಪುನಃ ಪೂರ್ವ ಸ್ಥಾನಕ್ಕೆ ಹೋಗಿ ನಿಲ್ಲುತಿತ್ತು. ಇದರ ಕುರಿತು ಆಳವಾಗಿ ಯೋಚಿಸಿದಾಗ ಸಂಶುದ್ಧವಾದ ಸಂಪತ್ತನ್ನು ಮಾತ್ರವೇ ಬಳಸಬೇಕು ಎಂದಾಗಿತ್ತು ಅದರ ರಹಸ್ಯ. ಅವರು ಸಂಶುದ್ಧವಾದ ಸಂಪತ್ತನ್ನು ಮಾತ್ರವೇ ನಾವು ಬಳಸುತ್ತೇವೆ, ಕಳ್ಳತನ, ವ್ಯಭಿಚಾರ ಅಥವಾ ಜೂಜಾಟದ ಮೂಲಕ ಸಂಪಾದಿಸಿದಂತಹ ಯಾವುದೇ ಆಸ್ತಿಯನ್ನು ಬಳಸದಿರಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದರು. ತೀರ್ಮಾನಿಸಿದ ಪ್ರಕಾರ ಪ್ರವಾದಿ ಇಬ್ರಾಹಿಂ (ಅ) ನಿರ್ಮಿಸಿದಷ್ಟು ನೆಲಮಳಿಗೆಯವರೆಗೆ ನಿರ್ಮಿಸಲು ಖುರೈಷಿಗಳ ಬಳಿ ಪವಿತ್ರ ಸಂಪತ್ತಿರಲಿಲ್ಲ. ಆದ್ದರಿಂದ, ಕಾಬಾದ ಉತ್ತರ ಭಾಗದಲ್ಲಿರುವ ಅರ್ಧವೃತ್ತಾಕಾರದ ಪ್ರದೇಶವನ್ನು ಅಡಿಪಾಯ ಮಾತ್ರ ಹಾಕಿ ಉಳಿಸಿಕೊಳ್ಳಬೇಕಾಗಿ ಬಂದಿತು.
ಕಅಬಾಲಯದ ನಿರ್ಮಾಣ ಬಹಳ ತ್ವರಿತವಾಗಿ ನಡೆಯಿತು. ಒಂದೊಂದು ಭಾಗವನ್ನು ಒಂದೊಂದು ಕುಟುಂಬದ ಉಸ್ತುವಾರಿಯೊಂದಿಗೆಯಾಗಿತ್ತು ನಿರ್ಮಾಣ ಕಾರ್ಯಗಳನ್ನು ಏರ್ಪಡಿಸಿದ್ದು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment