ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹಿರಾ ಗುಹೆಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಪ್ರವಾದಿಯವರು ﷺ ಯಾವ ರೀತಿ ಆರಾಧನೆ ನಡೆಸಿದ್ದರು, ಎನ್ನುವುದರಲ್ಲಿ ಬಹಳಷ್ಟು ಅಭಿಪ್ರಾಯಗಳನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಗತಕಾಲದ ಪ್ರವಾದಿಯರುಗಳ ಆರಾಧನೆ ಶೈಲಿಯಾಗಿತ್ತೆಂದು ಒಂದು ಗುಂಪಿನ ಅಭಿಪ್ರಾಯ. ಆದರೆ ಯಾವ ಪ್ರವಾದಿಯರುಗಳ ಶೈಲಿಯೆಂದು ಸ್ಪಷ್ಟವಾಗಿ ತಿಳಿಸಲಿಲ್ಲ. ಇಲ್ಲಿ ಎಂಟು ವೀಕ್ಷಣೆಯನ್ನು ಅಭಿಪ್ರಾಯ ಪಟ್ಟಿರುತ್ತಾರೆ. ಇಬ್'ನುಲ್ ಬುರ್'ಹಾನ್'ರವರು ಹೇಳುವುದು ಮನುಷ್ಯ ಪಿತ ಆದಂರವರ ಸರಣಿಯಲ್ಲಾಗಿತ್ತು ಎಂದು. ಕಾರಣ ಅವರು ಎಲ್ಲಾ ಪ್ರವಾದಿಯರುಗಳ ತಂದೆಯಾಗಿರುತ್ತಾರೆ ಅಲ್ಲವೇ. ಇಮಾಮ್ ಆಮುದಿಯವರ ಅಭಿಪ್ರಾಯದ ಪ್ರಕಾರ ಪ್ರವಾದಿ ನೂಹ್'ರವರ (ರ) ದಾರಿಯಾಗಿತ್ತು ಎಂದು, ಕಾರಣ ಅವರು ಶೈಖುಲ್ ಅಂಬಿಯಾ ಎನ್ನುವ ಪದವಿಯಿರುವ ವ್ಯಕ್ತಿಯಾಗಿದ್ದಾರಲ್ಲವೇ ಎಂದು. ಒಂದು ವಿಭಾಗ ಪಂಡಿತರ ಅಭಿಪ್ರಾಯ ಪ್ರವಾದಿ ಇಬ್ರಾಹಿಂರವರ (ಅ) ದಾರಿಯಾಗಿತ್ತು ಎಂದು, ಕಾರಣ ಅಲ್ಲಾಹನ ಖಲೀಲ್ ಎನ್ನುವ ಪದವಿಯಿರುವ ಪ್ರವಾದಿಯಾಗಿದ್ದಾರೆ ಅಲ್ಲವೇ. ಅದರ ಜೊತೆಯಲ್ಲಿ ಇಬ್ರಾಹಿಮೀ ಸರಣಿಯ ಕುರಿತು ತಿಳಿಸುವ ಖುರ್'ಆನಿನ ಸೂಕ್ತಗಳು ನಂತರದ ದಿನಗಳಲ್ಲಿ ಅವತರಿಸಿದ್ದು ಕಾಣಬಹುದು. ಪ್ರವಾದಿ ಮೂಸರವರದ್ದು (ಅ), ಪ್ರವಾದಿ ಈಸರವರದ್ದು (ಅ) ಎಂದಾಗಿದೆ ನಾಲ್ಕನೇ ಹಾಗೂ ಐದನೇ ಅಭಿಪ್ರಾಯ. ಕಲೀಮುಲ್ಲಾಹ್, ರೂಹುಲ್ಲಾಹ್ ಎನ್ನುವ ಪದವಿಯಿರುವ ಪ್ರವಾದಿಯಾಗಿದ್ದಾರಲ್ಲವೇ ಅವರು. ಗತಕಾಲದ ಪ್ರವಾದಿಗಳ ಆರಾಧನೆ ಶೈಲಿಯಲ್ಲಿ ಕೆಲವೊಂದನ್ನು ಸೇರಿಸಿಯಾಗಿತ್ತು ಎಂದು ಮತ್ತೊಂದು ಅಭಿಪ್ರಾಯ. ಪ್ರವಾದಿಯವರಿಗೆ ﷺ ಸ್ವಂತವಾದ ಆರಾಧನೆ ಶೈಲಿಯನ್ನು ಆಧ್ಯಾತ್ಮಿಕವಾಗಿ ಅಲ್ಲಾಹನು ನೀಡಿದ್ದನು ಎಂದು ಇನ್ನೊಂದು ಅಭಿಪ್ರಾಯ. ಕೊನೆಯ ಅಭಿಪ್ರಾಯ ಪರಿಗಣಿಸಿ ಇಮಾಮ್ ಇಬ್'ನು ಹಜರ್'ರವರು (ರ) ಹೇಳುವುದು ಈ ರೀತಿಯಾಗಿದೆ. "ಪ್ರವಾದಿಯವರಿಗೆ ﷺ ಆ ಕಾಲದಲ್ಲಿ ಉತ್ತಮವಾದ ಕೆಲವು ಆರಾಧನೆ ಶೈಲಿ ಲಭಿಸಿತ್ತು, ಅದರ ಪ್ರಕಾರ ಪ್ರವಾದಿಯವರು ﷺ ಆರಾಧನೆ ನಿರ್ವಹಿಸುತ್ತಿದ್ದರು."
ಆ ಕಾಲದ ಪ್ರಮುಖ ಆರಾಧನೆ, ಚಿಂತನೆ ಹಾಗೂ ಧ್ಯಾನವಾಗಿತ್ತು. ಅಥವಾ ಅಲ್ಲಾಹನ ಮಹತ್ವಗಳನ್ನು ಚಿಂತಿಸುವುದಾಗಿತ್ತು. ಈ ಒಂದು ಸಮಯವನ್ನು ಆಧ್ಯಾತ್ಮಿಕ ಶೈಲಿಯನ್ನು (ರಿಯಾಲ) ಪೂರ್ತಿಗೊಳಿಸುವ ತಪಸ್ಸಿನ ಕಾಲವಾಗಿ ಪ್ರಸ್ತುತಪಡಿಸಿದವರೂ ಇದ್ದಾರೆ. ಸರಳವಾಗಿ ಹೇಳುವುದಾದರೆ ಜೀವನದ ವ್ಯವಹಾರಗಳಿಂದ ದೂರ ಸರಿದು ಚಿಂತನೆಯಲ್ಲಿ (ತಫಕ್ಕುರ್) ಕಳೆಯುವ ಸಮಯವಾಗಿದೆ ಎಂದು.
ಹಿರಾ ಗುಹೆಯಲ್ಲಿ ವಾಸಿಸುತ್ತಿರುವ ಕಾಲದಲ್ಲಿ ದಿವಸಗಳು ಕಳೆದಂತೆ ಪ್ರವಾದಿಯವರಿಗೆ ﷺ ವಿಶೇಷವಾದ ಆಧ್ಯಾತ್ಮಿಕ ಅನುಭವಗಳು ಲಭಿಸುತ್ತಿತ್ತು. ಇದರ ಕುರಿತು ಪ್ರವಾದಿಯವರು ﷺ ಪ್ರೀತಿಯ ಪತ್ನಿ ಖದೀಜರಲ್ಲಿ (ರ) ಈ ರೀತಿ ವಿವರಿಸುತ್ತಾರೆ. ನಾನು ಒಂಟಿಯಾಗಿ ಇರುವ ಸಂದರ್ಭದಲ್ಲಿ ವಿಶೇಷವಾದ ಬೆಳಕುಗಳು ಕಾಣುತ್ತದೆ, ಕೆಲವೊಮ್ಮೆ ಕೆಲವು ಶಬ್ದಗಳು ಕೇಳುತ್ತದೆ. ಓ ಮುಹಮ್ಮದರೇ ﷺ ನಾನು ಜಿಬ್'ರೀಲ್ ಆಗಿರುತ್ತೇನೆ ಎಂದು. ನನಗೇನು ಆಗುತ್ತಿದೆ ಒಂದೂ ತಿಳಿಯುತ್ತಿಲ್ಲ. ಎಂದು ಪ್ರವಾದಿಯವರು ﷺ ಖದೀಜರಲ್ಲಿ (ರ) ಹೇಳಿದಾಗ, ನೀವು ಏನೂ ಭಯಪಡಬೇಡಿರಿ ನಿಮಗೆ ಒಳಿತಲ್ಲದೇ ಇನ್ನೇನು ಆಗುದಿಲ್ಲ ಎಂದು ಖದೀಜ (ರ) ಉತ್ತರಿಸಿದರು.
ಸ್ವಲ್ಪ ಸಮಯದ ನಂತರ ಅಬೂಬಕ್ಕರ್'ರವರು (ರ) ಆ ಸ್ಥಳಕ್ಕೆ ಆಗಮಿಸಿದಾಗ ಖದೀಜ (ರ) ಎಲ್ಲಾ ವಿಷಯವನ್ನು ಅಬೂಬಕ್ಕರ್'ರವರಲ್ಲಿ(ರ) ತಿಳಿಸಿದರು. ನೀವು ವರಕತ್ ಬಿನ್ ನೌಫಲ್'ರನ್ನು ಸಂಪರ್ಕಿಸಿ ಅವರಿಗೆ ವಿಷಯವನ್ನು ತಿಳಿಸಿರಿ ಅವರು ಬಹಳ ದೊಡ್ಡ ವೇದ ಜ್ಞಾನಿಯಾಗಿದ್ದಾರೆ ಎಂದು ಅಬೂಬಕ್ಕರ್'ರವರು ಹೇಳಿದರು. ನಂತರ ಪ್ರವಾದಿಯವರ ﷺ ಜೊತೆಯಲ್ಲಿ ಅಬೂಬಕ್ಕರ್'ರವರು ವರಕತ್ ಬಿನ್ ನೌಫಲನ್ನು ಭೇಟಿಯಾಗಿ ಸಂಪೂರ್ಣ ವಿಷಯವನ್ನು ತಿಳಿಸಿದರು. ನಾನು ಜಿಬ್'ರೀಲ್ ಆಗಿದ್ದೇನೆ ಎಂದು ಹೇಳಿದಾಗ ಸುಬ್ಬುಹಾನ್.. ಸುಬ್ಬುಹಾನ್.. ಸ್ತುತಿಸಲ್ಪಡುವವನು.. ವಿಗ್ರಹವನ್ನು ಆರಾಧಿಸುವ ಈ ಪ್ರದೇಶದಲ್ಲಿ ಜಿಬ್ರೀಲ್ (ಅ) ಎಂದು ಹೇಳುತ್ತಿದ್ದಾರಲ್ಲವೇ.! ಅಲ್ಲಾಹನು ಹಾಗೂ ಅವನ ಸಂದೇಶ ವಾಹಕರ ನಡುವೆ ಜವಾಬ್ದಾರಿ ತಿಳಿಸಿಕೊಡುವ ಮಲಕ್ (ಫರಿಶ್ತ) ಆಗಿದ್ದಾರೆ ಮಗನೇ ಅವರು, ಅದರಲ್ಲಿ ಭಯ ಪಡಬೇಕಾಗಿಲ್ಲ ಎಂದು ವರಕತ್ ಬಿನ್ ನೌಫಲ್ ಹೇಳಿದರು. ಈ ಘಟನೆಯನ್ನು ಅಂರ್ ಬಿನ್ ಶುರಹಬೀಲ್'ರವರು ಉಲ್ಲೇಖಿಸಿದ್ದಾರೆ.
ಮತ್ತೊಮ್ಮೆ ರಾತ್ರಿ ಒಂಟಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ 'ಅಸ್ಸಲಾಂ' ಎನ್ನುವ ಶಬ್ದ ಕೇಳಿಸಿತು. ತಕ್ಷಣವೇ ಮನೆಗೆ ತೆರಳಿ ಖದೀಜ (ರ) ಬೀವಿಯವರಲ್ಲಿ ವಿಷಯ ತಿಳಿಸಿದಾಗ, ಅಸ್ಸಲಾಂ ಎನ್ನುವುದು ಶಾಂತಿಯ ಸಂದೇಶವಾಗಿದೆಯಲ್ಲವೇ ಒಳ್ಳೆಯದೇ ಉಂಟಾಗುತ್ತದೆ, ಭಯ ಪಡಬೇಕಾಗಿಲ್ಲ ಎಂದು ಖದೀಜ (ರ) ಹೇಳಿದರು.
ಮತ್ತೊಮ್ಮೆ ವರಖತ್ ಬಿನ್ ನೌಫಲ್'ರೊಂದಿಗೆ ಇನ್ನೊಂದು ಅನುಭವವನ್ನು ಹೇಳಿದಾಗ, ಸಂತೋಷ ಪಡು ಮಗನೇ ಸಂತೋಷ ಪಡು. ಮರ್'ಯಮಿನ ಮಗನಾದ ಈಸ (ಅ) ಪ್ರವಾದಿಯವರ ಬಳಿ ಬರುತ್ತಿದ್ದ ನಾಮೂಸ್ ಆಗಿದ್ದಾರೆ ಮಗನನ್ನು ಕೂಡ ಹಿಂಬಾಲಿಸುತ್ತಿರುವುದು....
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment