ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಖುರೈಷಿಗಳಲ್ಲೇ ಪೈಶಾಚಿಕ ಕೃತ್ಯಗಳಲ್ಲಿ ತನ್ನನ್ನು ತಾನೇ ತೊಡಗಿಸಿದ್ದ ವ್ಯಕ್ತಿಯಾಗಿದ್ದರು ನಳ್'ರ್ ಬಿನ್ ಅಲ್'ಹಾರಿಸ್ ಎನ್ನುವ ವ್ಯಕ್ತಿ. ಅವರು ಪ್ರವಾದಿಯವರಿಗೆ ﷺ ಬಹಳಷ್ಟು ಕಿರುಕುಳ ಕೊಟ್ಟಿದ್ದರು.
ಒಮ್ಮೆ ಅವರು ಖುರೈಷಿಗಳನ್ನು ಕರೆಸಿ, ಓ ಖುರೈಷಿಗಳೇ ನಿಮಗೆ ಬಂದಿರುವ ಸಂಕಟ ಬಹಳ ದೊಡ್ಡ ಸಮಸ್ಯೆಯಾಗಿದೆ. ಬಹುಶಃ ಅದರಿಂದ ರಕ್ಷೆ ಹೊಂದಬಹುದು ಎಂದು ನನಗೆ ಅನಿಸುವುದಿಲ್ಲ. ಮುಹಮ್ಮದ್ ﷺ ಚಿಕ್ಕ ವಯಸ್ಸಿನಿಂದಲೇ, ನಿಮ್ಮ ಕಣ್ಣ ಮುಂದೆಯೇ ಬೆಳೆದ ಒಬ್ಬ ಒಳ್ಳೆಯ ವ್ಯಕ್ತಿ, ಎಲ್ಲರಿಗೂ ಅಚ್ಚುಮೆಚ್ಚಿನ, ಸತ್ಯವಂತನಾಗಿದ್ದ, ನೀತಿವಂತನಾಗಿದ್ದ ವ್ಯಕ್ತಿಯಾಗಿದ್ದರು ಅವರು. ಬೆಳೆದು ದೊಡ್ಡವನಾದಾಗ ಒಂದು ಹೊಸ ಆದರ್ಶದೊಂದಿಗೆ ಅವರು ನಮ್ಮ ಮುಂದೆ ಬಂದಿದ್ದರು. ಅದನ್ನು ನೀವು ವಾಮಾಚಾರ ಅಂತ ಹೇಳಿದ್ರಿ, ಆದರೆ ಅದರಲ್ಲಿ ಯಾವುದೇ ವಾಮಾಚಾರದ ಸುಳಿವೇ ಕಾಣುತ್ತಿಲ್ಲ. ವಮಾಚಾರದಲ್ಲಿ ಬಳಸುವ ಎಲ್ಲಾ ಕಟ್ಟುಗಳ ಕುರಿತು ನಮಗೆಯೇ ತಿಳಿದಿದೆ ಅಲ್ಲವೇ.? ಆಮೇಲೆ ನೀವು ಹೇಳಿದಿರಿ ಅದು ಜೋತಿಷ್ಯ ಅಂತ, ಆದರೆ ಅದು ಕೂಡ ಅಲ್ಲ. ಅವರ ಎಲ್ಲಾ ಶೈಲಿಗಳ ಬಗ್ಗೆಯೂ ನಮಗೆ ತಿಳಿದಿದೆ ಅಲ್ಲವೇ.? ನಂತರ ಅದೊಂದು ಕವಿತೆ ಆಗಿದೆ ಅಂತನೂ ಹೇಳಿದ್ರಿ ಆದರೆ ಅದೂ ಕೂಡ ಅಲ್ಲ. ದೇವನಾಣೆಗೂ ಅದೊಂದು ಕವಿತೆಯೂ ಅಲ್ಲ, ಕಾರಣ ನಾವು ಎಷ್ಟೊಂದು ಕವಿತೆಗಳನ್ನು ಹಾಡಿದ್ದೇವೆ, ಅದರ ಬಗ್ಗೆ ನಮ್ಮಷ್ಟು ಯಾರಿಗೆ ಗೊತ್ತಿರಬಹುದು.? ಆಮೇಲೆ ನೀವು ಹೇಳಿದಿರಿ, ಅವರಿಗೆ ಹುಚ್ಚು ಹಿಡಿದಿದೆ ಎಂದು, ಆದರೆ ಅದೂ ಕೂಡ ಅಲ್ಲ, ನಾವೆಷ್ಟು ಹುಚ್ಚರನ್ನು ನೋಡಿದ್ದೇವೆ. ಅವರು ತೋರಿಸುವ ಹುಚ್ಚುತನ ಯಾವುದೂ ಕೂಡ ಇಲ್ಲಿ ಕಾಣುತ್ತಿಲ್ಲ.
ಹಾಗಾದರೆ ಇಲ್ಲಿ ಬಂದಿರುವ ಆಪತ್ತು ಅತೀ ದೊಡ್ಡ ವಿಪತ್ತೇ ಆಗಿದೆ. ನೀವು ಅದಕ್ಕಾಗಿ ಬಹಳಷ್ಟು ತಯಾರಿಗಳನ್ನು ನಡೆಸಿರಿ. (ನಳ್'ರ್ ನಂತರದ ಕಾಲದಲ್ಲಿ ಬದ್'ರ್ ಯುದ್ಧದಲ್ಲಿ ಅಲಿಯವರ ◌ؓ ಮುಂದೆ ಯುದ್ಧದಲ್ಲಿ ಮರಣಹೊಂದಿದ್ದರು.)
ಪ್ರವಾದಿಯವರು ﷺ ನಮ್ಮ ಪೂರ್ವಿಕರ ಬಗ್ಗೆ ಹೇಳುತ್ತಿದ್ದ ಸಭೆಗಳಲ್ಲಿ ನಾನೂ ಕೂಡ ಹೋಗಿ ಕುಳಿತು ಕೇಳುತಿದ್ದೆನು. ಅವರು ಕೂಡ ರಾಜರುಗಳ ಕಥೆಗಳನ್ನು ಹೇಳುತ್ತಿದ್ದರು. ನಂತರ ಅದರ ವಿವರಣೆಯನ್ನು ನಾನು ವಿವರಿಸುತ್ತಿದ್ದ ಅದೇ ರೀತಿಯಲ್ಲಾಗಿತ್ತು ಅವರೂ ಕೂಡ ವಿವರಿಸುತ್ತಿದ್ದದ್ದು ಎಂದು ಹೇಳಿದರು. ಕಾರಣ ನಳ್'ರ್ ಹಿಯರ ಎನ್ನುವ ಊರಿಗೆ ಹೋಗಿದ್ದಾಗ, ಅಲ್ಲಿ ಪರ್ಷಿಯನ್ ರಾಜರುಗಳ ಕಥೆಗಳನ್ನು ಕೇಳಿದ್ದರು, ಹಾಗಾಗಿ ಅವರಿಗೆ ಅದರ ಬಗ್ಗೆ ಮಾಹಿತಿ ಇತ್ತು. ನಳ್'ರ್'ನ ಈ ಮಾತು ಕೇಳಿ, ಅಲ್ಲಿ ನೆರೆದಿದ್ದ ಜನರೆಲ್ಲರೂ ಗೊಂದಲಕ್ಕೀಡಾದರು. 'ಅಲ್ ಖಲಂ' ಅಧ್ಯಾಯದಲ್ಲಿ ಇದರ ಬಗ್ಗೆ ಕುರ್'ಆನ್ ಉಲ್ಲೇಖಿಸಿದ್ದು ಕಾಣಬಹುದು.
ನಳ್'ರ್'ನ ಮಾತುಗಳನ್ನು ಕೇಳಿದ ಖುರೈಷಿಗಳು, ಉಖ್'ಮತ್ ಬಿನ್ ಅಬೀ ಮುಐತ್ವಿನ ಜೊತೆಯಲ್ಲಿ ನಳ್'ರನ್ನು ಕೂಡ ಮದೀನಕ್ಕೆ ಕಳುಹಿಸಿ ಅಲ್ಲಿರುವ ವೇದ ಜ್ಞಾನಿಗಳನ್ನು ಭೇಟಿಯಾಗಲು ಹೇಳಿದರು. ಅಲ್ಲಿದ್ದ ವೇದ ಜ್ಞಾನಿಗಳನ್ನು ಭೇಟಿಯಾಗಿ, ಮುಹಮ್ಮದ್'ರ ﷺ ಬಗ್ಗೆ ಸಂಪೂರ್ಣ ವಿವರಣೆಯನ್ನು ಪಡೆಯಿರಿ. ಅವರಲ್ಲಿರುವ ದಾಖಲೆಗಳ, ಆಧಾರದ ಮೂಲಕ ಪ್ರವಾದಿಯವರ ﷺ ನಿಜ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುವುದಾಗಿತ್ತು, ಅವರ ಯಾತ್ರೆಯ ಉದ್ದೇಶ. ಇಬ್ಬರೂ ಮದೀನಕ್ಕೆ ತಲುಪಿದ ನಂತರ, ಯಹೂದಿ ಪುರೋಹಿತರನ್ನು ಭೇಟಿಯಾದರು. ಅಲ್ಲಿಯ ತನಕ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿ, ಅವರ ಉತ್ತರಕ್ಕಾಗಿ ಕಾದು ಕುಳಿತಿದ್ದರು. ನಾವು ಕೇಳುವ ಮೂರು ವಿಷಗಳ ಕುರಿತು ನೀವು ಮುಹಮ್ಮದ್'ರಲ್ಲಿ ﷺ ಕೇಳಿರಿ, ಒಂದು ವೇಳೆ ಅವರು ಸರಿಯಾಗಿ ಉತ್ತರ ನೀಡಿದರೆ ಅವರು ನಿಜವಾಗಿಯೂ ಸತ್ಯ ಸಂದೇಶವಾಹಕರೇ ಆಗಿರುವರು, ಅಲ್ಲದಿದ್ದರೆ ಅವರು ಹೇಳುವುದೆಲ್ಲವೂ ಸುಳ್ಳಾಗಿದೆ ಎಂದು ಹೇಳಿ, ಮೂರು ವಿಷಯಗಳನ್ನು ತಿಳಿಸಿದರು. ಒಂದು, ಹಿಂದಿನ ಕಾಲದಲ್ಲಿ ವಿಸ್ಮಯಗಳನ್ನು ತೋರಿಸಿ ಮರಣ ಹೊಂದಿ ಹೋಗಿದ್ದ ಯುವಕರು ಯಾರು.? ಎರಡು, ಜಗತ್ತನ್ನು ಸುತ್ತಿದ್ದ ವ್ಯಕ್ತಿ ಯಾರು.? ಹಾಗೂ ಅವರು ಹೇಳುತ್ತಿದ್ದ ವಿಷಯಗಳು ಏನು.? ಮೂರು, ಆತ್ಮ ಕುರಿತು ನೀವೇನು ಹೇಳುತ್ತೀರಿ.? ಎಂದು ಪ್ರವಾದಿಯವರಲ್ಲಿ ﷺ ಕೇಳಿರಿ ಎಂದು, ಯಹೂದಿ ಪಂಡಿತನು ಹೇಳಿ ಕೊಟ್ಟರು.
ಈ ಮೂರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಿದರೆ, ಅಲ್ಲಿರುವ ವ್ಯಕ್ತಿಯೂ ನಿಜವಾಗಿಯೂ ಸತ್ಯ ಸಂದೇಶ ವಾಹಕರೇ ಆಗಿರುವರು, ಅಲ್ಲದಿದ್ದರೆ ಅವರು ಹೇಳುವುದು ಸುಳ್ಳಾಗಿದೆ ಎಂದು ಹೇಳಿ ನಳ್'ರ್ ಹಾಗೂ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯನ್ನು ಅಲ್ಲಿಂದ ಕಳುಹಿಸಿದರು. ಇಬ್ಬರೂ ಅಲ್ಲಿಂದ ವಾಪಸ್ಸು ಬಂದ ನಂತರ, ಖುರೈಷಿಗಳಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ನಂತರ ಪ್ರವಾದಿಯವರನ್ನು ﷺ ಭೇಟಿಯಾಗಿ ಈ ಮೂರು ಪ್ರಶ್ನೆಗಳನ್ನು ಕೇಳಿಯೇ ಬಿಟ್ಟರು. ಅದಕ್ಕೆ ಪ್ರವಾದಿಯವರು ﷺ ನಾಳೆ ಹೇಳುತ್ತೇನೆ ಎಂದು ಹೇಳಿ, 'ಇನ್ಷಾ ಅಲ್ಲಾಹ್' ಅಲ್ಲಾಹನ ಇಚ್ಛೆ ಇದ್ದರೆ ಎಂದು ಜೊತೆಯಲ್ಲಿ ಹೇಳುವುದಕ್ಕೆ ಮರೆತುಹೋಗಿದ್ದರು. ಹಾಗಾಗಿ ಐದು ದಿವಸ ಕಳೆದರೂ ಪ್ರವಾದಿಯವರಿಗೆ ﷺ ಉತ್ತರ ಸಿಕ್ಕಿರಲಿಲ್ಲ. ನಂತರ ಅವಿಶ್ವಾಸಿಗಳು ಪ್ರವಾದಿಯವರ ﷺ ಬಳಿ ಬಂದು, ಏನಾಯಿತು.? ನಾಳೆ ಉತ್ತರ ಹೇಳುತ್ತೇನೆ ಎಂದು ಹೇಳಿ ದಿವಸಗಳು ಕಳೆಯಿತಲ್ಲವೇ.? ಇನ್ನೂ ಉತ್ತರ ಸಿಗಲಿಲ್ಲ ಎಂದು ಕೇಳಿದಾಗ, ಪ್ರವಾದಿಯವರು ﷺ ಒಳಗೊಳಗೆ ಬಹಳಷ್ಟು ಚಿಂತಿತರಾಗ ತೊಡಗಿದರು. ತಕ್ಷಣವೇ ಮಲಕ್ ಜಿಬ್'ರೀಲ್'ರವರು (ಅ) ಬಂದು, ಅಲ್ಲಾಹನಿಂದ ಲಭಿಸಿದ ಸಂದೇಶವನ್ನು ತಿಳಿಸಿದರು. ನಾಳೆ ಹೇಳುತ್ತೇನೆ ಎಂದು ಹೇಳುವಾಗ 'ಇನ್ಷಾ ಅಲ್ಲಾಹ್' ಎಂದು ಕೂಡ ಹೇಳಬೇಕಿತ್ತು ಎನ್ನುವ ವಿಷಯವನ್ನೂ ಕೂಡ ನೆನೆಪಿಸಿದರು. ನಂತರ ಅವರು ಕೇಳಿದ ಮೂರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರದೊಂದಿಗೆ ಪವಿತ್ರ ಖುರ್'ಆನಿನ ಹದಿನೆಂಟನೇ ಅಧ್ಯಾಯವಾದ 'ಅಲ್ ಕಹ್'ಫ್' ಅಧ್ಯಾಯವನ್ನು ವಿವರಿಸಿ ಕೊಟ್ಟರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment