ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಕ್ರಿ ಶ 615 ರಲ್ಲಾಗಿತ್ತು ಈ ವಿಷಯವನ್ನು ಪ್ರವಾದಿಯವರು ﷺ ಹೇಳಿದ್ದು. ದಿವಸಗಳು ಉರುಳಿ ಹೋಯಿತು. ಕ್ರಿ ಶ 622 ರಲ್ಲಿ ಅಬೂಬಕ್ಕರ್'ರವರು ◌ؓ ಮದೀನಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ, ಉಬಯ್ಯ್ ಅವರ ನಡುವೆ ಇದ್ದ ಸವಾಲಿನ ಬಗ್ಗೆ ನೆನಪಿಸಿದರು. ಅದಕ್ಕೆ ಸಿದ್ದೀಕ್'ರವರು ◌ؓ, ನನ್ನ ಅನುಪಸ್ಥಿತಿಯಲ್ಲಿ ಸವಾಲನ್ನು ಪೂರ್ತಿಯಾಗಿಸಲು, ನನ್ನ ಮಗ ಅಬ್ದುಲ್ಲಾಹ್'ರನ್ನು ನಿಯೋಗಿಸಿದ್ದೇನೆ ಎಂದು ಹೇಳಿದರು. ನಂತರದ ಕಾಲದಲ್ಲಿ, ಉಬಯ್ಯ್ ಉಹುದ್ ಯುದ್ಧಕ್ಕೆ ತೆರಳುವಾಗ, ಅಬ್ದುಲ್ಲಾಹ್ ಅವರ ಬಳಿ ಬಂದು ನಿಮ್ಮ ಬದಲಾಗಿ ಸವಾಲನ್ನು ಪೂರ್ತಿಯಾಗಿಸಲು, ನಿಮ್ಮ ಪ್ರತಿನಿಧಿಯನ್ನು ನಿಯೋಗಿಸಬೇಕು ಎಂದು ಹೇಳಿದಾಗ, ಉಬಯ್ಯ್ ಅದಕ್ಕೊಂದು ಪ್ರತಿನಿಧಿಯನ್ನು ನಿಯೋಗಿಸಿ ಹೋದರು, ಉಹುದಿನ ರಣರಂಗದಲ್ಲೇ ಅವರು ಮರಣ ಹೊಂದಿದರು.
ಸೀಸರ್ ಹೆರ್ಕುಲೀಸ್ ಎಂಬ ವ್ಯಕ್ತಿಯು ರಹಸ್ಯವಾಗಿ ಕೋನ್'ಸ್ಟಾನ್'ಟಿನೋಪಲ್ ನಗರವನ್ನು ಬಿಟ್ಟು ತರಾವ್ ಸೋನಿಗೆ ಕಪ್ಪು ಸಮುದ್ರದ ಮೂಲಕ ಹೋದರು. ಆದರೆ ಅಲ್ಲಿ ಪುಷ್ಟ್'ಗಳ ಮೂಲಕ ಆಕ್ರಮಣ ನಡೆಸುವ ಸಂಚುಗಳನ್ನು ತಿಳಿದುಕೊಂಡರು. ಕ್ರೈಸ್ತ ಧರ್ಮದ ಗುಂಪಿನ ಸಹಾಯದೊಂದಿಗೆ, ಕ್ರಿ ಶ 623 ರಲ್ಲಿ ಅರ್'ಮೇನಿಯದ ಮೇಲೆ ವಿಶೇಷವಾದ ರೀತಿಯಲ್ಲಿ ದಾಳಿ ನಡೆಸಿದರು. ಅದರ ಮುಂದಿನ ವರ್ಷವೇ ಅಝರ್'ಬೀಜಾನಿಗೆ ನುಗ್ಗಿ, ಸೌರಾಷ್'ಟ್ರಾದವರನ್ನು ಸೋಲಿಸಿ ಇರ್ಮಿಯವನ್ನು ವಶಪಡಿಸಿಕೊಂಡರು. ನಂತರ ರೋಮ್ ನಿರಂತರವಾಗಿ ಪರ್ಶಿಯಗೆ ಆಘಾತಗಳನ್ನು ಉಂಟುಮಾಡಿತು. ಕೊನೆಗೆ ಕ್ರಿ ಶ 627 ರಲ್ಲಿ ನೀನವದಲ್ಲಿ ನಡೆದ ಯುದ್ಧದಲ್ಲಿ ಪರ್ಷಿಯನ್ ಸಾಮ್ರಾಜ್ಯದ ಸಿಂಹಾಸನವು ಪತನಗೊಂಡಿತು.
ಇಂಗ್ಲೀಷ್ ಇತಿಹಾಸಗಾರನಾದ ಗಿಬ್ಬಾನ್ ಪ್ರಸ್ತುತ ಘಟನೆಯ ಬಗ್ಗೆ ಈ ರೀತಿ ತಿಳಿಸಿತ್ತಾರೆ. "ಖುರ್'ಆನಿನ ಘೋಷಣೆಯು ನಡೆದು ಸುಮಾರು ಏಳೆಂಟು ವರ್ಷ ಕಳೆದು ಉಂಟಾದ ಪರ್ಷಿಯಾದ ಸೋಲು ಯಾರು ಊಹಿಸದ ರೀತಿಯಲ್ಲಿ ಆಗಿತ್ತು. ಅಷ್ಟೇ ಅಲ್ಲ ರೋಮಿನ ಹೆಸರೇ ಇಲ್ಲದ ರೀತಿಯಲ್ಲಿ ನಾಶವಾಗಬಹುದು ಎನ್ನುವ ಆತಂಕವೇ ಅಧಿಕವಿತ್ತು" ಎಂದು ಹೇಳಿದ್ದರು.
ರೋಮ್ ಜಯಗೊಳಿಸಿದ ನಂತರ ಉಬಯ್ಯ್ ನಿಯೋಗಿಸಿದ್ದ ಪ್ರತಿನಿಧಿಯು ಸೋಲನ್ನು ಒಪ್ಪಿಕೊಂಡು, ಮೊದಲೇ ಹೇಳಿದ ಹಾಗೆ ನೂರು ಒಂಟೆಗಳನ್ನು ಅಬೂಬಕ್ಕರ್'ರವರಿಗೆ ◌ؓ ನೀಡಿದರು. ಇನ್ನೂ ಜೂಜಾಟ ವಿರೋಧ ನಿಯಮ ಆಗದೆ ಇರುವುದರಿಂದ ಅಬೂಬಕ್ಕರ್'ರವರು ಸವಾಲಿಗೆ ಉಡುಗೊರೆಯಾಗಿ ಇಟ್ಟಿದ್ದ ಒಂಟೆಗಳನ್ನು ಸ್ವೀಕರಿಸಿದರು. ಆದರೆ ಅದನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಬಡವರಿಗೆ ನೀಡಿದರು.
*************************
ಪ್ರವಾದಿತ್ವದ ಘೋಷಣೆಯಾಗಿ ಹತ್ತು ವರ್ಷ ಕಳೆಯಿತು. ಪ್ರವಾದಿಯವರ ﷺ ದೊಡ್ಡಪ್ಪ ಅಬೂತ್ವಾಲಿಬರಿಗೆ ಅನಾರೋಗ್ಯ ಬಾಧಿಸಿತು. ತಾತ ಅಬ್ದುಲ್ ಮುತ್ತಲಿಬರ ◌ؓ ವಿಯೋಗದ ನಂತರ, ಪ್ರವಾದಿಯವರನ್ನು ﷺ ಎಂಟು ವರ್ಷ ಪ್ರಾಯದಿಂದ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಮಹಾಮನುಷಿಯಾಗಿದ್ದರು ಅಬೂತ್ವಾಲಿಬ್. ಅವರು ಅನಾರೋಗ್ಯದಿಂದ ಬಳಲುತ್ತಿದ್ದದ್ದು, ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರ ತಂದಿತ್ತು. ತನ್ನೆಲ್ಲಾ ಕಷ್ಟದ ಸಂದರ್ಭದಲ್ಲಿ, ತನಗೆ ನೆರಳಾಗಿ ನಿಂತಿದ್ದ ದೊಡ್ಡಪ್ಪರ ಅವಸ್ಥೆಯನ್ನು ಕಂಡು ಪ್ರವಾದಿಯವರ ಮನಸ್ಸು ಬಹಳಷ್ಟು ರೋಧಿಸಿತು. ಆಗಾಗ ಬಂದು ದೊಡ್ಡಪ್ಪರನ್ನು ನೋಡಿ ಹೋಗುತ್ತಿದ್ದರು.
ಸಯೀದ್ ಬಿನ್ ಅಲ್ ಮುಸಯ್ಯಬ್'ರು ◌ؓ ಈ ವಿಷಯದ ಕುರಿತು ವಿವರಿಸುವುದು ಕಾಣಬಹುದು. ಅಬೂತ್ವಾಲಿಬರ ರೋಗ ಉಲ್ಭಣಗೊಂಡು ಮರಣಾವಸ್ಥೆಗೆ ತಲುಪಿದಾಗ, ಪ್ರವಾದಿಯವರು ﷺ ಅಬೂತ್ವಾಲಿಬರ ಬಳಿಯೇ ಇದ್ದರು. ಆಗ ಅಲ್ಲೇ ಪಕ್ಕದಲ್ಲಿ ಖುರೈಷಿ ನಾಯಕರಾದ ಅಬೂಜಹಲ್ ಹಾಗೂ ಅಬ್ದುಲ್ಲಾಹಿಬಿನು ಅಬೀಉಮಯ್ಯತ್'ಬಿನುಲ್ ಮುಗೀರ ಕೂಡ ಇದ್ದರು. ಪ್ರವಾದಿಯವರು ﷺ, ತನ್ನ ದೊಡ್ಡಪ್ಪರ ಬಳಿ ಬಂದು, "ಲಾ ಇಲಾಹ ಇಲ್ಲಲ್ಲಾಹ್" ಎಂಬ ವಚನವನ್ನು ಹೇಳಿರಿ, ನಾನು ನಿಮಗಾಗಿ ಅಲ್ಲಾಹನ ಬಳಿ ಸಾಕ್ಷಿ ನಿಲ್ಲುತ್ತೇನೆ ಎಂದು ಹೇಳಿದಾಗ, ತಕ್ಷಣವೇ ಪಕ್ಕದಲ್ಲೇ ನಿಂತಿದ್ದ ಅಬೂಜಹಲ್, ಓ ಅಬೂತ್ವಾಲಿಬರೇ ನೀವು ಅಬ್ದುಲ್ ಮುತ್ತಲಿಬರ ದಾರಿಯನ್ನು ತಿರಸ್ಕರಿಸಿಸುತ್ತಿದ್ದೀರ.? ಎಂದು ಕೇಳಿದರು. ಪ್ರವಾದಿಯವರು ﷺ ಲಾ ಇಲಾಹ ಇಲ್ಲಲ್ಲಾಹ್ ಎಂದು ಉಚ್ಛರಿಸಲು, ಹೇಳುತ್ತಿರುವಾಗೆಲ್ಲ, ಅಬೂಜಹಲ್ ಇದನ್ನೇ ಹೇಳುತ್ತಿದ್ದರು. ಕೊನೆಗೆ ಅಬೂತ್ವಾಲಿಬರೇ, ನಾನು ಅಬ್ದುಲ್ ಮುತ್ತಲಿಬರ ದಾರಿಯಲ್ಲೇ ಇರುವೆನು ಎಂದು ಹೇಳಿದರಾದರೂ ಲಾ ಇಲಾಹ ಇಲ್ಲಲ್ಲಾಹ್ ಎಂದು ಮಾತ್ರ ಉಚ್ಛರಿಸಲಿಲ್ಲ. ಅದಕ್ಕೆ ಪ್ರವಾದಿಯವರು ﷺ ನನ್ನನ್ನು ನಿಷೇಧಿಸುವ ವರೆಗೂ ನಾನು ನಿಮಗಾಗಿ ಪಾಪ ಮೋಚನೆ ಕೇಳುತ್ತಲೇ ಇರುವನು ಎಂದು ಹೇಳಿದರು.
ನಂತರ ಪವಿತ್ರ ಖುರ್'ಆನಿನ ತೌಬಾ ಅಧ್ಯಾಯದ ನೂರ ಹದಿಮೂರನೇ ಸೂಕ್ತವು ಅವತರಿಸಿತು. "ಪ್ರವಾದಿಯವರಾಗಲಿ, ವಿಶ್ವಾಸಿಗಳಾಗಲಿ, ಸತ್ಯನಿಷೇಧಿಗಳಿಗಾಗಿ ಪಾಪ ಮೋಚನೆ ಕೇಳಬಾರದು. ಅವರು ಆತ್ಮೀಯ ಸಂಬಂಧಿಗಳಾಗಿದ್ದರೂ ಕೂಡ", (ಅವರು ನರಕಕ್ಕೆ ಪ್ರವೇಶಿಸುವರು ಎಂದು ಸ್ಪಷ್ಟವಾದ ಬಳಿಕ) ಅಲ್ ಖಸ್ವಸ್ ಅಧ್ಯಾಯದ ಐತ್ತಾರನೇ ಸೂಕ್ತವೂ ಕೂಡ ಈ ಘಟನೆಗೆ ಸಂಬಂಧಿಸಿ ಅವತರಿಸಿತು. ಅದರ ಸಾರಾಂಶ ಈ ರೀತಿಯಾಗಿದೆ, "ಪ್ರವಾದಿಯವರೇ ﷺ ತಾವು ಇಷ್ಟಪಡುವವರನ್ನು ತಮ್ಮಿಷ್ಟದಂತೆ ಸನ್ಮಾರ್ಗಕ್ಕೆ ಕೊಂಡು ಬರಲು ಸಾಧ್ಯವಿಲ್ಲ, ಆದರೆ ಅಲ್ಲಾಹನು ಇಚ್ಛಿಸಿದವರನ್ನು ಅವನು ಖಂಡಿತ ಸನ್ಮಾರ್ಗಕ್ಕೆ ಕೊಂಡು ಬರುವನು, ಸತ್ಯ ಅಂಗೀಕರಿಸುವವರನ್ನು ಬಹಳ ಚೆನ್ನಾಗಿ ತಿಳಿಯುವವನು ಅವನಾಗಿರುವನು."
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment