ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ನಂತರ ಪ್ರವಾದಿಯವರು ﷺ ಮಾತು ಮುಂದುವರಿಸಿದರು. ನೀವು ಏನು ಹೇಳುತ್ತಿದ್ದೀರೋ.? ಒಂದೂ ಅರ್ಥ ಆಗುತ್ತಿಲ್ಲ. ನಾನು ನಿಮ್ಮ ಈ ಸಂಪತ್ತಿಗಾಗಲಿ, ಅಧಿಕಾರಕ್ಕಾಗಲಿ ಇಲ್ಲಿಗೆ ಬಂದಿಲ್ಲ. ನನ್ನನ್ನು ಅಲ್ಲಾಹನು ಅವನ ದೂತನಾಗಿ ನಿಯೋಗಿಸಿರುವನು, ನನಗಾಗಿ ಒಂದು ಗ್ರಂಥವನ್ನೂ ಕೂಡ ಅವತರಿಸಿ, ನೀವುಗಳಿಗೆ ಸುವಾರ್ತೆ, ಹಾಗೂ ಮುನ್ನೆಚ್ಚರಿಕೆಯನ್ನು ನೀಡಲು ನನ್ನನ್ನು ಇಲ್ಲಿಗೆ ಕಳುಹಿಸಿರುವನು. ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಾನು ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಅದಕ್ಕಾಗಿಯೇ ನಾನು ನಿಮ್'ಗಳಿಗೆ ಉಪದೇಶವನ್ನು ನೀಡುತ್ತಿರುವುದು. ಅದನ್ನು ನೀವು ಪಾಲಿಸಿದರೆ ಎರಡು ಲೋಕದಲ್ಲೂ ನಿಮಗೆ ಒಳಿತು ಸಿಗಲಿದೆ. ಇನ್ನೂ ನೀವು ನನ್ನನ್ನು ನಿರ್ಲಕ್ಷಿಸುದಾದರೆ, ನಾನು ಎಲ್ಲವನ್ನು ಅಲ್ಲಾಹನಿಗೆ ಬಿಟ್ಟು ಬಿಡುತ್ತೇನೆ. ಎಲ್ಲಾ ವಿಷಯಗಳನ್ನು ನಾನು ತಾಳ್ಮೆಯಿಂದಲೇ ಎದುರಿಸುತ್ತೇನೆ ಅಷ್ಟೇ. ಇದನ್ನು ಕೇಳಿದ ತಕ್ಷಣವೇ ಅವರ ಮುಖ ಭಾವವೇ ಬದಲಾಯಿತು. ಜೊತೆಯಲ್ಲಿ ಅವರು ಉತ್ತರಿಸುವ ದಾಟಿಯು ಕೂಡ ಬದಲಾಯಿತು. ನಿಮಗೆಯೇ ಗೊತ್ತಿದೆಯಲ್ಲವೇ, ನಾವೀಗ ಎಷ್ಟೊಂದು ಒತ್ತಡಗಳಲ್ಲಿದ್ದೇವೆ ಎಂದು. ಆರ್ಥಿಕವಾಗಿಯೂ, ಪ್ರದೇಶಿಕವಾಗಿಯೂ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತಿದ್ದೇವೆ. ನೀವೊಮ್ಮೆ ನಿಮ್ಮ ದೇವನಲ್ಲಿ ಹೇಳಿ, ಇರಾಕಿನವರಿಗೆ ಹಾಗೂ ಶಾಂಮಿನ ಜನತೆಗೆ ನೀಡಿದ ಹಾಗೆ ನಮಗೂ ಕೂಡ ಒಂದು ಹೊಳೆಯನ್ನು ನೀಡಲು. ಮರಣ ಹೊಂದಿರುವ ನಮ್ಮ ಪೂರ್ವಿಕರಿಗೆ ಪುನರ್ಜೀವ ನೀಡಲು, ಖಿಲಾಬಿನ ಮಗನಾದ ಖುಸೈಯ್'ಯವರಿಗೂ ಪುನರ್ಜೀವ ನೀಡಿ, ನಾವೊಮ್ಮೆ ಅವರಲ್ಲಿ ಕೇಳುತ್ತೇವೆ ಇವರು ಹೇಳುತ್ತಿರುವುದು ಎಲ್ಲವೂ ಸರಿಯ ಎಂದು. ಕಾರಣ ಅವರೊಬ್ಬರು ನೀತಿವಂತ ವ್ಯಕ್ತಿಯಾಗಿದ್ದರು ಅದಕ್ಕೆ ಹೇಳಿದ್ದು.
ನಾವು ಹೇಳಿದ ಈ ಎಲ್ಲಾ ವಿಷಯಗಳನ್ನು ನೀವು ನಡೆಸಿ ಕೊಡಿ. ಆಗ ನಾವು ಅಂಗೀಕರಿಸುತ್ತೇವೆ, ನೀವು ಹೇಳುತ್ತಿರುವುದು ಸತ್ಯ ಎಂದು ಹೇಳಿದರು.
ಅದನ್ನು ಕೇಳಿದ ಪ್ರವಾದಿಯವರು ﷺ, ನಾನು ನೀವು ಹೇಳಿದ ಹಾಗೆ ಮಾಡಲು ಅಲ್ಲ ನನ್ನನ್ನು ನಿಯೋಗಿಸಿದ್ದು. ನನಗೆ ನಿಯೋಗಿಸಿದ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ನೀವು ಅದನ್ನು ಒಪ್ಪಿಕೊಂಡರೆ ಎರಡು ಲೋಕದಲ್ಲೂ ಒಳಿತು ಸಿಗುತ್ತದೆ. ಇಲ್ಲದಿದ್ದರೆ ನಿಮಗೆ ಏನು ಬೇಕಾದರೂ ತೀರ್ಮಾನ ಮಾಡಬಹುದು, ನಾನು ಎಲ್ಲವನ್ನೂ ತಾಳ್ಮೆಯಿಂದಲೇ ಎದುರಿಸುತ್ತೇನೆ. ನಮ್ಮ ನಡುವೆ ಏನೇ ನಡೆಯುವುದಿದ್ದರೂ ಅದನ್ನು ಅಲ್ಲಾಹನೇ ತೀರ್ಮಾನಿಸುತ್ತಾನೆ ಎಂದು ಹೇಳಿದರು.
ಇದೆಲ್ಲವನ್ನೂ ಮಾಡಲು ಸಾಧ್ಯವಿಲ್ಲದಿದ್ದರೆ, ನೀವು ಹೇಳುತ್ತಿರುವುದು ಸತ್ಯ ಎಂದು ಹೇಳಲು ಒಂದು ಮಲಕನ್ನು ಬರಲು ಹೇಳಿರಿ. ಅಲ್ಲಾಹನಲ್ಲಿ ಹೇಳಿ, ನಿಮಗೊಂದು ಅರಮನೆ ನಿರ್ಮಿಸಲೂ, ಚಿನ್ನಾ ಬೆಳ್ಳಿಗಳಿಂದ ಕೂಡಿದ ರಾಶಿಯನ್ನು ಸೃಷ್ಟಿಮಾಡಲು ಹೇಳಿರಿ. ಈಗ ನೀವು ಮಾರುಕಟ್ಟೆಯಲ್ಲಿ ನಡೆಯುತ್ತಿರುತ್ತೀರಿ, ನಮ್ಮ ಹಾಗೆ ಸಾಮಾನ್ಯ ಜೀವನ ನಡೆಸುತ್ತಿದ್ದೀರಿ, ಇದೆಲ್ಲವನ್ನೂ ನಿಲ್ಲಿಸಿ ನೇರವಾಗಿ ಅಲ್ಲಾಹನಿಂದಲೇ ನೀಡಲು ಹೇಳಿರಿ. ನಿಮಗಿರುವ ಶ್ರೇಷ್ಠತೆ, ವಿಶೇಷತೆಗಳನ್ನು ನಮಗೂ ಸ್ವಲ್ಪ ತೋರಿಸಿ ಎಂದು, ಅವರು ಕೂಡ ಹೇಳಿದರು.
ಅದಕ್ಕೆ ಪ್ರವಾದಿಯವರು ﷺ ನೀವು ಹೇಳಿದ ಈ ಕಾರ್ಯಗಳನ್ನು ಮಾಡಲು ಇಷ್ಟಪಡುವ ವ್ಯಕ್ತಿಯಾಗಲಿ. ಅದಕ್ಕಾಗಿ ಬಂದ ವ್ಯಕ್ತಿಯೂ ಕಾಣುತ್ತಿಲ್ಲ, ನನ್ನ ಜವಾಬ್ದಾರಿಯನ್ನು ನಾನು ನಿಮ್ಮೊಂದಿಗೆ ತಿಳಿಸಿದ್ದೇನೆ, ಅದನ್ನು ಸ್ವೀಕರಿಸಿದರೆ ಎರಡು ಲೋಕದಲ್ಲೂ ಸೌಭಾಗ್ಯ ಲಭಿಸುತ್ತದೆ. ಅದು ಆಗದಿದ್ದರೆ ಅಲ್ಲಾಹನು ವಿಧಿಸಿದ ಹಾಗೆ ಎಲ್ಲವೂ ನಡೆಯುತ್ತದೆ, ನಮಗೆ ಅದನ್ನು ತಾಳ್ಮೆಯಿಂದ ಕಾಣಲು ಮಾತ್ರವೇ ಸಾಧ್ಯ ಎಂದು ಪುನಃ ಹೇಳಿದರು.
ಇದನ್ನು ಕೇಳಿದಾಗ ಅವರು, ನಿಮ್ಮ ಅಲ್ಲಾಹನಿಗೆ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎಂದು ಹೇಳಿದರಲ್ವಾ.? ಸರಿ ಹಾಗಿದ್ರೆ ನಮ್ಮ ಮೇಲೆ ಆಕಾಶದ ಒಂದು ಭಾಗವನ್ನೇ ಬೀಳಿಸಲು ಹೇಳಿರಿ. ಆಗ ನಾವು ಕೂಡ, ನೀವು ಹೇಳುವುದು ಸತ್ಯ ಎಂದು ಅಂಗೀಕರಿಸುತ್ತೇವೆ. ಇಲ್ಲದಿದ್ದರೆ ಇಲ್ಲ ಎಂದು ಕೂಡ ಹೇಳಿದರು.
ಅದನ್ನು ಕೇಳಿದ ಪ್ರವಾದಿಯವರು ﷺ, ಅದೆಲ್ಲವೂ ಅಲ್ಲಾಹನ ತೀರ್ಮಾನ. ಅವನು ನಿಮ್ಮನ್ನು ಏನು ಮಾಡಬೇಕೆಂದು ತೀರ್ಮಾನಿಸುತ್ತಾನೋ.? ಅದನ್ನು ಖಂಡಿತ ಮಾಡುತ್ತಾನೆ ಎಂದು ಹೇಳಿದರು.
ಅವರು ಪುನಃ ಮಾತು ಮುಂದುವರಿಸುತ್ತಾ, ಓ ಮುಹಮ್ಮದ್'ರೇ ﷺ ನಾವು ಇಲ್ಲಿ ಜೊತೆ ಸೇರಿದ್ದು, ನೀವು ಇಲ್ಲಿಗೆ ಬಂದದ್ದು, ಇವೆಲ್ಲವೂ ನಿಮ್ಮ ಅಲ್ಲಾಹನಿಗೆ ತಿಳಿದಿದೆ ಅಲ್ವಾ.? ನಿಮಗೆ ಇದೆಲ್ಲವೂ ತಿಳಿಸುತ್ತಿರುವುದು, ಯಮಾಯಗಾರನಾದ ಯಾವುದೋ "ರಹ್ಮಾನ್" ಆಗಿರಬೇಕೆಂದು ನಮಗೆ ಅನಿಸುತ್ತದೆ. ನಾವು ಅದನ್ನು ಅಂಗೀಕರಿಸಲು ತಯಾರಿಲ್ಲ, ಕ್ಷಮಿಸಿ ಮುಹಮ್ಮದ್'ರೇ ﷺ ಅದು ನಮ್ಮಿಂದ ಸಾಧ್ಯವಿಲ್ಲ. ದೇವನಾಣೆಗೂ ನಾವು ಇದನ್ನು ಖಂಡಿತವಾಗಿಯೂ ಅಂಗೀಕರಿಸುವುದಿಲ್ಲ. ಇದರಿಂದ ಒಂದೋ ನಾವು ನಾಶವಾಗಿ ಹೋಗ್ತೇವೆ, ಇಲ್ಲದಿದ್ದರೆ ನೀವು ಕೂಡ ಎಂದು ಹೇಳಿದಾಗ. ಅವರಲ್ಲೇ ಕೆಲವರು ಮುಂದೆ ಬಂದು, ನಾವು ಅಲ್ಲಾಹುವಿನ ಹೆಣ್ಣುಮಕ್ಕಳಾದ ಮಲಕ್'ಗಳನ್ನು ಆರಾಧನೆ ಮಾಡುವವರಾಗಿದ್ದೇವೆ. ಹಾಗಾಗಿ ಅಲ್ಲಾಹನನ್ನೂ, ಅವನ ಹೆಣ್ಣು ಮಲಕ್'ಗಳನ್ನೂ ಒಮ್ಮೆ ಕರೆದುಕೊಂಡು ಬಂದರೆ ಖಂಡಿತ ನಾವು ಅಂಗೀಕರಿಸುತ್ತೇವೆ ಎಂದು ಹೇಳಿದರು.
ಅದನ್ನು ಕೇಳಿದ ಪ್ರವಾದಿಯವರು ﷺ ಅಲ್ಲಿಂದ ಎದ್ದು ನಿಂತರು. ಅಬೂ ಉಮಯ್ಯರ ಮಗನಾದ ಅಬ್ದುಲ್ಲಾಹ್ ಕೂಡ ಅವರ ಜೊತೆಯಲ್ಲಿ ಎದ್ದು ನಿಂತು ಹೋದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment