Abu Hisham Saquafi

Official Website Of Hafiz Ilyas Saquafi Padaladka

Thursday, July 21, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -36 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಅದೇ ಪ್ರಕಾರ ಕಅಬಾದ ಬಾಗಿಲು ಸಂಬಂಧಿಸಿದ ಭಾಗಗಳು ಬನೂಸಹ್'ರ, ಬನೂ ಅಬ್ದುಮನಾಫ್ ಕುಟುಂಬಕ್ಕಾಗಿತ್ತು. ಪ್ರವಾದಿಯವರ ﷺ ಶ್ರಮದಾನವು ಈ ಭಾಗದ ನಿರ್ಮಾಣದಲ್ಲಾಗಿತ್ತು. ಹಜರುಲ್ ಅಸ್'ವದ್ ಶಿಲೆಯಿಂದ ರುಕ್'ನುಲ್ ಯಮಾನಿವರೆಗಿನ ಭಾಗ ಮಖ್'ಸೂಮ್ ಕುಟುಂಬಕ್ಕೂ, ಅದರ ಉಪ ವಿಭಾಗಕ್ಕಾಗಿತ್ತು. ಕಅಬಾದ ಮೇಲ್ಮೈ ನಿರ್ಮಾಣದ ಉಸ್ತುವಾರಿತ್ವ ಬೂಸಹಮ್ ಬನೂ ಜುಮಹ್ ಎಂಬವರಿಗಾಗಿತ್ತು. ಬನೂ  ಅಬ್'ದುದ್ದಾರ್, ಬನೂಉಸ್ಸ, ಬನೂ ಅಸದ್, ಬನೂ ಅದಿಯ್ಯ್ ಎಂಬವರಿಗೆ ಹಜರುಲ್ ಅಸ್'ವದ್ ಭಾಗದ ನಿರ್ಮಾಣದ ಉಸ್ತುವಾರಿತ್ವವಾಗಿತ್ತು. 

      ನಿರ್ಮಾಣ ಕಾರ್ಯವು ಸಂಪೂರ್ಣವಾಯಿತು. ರೋಮನ್ ಶಿಲ್ಪಿ ಬಾಖುಮಿನ ಹಾಗೂ, ಕೋಪ್'ಡಿಕ್ ವಂಶಸ್ಥರಾದ ಬಡಗಿಯೊಬ್ಬರ ಮೇಲ್'ನೋಟದಲ್ಲಾಗಿತ್ತು ನಿರ್ಮಾಣ ಕಾರ್ಯವೆಲ್ಲವೂ ನಡೆದದ್ದು. ಕಅಬಾದಿಂದ ಸ್ವಲ್ಪ ದೂರವಿರುವ ಪರ್ವತದ ಕಲ್ಲಿನಿಂದಾಗಿತ್ತು ಕಅಬಾಲಯದ ಗೋಡೆಗಳಿಂದ ನಿರ್ಮಿಸಿದ್ದು. ನಂತರದ ಕಾಲದಲ್ಲಿ ಆ ಪರ್ವತವನ್ನು 'ಜಬಲ್ ಕಅಬ' ಎಂದು ಹೆಸರಿನಿಂದ ಕರೆಯತೊಡಗಿದರು. ಇಲ್ಲಿ ಪ್ರವಾದಿಯವರ ﷺ ಮುಖ್ಯ ಪಾತ್ರ ಕಲ್ಲು ಹೊತ್ತು ಕೊಂಡು ಹೋಗುವುದಾಗಿತ್ತು. ಈ ಸಂದರ್ಭದಲ್ಲಾಗಿತ್ತು ಬಟ್ಟೆ ಮಡಚಿ ಹೆಗಲ ಮೇಲಿಟ್ಟು ಕಲ್ಲು ಕೊಂಡು ಹೋದ ಘಟನೆ ನಡೆದದ್ದು. ಕಅಬಾದ ನಿರ್ಮಾಣ ಪೂರ್ತಿಯಾದ  ನಂತರ ಒಂದು ವಿವಾದ ನಿರ್ಮಾಣವಾಯಿತು. ಕಅಬಾದ ಆಗ್ನೇಯ ಭಾಗದಲ್ಲಿದ್ದ ಕಪ್ಪು ಶಿಲೆ ಅಥವಾ ಹಜರುಲ್ ಅಸ್'ವದ್ ಶಿಲೆಯನ್ನು ಪುನಃ ಪ್ರತಿಷ್ಠಾಪನೆಯ ಕುರಿತಾಗಿತ್ತು ವಿವಾದ. ಪರಿಶುದ್ಧವಾದ ಸ್ವರ್ಗದ ಶಿಲೆಯನ್ನು ಪುನಃ ಪ್ರತಿಷ್ಠಾಪಿಸುವುದು ಎಲ್ಲರಿಗೂ ಅಭಿಮಾನದ ವಿಷಯವಾಗಿತ್ತು. ಪ್ರತಿ ವಿಭಾಗವು ಈ ವಿಷಯವಾಗಿ ತಮ್ಮ ಹಕ್ಕುಗಳನ್ನು ಹೇಳ ತೊಡಗಿದರು. ಬನೂ ಅಬ್'ದುದಾರ್ ಒಂದು ತಟ್ಟೆಯಲ್ಲಿ ಗಣ್ಯರ ರಕ್ತವನ್ನು ಶೇಖರಿಸಿ ಅದರಲ್ಲಿ ಕೈ ಮುಳುಗಿಸಿ ನಾವೇ ಈ ಪವಿತ್ರ ಶಿಲೆಯನ್ನು ಪ್ರತಿಷ್ಠಾಪನೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದರು. ಬನೂ ಅದಿಯ್ಯ್ ಬಿನ್ ಕಅಬ್ ಕೂಡ ಅದೇ ರೀತಿಯಲ್ಲಿ ಘೋಷಣೆ ಮಾಡಿದಾಗ ಸಮಸ್ಯೆ ಇನ್ನಷ್ಟು ಗಂಭೀರವಾಯಿತು. ಖುರೈಶಿ ಗಣ್ಯರೆಲ್ಲರೂ ಪರಿಹಾರಕ್ಕಾಗಿ ಕಅಬಾದ ಪರಿಸರದಲ್ಲಿ ಕುಳಿತು ಸಭೆ ಸೇರಿದರು, ಖುರೈಷಿಗಳ ಹಿರಿಯ ನಾಯಕರಾದ ಅಬೂ ಉಮಯ್ಯ ಮುಗೀರ ಬಿನ್ ಅಲ್ ಮಖ್'ಸೂಮರನ್ನು ತೀರ್ಮಾನಕ್ಕಾಗಿ ನಿಯೋಗಿಸಲಾಯಿತು. ಓ ಖುರೈಶಿಗಳೇ ಸಮಸ್ಯೆಗೆ ನಾನೊಂದು ಪರಿಹಾರ ಸೂಚಿಸುತ್ತೇನೆ. ಇನ್ನು ಪ್ರಥಮವಾಗಿ ಯಾರು ಕಅಬಾದ ಸಮೀಪದಿಂದ ಹಾದು ಬರುತ್ತಾರೋ ಅವರಿಗೆ ಜವಾಬ್ದಾರಿ ವಹಿಸೋಣ, ಅವರೇ ಹಜರುಲ್ ಅಸ್'ವದ್ ಪುನಃ ಪ್ರತಿಷ್ಠಾಪನೆ ಮಾಡಲಿ. ಬರುವವರು ಯಾರೇ ಆದರೂ ಸರಿ ಎಂದು ಅವರು ಘೋಷಣೆ ಮಾಡಿದರು. ಎಲ್ಲರೂ ಈ ತೀರ್ಮಾನಕ್ಕೆ ಸಮ್ಮತಿ ನೀಡಿದರು. 

      ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಾ ಕುಳಿತರು. ಯಾರಾಗಿರಬಹುದು ಪ್ರಥಮವಾಗಿ ಬರುವ ವ್ಯಕ್ತಿ ಎಂದು ಯೋಚಿಸುತ್ತಿರುವಾಗ ಒಬ್ಬರು ಒಳಗೆ ಬಂದೇ ಬಿಟ್ಟರು. ಅವರನ್ನು ನೋಡಿ ಎಲ್ಲಾರೂ ಒಂದೇ ಶಬ್ದದಲ್ಲಿ ಹಾದಾ 'ಅಲ್ ಅಮೀನ್' ಎಂದು ಕೋಗಿ ಹೇಳಿದರು. ಈ ಬರುತ್ತಿರುವ ವ್ಯಕ್ತಿ ಅಲ್ ಅಮೀನ್ ಅಥವಾ ಮುಹಮ್ಮದ್ ﷺ ಆಗಿದ್ದಾರೆ, ನಮಗೆಲ್ಲರಿಗೂ ಸಮ್ಮತಿಯಿದೆಯೆಂದು ಹೇಳಿದರು.
      ಊರಿನ ಜನತೆಯ ಚರ್ಚೆಯಲ್ಲೋ, ಸಭೆಯಲೋ ಪ್ರವಾದಿಯವರು ﷺ ಉಪಸ್ಥಿತರಾಗಿರಲಿಲ್ಲ. ಅವರು ಬಹಳ ವಿನಮ್ರತೆಯಿಂದ ಜನರ ಬಳಿ ಬಂದು ನಿಂತರು. "ಹಜರುಲ್ ಅಸ್'ವದ್ ಪುನಃ ಪ್ರತಿಷ್ಠಾಪನೆಯ ವಿಷಯದಲ್ಲಿ ತೀರ್ಮಾನ ತೆಗೆಯಲು ನಾವು ನಿಮ್ಮನ್ನು ನಿಯೋಗಿಸಿದ್ದೇವೆ" ಎಂದು ಅವರು ತೆಗೆದುಕೊಂಡ ತೀರ್ಮಾನವನ್ನು ಪ್ರವಾದಿಯವರಿಗೆ ﷺ ತಿಳಿಸಿದರು. ಪ್ರವಾದಿಯವರು ﷺ ಬಹಳ ವಿನಮ್ರತೆಯಿಂದಲೇ ಅಧಿಕ ಯೋಚಿಸದೆ ಸಮಸ್ಯೆಗೆ ಪರಿಹಾರ ಈ ರೀತಿ ನೀಡಿದರು. ನೀವು ಅಗಲವಾದ ಬಟ್ಟೆ ತನ್ನಿರಿ, ಎಂದು ಹೇಳಿದಾಗ ಅವರು ತಂದರು, ಅದರ ಮೇಲೆ ಶಿಲೆಯನ್ನು ಇಟ್ಟು ಎಲ್ಲಾ ಜನಾಂಗದ ಹಿರಿಯ ನಾಯಕರನ್ನು ಕರೆದರು. ಒಂದೊಂದು ಭಾಗವನ್ನು ಹಿಡಿದು ಒಟ್ಟಾಗಿ ಎತ್ತಿ ಪ್ರತಿಷ್ಠಾಪನೆ ಮಾಡಬೇಕಾದ ಸ್ಥಳದಲ್ಲಿ ಕೊಂಡೋಗಿ ಇಟ್ಟರು. ಎಲ್ಲರಿಗೂ ಪ್ರತಿಷ್ಠಾಪಿಸಲು ಅವಕಾಶ ಲಭಿಸಿದ ಕಾರಣಕ್ಕೆ ಬಹಳಷ್ಟು ಸಂತೋಷವಾಗಿತ್ತು. ಪ್ರವಾದಿಯವರು ﷺ ಬಹಳ ಯುಕ್ತಿಯಿಂದ ತೆಗೆದ ಪಕ್ವತೆಯ ತೀರ್ಮಾನದ ಮೇಲೆ ಎಲ್ಲರಿಗೂ ಅಭಿಮಾನವಾಗಿತ್ತು. ಪ್ರಸ್ತುತ ಘಟನೆಗೆ ಸಾಕ್ಷಿಯಾಗಿದ್ದ ಮಹಾಕವಿ ಹುಬೈರ ಬಿನ್ ಅಬೀ ವಹಾಬ್ ಈ ರೀತಿ ಹಾಡಿದರು. 

"ತಶಾಜರತಿಲ್ ಅಹಿಯಾಉ ಫೀ ಫಸ್ಸಿ ಖುತ್ತಾತಿ........
ಯರೂಹು ಬಿಹಾ ರಕಬುಲ್ ಇರಾಖಿ ವ ಯಗ್'ತದೀ" 
ಹನ್ನೊಂದು ಸಾಲುಗಳ ಈ ಕವಿತೆಯು ಸಂಪೂರ್ಣವಾಗಿ ಪುಣ್ಯ ಪ್ರವಾದಿಯವರ ﷺ ಮಹತ್ವವನ್ನು, ಈ ಘಟನೆಯನ್ನು ಉದ್ದೇಶಿಸಿ ಆಗಿತ್ತು. 

(ಮುಂದುವರಿಯುತ್ತದೆ...)

No comments: