Abu Hisham Saquafi

Official Website Of Hafiz Ilyas Saquafi Padaladka

Wednesday, September 28, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -104 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಅಬೂ ಗೈತ್ವಲರ ಕೂಗು ಕೇಳಿ ಖುರೈಷಿಗಳೆಲ್ಲರೂ ಓಡಿ ಬಂದು, ಅವರೆಲ್ಲರೂ ಅಬೂಲಹಬಿನಲ್ಲಿ ಇದೇನು ನಾವು ಕೇಳುತ್ತಿದ್ದೇವೆ.? ಅಂತ ಎಂದು ಕೇಳಿದಾಗ, ಅಬೂಲಹಬ್ ಏನಿಲ್ಲ, ನಾನು ಯಾವತ್ತೂ ಅಬ್ದುಲ್ ಮುತ್ತಲಿಬರ ಧರ್ಮವನ್ನು ಬಿಟ್ಟು ಹೋಗುವುದಿಲ್ಲ. ಆದರೆ ನನ್ನ ಸಹೋದರನ ಮಗನನ್ನು ಕಾಪಾಡಿದೆ ಅಂತ ಮಾತ್ರ.! ಅವರು ಮಾಡುವ ಕಾರ್ಯಾಚರಣೆಯನ್ನು, ಅವರು ಮಾಡಲಿ ಎಂದು ಹೇಳಿದರು. ಅದಕ್ಕೆ ಖುರೈಷಿಗಳು, ಅದು ಒಳ್ಳೆಯ ಕೆಲಸ ಕುಟುಂಬ ಸಂಬಂಧವನ್ನು ಮುರಿಯಬೇಡಿ ಎಂದು ಹೇಳಿದರು. 

      ಸ್ವಲ್ಪ ದಿನದ ಮಟ್ಟಿಗೆ ಹೀಗೆ ದಿನಗಳು ಕಳೆದು ಹೋಯಿತು. ಅಬೂಲಹಬ್ ಕಾರಣವಾಗಿ, ಪ್ರವಾದಿಯವರಿಗೆ ﷺ ಸಣ್ಣ ತೊಂದರೆಯನ್ನೂ ನೀಡಲು ಸಾಧ್ಯವಾಗಿಲ್ಲ. ಹೀಗಿರುವಾಗ ಅಬೀ ಮುಐತ್ವ್ ಹಾಗೂ ಅಬೂಜಹಲ್ ಇಬ್ಬರು ಜೊತೆ ಸೇರಿ, ಅಬೂಲಹಬನ್ನು ಭೇಟಿಯಾಗಲು ಹೊರಟರು. ಅಬೂಲಹಬಿನ ಬಳಿ ತಲುಪಿದ ಅವರು, ನಿಮ್ಮ ತಂದೆ ಎಲ್ಲಿಗೆ ಹೋಗುವುದು ಎಂದು ಮುಹಮ್ಮದ್ ﷺ ಹೇಳುತ್ತಿದ್ದದ್ದು.? (ಅಬ್ದುಲ್ ಮುತ್ತಲಿಬ್ ಸ್ವರ್ಗದಲ್ಲೋ, ಅಥವಾ ನರಕದಲ್ಲೋ) ಎಂದು ಕೇಳಿದರು. ಅದಕ್ಕೆ ಅಬೂಲಹಬ್ ನೇರವಾಗಿ ಪ್ರವಾದಿಯವರ ﷺ ಬಳಿ ಬಂದು ಇದೇ ಪ್ರಶ್ನೆಯನ್ನು ಪುನಃ ಕೇಳಿದಾಗ, ಪ್ರವಾದಿಯವರು ﷺ, ಅವರ ಜನತೆ ಎಲ್ಲಿಗೆ ಹೋಗುವರೋ ಅಲ್ಲಿಗೆ ಎಂದು ಹೇಳಿದರು. ಅಬೂಲಹಬ್ ಅದೇ ಉತ್ತರವನ್ನು ಅವರಿಬ್ಬರಿಗೂ ತಿಳಿಸಿದರು. ಅದಕ್ಕೆ ಅವರು, ಮುಹಮ್ಮದ್'ರ ﷺ ಮಾತಿನ ಅರ್ಥ ಅಬ್ದುಲ್ ಮುತ್ತಲಿಬ್ ನರಕಕ್ಕೆ ತಲುಪುವರು ಎಂದೋ.? ಎಂದು ಪುನಃ ಕೇಳಿದಾಗ, ಅಬೂಲಹಬ್ ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಪ್ರವಾದಿಯವರಲ್ಲಿ ﷺ ಕೇಳಿದರು. ಅದಕ್ಕೆ ಪ್ರವಾದಿಯವರು ﷺ, ಅಲ್ಲಾಹನಿಗೆ ಸಮಾನವಾಗಿ ಯಾರು ಇತರರನ್ನು ಜೊತೆ ಸೇರಿಸುತ್ತಾರೋ ಅವರು ಖಂಡಿತವಾಗಿ ನರಕಕ್ಕೆ ಹೋಗುವರು ಎಂದು ಹೇಳಿದರು. ಅದಕ್ಕೆ ಅಬೂಲಹಬ್, ನಮ್ಮ ತಂದೆ ನರಕಕ್ಕೆ ಹೋಗುವುದಾದರೆ.? ನಾನು ಇನ್ನು ಮುಂದೆ ನಿಮ್ಮ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ಹೇಳಿ, ಅಲ್ಲಿಂದ ಹೊರಟರು. 

    ಈ ಮಾತನ್ನು ಕೇಳಿ, ಶತ್ರುಗಳಿಗೆ ಹೋದ ಧೈರ್ಯ ವಾಪಸ್ ಬಂದಿತು. ತುಂಬಾ ಕ್ರೂರವಾಗಿ ವರ್ತಿಸಲು ಪುನಃ ಆರಂಭಿಸಿದರು. ಹಕಮ್ ಬಿನ್ ಅಬಿಲ್ ಅಲ್'ಹಸ್ವ್,  ಉಖ್'ಬತ್ ಬಿನ್ ಅಬೀ ಮುಐತ್ವ್, ಅದಿಯ್ಯ್ ಬಿನ್ ಹಂರಾಅ, ಇಬ್'ನುಲ್ ಅಸದಾಅಲ್ ಹುದಲಿ, ಮುಂತಾದ ಜನರು ಪ್ರವಾದಿಯವರಿಗೆ ﷺ ತೊಂದರೆ ನೀಡುತ್ತಿದ್ದ ಮುಖ್ಯ ಶತ್ರುಗಳಾಗಿದ್ದರು. ಇವರಲ್ಲಿ ಕೆಲವರು ಪ್ರವಾದಿಯವರು ﷺ ನಮಾಝ್ ಮಾಡುತಿದ್ದ ಸಂದರ್ಭದಲ್ಲಿ, ಮೇಕೆಯ ಕರಳುಗಳನ್ನು ಬಿಸಾಡಲು ಆರಂಭಿಸಿದರು. ಪ್ರವಾದಿಯವರಿಗೆ ﷺ ಯಾವುದೇ ಭಯವಿಲ್ಲದೆ ನಮಾಝ್ ಮಾಡಲು ಹಿಜ್'ರ್ ಇಸ್ಮಾಯಿಲ್ ಲಲ್ಲಿ ಅಡಗಿ ನಿಲ್ಲಬೇಕಾಗಿ ಬಂದಿತು. ಇಮಾಮ್ ಬುಖಾರಿಯವರ ◌ؓ ಉಲ್ಲೇಖದಲ್ಲಿ ಈ ಘಟನೆಯ ಕುರಿತು ಉರ್'ವ್ವರವರು ◌ؓ ವಿವರಿಸುವುದು ಕಾಣಬಹುದು. ನಾನು ಅಂರ್ ಬಿನ್ ಅಲ್'ಆಸ್ವ್'ನಲ್ಲಿ ಕೇಳಿದೆನು, ಖುರೈಷಿಗಳು ಪ್ರವಾದಿಯವರಿಗೆ ﷺ ಬಹಳಷ್ಟು ತೊಂದರೆ ನೀಡಿದ್ದ ಸಂದರ್ಭ ಯಾವುದು ಎಂದು ನಿಮಗೆ ಗೊತ್ತಿದ್ದರೆ, ತಿಳಿಸುವಿರ.? ಎಂದು ಕೇಳಿದರು. ಅದಕ್ಕೆ ಅಂರ್ ಹೇಳಲು ಆರಂಭಿಸಿದರು.

       ಒಂದು ದಿನ ಪ್ರವಾದಿಯವರು ﷺ ಕಅಬಾಲಯದ ಹಿಜ್'ರ್'ನಲ್ಲಿ (ಹಿಜ್'ರ್ ಇಸ್ಮಾಯಿಲ್) ನಮಾಝ್ ಮಾಡುತಿದ್ದರು. ಉಖ್'ಬತ್ ಬಿನ್ ಅಬೀಮುಐತ್ವ್ ಎನ್ನುವ ವ್ಯಕ್ತಿ, ಪ್ರವಾದಿಯವರ ﷺ ಕತ್ತಿಗೆ ಒಂದು ಬಟ್ಟೆಯನ್ನು ಸುತ್ತಿ, ಬಲವಾಗಿ ಎಳೆಯಲು ಆರಂಭಿಸಿದನು. ಅದನ್ನು ನೋಡಿದ ಅಬೂಬಕ್ಕರ್ ◌ؓ ತಕ್ಷಣವೇ  ಓಡಿ ಹೋಗಿ ಅವನನ್ನು ತಡೆದು, ನನ್ನ ರಕ್ಷಕ ಅಲ್ಲಾಹನಾಗಿರುವೆನು ಎಂದು ಹೇಳಿದ ಕಾರಣಕ್ಕೆ ಅವರನ್ನು ನೀವು ಕೊಲ್ಲುತ್ತಿದ್ದೀರ.? ಅವರು ನಿಮಗೆ ಬೇಕಾಗಿದ್ದ ಎಲ್ಲಾ ಪ್ರಮಾಣ ಗಳನ್ನೂ ನೀಡಲಿಲ್ಲವೇ.? ಎಂದು ಜೋರಾಗಿ ಕೂಗಿ ಹೇಳಿದರು. 
   ಇಮಾಮ್ ತ್ವಬ್'ರಾನಿಯವರ ◌ؓ ಉಲ್ಲೇಖದ ಪ್ರಕಾರ, ಪ್ರವಾದಿಯವರು ﷺ ನಮಾಝ್ ಮಾಡಿದ ನಂತರ ಕಅಬಾಲಯದ ನೆರಳಿನಲ್ಲಿ ಕುಳಿತಿದ್ದ ಖುರೈಷಿಗಳ ಮುಂದೆ ನಿಂತು, ಕುತ್ತಿಗೆಯ ಬಳಿ ತೋರಿಸಿ, ಓ ಖುರೈಷಿಗಳೇ ನನ್ನನ್ನು ಖುರ್ಬಾನಿಯಿಂದಲ್ಲದೇ (ಬಹುಶಃ ತನ್ನ ತಂದೆಯ ಅಥವಾ ಪ್ರವಾದಿ ಇಸ್ಮಾಯಿಲ್'ರವರ ಘಟನೆಯನ್ನು ನೆನಪಿಸಿ ಆಗಿರಬಹುದು ಈ ಮಾತು ಹೇಳಿದ್ದು) ನಿಯೋಗಿಸಿಸಲಿಲ್ಲ ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಜಾಹಿಲ್ ಆಗಿದ್ದೀರೋ.? ಎಂದು ಕೇಳಿದಾಗ, ಪ್ರವಾದಿಯವರು ﷺ ನಿವಾಗಿದ್ದೀರ ಬುದ್ದಿ ಶೂನ್ಯರಲ್ಲಿ ಸೇರಿದ ವ್ಯಕ್ತಿ (ಜಾಹಿಲ್) ಎಂದು ಹೇಳಿದರು. 

    ಆ ಕಾಲದ ಇನ್ನೊಂದು ಘಟನೆಯನ್ನು ಅನಸ್'ರವರು ◌ؓ ಈ ರೀತಿ ವಿವರಿಸುತ್ತಾರೆ. ಒಂದು ದಿನ ಪ್ರವಾದಿಯವರಿಗೆ ﷺ, ಖುರೈಷಿಗಳು ಬಹಳಷ್ಟು ಹಿಂಸೆ ನೀಡಿದರು. ಅವರು ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣವೇ ಅಬೂಬಕ್ಕರ್'ರವರು ಬಂದು, ನನ್ನ ರಕ್ಷಕ ಅಲ್ಲಾಹು ಆಗಿರುವನು ಎಂದು ಹೇಳಿದ ಕಾರಣಕ್ಕೆ ನೀವು ಒಬ್ಬರನ್ನು ಕೊಲ್ಲುತಿದ್ದೀರ.? ನಿಮಗಾಗಿದೆ ನಾಶ ಎಂದು ಜೋರಾಗಿ ಕೂಗಿ ಹೇಳಿದರು. 

     (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: