Abu Hisham Saquafi

Official Website Of Hafiz Ilyas Saquafi Padaladka

Sunday, August 28, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -74 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ನಂತರ ಅವರು ಪ್ರವಾದಿಯವರ ﷺ ಜೀವನದ ಕುರಿತಾಗಿತ್ತು ತಮಾಷೆ ಮಾಡಿದ್ದು. ಅಲ್ಲಿಯೂ ಕೂಡ ಕುರ್'ಆನ್ ಉತ್ತರಿಸಿತು. ಅಲ್'ಫುರ್'ಖಾನ್ ಅಧ್ಯಾಯದ ಏಳರಿಂದ ಹತ್ತರವರೆಗಿನ ಸೂಕ್ತಗಳಲ್ಲಿ ಅದರ ಕುರಿತು ವಿವರಿಸಿದ್ದು ಕಾಣಬಹುದು. "ಅವರು ಕೇಳುತ್ತಾರೆ ಇದೆಂತಹ ದೂತರು.? ಆಹಾರ ಸೇವನೆ ಮಾಡುತ್ತಾರೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾರೆ, ಇವರೊಂದಿಗೆ ಮುನ್ನೆಚ್ಚರಿಕೆ ನೀಡಲು (ಸತ್ಯ ನಿಷೇಧಿಗಳಿಗೆ) ಒಬ್ಬ ಮಲಕ್ ಕೂಡ ಇಲ್ಲವಲ್ಲ.? ಒಂದು ಖಜಾನೆಯೋ ಅಥವಾ ಯಾವುದೇ ಕಷ್ಟವಿಲ್ಲದೆ ಆಹಾರ ಸೇವಿಸಲು ಒಂದು ತೋಟವನ್ನೋ (ಈ ಪ್ರವಾದಿಯವರು ﷺ) ಯಾಕೆ ನಿರ್ಮಿಸಲಿಲ್ಲ.? ಬುದ್ದಿ ಮಂಕು ಬಡಿದ ವ್ಯಕ್ತಿಯನ್ನಲ್ಲವೇ ನೀವು ಅನುಸರಿಸುವುದು ಎಂದು ದ್ರೋಹಿಗಳು ಕೇಳುತ್ತಿದ್ದರು. (ಓ ಪ್ರವಾದಿಯವರೇ ﷺ) ಅವರು ನಿಮ್ಮ ಬಗ್ಗೆ ಏನೆಲ್ಲ ಆರೋಪಗಳನ್ನು ಮಾಡಿದ್ದರು. ಆದರೆ ಅದು ಯಾವುದನ್ನು ಸಾಬಿತುಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಅವರು ಅಷ್ಟೊಂದು ದಾರಿ ತಪ್ಪಿದವರಾಗಿದ್ದಾರೆ. ಅವನಿಚ್ಚಿಸಿದರೆ, ಅವರು ಹೇಳಿದ್ದಕ್ಕಿಂತಲೂ ಉತ್ತಮವಾದ ಅರಮನೆಗಳನ್ನೂ, ಕಣಿವೆಗಳಲ್ಲಿ ಹರಿಯುವ ತೊರೆಗಳ ಉದ್ಯಾನಗಳನ್ನೇ ನೀಡಲು ಸಮರ್ಥನಾಗಿರುವವನು (ಅಲ್ಲಾಹನು) ಎಷ್ಟೊಂದು ಪರಿಶುದ್ಧನು". ಎಂದು. 

     ಇದಕ್ಕೆ ಹೋಲಿಕೆಯಾಗುವ ಅಲ್ ಫುರ್'ಖಾನ್ ಅಧ್ಯಾಯದ ಇಪ್ಪತ್ತನೇ ಸೂಕ್ತವನ್ನೂ ಸೇರಿಸಿ ಹೇಳಿದರು. "ಪ್ರೀತಿಯ ದೂತರೇ, ನಿಮಗಿಂತ ಮುಂಚೆ ನಿಯೋಗಿಸಲ್ಪಟ್ಟಿದ್ದ ಎಲ್ಲಾ ದೂತರೂ ಕೂಡ ಆಹಾರ ಸೇವನೆ ಮಾಡುವವರೂ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರೇ ಆಗಿದ್ದರು" ಎಂದು.
    ಖುರೈಷಿಗಳು ಹೇಳಿದ್ದ ಪ್ರತಿಯೊಂದು ವಿಷಯದ ಕುರಿತು ಖುರ್'ಆನ್ ಸ್ಪಷ್ಟವಾಗಿ ಹೇಳಿತ್ತು. ಪ್ರವಾದಿಯವರ ﷺ ಪ್ರತಿಕ್ರಿಯೆಯನ್ನು ಕುರ್'ಆನ್ ಸ್ಪಷ್ಟವಾಗಿ ನೀಡಿತ್ತು. ಪ್ರವಾದಿಯವರನ್ನು ﷺ ಚರ್ಚೆ ಕರೆದಿದ್ದ ಖುರೈಷಿಗಳು, ಪ್ರವಾದಿಯವರು ﷺ ಚರ್ಚೆಯ ನಂತರ ಬೇಸರದಿಂದ ಕುಳಿತರಬಹುದೆಂದು ಅಂದುಕೊಂಡಿದ್ದರು. ಆದರೆ ಅವರು ಕಂಡದ್ದು ಸ್ಪಷ್ಟವಾದ ಉತ್ತರವನ್ನು ಹೇಳುತ್ತಿದ್ದ ಪ್ರವಾದಿಯವರನ್ನಾಗಿತ್ತು. ﷺ

    ಅಲ್ ಇಸ್'ರಾಅ್ ಅಧ್ಯಾಯದ ತೊಂಬತ್ತರ ನಂತರದ ಸೂಕ್ತದಲ್ಲಿ, "ಭೂಮಿಯನ್ನು ಸೀಳಿ ನಮಗಾಗಿ ಒಂದು ಹೊಳೆಯನ್ನು ನಿರ್ಮಿಸುವವರೆಗೂ ನಾವು ಅಂಗೀಕರಿಸುದಿಲ್ಲ, ಅಥವಾ ನಿಮಗಾಗಿ ಖರ್ಜೂರ, ದ್ರಾಕ್ಷಿ ತುಂಬಿದ ಒಂದು ತೋಟವನ್ನು ನಿರ್ಮಿಸಿ. ಅದರ ನಡುವಿನಿಂದ ನದಿಗಳು ಹರಿಯುತ್ತಿರಬೇಕು. ಅದೂ ಆಗದಿದ್ದರೆ ಆಕಾಶವನ್ನು ತುಂಡರಿಸಿ ನಮ್ಮ ಮೇಲೆ ಬೀಳುವ ಹಾಗೆ ಮಾಡಬೇಕು ಅಥವಾ ದೇವನನ್ನೋ, ಮಲಕ್'ಗಳನ್ನೋ ನಮ್ಮ ಮುಂದೆ ಪ್ರಸ್ತುತ ಪಡಿಸಬೇಕು. ಅದೂ ಆಗದಿದ್ದರೆ ನಿಮಗಾಗಿ ಒಂದು ಚಿನ್ನದ ಅರಮನೆ ಮಾಡಬೇಕು ಅಥವಾ ಆಕಾಶಕ್ಕೆ ನಡೆದು ಹೋಗಬೇಕು..." ಎಂದು ಅವರು ಹೇಳಿದ್ದನ್ನು, ವಿವರಿಸಿದ್ದು ಕಾಣಬಹುದು. 

    ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ಪ್ರವಾದಿಯವರ ﷺ ಮೇಲೆ ಕಲ್ಲು ಹಾಕಿ ಕೊಲ್ಲಲು ಪ್ರಯತ್ನಿಸಿದ ಅಬೂಜಹಲಿಗೂ ಕೂಡ ಕುರ್'ಆನ್ ಉತ್ತರಿಸಿತು. ಅಲ್ ಅಲಖ್ ಅಧ್ಯಾಯದ ಒಂಬತ್ತನೇ ಸೂಕ್ತವು ಅವತರಿಸಿದ್ದು ಈ ವಿಷಯದಲ್ಲಾಗಿತ್ತು. 
     ಇಮಾಮ್ ಅಹ್'ಮದ್'ರವರು ◌ؓ ಮುಸ್'ನದ್ ಎನ್ನುವ ಗ್ರಂಥದಲ್ಲಿ ಉಲ್ಲೇಖಿಸಿದ ವಾಕ್ಯಗಳಲ್ಲಿ ನಮಗೆ ಕಾಣಬಹುದು. ಇಬ್'ನು ಅಬ್ಬಾಸ್'ರವರು ◌ؓ ಹೇಳುತ್ತಾರೆ. ಸ್ವಫಾ ಪರ್ವತವನ್ನು ಚಿನ್ನವಾಗಿ ಪರಿವರ್ತನೆ ಮಾಡಲೂ, ಮಕ್ಕಾದಲ್ಲಿರುವ ಇತರ ಪರ್ವತಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು, ಪ್ರವಾದಿಯವರಲ್ಲಿ ﷺ ಮಕ್ಕಾ ನಿವಾಸಿಗಳು ಆಗ್ರಹಿಸಿದ್ದರು. ತಕ್ಷಣವೇ ಜಿಬ್'ರೀಲ್ (ಅ) ಪ್ರವಾದಿಯವರ ﷺ ಬಳಿ ಬಂದು, ಅಲ್ಲಾಹನು ನಿಮಗೆ ಸಲಾಂ ಹೇಳಿರುವನು. ನೀವು ಇಚ್ಛಿಸುದಾದರೆ ಸ್ವಫ ಪರ್ವತವನ್ನು ಚಿನ್ನ ಮಾಡಿ ಕೊಡುತ್ತೇನೆ. ಆದರೆ ಅದರ ನಂತರವೂ ಸತ್ಯವನ್ನು ಅಂಗೀಕರಿಸದೆ ನಿಷೇಧ ಮಾಡಿದರೆ, ಈ ಹಿಂದೆ ಯಾವುದೇ ಜನತೆಗೂ ನೀಡಿರದ ಹಾಗೆ ಅತೀ ಕ್ರೂರವಾದ ಶಿಕ್ಷೆಯನ್ನೇ ನೀಡಬೇಕಾಗುತ್ತದೆ. ಅಥವಾ ನೀವು ಬಯಸುದಾದರೆ ಅವರಿಗೆ ಪಾಪ ಮೋಚನೆಯ, ಕರುಣೆಯ ದಾರಿಯನ್ನು ತೋರಿಸಿ ಕೊಡುವೆನು. ಎಂದು ಜಿಬ್'ರೀಲ್ ಹೇಳಿದಾಗ, ಅಲ್ಲಾಹನೇ ಕರುಣೆಯ ದಾರಿಯನ್ನು ಮಾತ್ರ ತೆರೆದು ಕೊಟ್ಟರೆ ಸಾಕು ಎಂದು ಪ್ರವಾದಿಯವರು ﷺ ಹೇಳಿದರು. 

    ಪ್ರವಾದಿಯವರು ﷺ ಯಾವಾಗಲೂ ಜನರ ಮೇಲೆ ಕರುಣೆಯ ದೃಷ್ಟಿಯಿಂದ ಮಾತ್ರವಾಗಿತ್ತು ತೀರ್ಮಾನಗಳನ್ನು ತೆಗೆಯುತ್ತಿದ್ದದ್ದು. ಜನರು ಆಗ್ರಹಿಸುವ ವಿಸ್ಮಯಗಳನ್ನು ತೋರಿಸಳಲ್ಲ ಪ್ರವಾದಿಯವರನ್ನು ﷺ.ನಿಯೋಗಿಸಿದ್ದು. ಅವರನ್ನು ಸರಿಯಾದ ಆದರ್ಶಕ್ಕೆ ಆಹ್ವಾನಿಸಿ, ಅವರಿಗೆ ಮಾದರಿಯೋಗ್ಯ ಜೀವನನ್ನು ನೀಡಿ, ಎಲ್ಲರನ್ನು ಸ್ವರ್ಗಕ್ಕೆ ಆಹ್ವಾನಿಸಿ ಉದ್ದೇಶದಿಂದಾಗಿತ್ತು ಅವರನ್ನು ಪ್ರವಾದಿಯಾಗಿ ನಿಯೋಗಿಸಿದ್ದು. ಅದನ್ನು ಪ್ರವಾದಿಯವರು ﷺ ಸ್ಪಷ್ಟವಾಗಿ ನಿರ್ವಹಿಸಿದ್ದರು. ಪ್ರವಾದಿತ್ವಕ್ಕೆ ಸಾಕ್ಷಿಯಾಗಿ ಅಗತ್ಯವಾದ ವಿಸ್ಮಯಗಳನ್ನು ಪ್ರದರ್ಶಿಸಿದ್ದರು. ಎಂದೆಂದೂ ಶಾಶ್ವತವಾಗಿ ನೆಲೆನಿಲ್ಲುವ ಸಾಕ್ಷಿಯಾಗಿ ಖುರ್'ಆನನ್ನು ಅವತರಿಸಿದರು. 

    ದಿವಸಗಳ ಕಳೆಯುತ್ತಿದ್ದಂತೆ, ಪ್ರವಾದಿಯವರನ್ನು ﷺ ಯಾವುದೇ ರೀತಿಯಲ್ಲೂ ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅರ್ಥವಾಗಿತ್ತು. ಆದರೂ ಅವರು ಹೊಸ ದಾರಿಗಳನ್ನು ಹುಡುಕತ್ತಲೇ ಇದ್ದರು. 

      (ಮುಂದುವರಿಯುವುದು...)


اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: