Abu Hisham Saquafi

Official Website Of Hafiz Ilyas Saquafi Padaladka

Saturday, August 27, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -73 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಪ್ರವಾದಿಯವರ ﷺ ಅತ್ತೆಯ ಮಗನೂ ಕೂಡ ಆಗಿದ್ದರು ಅವರು. ಅವರು ಪ್ರವಾದಿಯವರ ﷺ ಬಳಿ ಬಂದು, ಓ ಮುಹಮ್ಮದ್'ರೆ ﷺ ನಮ್ಮ ಜನರು ನಿಮ್ಮ ಮುಂದೆ ಬಹಳಷ್ಟು ಬೇಡಿಕೆಗಳನ್ನು ಮುಂದಿಟ್ಟರು. ನೀವು ಯಾವುದನ್ನು ಪರಿಗಣಿಸಲಿಲ್ಲ. ನಂತರ ಅವರ ಬೇಡಿಕೆಗಳನ್ನು ನಿಮ್ಮಲ್ಲಿ ತಿಳಿಸಿದರು, ಅದನ್ನೂ ನೀವು ನೇರೆವೇರಿಸಲಿಲ್ಲ. ಆಗ ನೀವು ಕೆಲವೊಂದು ಪವಾಡ ತೋರಿಸಿ ನಿಮ್ಮ ಶಕ್ತಿಯನ್ನು ತೋರಿಸಲು ಹೇಳಿದಾಗಲೂ ನೀವು ನಿರಾಕರಿಸಿದಿರಿ. ಅದು ಯಾವುದಕ್ಕೂ ಒಪ್ಪದ್ದೆ ಇದ್ದಾಗ ಕೊನೆಗೆ ನೀವೇ ಹೇಳಿದ ಹಾಗೆ ಶಿಕ್ಷೆಯನ್ನು ಅವತರಿಸಿ, ತೋರಿಸಿ ಕೊಡಿ ಎಂದು ಹೇಳಿದಾಗಲೂ, ನೀವು ಒಪ್ಪಲಿಲ್ಲ. ಸರಿ ಈಗ ನಾನೊಂದು ಒಂದು ವಿಷಯ ಹೇಳುತ್ತೇನೆ, ಕೊನೆಯ ಪಕ್ಷ ಅದನ್ನಾದರು ಮಾಡಿ ತೋರಿಸಿ. ಆಕಾಶಕ್ಕೆ ಒಂದು ಮೆಟ್ಟಿಲು ನಿರ್ಮಿಸಿ, ಅದರ ಮೂಲಕ ಆಕಾಶಕ್ಕೆ ತೆರಳಿ, ಅಲ್ಲಿಂದ ನಾಲ್ಕು ಮಲಕ್'ಗಳ ಜೊತೆಯಲ್ಲಿ ಒಂದು ಗ್ರಂಥದೊಂದಿಗೆ ತಿರುಗಿ ಬನ್ನಿ, ನಾನು ಖಂಡಿತ ನಿಮ್ಮನ್ನು ಅಂಗೀಕರಿಸುತ್ತೇನೆ, ಆದರೆ ಇದೆಲ್ಲವೂ ನನಗೆ ಕಾಣುವ ಹಾಗೆ ಹಾಗಿರಬೇಕು, ಇಲ್ಲದಿದ್ದರೆ ನಿಮ್ಮನ್ನು ನಾನು ಅಂಗೀಕರಿಸುವುದಿಲ್ಲ. ಎಂದು ಹೇಳಿ ಅಲ್ಲಿಂದ ಹೊರಟು ಹೋದರು. 

    ಪ್ರವಾದಿಯವರು ﷺ ಬಹಳಷ್ಟು ಚಿಂತಿತರಾದರು. ಇವರನ್ನು ಹೇಗೆ ಸತ್ಯ ವಿಶ್ವಾಸದ ಆದರ್ಶಕ್ಕೆ ಕರೆತರುವುದು ಎಂದು ಆಲೋಚಿಸುತ್ತಾ ಮನೆ ಕಡೆ ಹೊರಟರು. 
     ಅಬೂಜಹಲ್ ಪುನಃ ಅವನ ಕುತಂತ್ರ ಬುದ್ದಿಯನ್ನು ತೋರಿಸತೊಡಗಿದನು. ಖುರೈಷಿಗಳ ಬಳಿ ಬಂದು, ಮುಹಮ್ಮದ್ ﷺ ನಮ್ಮ ಪೂರ್ವಿಕರ ಧರ್ಮವನ್ನು ವಿರೋಧಿಸಿ ಮುಂದೆ ಹೋಗುತ್ತಿದ್ದಾರೆ. ನಾವೆಷ್ಟೇ ಬೇಡಿಕೆಯನ್ನು ಮುಂದಿಟ್ಟರೂ, ಯಾವುದೇ ಪ್ರಯೋಜನವಾಗಲಿಲ್ಲ. ಅದಕ್ಕೆ ನಾನೊಂದು ಉಪಾಯ ಮಾಡಿದ್ದೇನೆ, ನಾಳೆ ನಮಾಝ್ ಮಾಡಲು ಮುಹಮ್ಮದ್ ﷺ ಕಅಬಾಲಯದ ಬಳಿ ಬರುತ್ತಾರೆ. ಆಗ ನನಗೆ ಎತ್ತಲು ಸಾಧ್ಯವಾಗುವ ದೊಡ್ಡ ಗಾತ್ರದ ಬಂಡೆಕಲ್ಲು ತೆಗೆದು, ಅವರು ಸುಜೂದ್ (ಸಾಷ್ಟಾಂಗ) ಹೋದ ಸಂದರ್ಭದಲ್ಲಿ ಅವರ ತಲೆಯ ಮೇಲೆ ಹಾಕುತ್ತೇನೆ, ಆಮೇಲೆ ಅಬ್ದುಮನಾಫಿನ ಮಕ್ಕಳು ನನ್ನನ್ನು ಏನು ಮಾಡಿದರೂ ನನಗೆ ಯಾವುದೇ ಚಿಂತೆಯಿಲ್ಲ ಎಂದು ಹೇಳಿದಾಗ, ಅಲ್ಲಿದ್ದ ಜನರು ನಿಮಗೆ ಇಷ್ಟ ಬಂದಾಗೆ ಮಾಡಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. 

    ಮರುದಿನ ಸೂರ್ಯೋದಯದ ನಂತರ, ಅಬೂಜಹಲ್ ಹೇಳಿದ ಹಾಗೆ ಒಂದು ದೊಡ್ಡ ಬಂಡೆಕಲ್ಲನ್ನು ತಯಾರು ಮಾಡಿ ಇಟ್ಟಿದ್ದನು. ಅಷ್ಟೊತ್ತಿಗೆ ಪ್ರವಾದಿಯವರು ﷺ ಕಅಬಾಲಯದ ಬಳಿ ಬಂದು, ಶಾಮ್ ನಗರದ ಕಡೆಗೆ ತಿರುಗಿ, ರುಕುನುಲ್ ಯಮಾನಿನ ಹಾಗೂ ಹಜರುಲ್ ಅಸ್'ವದಿನ ನಡುವೆ, ಕಅಬಾಲಯಕ್ಕೆ ಮುಖ ಮಾಡಿ ನಿಂತರು. ಅಥವಾ ಕಅಬಾಲಯದ ಉತ್ತರ ದಿಕ್ಕಿಗೆ ಮುಖ ಮಾಡಿ, ದಕ್ಷಿಣ ಭಾಗದಲ್ಲಿ ನಿಂತು ನಮಾಝ್ ಮಾಡಲು ಆರಂಭಿಸಿದರು. ಖುರೈಷಿಗಳ ಗಣ್ಯರೆಲ್ಲರೂ ಅವರ ಕಟ್ಟೆಯಲ್ಲಿ ಜೊತೆ ಸೇರಿದ್ದರು. ಅವರೆಲ್ಲರೂ ಬಹಳ ಗಮವಿಟ್ಟು ಅಲ್ಲಿ ನಡೆಯುತ್ತಿರುವ ದೃಶ್ಯವನ್ನು ನೋಡುತ್ತಿದ್ದರು. ಪ್ರವಾದಿಯವರು ﷺ ಸುಜೂದ್'ಗೆ ಹೋದಾಗ, ಅಬೂಜಹಲ್ ಬಂಡೆಕಲ್ಲನ್ನು ಹೊತ್ತು ಪ್ರವಾದಿಯವರು ﷺ ಹತ್ತಿರ ಹೋದರು. ಹತ್ತಿರ ತಲುಪಿದ್ದೇ ತಡ ಅವನ ಮನಸ್ಸಿನಲ್ಲಿ ಅದೇನೋ ಒಂದು ಭಯ ಆವರಿಸಿತು. ಯಾರೋ ಹಿಂದಿನಿಂದ ಬಂಡೆಯನ್ನು ಹಿಡಿದು ಎಳೆದ ಹಾಗೆ ಅನಿಸಿ, ಅವನ ಮುಖದ ಭಾವನೆಯೇ ಬದಲಾಯಿತು. ತಕ್ಷಣವೇ ಅವನು ಆ ಬಂಡೆಯನ್ನು ದೂರಕ್ಕೆ ಎಸೆದನು.

   ದೃಶ್ಯವನ್ನು ನೋಡುತ್ತಾ ನಿಂತಿದ್ದ ಖುರೈಷಿಗಳಲ್ಲಿ ಕೆಲವರು, ತಕ್ಷಣವೇ ಓಡಿ ಬಂದು ಓ ಅಬುಲ್ ಹಕಮ್ ಏನಾಯಿತು ಎಂದು ಕೇಳಿದರು. ಅದಕ್ಕೆ ಅಬೂಜಹಲ್, ನಾನು ನಿನ್ನೆ ಹೇಳಿದ ಹಾಗೆ ಬಂಡೆ ತೆಗೆದುಕೊಂಡು ಮುಹಮ್ಮದ್'ರ ﷺ ಬಳಿ ತೆರಳಿದ್ದಾಗ, ಅದೋ ಅಲ್ಲಿತ್ತು ಒಂದು ಬಹಳ ದೊಡ್ಡ ಆಕಾರದ ಒಂದು ಗಂಡು ಒಂಟೆ, ನಾನು ಅಂತಹ ಭೀಕರವಾದ ಒಂದು ಒಂಟೆಯನ್ನು ಇವತ್ತಿನವರೆಗೆ ನೋಡಿಯೇ ಇರಲಿಲ್ಲ. ಅದು ನನ್ನನ್ನೇ ತಿನ್ನುವ ಹಾಗೆ ನಿಂತಿತ್ತು, ಎಂದು ಹೇಳಿದನು. 
     (ನಂತರ ಪ್ರವಾದಿಯವರು ﷺ ಅದು ಜಿಬ್'ರೀಲ್ (ಅ) ಆಗಿದ್ದರು. ಬಹುಶಃ ಅಬೂಜಹಲ್ ಇನ್ನೂ ಹತ್ತಿರ ಬಂದಿರುತಿದ್ದರೆ, ಖಂಡಿತ ಜಿಬ್'ರೀಲ್ ಅವನನ್ನು ಹಿಡಿಯುತಿದ್ದರು ಎಂದು ಹೇಳಿದರು) 

    ಅಧಿಕ ತಡಮಾಡದೆ ಖುರೈಷಿಗಳು ಹೇಳಿದ್ದ ಒಂದೊಂದು ಸಮಸ್ಯೆಗಳ ಕುರಿತೂ ಕುರ್'ಆನ್ ತಿಳಿಸ ತೊಡಗಿತು. ಮರಣ ಹೊಂದಿದ ವ್ಯಕ್ತಿಗಳು ತಿರುಗಿ ಬಂದು ಹೇಳಲಿ ಎಂದಾಗಿತ್ತು ಅವರು ಹೇಳಿದ್ದು. ಅದಕ್ಕೆ ಕುರ್'ಆನ್ ನೀಡಿದ ಉತ್ತರವು ಈ ರೀತಿಯಾಗಿತ್ತು. " ಪರ್ವತಗಳನ್ನು ಚಲಿಸುವ ಹಾಗೆ ಮಾಡುವುದು, ಭೂಮಿಯನ್ನು ಸೀಳು ಮಾಡುವುದು, ಮರಣ ಹೊಂದಿದ ವ್ಯಕ್ತಿಗಳನ್ನು ಪುನರ್ಜೀವ ಕೊಟ್ಟು ಮಾತಾಡುವ ಹಾಗೆ ಮಾಡುವುದು. ಈ ರೀತಿಯಾಗಿ ಕುರ್'ಅನ್ ಅವತರಿಸಿದರೆ ಏನಾಗಬಹುದು.? (ಇದ್ಯಾವುದೂ ಕಷ್ಟವಿರುವ ಕಾರ್ಯವೇ ಅಲ್ಲ) ಆದರೆ, ಸರ್ವವಸ್ತುಗಳ ಅಧಿಕಾರವೂ ಕೂಡ ಅಲ್ಲಾಹನಿಗೆ ಮಾತ್ರವಾಗಿದೆ. (ಸತ್ಯ ನಿಷೇಧಿಗಳಿಗೆ ಉತ್ತರವಾಗಿ ಏನಾದರೂ ವಿಸ್ಮಯಕಾರಿ ಘಟನೆಗಳು ನಡೆಯಬಹುದೆಂದು ಕಾದು ಕುಳಿತಿದ್ದ) ಸತ್ಯ ವಿಶ್ವಾಸಿಗಳು, ಅಲ್ಲಾಹನು ಉದ್ದೇಶಿಸಿದರೆ ಎಲ್ಲರನ್ನೂ ಸತ್ಯ ವಿಶ್ವಾಸಿಗಳಾಗಿ ಮಾಡಬಹುದಿತ್ತಲ್ಲವೇ, ಎಂದು ಚಿಂತಿಸಿ ಆ ಚಿಂತೆಯಿಂದ ಹಿಂದೆ ಸರಿದಿಲ್ಲವೇ.? ಅಲ್ಲಾಹನಲ್ಲಿ ದ್ರೋಹ ಎಸಗಿದವರಿಗೆ, ಕರ್ಮ ಪ್ರತಿಫಲವಾಗಿ ವಿಪತ್ತುಗಳು ಖಂಡಿತ ಬರುತ್ತಲೇ ಇರುತ್ತದೆ. ಅಥವಾ ಅವರ ಮನೆಯ ಬಳಿ ವಿಪತ್ತುಗಳು ಬರುತ್ತಲೇ ಇರುತ್ತದೆ. ಅಲ್ಲಾಹನ ವಾಗ್ದಾನವು ಖಂಡಿತವಾಗಿ ನಡೆಯುತ್ತಲೇ ಇರುತ್ತದೆ. ಅವನು ಯಾವತ್ತೂ ವಾಗ್ದಾನ ಮುರಿದವನೇ ಅಲ್ಲ" ಅಲ್ ರಅದ್ ಅಧ್ಯಾಯದ ಮೂವತ್ತೊಂದನೆ ಸೂಕ್ತದ ಅನುವಾದವಾಗಿದೆ ಇದು. 

    (ಮುಂದುವರಿಯುವುದು...) 
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: