Abu Hisham Saquafi

Official Website Of Hafiz Ilyas Saquafi Padaladka

Wednesday, September 28, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -102 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಈಗಾಗಲೇ ತಿಳಿಸಿದ ಉಲ್ಲೇಖಗಳ ಆಧಾರದ ಮೇಲೆ ಉದ್ಧರಿಸಿದ ಕೆಲವರು ಅಬೂತ್ವಾಲಿಬ್ ಮರಣ ಹೊಂದಿದ್ದು ಅವಿಶ್ವಾಸಿಯಾಗಿದ್ದು ಎಂದು ಹೇಳಿದರೆ, ಕೆಲವರು ಅಬೂತ್ವಾಲಿಬರ ಜೀವನ ಶೈಲಿ, ಅವರ ತೆಗೆದಿದ್ದ ತೀರ್ಮಾನ, ಹಾಗೂ ಅವರು ನಿಭಾಯಿಸಿದ್ದ ಪರಿಸ್ಥಿತಿಗಳೆಲ್ಲವನ್ನೂ ಅವಲೋಕನ ನಡೆಸಿ, ಅವರು ಆಂತರಿಕವಾಗಿ ಸತ್ಯವಿಶ್ವಾಸಿಯಾಗಿ ಆಗಿತ್ತು ಮರಣ ಹೊಂದಿದ್ದು ಎಂದು ಅಭಿಪ್ರಾಯಪಟ್ಟವರು ಇದ್ದಾರೆ. ಅವರಿಗೆ ಈಗಾಗಲೇ ಮೊದಲು ಕೆಲವರು ತಿಳಿಸಿದ್ದ ಖುರ್'ಆನ್ ಸೂಕ್ತಗಳು ಅವತರಿಸಿದ್ದು ಅಬೂತ್ವಾಲಿಬರಿಗೆ ಅಲ್ಲ, ಅಷ್ಟೇ ಅಲ್ಲದೆ ಈ ತಿಳಿಸಿದ ಸೂಕ್ತಗಳಿಗೆ ಅವರ ಬಳಿ ಸ್ಪಷ್ಟವಾದ ವಿವರಣೆಯೂ ಇತ್ತು.
      ಈ ವಿಷಯದ ಕುರಿತಾಗಿ ಎರಡು ಅಭಿಪ್ರಾಯಗಳನ್ನು ಒಂದೇ ರೀತಿ ಅಂಗೀಕರಿಸುವ ಹಾಗೆ ನಮಗೆ ಹೀಗೆ ಮನದಟ್ಟು ಮಾಡಬಹುದು. 

      1. ಎಷ್ಟೇ ಕಷ್ಟದ ಪರಿಸ್ಥಿತಿ ಎದುರಾಗಿದ್ದರೂ, ಪ್ರವಾದಿಯವರಿಗೆ ﷺ ಸಹಾಯ ಮಾಡಲು ಅಬೂತ್ವಾಲಿಬರು ಮುಂದೆ ಬರುತ್ತಿದ್ದರು.
2. ಅವರು ಹೇಳಿದ್ದ ಬಹಳಷ್ಟು ಕವಿತೆಗಳು ಹಾಗೂ ತೀರ್ಮಾನಗಳಲ್ಲಿ, ಪ್ರವಾದಿಯವರು ಹೇಳುತ್ತಿದ್ದ ವಿಷಯಗಳನ್ನು ಸತ್ಯವೆಂದು, ಸರಿಯಾಗಿದೆ ಎಂದೂ ಒಪ್ಪಿಕೊಂಡಿದ್ದರು. 
3. ಬಹಿಷ್ಕಾರದಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದ್ದರೂ, ಅಬೂತ್ವಾಲಿಬ್'ರು ಇಸ್ಲಾಮನ್ನು ವಿರೋಧಿಸುವುದಾಗಲಿ, ಪ್ರವಾದಿಯವರನ್ನು ﷺ ದೂಷಿಸುವುದಾಗಲಿ ಮಾಡಿರಲಿಲ್ಲ.
4. ಸ್ವಂತ ಮಕ್ಕಳಾದ ಅಲಿ, ಜಅಫರ್ ಹಾಗೂ ಇತರ ಮಕ್ಕಳಾಗಲಿ ಇಸ್ಲಾಮ್ ಸ್ವೀಕರಿಸಿದಾಗ, ಅವರನ್ನು ವಿರೋಧಿಸುವಾಗಲಿ, ಹಿಂತಿರುಗಿ ಬರಲು ಒತ್ತಾಯ ಮಾಡುವುದಾಗಲಿ ಮಾಡಿರಲಿಲ್ಲ, ಬದಲಾಗಿ ಇನ್ನಷ್ಟು ಪ್ರೋತ್ಸಾಹ ನೀಡಿದ್ದರು. 
5. ಮರಣದ ಸಂದರ್ಭದಲ್ಲಿ ಪ್ರವಾದಿಯವರು ﷺ ಸತ್ಯ ವಚನವನ್ನು ಹೇಳಿಕೊಟ್ಟಾಗ, ಅದನ್ನು ಹೇಳದಿದ್ದರೂ ಖುರೈಷಿಗಳು ಇದ್ದ ಕಾರಣ ನಾನು ಅಬ್ದುಲ್ ಮುತ್ತಲಿಬ್'ರ ದಾರಿಯಲ್ಲೇ ಇರುವೆನು ಎಂದು ಹೇಳಿದ್ದರು. 
6. ಆದರೆ ಆ ಸಂದರ್ಭದಲ್ಲಿ ಇತರ ದೇವರುಗಳ ಹೆಸರನ್ನು ಕರೆಯುದಾಗಲಿ, ತೌಹೀದ್'ನ ವಚನವನ್ನು ವಿರೋಧಿಸುವುದಾಗಲಿ ಮಾಡಿರಲಿಲ್ಲ. 

       ಎರಡು ಭಾಗದಿಂದಲೂ ಅಭಿಪ್ರಾಯ ವ್ಯಕ್ತಪಡಿಸುವರು ಹೇಳುವ ಪ್ರಮುಖ ವಿಷಯ ಏನೆಂದರೆ.? ಸತ್ಯ ವಚನವನ್ನು ಸಾರ್ವಜನಿಕವಾಗಿ ಘೋಷಣೆ ಮಾಡದೆ ಇರುವುದರಿಂದ ಅವರನ್ನು ಸತ್ಯವಿಶ್ವಾಸಿ ಎಂದು ಹೇಳಬಹುದೋ.? ಇಲ್ಲವೋ.? ಎಂಬುವುದಾಗಿತ್ತು. ಆದರೆ ಇಲ್ಲಿ ಒಂದು ಗುಂಪಿನ ವಾದ ಸತ್ಯವಚನವನ್ನು ಸಾರ್ವಜನಿಕವಾಗಿ ಉಚ್ಛರಿಸಲು ಹೇಳಿದಾಗ, ಉಚ್ಛರಿಸದ ಕಾರಣ, ಅವರನ್ನು ಸತ್ಯ ವಿಶ್ವಾಸಿ ಎಂದು ಹೇಳುವುದು ಸೂಕ್ತವಲ್ಲ ಎಂಬುವುದಾಗಿತ್ತು.  ಅದಕ್ಕೆ ಅವರಿಗೆ ಆಧಾರವಾಗಿ ಉದ್ಧರಿಸಲು ಕೆಲವೊಂದು ಹದೀಸ್'ಗಳಿತ್ತು, ಅದಕ್ಕೆ ಸೇರಿದ್ದಾಗಿದೆ ಅಬ್ಬಾಸ್'ರವರು ◌ؓ ಹಾಗೂ ಅಲಿಯವರು ◌ؓ ಹೇಳಿದ್ದ ಹದೀಸ್'ಗಳು. 
   ಇನ್ನು ಅಬೂತ್ವಾಲಿಬರನ್ನು ಸತ್ಯ ವಿಶ್ವಾಸಿಯಾಗಿಯೇ ಪರಿಗಣಿಸಬೇಕು ಎಂದು ವಾದಿಸುವವರಿಗೆ, ಪವಿತ್ರ ಖುರ್'ಆನಿನ ಅಅ್'ರಾಫ್ ಅಧ್ಯಾಯದ ನೂರ ಐವತ್ತಾರನೇ ಸೂಕ್ತವಾಗಿತ್ತು ಬೆಂಬಲ ನೀಡುವುದು. ಅದರ ಸಾರಾಂಶ ಈ ರೀತಿಯಾಗಿದೆ, "ಹಾಗಾದರೆ ಪ್ರವಾದಿಯವರ ﷺ ಮೇಲೆ ವಿಶ್ವಾಸವಿರಿಸಿ, ಅವರಿಗೆ ಬೆಂಬಲ ನೀಡಿ, ಸಹಾಯ ಮಾಡಿ, ಅವರ ಜೊತೆಯಲ್ಲಿ ಅವರಿಗೆ ಅವತರಿಸಿದ ಆ ಪ್ರಕಾಶವನ್ನೂ ಯಾರು ಹಿಂಬಾಲಿಸುತ್ತಾರೋ.? ಅವರಾಗಿದ್ದಾರೆ ಜಯಶಾಲಿಗಳು." 

    ಈ ಸೂಕ್ತದಲ್ಲಿ ಹೇಳಿದ ಎಲ್ಲಾ ವಿಶೇಷತೆಗಳು ಅಬೂತ್ವಾಲಿಬರಲ್ಲಿ ಕಂಡುಬಂದಿತ್ತು. ಹಾಗಾಗಿ ಅವರನ್ನು ಸತ್ಯ ವಿಶ್ವಾಸಿಯಾಗಿಯೇ ಪರಿಗಣಿಸಬೇಕು ಎಂಬುದಾಗಿತ್ತು ಅವರ ವಾದ. ಅಬೂತ್ವಾಲಿಬರು ಆದರ್ಶದಲ್ಲಿ ಸತ್ಯ ವಿಶ್ವಾಸಿಯೂ, ಜಯಶಾಲಿಗಳ ಸಾಲಿನಲ್ಲಿ ಸೇರಿದ ವ್ಯಕ್ತಿಗಳು ಎನ್ನುವ ವಿಷಯದಲ್ಲಿ ಮಾತ್ರ ಹಲವಾರು ಗ್ರಂಥಗಳು ರಚಿಸಲ್ಪಟ್ಟಿದೆ. ಇಮಾಮ್ ಬರ್'ಸಂಜಿಯವರ, ಬಿಗ್'ಯತ್ ತ್ವಾಲೀಬೀನ್ ಲಿ ಈಮಾನಿ ಅಬೀತ್ವಾಲಿಬ್ ವ ಹುಸ್'ನಿ ಖಾತಿಮತಿಹಿ, ಮುಹಮ್ಮದ್ ಮುಈನ್ ಅಲ್ ಹಿಂದಿಯವರ ಇಸ್'ಬಾತು ಇಸ್ಲಾಮಿ ಅಬೀತ್ವಾಲಿಬ್, ಮುಹಮ್ಮದ್ ಅಫನ್'ದಿಯವರ ಅಸ್ಸಹ್ ಮುಸ್ವಾಯಿಬ್ ಇಲಾ ಕಬಿದಿ ಮನ್ ಆದ ಅಬಾತ್ವಾಲಿಬ್, ಅಸ್ಸಯ್ಯದ್ ಅಲಿ ಕಬೀರ್'ರವರ ಗಾಯತುಲ್ ಮತ್ವಾಲಿಬ್ ಫೀ ಬಹ್'ಸಿ ಈಮಾನಿ ಅಬೀತ್ವಾಲಿಬ್, ಅಹ್ಮದ್ ಫೈಳಿಯವರ ಫೈಳುಲ್ ವಾಹಿಬ್ ಫೀ ನಜಾತಿ ಅಬೀ ತ್ವಾಲಿಬ್, ಮಕ್ಕಾದ ಹದೀಸ್ ಪಂಡಿತರೂ, ಮುಫ್ತಿಯೂ ಆದ ಇಮಾಮ್ ಝೈನಿ ದಹ್'ಲಾನಿಯವರ ಅಸ್'ನಲ್ ಮತ್ವಾಲಿಬ್ ಎನ್ನುವ ಗ್ರಂಥಗಳಾಗಿವೆ ಅವು. 

       (ಮುಂದುವರಿಯುವುದು...)


اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: