ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬೂದರ್ರ್ ಅಲ್ ಗಿಫಾರಿ (ರಲಿಯಲ್ಲಾಹ್)
ಮಕ್ಕಾ ಹಾಗೂ ಮದೀನದ ನಡುವೆ ಇರುವ ಸಫ್'ರಾಅ್ ಕಣಿವೆಯಲ್ಲಿ ಜೀವಿಸುತ್ತಿದ್ದ ಜನಾಂಗವಾಗಿತ್ತು ಗಿಫಾರ್. ಆ ಜನಾಂಗದ ಗಣ್ಯ ವ್ಯಕ್ತಿಯಾಗಿದ್ದರು ಅಬೂದರ್ರ್ (ರ). ಮಕ್ಕಾದಲ್ಲಿ ಮುಹಮ್ಮದ್'ರು ﷺ ಪ್ರವಾದಿತ್ವದ ಘೋಷಣೆ ಮಾಡಿದ ವಿಷಯವು ಅವರಿಗೆ ತಿಳಿದಾಗ, ಅವರು ತನ್ನ ಸಹೋದರ ಅನೀಸನ್ನು ಕರೆದು, ನೀನು ತಕ್ಷಣವೇ ಮಕ್ಕಾ ನಗರಕ್ಕೆ ತೆರಳಿ ಪ್ರವಾದಿತ್ವದ ಘೋಷಣೆ ಮಾಡಿದ ಪ್ರವಾದಿಯ ಕುರಿತು ಸ್ಪಷ್ಟವಾದ ಮಾಹಿತಿ ಪಡೆದು ಬರಬೇಕು. ಎಂದು ಹೇಳಿ, ಮಕ್ಕಾ ನಗರಕ್ಕೆ ಕಳುಹಿಸಿದರು. ಮಕ್ಕದಿಂದಾ ಹಿಂತಿರುಗಿ ಬಂದ ಅನೀಸ್'ನಿಂದ ಎಲ್ಲಾ ವಿವರಗಳನ್ನು ಕೇಳಿದಾಗ, ಎಲ್ಲವನ್ನು ವಿವರಿಸ ತೊಡಗಿದರು. ನಾನು ಆ ಪ್ರವಾದಿಯವರನ್ನು ಭೇಟಿಯಾದೆನು, ಅಲ್ಲಾಹನು ನಿಯೋಗಿಸಿದ ಪ್ರವಾದಿ ಆಗಿರುವರು ಎಂದೂ, ಏಕನಾದ ಅಲ್ಲಾಹನನ್ನು ಮಾತ್ರವೇ ಆರಾಧನೆ ನಡೆಸಬೇಕು, ಉತ್ತಮ ಸ್ವಭಾವದೊಂದಿಗೆಯೇ ಜೀವಿಸಬೇಕು ಎಂದಾಗಿದೆ ಅವರು ಹೇಳುತ್ತಿರುವುದು, ಎಂದು ಹೇಳಿದರು. ಸರಿ, ಜನರು ಅವರು ಕುರಿತು ಏನು ಹೇಳುತ್ತಿದ್ದಾರೆ.? ಎಂದು ಅಬೂದರ್ರ್ ಕೇಳಿದಾಗ, ಅವರೊಬ್ಬ ಕವಿ ಆಗಿರಬಹುದು ಅಥವಾ, ಜ್ಯೋತಿಷಿ, ಮಾಟಗಾರ ಆಗಿರಬಹುದು ಹೀಗೆ ಏನೇನೋ ಹೇಳ್ತಾರೆ. ಆದರೆ ಆ ಜನರು ಹೇಳುವುದು ಶುದ್ಧ ಸುಳ್ಳಾಗಿದೆ, ಎಂದು ಕವಿಯೂ ಕೂಡ ಆಗಿದ್ದ ಅನೀಸ್ ಹೇಳಿದಾಗ, ನೀನು ಹೇಳಿದ ಮಾತು ನನಗೆ ಸಮಾಧಾನ ತರಿಸಲಿಲ್ಲ ಹಾಗಾಗಿ ನಾನೇ ಖುದ್ದಾಗಿ ಮಕ್ಕ ನಗರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ಅನೀಸ್, ಸರಿ ಆದರೆ ಒಂದು ಮಾತು. ನೀವು ಬಹಳ ಗಮನ ಹರಿಸಿ ಹೋಗಬೇಕು, ಕಾರಣ ಮಕ್ಕಾ ನಿವಾಸಿಗಳು ಪ್ರವಾದಿಯವರನ್ನು ﷺ ಒಬ್ಬ ಶತ್ರುವಿನ ರೂಪದಲ್ಲಾಗಿದೆ ನೋಡುತ್ತಿರುವುದು. ನೀವು ಅವರಲ್ಲಿ ಪ್ರವಾದಿಯವರ ﷺ ಕುರಿತು ಕೇಳಿದರೆ, ಬಹುಶಃ ನಿಮಗೂ ಅವರು ತೊಂದರೆ ಕೊಡಬಹುದು ಎಂದು ಹೇಳಿದರು. ಅಬೂದರ್ರ್ (ರ) ಕುಡಿಯಲು ಸ್ವಲ್ಪ ನೀರು ಹಾಗೂ ಒಂದು ಊರುಗೋಲಿನ ಜೊತೆಯಲ್ಲಿ ಮಕ್ಕಾ ನಗರಕ್ಕೆ ಯಾತ್ರೆ ತೆರಳಿದರು. ಮಕ್ಕಾ ನಗರಕ್ಕೆ ತಲುಪಿದ ನಂತರ, ಮಸ್ಜಿದಿಗೆ ಹೋದರೂ ಯಾರಲ್ಲೂ ಕೇಳುವ ಧೈರ್ಯ ಅವರಿಗೆ ಬರಲಿಲ್ಲ.
ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು. ಅಬೂದರ್ರ್ ಒಬ್ಬರ ಬಳಿ ಹೋಗಿ, 'ಸಾಬಿಈ' ಎಂದು ಹೇಳುವ ಆ ವ್ಯಕ್ತಿಯನ್ನು ಒಮ್ಮೆ ಕಾಣಲು ಸಾಧ್ಯವಿದೆಯೇ.? ಎಂದು ಬಹಳ ರಹಸ್ಯವಾಗಿ ಕೇಳಿದರು. ಸತ್ಯ ವಿಶ್ವಾಸಿಗಳನ್ನು ಕರೆಯುವ ಪ್ರಯೋಗವಾಗಿತ್ತು 'ಸಾಬಿಈ' ಎಂದು. ಇದನ್ನು ಕೇಳಿದ ತಕ್ಷಣವೇ, ಆ ವ್ಯಕ್ತಿ ಇಲ್ಲೊಬ್ಬ ಸಾಬಿಈ ಬಂದಿದ್ದಾನೆಂದು ಕೂಗಿ ಹೇಳತೊಡಗಿದರು. ಅಲ್ಲಿ ನೆರೆದಿದ್ದ ಎಲ್ಲಾ ಜನರು ಅಬೂದರ್ರ್ (ರ) ಅವರ ಮೇಲೆ ಹಲ್ಲೆ ಮಾಡಲು ಮುಂದಾದರು. ಆ ಕಣಿವೆಯಲ್ಲಿ ನೆರೆದಿದ್ದ ಜನರೆಲ್ಲರೂ ಸೇರಿ ಅಬೂದರ್ರ್'ರವರ (ರ) ಮೇಲೆ ಕಲ್ಲು ತೂರಾಟ ನಡೆಸಿದಾಗ, ಅವರು ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ಎಚ್ಚರಗೊಂಡಾಗ ಶರೀರದ ಮೇಲೆ ಸಂಪೂರ್ಣವಾಗಿ ಕೆಂಪು ಮಣ್ಣು ಕವಿದಿತ್ತು. ನಂತರ ಅಲ್ಲಿಂದ ಎದ್ದು ಝಮ್ ಝಮ್ ಬಾವಿಯ ಬಳಿ ತೆರಳಿ ಸ್ನಾನ ಮಾಡಿ, ಹೊಟ್ಟೆ ತುಂಬಾ ನೀರು ಕುಡಿದರು. ಹೀಗೆ ಮೂವತ್ತು ದಿವಸವೂ ಕೂಡ ಅದೇ ಬಾವಿಯ ಪಕ್ಕದಲ್ಲಿ ಕಾಲ ಕಳೆದರು. ಅಲ್ಲಿ ಅವರು ಕೇವಲ ಝಮ್ ಝಮ್ ನೀರು ಮಾತ್ರವಾಗಿತ್ತು ಕುಡಿಯುತ್ತಿದ್ದದ್ದು. ಅವರಿಗೆ ಹಸಿವಿನ ಯಾವುದೇ ಸಂಕಟವೂ ಕೂಡ ಇರಲಿಲ್ಲ, ಬದಲಾಗಿ ಅವರ ಶರೀರವು ದಷ್ಟ ಪುಷ್ಟವಾಗಿ ಬೆಳೆದಿತ್ತು.
ಅಬೂದರ್ರ್ (ರ) ವಿವರಿಸುತ್ತಾರೆ, ಒಂದು ಹುಣ್ಣಿಮೆಯ ರಾತ್ರಿಯಲ್ಲಿ, ಖುರೈಷಿಗಳು ಗಾಢವಾಗಿ ನಿದ್ರಿಸುತ್ತಿರುವ ಸಂದರ್ಭವಾಗಿತ್ತು ಅದು. ನಾನು ಕಅಬಾಲಯದ ಬಳಿ ತೆರಳಿದಾಗ, ಇಬ್ಬರು ಮಹಿಳೆಯರನ್ನು ಬಿಟ್ಟು ಅಲ್ಲಿ ಯಾರು ಕೂಡ ಇರಲಿಲ್ಲ. ಅವರು ಮಾತ್ರ 'ಇಸಾಫ್', 'ನಾಯಿಲ' ಎನ್ನುವ ದೇವರನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ಕಅಬಾದ ಪ್ರದಕ್ಷಿಣೆ ಹಾಕುತ್ತಾ ನನ್ನ ಬಳಿ ತಲುಪಿದಾಗ. ನಾನು ಅವರಲ್ಲಿ, ನೀವು ಈ ಕರೆದು ಪ್ರಾರ್ಥಿಸುವ ಎರಡು ದೇವರನ್ನು ಪರಸ್ಪರ ಮದುವೆ ಮಾಡಿ ಕೊಟ್ಟು ಬಿಡಿ ಎಂದು ಗೇಲಿ ಮಾಡಿದಾಗ, ಅವರು ಏನೂ ಪ್ರತಿಕ್ರಿಯೆ ನೀಡಲಿಲ್ಲ. ಪುನಃ ಪ್ರದಕ್ಷಿಣೆ ಹಾಕುತ್ತಾ, ನನ್ನ ಬಳಿ ತಲುಪಿದಾಗ ನಾನು ಪುನಃ ಅದೇ ರೀತಿ ಅಂದೆನು. ಇದನ್ನು ಕೇಳಿದ ಅವರು ನಮ್ಮ ಜನರನ್ನು ಇಲ್ಲಿ ಸುತ್ತಮುತ್ತಲು ಕಾಣುತ್ತಿಲ್ಲವಲ್ಲ ಎಂದು ಹೇಳುತ್ತಾ, ಅವರು ಹೊರಗೆ ನಡೆದರು.
ಆದೇ ಸಮಯಕ್ಕೆ ಮುಹಮ್ಮದ್'ರು ಹಾಗೂ ಅಬೂಬಕ್ಕರ್'ರವರು ಕಅಬಾಲಯದ ಬಳಿ ಬಂದು ನಿಂತರು. ಅವರು ಆ ಮಹಿಳೆಯರಲ್ಲಿ ಏನಾಯಿತು ಎಂದು ಕೇಳಿದಾಗ, ಅವರು ಕಅಬಾಲಯದ ಬಳಿ, ಒಬ್ಬ ಸಾಬಿಈ ಇದ್ದಾರೆ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಹೇಳಿದರು.
ಪ್ರವಾದಿಯವರು ಕಅಬಾದ ಬಳಿ ಬಂದು, ಹಜರುಲ್ ಅಸ್'ವದನ್ನು ಚುಂಬಿಸಿ, ಇಬ್ಬರೂ ಕೂಡ ಕಅಬಾದ ತ್ವವಾಫ್ (ಪ್ರದಕ್ಷಿಣೆ) ಮಾಡಿದ ನಂತರ, ನಮಾಝ್ ಮಾಡಲು ಆರಂಭಿಸಿದರು. ನಾನು ಅವರ ಬಳಿ ಹೋಗಿ, ಅಸ್ಸಲಾಂ ಅಲೈಕುಂ ಯಾ ರಸೂಲಲ್ಲಾಹ್, ಓ ಅಲ್ಲಾಹುವಿನ ಸಂದೇಶ ವಾಹಕರೇ ನಿಮಗೆ ಸಲಾಂ...
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment