ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಆ ಸಮಯದಲ್ಲಿ ಪ್ರವಾದಿಯವರು ﷺ ಹಾಗೂ ಅವರ ಅನುಚರರು ಬಹಳಷ್ಟು ತೊಂದರೆಗಳನ್ನು ಎದುರಿಸಿದ್ದ ಬಹಳಷ್ಟು ಘಟನೆಗಳನ್ನು ಉಲ್ಲೇಖಿಸಲಾಗಿದೆ. ಇಮಾಮ್ ಬುಖಾರಿ ◌ؓ ಹಾಗೂ ಇಮಾಮ್ ಮುಸ್ಲಿಂರವರು ◌ؓ ಉಲ್ಲೇಖಿಸಿದ, ಅಬ್ದುಲ್ಲಾಹಿ ಬಿನ್ ಮಸ್'ವೂದ್'ರವರು ◌ؓ ವಿವರಿಸಿದ ಘಟನೆಯೂ ಈ ರೀತಿಯಾಗಿದೆ. ಪ್ರವಾದಿಯವರು ﷺ ಖುರೈಷಿಗಳ ವಿರುದ್ಧವಾಗಿ ಪ್ರಾರ್ಥಿಸಿದ ದೃಶ್ಯಕ್ಕೆ ಒಮ್ಮೆ ಮಾತ್ರವೇ ನಾನು ಸಾಕ್ಷಿಯಾಗಿದ್ದೆ. ಒಂದು ದಿನ ಪ್ರವಾದಿಯವರು ﷺ ಕಅಬಾಲಯದ ಬಳಿ ನಿಂತು ನಮಾಝ್ ಮಾಡುತಿದ್ದರು. ಅಲ್ಲೇ ಪಕ್ಕದಲ್ಲಿ ಖುರೈಷಿಗಳು ಕೂಡ ಕುಳಿತಿದ್ದರು. ಪ್ರವಾದಿಯವರು ﷺ ನಮಾಝಿನಲ್ಲಿ ಸುಜೂದ್'ಗೆ ತಲುಪಿದಾಗ, ಅಬೂಜಹಲ್ ತನ್ನ ಸಹಚರರೊಂದಿಗೆ, ಕಳೆದ ದಿನ ಕತ್ತರಿಸಿದ ಒಂಟೆಯ ಕರುಳನ್ನು ತಂದು ಮುಹಮ್ಮದ್'ರ ﷺ ಬೆನ್ನಿನ ಮೇಲೆ ಯಾರು ಹಾಕ್ತಾರೆ ಎಂದು ಕೇಳಿದರು. ತಕ್ಷಣವೇ ಅವರ ಗುಂಪಿನಲ್ಲಿದ್ದ ನೀಚನಾದ ಉಖ್'ಬ ಬಿನ್ ಅಬೀ ಮುಐತ್ವ್ ಎದ್ದು ಹೋಗಿ, ಆ ಕರುಳನ್ನು ತಂದು ಸಾಷ್ಟಾಂಗದಲ್ಲಿ ಇದ್ದ ಪ್ರವಾದಿಯವರ ﷺ ಬೆನ್ನಿನ ಮೇಲೆ ಹಾಕಿದನು. ಅದನ್ನು ನೋಡುತ್ತಾ ನಿಂತಿದ್ದ ಖುರೈಷಿಗಳು ಬಿದ್ದು, ಬಿದ್ದು ನಗುತ್ತಿದ್ದರು. ಆದರೆ ಪ್ರವಾದಿಯವರಿಗೆ ﷺ ಮಾತ್ರ ಸ್ವಲ್ಪವೂ ಕದಳಲು ಸಾಧ್ಯವಾಗಿಲ್ಲ. ನಾನು ಅದನ್ನು ಅಸಹಾಯಕನಾಗಿ ನೋಡಿತ್ತಾ ನಿಂತಿದ್ದೆ. ಅದರ ನಡುವೆ ವೇಗವಾಗಿ ಹೋಗಿ ಪ್ರವಾದಿಯವರ ﷺ ಪ್ರಿಯ ಮಗಳಾದ ಫಾತಿಮಾರಿಗೆ ◌ؓ ವಿಷಯ ತಲುಪಿಸಿದರು. ಸಣ್ಣ ವಯ್ಯಸಿನ ಮಗಳು ಫಾತಿಮ ◌ؓ ಖುರೈಷಿಗಳನ್ನು ಕೋಪದಿಂದ ಬೈದು ಅಲ್ಲಿ ಓಡಿ ಬಂದು, ಹೇಗಾದರೂ ಮಾಡಿ ಆ ಭಾರವಾದ ಕರಳನ್ನು ತೆಗದು ಬಿಟ್ಟರು. ನಂತರ ಪ್ರವಾದಿಯವರು ನಿರಾಳವಾಗಿ ತಲೆ ಎತ್ತಿ, ಅಲ್ಲಾಹನಿಗೆ ಸ್ತುತಿಸಿ, ಖುರೈಷಿಗಳ ವಿರುದ್ಧ ಪ್ರಾರ್ಥನೆ ಮಾಡಿದರು. ಸಾಮಾನ್ಯವಾಗಿ ಪ್ರವಾದಿಯವರು ﷺ ಪ್ರಾರ್ಥನೆ ಮಾಡುವಾಗ ಆ ವಾಕ್ಯಗಳನ್ನು ಮೂರು ಬಾರಿ ಹೇಳುತ್ತಿದ್ದರು. ಹಾಗೇ ಅದೇ ರೀತಿ ಅಬೂಜಹಲ್, ಉತ್'ಬ, ವಲೀದ್, ಶೈಬ, ಉಮಯ್ಯ, ಉಖ್'ಬ ಎಂಬವರನ್ನು ನೀನೇ ನೋಡುಕೊಳ್ಳಬೇಕು ಅಲ್ಲಾಹ್ ಎಂದು ಮೂರು ಬಾರಿ ಹೇಳಿ ಪ್ರಾರ್ಥಿಸಿದರು. ಪ್ರಾರ್ಥನೆಯಲ್ಲಿ ಏಳನೇ ವ್ಯಕ್ತಿಯ ಹೆಸರನ್ನೂ ಹೇಳಿದ್ದರು. ಆದರೆ ಅದು ನನಗೆ ಮರೆತು ಹೋಯಿತು. ಹೀಗೆ ಪ್ರಾರ್ಥನೆ ಮಾಡಿದ್ದನ್ನು ಕಂಡು ಅವರ ಮುಖದಲ್ಲಿದ್ದ ಸಂತೋಷ ಮಾಯವಾಯಿತು. ಈ ಹೆಸರು ಹೇಳಿದ ಎಲ್ಲಾ ವ್ಯಕ್ತಿಗಳು ಬದ್'ರ್ ಯುದ್ಧದಲ್ಲಿ ಮರಣ ಹೊಂದಿದರು. ಎಂದು ಹೇಳಿದರು.
ಇಮಾಮ್ ತ್ವಬ್'ರಿ ◌ؓ ಅದರಲ್ಲಿ ಇನ್ನೊಂದು ಘಟನೆಯನ್ನು ಸೇರಿಸಿ ವಿವರಿಸುತ್ತಾರೆ. ಈ ಘಟನೆ ಆದ ಬಳಿಕ ಪ್ರವಾದಿಯವರು ﷺ ಹೊರಗೆ ಬಂದು ನಿಂತಾಗ, ಕೈಯಲ್ಲಿ ಚಾಟಿ ಹಿಡಿದು ಬರುತ್ತಿದ್ದ ಅಬುಲ್ ಬಖ್'ತರಿಯರಿಗೆ ಎದುರಾದರು. ಅವರು ಏನಾಯಿತು ಎಂದು ಕೇಳಿದರು. ಅದಕ್ಕೆ ಪ್ರವಾದಿಯನ್ನು ﷺ ಕೇಳಿದಾಗ, ಅದು ಏನು ಇಲ್ಲ, ಎಂದು ಅವರನ್ನು ಕಳುಹಿಸಲು ಮುಂದಾದಾಗ, ಅಬುಲ್ ಬಖ್'ತರಿಯ ಮತ್ತಷ್ಟು ಕೇಳುತ್ತಿದ್ದರು. ಬೇರೆ ವಿಧಿ ಇಲ್ಲದೆ ಎಲ್ಲಾ ವಿಷಯವನ್ನು ಹೇಳಿದರು. ಅದನ್ನು ಕೇಳಿ ಅವರು ಪ್ರವಾದಿಯವರ ﷺ ಜೊತೆಯಲ್ಲಿ ಪುನಃ ಮಸ್ಜಿದ್ ಬಳಿ ಬಂದು, ಅಬೂಜಹಲ್'ನ ಬಳಿ ಬಂದು, ನೀನೇನ ಪ್ರವಾದಿಯವರ ಮೇಲೆ ಕರುಳು ಹಾಕಿದ್ದು ಎಂದು ಕೇಳಿದಾಗ, ಅಬೂ ಜಹಲ್ ಹೌದು ಎಂದು ಹೇಳಿದನು. ಅದನ್ನು ಕೇಳಿ ಅಬುಲ್ ಬಖ್'ತರಿಯ ಚಾಟಿಯಿಂದ ಅಬೂ ಜಹಲ್'ನ ತಲೆಗೆ ಬೀಸಿದರು. ನೋವಿನಿಂದ ನರಳಾಡುದನ್ನು ಕಂಡು, ಅವರನ್ನು ನೋಡುತ್ತಾ ನಿಂತಿದ್ದವರು ಕೂಡ ಓಡಿ ಹೋದರು. ಅಬೂಜಹಲ್ ಓಡುತ್ತಾ ಮುಹಮ್ಮದ್'ರೇ ﷺ ನಿಮಗಾಗಿದೆ ನಾಶ, ನಮ್ಮ ಜೊತೆಯಲ್ಲಿ ಶತ್ರುದ ನಿರ್ಮಿಸಿ ಅನುಚರರೊಂದಿಗೆ ಬಂದು ರಕ್ಷಣೆ ಹೊಂದುತ್ತಾರೆ ಎಂದು ಹೇಳಿದರು.
ಸಾಮಾನ್ಯವಾಗಿ ಪ್ರವಾದಿಯವರು ಯಾರ ವಿರುದ್ಧವು ಪ್ರಾರ್ಥನೆ ಮಾಡುವುದಿಲ್ಲ. ವೆಯ್ಯುಕ್ತಿಕ ವಿಷಯದಲ್ಲಿ ಯಾರಲ್ಲೂ ಕೋಪ ಮಾಡುತ್ತನೂ ಇರಲಿಲ್ಲ. ಆದರೆ ಸತ್ಯವನ್ನು ನಿಷೇಧ ಮಾಡುವುದಾಗಲಿ, ಮೌಲ್ಯಗಳನ್ನು ಹಾನಿ ಮಾಡಲು ಮುಂದಾದಾಗ ಮಾತ್ರ ಪ್ರವಾದಿಯವರು ಸಹಿಸುತ್ತಿರಲಿಲ್ಲ. ಅದೇ ರೀತಿ ಅಲ್ಲಾಹನ ಚಿಹ್ನೆಗಳನ್ನು ಆಗಲಿ ನಿಯಮಗಳನ್ನು ಆಗಲಿ ವಿರೋಧಿಸಿದಾಗ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ನೀಡುತ್ತಿರಲಿಲ್ಲ. ಈ ಘಟನೆಯಲ್ಲಿ ಅತ್ಯುನ್ನತ ಆರಾಧನೆಯ ವೇಳೆಯಲ್ಲಿದ್ದಾಗ ಅವರು ಅಪಮಾನ ಮಾಡಿದರು ಎಂಬುದಾಗಿತ್ತು ಅವರು ಪ್ರಾರ್ಥನೆ ಮಾಡಲು ಕಾರಣ. ಅದು ಪ್ರವಾದಿಯವರಿಗೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಾಗಿಲ್ಲ. ಈ ಘಟನೆಯನ್ನು ಉದ್ದೇಶಿಸಿಯಾಗಿತ್ತು ಇತಿಹಾಸಕಾರರು ಇಬ್'ನು ಮಸ್'ವೂದ್ ಹೇಳಿದ, ಪ್ರವಾದಿಯವರು ಒಂದೇ ಬಾರಿ ಮಾತ್ರವಾಗಿತ್ತು ಈ ರೀತಿ ಪ್ರಾರ್ಥನೆ ಮಾಡಿದ್ದು ಎನ್ನುವುದನ್ನು ವಿವರಿಸಿದ್ದು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment