ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇಬ್'ನು ಅಬ್ಬಾಸ್'ರವರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರಿಗೆ ﷺ ಪವಿತ್ರ ಕುರ್'ಆನಿನ ಅಲ್ ಗಾಫಿರ್ ಅಧ್ಯಯವು ಅವತರಿಸಿತು. ಅವರು ಅದನ್ನು ಕಅಬಾಲಯದ ಸಮೀಪ ಕುಳಿತು ಪಠಿಸುತ್ತಿದ್ದರು. ಅದನ್ನು ವಲೀದ್ ಬಿನ್ ಮುಗೀರ ಎನ್ನುವ ವ್ಯಕ್ತಿಯು ಬಹಳ ಶ್ರದ್ಧೆಯಿಂದಲೇ ಕೇಳುತ್ತಿದ್ದರು. ನಂತರ ಅಲ್ಲಿಂದ ಎದ್ದು ಬನೂ ಮಖ್'ಸೂಮಿಗಳ ಸಭೆಗೆ ಹೋಗಿ, ಅಲ್ಲಿ ನಾನು ಈಗ ದಾರಿಯಲ್ಲಿ ಬರುವಾಗ ಮುಹಮ್ಮದ್ ﷺ ಪಠಿಸುತ್ತಿದ್ದ ವಾಕ್ಯಗಳನ್ನು ಕೇಳಲು ಸಾಧ್ಯವಾಯಿತು. ನನಗೆ ಅದರ ಬಗ್ಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಕವಿತೆಯಾಗಲಿ, ಜಿನ್ನ್'ಗಳ ಪದ್ಯ ಆಗಲಿ, ಅಥವಾ ಇತರ ಯಾವುದೇ ಅರಬಿ ಭಾಷೆಯ ಯಾವುದೇ ಸಾಹಿತ್ಯ ಭರಿತವಾದ ಕಾವ್ಯಗಳೇ ಆಗಲಿ ನಿಮಗಿಂತ ಜಾಸ್ತಿ ನನಗೆ ಗೊತ್ತಿದೆ. ದೇವನಾಣೆಗೂ ಮುಹಮ್ಮದ್ ﷺ ಹೇಳುತಿದ್ದ ಯಾವುದೇ ವಾಕ್ಯಗಳು ಕೂಡ ಅವುಗಳಿಗೆ ಹೋಲಿಕೆಯಾಗುತ್ತಿರಲಿಲ್ಲ. ಆ ವಾಕ್ಯಗಳಲ್ಲಿ ಏನೋ ಒಂದು ಸೆಳೆತವಿತ್ತು, ಏನೋ ಒಂದು ಸೌಂದರ್ಯವಿತ್ತು. ನಿಜವಾಗಿಯೂ ಅದು ಇತರ ವಾಕ್ಯಗಳಿಗಿಂತ ಉತ್ತಮವಾಗಿತ್ತು. ಅದನ್ನು ಸೋಲಿಸಲು ಇನ್ಯಾವುದಕ್ಕೂ ಸಾಧ್ಯವೇ ಇಲ್ಲ. ಅದರ ಮುಂದೆ ಬೇರೆ ಏನೇ ನಿಂತರು ಎಲ್ಲವನ್ನು ಅದು ಖಂಡಿತ ಸೋಲಿಸಿ ಬಿಡುತ್ತದೆ. ಎಂದು ಹೇಳಿ ವಲೀದ್ ಅಲ್ಲಿಂದ ಹೊರ ನಡೆದರು.
ಇದು ಖುರೈಷಿಗಳ ನಡುವೆ ಬಹಳಷ್ಟು ಚರ್ಚೆಯಾಯಿತು. ಕೆಲವರು ವಲೀದ್ ಸಾಬಿಯಿಯಾಗಿದ್ದಾರೆ ಅಥವಾ ಮತಾಂತರವಾಗಿದ್ದಾರೆ ಎಂದು ಹೇಳ ತೊಡಗಿದರು. 'ಖುರೈಷಿಗಳ ಸುವಾಸನೆ' ಎಂದು ಪ್ರಸಿದ್ಧಿ ಪಡೆದಿದ್ದ ವಲೀದ್ ಧರ್ಮ ಬದಲಾಯಿಸಿದರೆ, ಬಹುಶಃ ಖುರೈಷಿಗಳು ಕೂಡ ತಮ್ಮ ಧರ್ಮವನ್ನು ಬದಲಾಯಿಸುವರು ಎಂದು ಭಯಪಟ್ಟು, ಅಬೂಜಹಲ್ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ನಾನು ಸರಿ ಮಾಡುತ್ತೇನೆ ಎಂದು ಹೇಳಿದರು.
ಹೀಗೆ ಅಬೂಜಹಲ್ ದುಃಖದ ನಟನೆ ಮಾಡುತ್ತಾ, ವಲೀದ್'ರ ಮನೆಗೆ ತಲುಪಿದರು. ಅಬೂಜಹಲ್, ಮಾವ ಖುರೈಷಿಗಳು ನಿಮಗೆ ಕೊಡಲು ಸಂಪತ್ತು ಒಟ್ಟು ಮಾಡುತ್ತಿದ್ದಾರೆ, ನೀವು ಮುಹಮ್ಮದ್'ರ ﷺ ನೂತನವಾದಗಳನ್ನು ಅದೊಂದು ಅಸಂಬದ್ಧ ವಾದವಾಗಿದೆ ಎಂದು ಹೇಳಬೇಕು. ಎಂದು ಹೇಳಿದಾಗ ನಾನು ಈಗಾಗಲೇ ಶ್ರೀಮಂತ ವ್ಯಕ್ತಿಯೆಂದು ಖುರೈಷಿಗಳಿಗೆ ಗೊತ್ತಿದೆ ಅಲ್ವಾ.? ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಅದೇ ಏನೇ ಇರಲಿ ನೀವು ಮಾತ್ರ ಅದಕ್ಕೆ ಭಿನ್ನಾಭಿಪ್ರಾಯ ಹೇಳಲೇ ಬೇಕು ಎಂದು ಪುನಃ ಹೇಳಿದಾಗ, ನಾನು ಏನಂತ ಹೇಳಬೇಕು.? ಮುಹಮ್ಮದ್'ರು ﷺ ಹೇಳುತ್ತಿದ್ದ ವಾಕ್ಯಗಳು, ಅದು ಮನುಷ್ಯರದ್ದಾಗಲಿ, ಜಿನ್ನ್'ಗಳ ಮಾತುಗಳಾಗಲಿ ಅಲ್ಲವೇ ಅಲ್ಲ. ಎಂದು ವಲೀದ್ ಹೇಳಿದರು. ಅದಕ್ಕೆ ಅಬೂಜಹಲ್, ಜನರು ನಿಮ್ಮನ್ನು ಒಪ್ಪಿಕೊಳ್ಳಬೇಕಾದರೆ ನೀವು ಭಿನ್ನಾಭಿಪ್ರಾಯ ಹೇಳಲೇ ಬೇಕು ಎಂದು ಹೇಳಿದರು. ಸರಿ ನಾನೊಮ್ಮೆ ಯೋಚಿಸುತ್ತೇನೆ ಎಂದು ವಲೀದ್ ಹೇಳಿದರು.
ವಲೀದ್ ಜನರನ್ನು ಉದ್ದೇಶಿಸಿ. ಓ ಪ್ರೀತಿಯ ಜನರೇ, ಮಕ್ಕಾದಲ್ಲಿ ಹಜ್ಜ್ ನಿರ್ವಹಿಸುವ ಸಮಯವು ಹತ್ತಿರವಾಗುತ್ತಿದೆ. ಎಲ್ಲಾ ಊರಿನಿಂದಲೂ ಜನರು ಇಲ್ಲಿಗೆ ಬಂದಿರಬಹುದು, ಸ್ವಾಭಾವಿಕವಾಗಿ ಅವರು ಇಲ್ಲಿ ಕಾಣಿಸಿಕೊಂಡ ವ್ಯಕ್ತಿಯ (ಮುಹಮ್ಮದ್ ﷺ) ಬಗ್ಗೆ ಖಂಡಿತ ಕೇಳಬಹುದು. ಆಗ ಎಲ್ಲರೂ ಹೇಳುವ ಅಭಿಪ್ರಾಯ ಒಂದೇ ಆಗಿರಬೇಕು, ಬೇರೆ ಬೇರೆ ಅಭಿಪ್ರಾಯವಾದರೆ ಜನರಿಗೆ ನಂಬಿಕೆ ಬರಲಿಕ್ಕಿಲ್ಲ, ಹಾಗಾದರೆ ನಾವೇನು ಹೇಳಬೇಕು.? ಎಂದು ಕೇಳಿದಾಗ, ಅವರೆಲ್ಲರೂ ಒಟ್ಟಾಗಿ ನೀವೇ ಹೇಳಿ ವಲೀದ್ ಎಂದು ಹೇಳಿದರು. ಬೇಡ ನೀವೇ ಹೇಳಿ ನಾನು ಕೇಳುತ್ತೇನೆ ಎಂದು ಪುನಃ ವಲೀದ್ ಹೇಳಿದರು.
ಕೆಲವರು ಅವರೊಬ್ಬ ಜ್ಯೋತಿಷಿ ಎಂದು ಹೇಳಿದರೆ ಹೇಗೆ.?
ವಲೀದ್: ದೇವನಾಣೆಗೂ.! ಅದು ಬೇಡ, ಜ್ಯೋತಿಷಿಗಳ ಯಾವುದೇ ಲಕ್ಷಣವೂ ಕೂಡ ಮುಹಮ್ಮದ್'ರಲ್ಲಿ ﷺ ಕಾಣುತ್ತಿಲ್ಲ.
ಕೆಲವರು: ಬುದ್ಧಿಮಾಂದ್ಯ ಎಂದು ಹೇಳಿದರೆ ಹೇಗೆ.?
ವಲೀದ್: ನಾವೆಷ್ಟು ಹುಚ್ಚರನ್ನು ಕಂಡಿದ್ದೇವೆ, ಅವರ ಒಂದೇ ಒಂದು ಲಕ್ಷಣವೂ ಕೂಡ ಇಲ್ಲಿ ಕಾಣುತ್ತಿಲ್ಲ.
ಕೆಲವರು: ಅವರೊಬ್ಬ ಕವಿ ಎಂದು ಹೇಳಿದರೆ ಹೇಗೆ.?
ವಲೀದ್: ಕವಿತೆಯ ಅಲಂಕಾರ, ಅದರ ರಚನೆ, ಅದರ ಕಲ್ಪನೆ ಎಲ್ಲವೂ ನಮಗೆ ಗೊತ್ತಿದೆ ಹೀಗಿರುವಾಗ ಅದನ್ನು ಹೇಗೆ ಹೇಳುವುದು.
ಕೆಲವರು: ಹಾಗಿದ್ದರೆ ವಾಮಾಚಾರಿ ಎಂದು ಹೇಳೋಣ.
ವಲೀದ್: ಇದು ಯಾವುದೇ ವಾಮಾಚಾರ ಅಲ್ಲವೇ ಅಲ್ಲ, ಅದರಲ್ಲಿ ಬಳಸುವ ಯಾವುದೇ ಶೈಲಿಯಾಗಲಿ, ಕಟ್ಟಾಗಲಿ ಇದರಲ್ಲಿ ಕಾಣುತ್ತಿಲ್ಲ.
ನಂತರ ಮಾತು ಮುಂದುವರಿಸುತ್ತಾ, ಖುರ್'ಆನಿನ ವಿಶೇಷತೆಗಳನ್ನು ಹೇಳಿ, ಈಗ ನಮಗೆ ಇರುವ ಒಂದೇ ಒಂದು ದಾರಿ ಅಂದ್ರೆ ಅದು ವಾಮಾಚಾರ ಅಂತ ಹೇಳುವುದು ಮಾತ್ರ. ಯಾಕೆಂದ್ರೆ ಇಲ್ಲಿ ಸತ್ಯ ವಿಶ್ವಾಸಿಗಳು, ಅಲ್ಲದವರು ಎಂಬ ಹೆಸರಿನಲ್ಲಿ, ತಂದೆ, ಮಕ್ಕಳು, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದೆ. ಅದನ್ನೇ ಮುಂದೆ ಇಟ್ಟು ವಾಮಾಚಾರಿ ಎನ್ನುವ ಅಪವಾದ ಹೊರೆಸೋಣ ಎಂದು ಹೇಳಿದಾಗ, ಎಲ್ಲರೂ ಅದಕ್ಕೆ ಸಮ್ಮತಿ ನೀಡಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment